Kili Paul: ಈ ಕೈ ಕರ್ನಾಟಕದ ಆಸ್ತಿ, ಪಸಂದಾಗವನೆ ಎನ್ನುತ್ತಾ ಕನ್ನಡಿಗರ ಮನ ಗೆಲ್ಲುತ್ತಿರುವ ತಾಂಜೇನಿಯಾದ ಕಿಲಿ ಪೌಲ್!

ಇದು ಸೋಶಿಯಲ್ ಮೀಡಿಯಾದ ಜಮಾನ. ಯಾರು ಎಲ್ಲಿ ಬೇಕಾದರೂ ಕುಳಿತು ಮತ್ತೊಂದು ದೇಶ, ಭಾಷೆಯ ವಿಡಿಯೋಗಳು, ಸಿನಿಮಾಗಳನ್ನು ನೋಡಬಹುದು. ಹೀಗಾಗಿ ಹಲವು ಭಾಷೆಯ, ಸಂಸ್ಕೃತಿಯ ಜನರು ಕನ್ನಡದ ಹಾಡುಗಳು ಮತ್ತು ಡೈಲಾಗ್‌ಗಳನ್ನು ಬಳಸಿ ರೀಲ್ಸ್ ಮಾಡುತ್ತಿದ್ದಾರೆ. ಹೀಗೆ ಕನ್ನಡದ ಹಾಡುಗಳ ಮೂಲಕ ಕನ್ನಡಿಗರ ಮನಗೆಲ್ಲುತ್ತಿದ್ದಾರೆ ಈ ದಕ್ಷಿಣ ಆಫ್ರಿಕಾದ ತಾಂಜೇನಿಯಾದ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ನೀಮಾ ಪೌಲ್ ಹಾಗೂ ಕಿಲಿ ಪೌಲ್.

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾದ ಕಿಲಿ ಪೌಲ್ ಮತ್ತು ನೀಮಾ ಪೌಲ್ ದೇಶ ಭಾಷೆ ಸಂಸ್ಕೃತಿಯ ಗಡಿ ಮೀರಿ ಹಿಂದಿ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಭಾರತದಲ್ಲಿ ಸಕತ್ ಫೇಮಸ್ ಆಗಿದ್ದರು. ಇಲ್ಲಿಯೂ ಸಕತ್ ಫ್ಯಾನ್ ಬೇಸ್ ಹೊಂದಿರುವ ಈ ಅಣ್ಣ ತಂಗಿ ಜೋಡಿಯ ಡ್ಯಾನ್ಸ್‌ಗೆ ಫಿದಾ ಆಗದವರೇ ಇಲ್ಲ. ಈಗ ಕಿಲಿ ಪೌಲ್ ಡಾ. ವಿಷ್ಣುವರ್ಧನ್ ಅವರ ಸಕತ್ ಫೇಮಸ್ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿದ್ದು, ಸಕತ್ ವೈರಲ್ ಆಗುತ್ತಿದೆ.

South Africa Social Media influencer Kili Paul making reals using kannada songs and dialogues

ಡಾ.ವಿಷ್ಣುವರ್ಧನ್ ಡೈಲಾಗ್‌ಗೆ ಲಿಪ್‌ ಸಿಂಕ್ ಮಾಡಿದ ಕಿಲಿ ಪೌಲ್

ತಾಂಜೇನಿಯ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಈಗ ಡಾ. ವಿಷ್ಣುವರ್ಧನ್ ಅವರ 'ಕದಂಬ' ಸಿನಿಮಾದ ಜನಪ್ರಿಯ ಡೈಲಾಗ್‌ನ ವಿಡಿಯೋ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದಿವಂಗತ ನಟ ವಿಷ್ಣುವರ್ಧನ್ ಅಭಿನಯದ ಕದಂಬ ಸಿನಿಮಾದ "ಈ ಕೈ ಕರ್ನಾಟಕದ ಆಸ್ತಿ.. ಈ ಐದು ಬೆರಳಲ್ಲಿ ಇರುವುದು ಐದು ಕೋಟಿ ಕನ್ನಡಿಗರ ಶಕ್ತಿ, ಮುಷ್ಠಿ ಮಾಡಿ ಹೊಡೆದರೆ, ಮತ್ತೆ ಆ ವ್ಯಕ್ತಿ ಎದ್ದು ಬಂದಿದ್ದು ಚರಿತ್ರೆಯಲ್ಲೇ ಇಲ್ಲ" ಎಂಬ ಡೈಲಾಗ್‌ಗೆ ಲಿಪ್‌ ಸಿಂಕ್ ಮಾಡಿ ಗಮನ ಸೆಳೆದಿದ್ದಾರೆ.

