ಹಿಂದಿ ಬೆಲ್ಟ್‌ನಲ್ಲಿನ ಥಿಯೇಟರ್‌ಗಳ ಮೇಲೆ ಸೌತ್ ಸಿನಿಮಾಗಳ ದಾಳಿ

ಪ್ರಶಾಂತ್ ನೀಲ್ ಒಂದು ಮಾತು ಹೇಳುತ್ತಾರೆ "ಕೆಜಿಎಫ್ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಕಾರಣವೇ 'ಬಾಹುಬಲಿ' ಚಿತ್ರ. 'ಬಾಹುಬಲಿ' ಚಿತ್ರ ಕೊಟ್ಟ ಯಶಸ್ಸು ಮತ್ತು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ವಿಷನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌತ್ ಸಿನಿಮಾಗಳನ್ನು ಕೂಡ ತೆಗೆದುಕೊಂಡು ಹೋಗಬಹುದು ಎಂಬ ಧೈರ್ಯ ಕೊಟ್ಟಿದ್ದು. ಹೀಗಾಗಿಯ 'ಕೆಜಿಎಫ್' ಚಿತ್ರವನ್ನು ನಾವು ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಿದ್ದು".

ಇನ್ನು 'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್ ಕೂಡ "ಅಸಲಿಗೆ ನಮಗೆ 'ಪುಷ್ಪ' ಚಿತ್ರವನ್ನು ತೆಲುಗು ಹೊರಗೆ ಬಿಡುಗಡೆ ಮಾಡುವ ಯಾವುದೇ ಆಲೋಚನೆ ಮೊದಲಿನಲ್ಲಿ ಇರಲಿಲ್ಲ. ಆದರೆ ಕಂಟೆಂಟ್ ತಿಳಿದುಕೊಂಡ ರಾಜಮೌಳಿಯವರೇ ಖುದ್ದು ನನಗೆ ಫೋನ್ ಮಾಡಿ, ಸುಕ್ಕು ನೀನು ಇದನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡು ಅಂತ ಒತ್ತಾಸೆ ಮಾಡಿದರು. ರಾಜಮೌಳಿ ಅವರು ಕೊಟ್ಟ ಕಾನ್ಫಿಡೆನ್ಸ್ ನಿಂದಲೇ ನಿರ್ಮಾಪಕರು ಮತ್ತು ಅಲ್ಲು ಅರ್ಜುನ್ ಇದನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಕೆಲಸಗಳನ್ನು ಕೈಗೆತ್ತಿಕೊಂಡರು, ಈಗ ನಾವು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಬಿಡುಗಡೆ ಮಾಡಿದ್ದೇವೆ." ಅಂತ 'ಪುಷ್ಪ' ಪ್ಯಾನ್ ಇಂಡಿಯಾ ಸಿನಿಮಾ ಆದ ಕಥೆ ಬಗ್ಗೆ ಸುಕುಮಾರ್ ಹೇಳುತ್ತಾರೆ. ಈಗ ಭಾರತೀಯ ಸಿನಿಮಾ ರಂಗದಲ್ಲಿ ರಾಜಮೌಳಿಗೆ ಎಂಬ ಬ್ರಾಂಡ್ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬಿಡುಗಡೆಯಾಗಿ ಸಂಚಲನಾತ್ಮಕವಾದ ವಿಜಯಗಳನ್ನು ಸಾಧಿಸುವುದರ ಹಿಂದೆ ಕೆಲಸ ಮಾಡುತ್ತಿದೆ.

ಮಾರ್ಕೆಟಿಂಗ್ ಕೂಡ ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸುತ್ತದೆ

ಮಾರ್ಕೆಟಿಂಗ್ ಕೂಡ ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸುತ್ತದೆ

ಪ್ರಸ್ತುತ ಬಾಲಿವುಡ್ ನ ಸೂಪರ್ ಸ್ಟಾರ್ ಗಳ ಯಾವುದೇ ಚಿತ್ರಕ್ಕಿಂತ ಕಮ್ಮಿ ಇಲ್ಲದ ಅಥವಾ ಅದಕ್ಕಿಂತ ಹೆಚ್ಚಿನ ಬಜೆಟ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಸೌತ್ ಸಿನಿಮಾಗಳ ಬಜೆಟ್ ಮುಂದೆ ಬಾಲಿವುಡ್ ಚಿತ್ರಗಳ ಬಜೆಟ್ ಸವಕಲಾಗಿ ಕಾಣುತ್ತಿದೆ. ಪ್ರಸ್ತುತ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ತೆಗೆದುಕೊಂಡರು ಬಜೆಟ್ 300 ಕೋಟಿಗೂ ಮೀರಿದೆ. ಅಲ್ಲದೆ ಅದರ ಮಾರ್ಕೆಟಿಂಗ್ ಕೂಡ ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸುತ್ತದೆ. ತಾಂತ್ರಿಕವಾಗಿ ಕೂಡ ಈಗ ಸೌತ್ ಸಿನಿಮಾಗಳು ಬಾಲಿವುಡ್ ನಿಂದ ಬಾರಿ ಮುಂದಿವೆ. IMDB ಸರ್ವೇನಲ್ಲಿ ಕೂಡ ಭಾರತದಲ್ಲಿ ಜನ ಹೆಚ್ಚಿಗೆ ಕಾತುರದಿಂದ ಕಾಯುತ್ತಿರುವ ಪ್ರಮುಖ ಚಿತ್ರಗಳಲ್ಲಿ 'ಕೆಜಿಎಫ್-2' ಮತ್ತು 'ಆರ್ ಆರ್ ಆರ್' ಮೊದಲ ಎರಡು ಸ್ಥಾನಗಳಲ್ಲಿ ನಿಂತಿವೆ. ಇವು ಅಲ್ಲದೆ ಮುಂಬರುವ ಪ್ರಭಾಸ್ ಅಭಿನಯದ 'ರಾಧೇಶ್ಯಾಮ್' 'ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' 'ಸಲಾರ್', 'ಮೇಜರ್', 'ಪ್ರಾಜೆಕ್ಟ್ ಕೆ' ಹೀಗೆ ಸಾಲು-ಸಾಲು ಪ್ಯಾನ್ ಇಂಡಿಯಾ ಸಿನೆಮಾಗಳು ಮುಂದಿನ ವರ್ಷಗಳಲ್ಲಿ ಬಿಡುಗಡೆಗೆ ಸಿದ್ಧಗೊಳ್ಳುತ್ತಿವೆ.