ಈ ಡೈಲಾಗ್‌ ವಿಡಿಯೋಗೆ ಈಗಾಗಲೇ 6. 27 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋ ಐದು ಮಿಲಿಯಲ್ ಹತ್ತಿರ ವೀವ್ಸ್ ಬಂದಿದೆ. ಇನ್ನು, ಇದು ಕನ್ನಡಿಗರ ಮನವಿ ಮೇರೆಗೆ ಎಂದೂ ಕಿಪಿ ಪೌಲ್ ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ವಿಷ್ಣು ದಾದಾ ಅಭಿಮಾನಿಗಳು ಕನ್ನಡದಲ್ಲೇ ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.

South Africa Social Media influencer Kili Paul making reals using kannada songs and dialogues

"ಸಿರಿಗನ್ನಡಂ ಗೆಲ್ಗೆ... ಎಂಥ ಸುಂದರ ವಾದ ಭಾಷೆ ನಮ್ದು ಅಷ್ಟೇ ಸುಂದರವಾದ ನಾಡು ನಮ್ಮದು.. ಕನ್ನಡ ನಾಡು, ಅಭಿನಂದನೆಗಳು ಜೈ ದಾದಾ, ಇಲ್ಲಿ ಬಂದ್ಬಿಡು ಅಣ್ಣಾ , ಕನ್ನಡಿಗರಿಂದ ನಿನ್ನ ಏಳ್ಗೆ , ಜೈ ರಾಯಣ್ಣ ಜೈ ಇಮ್ಮಡಿ ಪುಲಿಕೇಶಿ, ಎನ್ ಗುರು ಡೈಲಾಗ್, ಕರ್ನಾಟಕದಲ್ಲಿ ಇದ್ದು ಕನ್ನಡ ವಿಡಿಯೋ ಮಾಡಲ್ಲ ಬೇರೆ ಅವರ ಆದ ನಿಮಗಿರೋ ಕನ್ನಡ ಅಭಿಮಾನ ನಮ್ಮ ಜನಕ್ಕೆ ಇದ್ದಿದ್ದರೆ... ಅಣ್ಣ ಕನ್ನಡ ವಿಡಿಯೋ ಸೂಪರ್ ಹೀಗೆ ಮಾಡ್ತಾಯಿರಿ ಹಿರಿಯಣ್ಣ" ಎಂಬ ಕಾಮೆಂಟ್‌ ಮೂಲಕ ಪ್ರೀತಿ ಹರಿಸುತ್ತಿದ್ದಾರೆ.

South Africa Social Media influencer Kili Paul making reals using kannada songs and dialogues

ಇನ್ನು, ಇತ್ತೀಚೆಗೆ ಬಿಡುಗಡೆಯಾಗಿ ಸಕತ್ ಸದ್ದು ಮಾಡುತ್ತಿರುವ ದರ್ಶನ್ ತೂಗುದೀಪ ನಟನೆಯ 'ಕಾಟೇರ' ಸಿನಿಮಾದ ಪಸಂದಾಗವನೆ ಹಾಡಿಗೂ ಅಣ್ಣ- ತಂಗಿ ಜೋಡಿ ಹೆಜ್ಜೆ ಹಾಕಿತ್ತು. ಇದು ಕೂಡ ಸಕತ್ ವೈರಲ್ ಆಗಿತ್ತು. ಡಿ ಬಾಸ್ ಅಭಿಮಾನಿಗಳು ಕಿಪಿ ಪೌಲ್ ಮತ್ತು ನೀಮಾ ಪೌಲ್ ಅವರನ್ನು ಹಾಡಿ ಹೊಗಳಿದ್ದರು.

ಕಿಲಿ ಪೌಲ್ ಮತ್ತು ನೀಮಾ ಪೌಲ್

ದಕ್ಷಿಣ ಆಫ್ರೀಕಾದ ತಾಂಜೇನಿಯಾದ ಕಂಟೆಂಟ್ ಕ್ರಿಯೆಟರ್ ಆದ ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ಅವರು ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್, ಡ್ಯಾನ್ಸ್ ಮಾಡುವ ಮೂಲಕ ಖ್ಯಾತಿ ಗಳಿಸಿದವರು. ಕಿಲಿ ಪೌಲ್ ಮತ್ತು ಸಹೋದರಿ ನೀಮಾ ಪೌಲ್ ಇಬ್ಬರು ಬಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್, ಮಾಲಿವಿಡ್, ಟಾಲಿವುಡ್ ಸೇರಿದಂತೆ ಬಹುತೇಕ ಭಾಷೆಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ರೀಲ್ಸ್ ಮಾಡುತ್ತಾರೆ. ಕಿಲಿ ಪೌಲ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ 6.4 ಮಿಲಿಯನ್ ಫಾಲೋವರ್ಸ್ ಇದ್ದರೆ, ಅವರ ಸಹೋದರಿ ನೀಮಾ ಪೌಲ್‌ಗೆ 729K ಫಾಲೋವರ್ಸ್ ಇದ್ದಾರೆ.

More from Filmibeat

English summary
Social Media influencer Kili Paul making reals using kannada songs and dialogues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X