ಹಿಂದಿ ಬೆಲ್ಟ್ ನಲ್ಲಿ ಸೌತ್ ಸಿನಿಮಾಗಳ ಕಮಾಲ್

ಹಿಂದಿ ಬೆಲ್ಟ್ ನಲ್ಲಿ ಸೌತ್ ಸಿನಿಮಾಗಳ ಕಮಾಲ್

ಹಿಂದೆ ರಜನಿಕಾಂತ್ ಅಥವಾ ಕಮಲ್ ಹಾಸನ್ ಚಿತ್ರಗಳು ತಕ್ಕಮಟ್ಟಿಗೆ ಹಿಂದಿ ಬೆಲ್ಟ್‌ನಲ್ಲಿ ವರ್ಕೌಟ್ ಆಗ್ತಾ ಇದ್ದವು. ಅವರ ಚಿತ್ರಗಳು ಮಾಡುತ್ತಿದ್ದ ಅಲ್ಪಗಳಿಕೆಯನ್ನು ದೊಡ್ಡದಾಗಿ ನೋಡುವ ಸಮಯ ಅದಾಗಿತ್ತು. ಆದರೆ ಯಾವುದೇ ನಿರೀಕ್ಷೆಗಳು ಇಲ್ಲದೆ ಬಂದ 'ಬಾಹುಬಲಿ-1' ಚಿತ್ರ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಕ್ಲಬ್ ಸೇರುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಡಬ್ಬಿಂಗ್ ಚಿತ್ರವೊಂದು 100 ಕೋಟಿ ಗಳಿಕೆ ಮಾಡಿದ್ದು ಹಿಂದಿ ಸಿನಿಮಾರಂಗದ ಇತಿಹಾಸದಲ್ಲೇ ಇರಲಿಲ್ಲ. ಆದರೆ 'ಬಾಹುಬಲಿ-2' ಅದನ್ನು ಮೀರಿ ಎಲ್ಲಾ ಹಿಂದಿ ಚಿತ್ರಗಳ ಗಳಿಕೆಯನ್ನು ಮೀರಿ ಹಿಂದಿ ಅವತರಣಿಕೆಯಲ್ಲಿ 550 ಕೋಟಿ ಗಳಿಕೆ ಮಾಡಿದೆ. ಇದರ ಹತ್ತಿರಕ್ಕೂ ಕೂಡ ಪ್ರಸ್ತುತ ಯಾವುದೇ ಚಿತ್ರ ಸುಳಿಯುವ ಲಕ್ಷಣಗಳು ಇಲ್ಲ. ಒಟ್ಟು 'ಬಾಹುಬಲಿ-2' ಚಿತ್ರ ಬರೋಬ್ಬರಿ ಎರಡು ಸಾವಿರ ಕೋಟಿ ಗಳಿಕೆ ಮಾಡುವ ಮೂಲಕ ಹೊಸ ಇತಿಹಾಸವನ್ನು ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನು ರಚಿಸಿತು.

ಕೆಜಿಎಫ್-2 ಮಾಡಲಿದೆ ಹೊಸ ಇತಿಹಾಸ ರಚನೆ

ಕೆಜಿಎಫ್-2 ಮಾಡಲಿದೆ ಹೊಸ ಇತಿಹಾಸ ರಚನೆ

'ಬಾಹುಬಲಿ-1' ಚಿತ್ರ ಬಿಡುಗಡೆಯಾದ ದಿನ ಹಿಂದಿ ಮಾರ್ಕೆಟ್‌ನಲ್ಲಿ ಮೊದಲ ದಿನದ ಗಳಿಕೆ 5 ಕೋಟಿ 15 ಲಕ್ಷ. ಅದೇ 'ಬಾಹುಬಲಿ-2' ಚಿತ್ರ ಮೊದಲ ದಿನ ಕೇವಲ ಹಿಂದಿ ಮಾರ್ಕೆಟ್‌ನಲ್ಲಿ ಗಳಿಸಿದ್ದು ಬರೋಬ್ಬರಿ 40 ಕೋಟಿ. ಪ್ರಸ್ತುತ 'ಕೆಜಿಎಫ್- 2'ಚಿತ್ರದ ಹವಾ ಹೇಗಿದೆ ಅಂದರೆ ಈ ಚಿತ್ರ ಕೂಡಾ ಮೊದಲ ದಿನ ಹಿಂದಿ ಮಾರ್ಕೆಟ್‌ನಲ್ಲಿ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಪೈಪೋಟಿ ಮಧ್ಯೆ ಕೂಡ ಬರೋಬ್ಬರಿ 30- 35 ಕೋಟಿ ಗಳಿಸುವ ಅವಕಾಶಗಳಿವೆ. ಅಚ್ಚರಿಯ ವಿಷಯವೆಂದರೆ ಯಾವದೇ ರೀತಿಯ ಮಾರ್ಕೆಟ್ ಮಾಡದೆ ಕೂಡ 'ಪುಷ್ಪ' ಚಿತ್ರ ಕೂಡ ಮೊದಲ ದಿನದ ಗಳಿಕೆ ಹಿಂದಿ ಅವತರಣಿಕೆಯಲ್ಲಿ 3 ಕೋಟಿ ಕಂಡಿದೆ. ಅಲ್ಲಿಗೆ ಸೌತ್ ಸ್ಟಾರ್ ಗಳ ಚಿತ್ರಗಳಿಗೆ ಕ್ರೇಜ್ ದೊಡ್ಡಮಟ್ಟದಲ್ಲಿ ಹಿಂದಿ ಭಾಗದಲ್ಲಿರುವುದು ಇದರಿಂದ ಕಂಡುಬರುತ್ತದೆ.

ಬದಲಾಗುತ್ತಿದೆ ಬಾಲಿವುಡ್ ಕೂಡ

ಬದಲಾಗುತ್ತಿದೆ ಬಾಲಿವುಡ್ ಕೂಡ

ಸೌತ್ ಸಿನಿಮಾಗಳ ನಿರಂತರ ದಾಳಿಯಿಂದ ತತ್ತರಿಸುತ್ತಿರುವ ಬಾಲಿವುಡ್ ಕೂಡ ಈಗ ಸಂಪೂರ್ಣವಾಗಿ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಿದೆ. ಮೊದಲಿನಿಂದಲೂ ಬಾಲಿವುಡ್ ಸಿನಿಮಾಗಳ ಎಂದರೆ ಲವ್ ರೋಮ್ಯಾನ್ಸ್ ಗೆ ಹೆಸರುವಾಸಿ. ಆದರೆ ಯಾವಾಗ ಸೌತ್ ಸಿನಿಮಾಗಳ ಮೇಕಿಂಗ್ ಮತ್ತು ಅದರ ಅಕ್ಷನ್ ಪ್ಯಾಕ್ಡ್ ಡ್ರಾಮಗಳು ಹಿಂದಿ ಪ್ರಾಂತ್ಯದಲ್ಲಿ ವಿಶೇಷವಾದ ಒಲವು ಕಂಡ ಮೇಲೆ ಬಾಲಿವುಡ್ ಕೂಡ ಈಗ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿದೆ. ಬಾಲಿವುಡ್‌ನ ಅದೇ ಲವ್ -ರೋಮ್ಯಾನ್ಸ್ ವಿದೇಶದಿಂದ ಬರುವ ನಾಯಕನ ಸುತ್ತಲೂ ಹೆಣೆಯುವ ಕಥೆಗಳಿಗೆ ಈಗ ಯಾವುದೇ ತರದ ಬೆಲೆ ಇಲ್ಲ. ಈಗ ಏನಿದ್ದರೂ ಕೆಜಿಎಫ್ ನಲ್ಲಿನ ಯಶ್ ಪಾತ್ರದಂತೆ ಪಕ್ಕ ಲೋಕಲ್ ಆಗಿರಬೇಕು ಹೀರೋ. ಇಲ್ಲವೇ ಬಾಹುಬಲಿ ಚಿತ್ರದ ತರ ದೃಶ್ಯವೈಭವ ವಾದರೂ ಕಾಣಬೇಕು.

ಹೀಗಾಗಿ ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳಲ್ಲಿ 'ತಾನಾಜಿ': ಅನ್ಸಂಗ್ ವಾರಿಯರ್ ಚಿತ್ರ ಬಾಲಿವುಡ್ ನಲ್ಲಿ ದೊಡ್ಡ ಯಶಸ್ಸು ಕಂಡಿತು. ಅಲ್ಲದೆ ರೋಹಿತ್ ಶೆಟ್ಟಿ ಸೌತ್ ಮಸಾಲ ಗಳಿಂದ ಮಾಡಿದ ಚಿತ್ರ 'ಸೂರ್ಯವಂಶಿ'ಕೂಡ ದೊಡ್ಡ ಗಳಿಕೆ ಕಂಡಿದೆ. ಪ್ರೀತಿ-ಪ್ರೇಮ, ಕ್ಯಾಂಪಸ್ ಲವ್ ಸ್ಟೋರಿಗಳು ಮಾಡುತ್ತಿದ್ದ ಕರಣ್ ಜೋಹರ್ ಕೂಡ ಈಗ 'ಬ್ರಹ್ಮಾಸ್ತ್ರ' ಅತಿಮಾನವ ಶಕ್ತಿಗಳ ಮೇಲೆ ಚಿತ್ರವಾಗುತ್ತಿರುವ ಚಿತ್ರದ ಮೇಲೆ ಭಾರೀ ಬಂಡವಾಳ ಹೂಡಿದ್ದಾರೆ. ಇನ್ನೊಂದೆಡೆ 500 ಕೋಟಿ ವೆಚ್ಚದಲ್ಲಿ ತಾನಾಜಿ ಚಿತ್ರದ ನಿರ್ದೇಶಕ ಓಂ ರಾವತ್ ನಿರ್ದೇಶನದಲ್ಲಿ 'ಆದಿಪುರುಷ' ಸಿದ್ಧಗೊಂಡಿದೆ. ಇದರ ನಂತರ ಮತ್ತೊಂದು ದೊಡ್ಡ ಪಿರಿಯಾಡಿಕ್ ಅಲ್ ಚಿತ್ರಕ್ಕೆ ಬಾಲಿವುಡ್ ಸಜ್ಜುಗೊಳ್ಳುತ್ತಿದ್ದು ಖ್ಯಾತ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೂನಿಯರ್ ಎನ್ಟಿಆರ್ ಚಿತ್ರವನ್ನು ಮಾಡುತ್ತಿದ್ದಾರೆ.

OTTಗೆ ಹಿಂದಿ ಚಿತ್ರಗಳು- ಥಿಯೇಟರ್ ಗಳಿಗೆ ಸೌತ್ ಸಿನಿಮಾಗಳು

OTTಗೆ ಹಿಂದಿ ಚಿತ್ರಗಳು- ಥಿಯೇಟರ್ ಗಳಿಗೆ ಸೌತ್ ಸಿನಿಮಾಗಳು

ಪ್ರಸ್ತುತ ಬಾಲಿವುಡ್‌ನಲ್ಲಿ ಯಾವುದೇ ಚಿತ್ರಗಳು ದೊಡ್ಡಮಟ್ಟದ ಗಳಿಕೆಯನ್ನು ಕಾಣಲು ವಿಫಲವಾಗುತ್ತಿವೆ. ರೋಹಿತ್ ಶೆಟ್ಟಿ ನಿರ್ದೇಶನದ 'ಸೂರ್ಯವಂಶಿ' ಮಾತ್ರ ಜನಸಾಮಾನ್ಯರನ್ನು ಥಿಯೇಟರ್ ಗಳ ಕಡೆಗೆ ಕರೆದುಕೊಂಡು ಬರುವುದರಲ್ಲಿ ತಕ್ಕಮಟ್ಟಿಗೆ ಯಶಸ್ಸನ್ನು ಕಂಡಿದೆ. ಇನ್ನು ಉಳಿದಂತೆ 'ಸತ್ಯಮೇವ ಜಯತೆ -2' , 'ಅಂತಿಮ', 'ಚಂಡಿಗಡ್ ಕಿ ಆಶಿಕಿ' ಹೀಗೆ ಸಾಲು ಸಾಲು ಚಿತ್ರಗಳು ಬಾಕ್ಸಾಫೀಸಲ್ಲಿ ಮುಗ್ಗರಿಸಿದೆ. ಇವುಗಳ ಮೊದಲ ದಿನದ ಗಳಿಕೆ ಒಂದರಿಂದ ಒಂದೂವರೆ ಕೋಟಿ ಮಾತ್ರ. ಅಚ್ಚರಿ ಎಂಬಂತೆ ಯಾವುದೇ ರೀತಿಯ ಪ್ರಚಾರ ಕೂಡ ಮಾಡದ 'ಪುಷ್ಪ' ಚಿತ್ರ ಮೊದಲ ದಿನ ಗಳಿಕೆ ಬರೋಬ್ಬರಿ 3.5 ಕೋಟಿ ಕಂಡಿದೆ. ಅದು ಕೂಡ ಕೇವಲ 600 ಸ್ಕ್ರೀನ್‌ಗಳನ್ನು ಮಾತ್ರ ಪಡೆದುಕೊಂಡು. ಎರಡನೇ ದಿನ 'ಪುಷ್ಪ' ಚಿತ್ರದ ಸ್ಕ್ರೀನ್‌ಗಳ ಸಂಖ್ಯೆಯನ್ನು ಭಾರೀ ಮಟ್ಟದಲ್ಲಿ ಹೆಚ್ಚಿಸಲಾಗಿದೆ. ಅಲ್ಲದೆ ಎರಡನೇ ದಿನದ ಗಳಿಕೆ ಕೂಡ ದುಪ್ಪಟ್ಟಾಗಿದೆ.

ಸೌತ್ ಸಿನಿಮಾಗಳ ಮುಂದೆ ನಿಲ್ಲುವುದು ಕಷ್ಟ

ಸೌತ್ ಸಿನಿಮಾಗಳ ಮುಂದೆ ನಿಲ್ಲುವುದು ಕಷ್ಟ

ಬಾಲಿವುಡ್ ಮಂದಿ ಈಗ ಹೇಳುವ ವಿಷಯ ಅಂದರೆ " ದಿನಕಳೆದಂತೆ ಸೌತ್ ಸ್ಟಾರ್‌ಗಳು ಒಬ್ಬೊಬ್ಬರೇ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್‌ಗಳಾಗಿ ಬದಲಾಗಿ ಹಿಂದಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಈಗಂತೂ ಟಿವಿಗಳಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಸೌತ್ ಸಿನಿಮಾಗಳ ಹವಾ ಜೋರಾಗಿದೆ. ಅವರ ಫ್ಯಾನ್ ಬೇಸ್ ಕೂಡ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ತಾರೆಗಳಿಗಿಂತ ದೊಡ್ಡದಾಗಿದೆ. ದಿನ ಕಳೆದಂತೆ ಅವರ ಚಿತ್ರಗಳು ದೊಡ್ಡಮಟ್ಟದಲ್ಲಿ ಈಗ ಹಿಂದಿಯಲ್ಲಿ ಕೂಡ ಬಿಡುಗಡೆಯಾಗುವ ದಿನಗಳು ದೂರವಿಲ್ಲ. ಜನ ಕೂಡ ಈಗ ಅದೇ ಹಿಂದಿಯ ರೋಟಿನ್ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಿಲ್ಲ. ಸೌತ್ ಮಾಸ್ ಸಿನಿಮಾಗಳು ಸಿಕ್ಕಾಪಟ್ಟೆ ಜನರನ್ನು ಆಕರ್ಷಿಸುತ್ತಿವೆ. ಮಾಸ್ ಚಿತ್ರಗಳೇ ಮುಖ್ಯವಾಗಿ ಜನರನ್ನು ಥಿಯೇಟರ್‌ಗಳ ಕಡೆಗೆ ಕರೆದು ತರುವುದು. ಈಗ ಹಿಂದಿಯಲ್ಲಿ ಅಂಥ ಮಾಸ್ ಫಾಲೋಯಿಂಗ್ ಇರುವ ನಟರು ಸಹ ಇಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಬಹುಶಃ ಹಿಂದಿ ಚಿತ್ರಗಳಿಗೆ OTT ಪ್ಲಾಟ್‌ಫಾರಂ ಗಟ್ಟಿಯಾಗುತ್ತದೆ. ಥಿಯೇಟರ್ ಗಳು ಸಂಪೂರ್ಣವಾಗಿ ಸೌತ್ ಸಿನಿಮಾಗಳಿಂದಲೇ ತುಂಬಿಕೊಳ್ಳುತ್ತವೆ. ಸೌತ್ ಸಿನಿಮಾಗಳಿಗೆ ಪೈಪೋಟಿ ನೀಡಬೇಕಾದರೆ ಈಗ ಬಾಲಿವುಡ್ ತನ್ನ ಸ್ವರೂಪವನ್ನು ಪೂರ್ತಿಯಾಗಿ ಬದಲಾಯಿಸಿಕೊಳ್ಳಬೇಕಾದ ಸಮಯ ಬಂದಿದೆ." ಎಂಬ ಅಭಿಪ್ರಾಯ ಪಡುತ್ತಿದ್ದಾರೆ. ಒಟ್ಟಾರೆ ಈಗ ಹಿಂದಿ ವಲಯದಲ್ಲಿ ಕೂಡ ಸೌತ್ ಸಿನಿಮಾಗಳ ದರ್ಬಾರು ಜೋರಾಗುತ್ತಿದೆ.

More from Filmibeat

English summary
South cinema raid on theaters in Hindi belt, Hindi movies are limited to OTT, while south pan India films will going to occupy most of theaters in coming days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X