For Quick Alerts
  ALLOW NOTIFICATIONS  
  For Daily Alerts

  30 ದಾಟಿದರೂ ಮದುವೆಯಾಗದ ದಕ್ಷಿಣದ ಹೀರೋಯಿನ್ಸ್

  By ರವೀಂದ್ರ ಕೊಟಕಿ
  |

  ಹೀರೋಗಳಿಗೆ ಮದುವೆಯಾಗಿ ಮಕ್ಕಳಾದರು ಕೂಡ ಅವರು ಹೀರೋಗಳೇ. ಆದರೆ ಹೀರೋಯಿನ್ ವಿಷಯಕ್ಕೆ ಬಂದಾಗ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಮದುವೆಯಾದ ನಾಯಕಿಯರಿಗೆ ಮನ್ನಣೆ ನೀಡುವುದು ತುಂಬಾ ವಿರಳ. ಮದುವೆ ಆಯಿತು ಅಂದರೆ ಅವರ ಕೆರಿಯರ್ ಹೀರೋಯಿನ್ನಾಗಿ ಮುಗಿಯಿತು ಅಂತಲೇ ಅರ್ಥ. ಅದರಲ್ಲೂ ಹದಿಹರೆಯದ ಹೊಸ ನಾಯಕ ನಟಿಯರ ಪ್ರವೇಶವಾದಂತೆ ಹಿರಿಯ ಹೀರೋಯಿನ್ ಅವಕಾಶಗಳು ಕಡಿಮೆಯಾಗುತ್ತದೆ. ಇಂಥ ಸಮಯದಲ್ಲಿ ಕೆಲವರು ಮದುವೆಯಾಗುತ್ತಾರೆ, ಮತ್ತೆ ಕೆಲವರು ಪೋಷಕ ನಟಿಯರ ಪಾತ್ರಗಳಿಗೆ ಬದಲಾಗುತ್ತಾರೆ ಮತ್ತೆ ಕೆಲವರು ತಮ್ಮ ಗ್ಲಾಮರ್ ಡೋಸನ್ನು ಹೆಚ್ಚಿಸಿಕೊಳ್ಳುತ್ತಾರೆ.

  ಆದರೆ ಇದೆಲ್ಲಾ ಹೊರತಾಗಿ 30 ದಾಟಿದ ಮೇಲೂ ಕೆಲವರು ಹೀರೋಯಿನ್ ಗಳಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡು ಈಗಲೂ ಸಕ್ರಿಯರಾಗಿದ್ದಾರೆ, ಜೊತೆಗೆ ಇನ್ನು ಕೂಡ ಮದುವೆಯಾಗುವ ಬಗ್ಗೆ ಯೋಚನೆ ಕೂಡ ಮಾಡುತ್ತಿಲ್ಲ. ಮದುವೆಯಾಗುವ ಸುದ್ದಿಗಳು ಅಗಾಗ ಚರ್ಚೆಯಾಗುತ್ತಿದ್ದರೂ ನಿರಾಕರಿಸುತ್ತಲೇ ಇದ್ದಾರೆ. ಮುಂದೆ ಓದಿ...

  ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ (42) ಇನ್ನೂ ಏಕೆ ಮದ್ವೆ ಆಗಿಲ್ಲ? ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ (42) ಇನ್ನೂ ಏಕೆ ಮದ್ವೆ ಆಗಿಲ್ಲ?

  1. ಅನುಷ್ಕಾ ಶೆಟ್ಟಿ

  1. ಅನುಷ್ಕಾ ಶೆಟ್ಟಿ

  ಬಾಹುಬಲಿ ಮನದನ್ನೆ ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿಗೆ ಈಗ ಬರೋಬ್ಬರಿ 39 ವರ್ಷ. ಬಾಹುಬಲಿ ಬಿಡುಗಡೆಯ ಸಮಯದಲ್ಲೇ ಪ್ರಭಾಸ್ ಜೊತೆ ಕಲ್ಯಾಣವಾಗುತ್ತದೆ ಅನ್ನುವ ಗಾಸಿಪ್ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಪ್ರಭಾಸ್ ಜೊತೆ ಈಕೆಯ ವಿವಾಹ ಇನ್ನೂ ಆಗಿಲ್ಲ, ಪ್ರಭಾಸ್ ಕೂಡ ಕಲ್ಯಾಣವಾಗಿಲ್ಲ. 'ಜಾತಿ ರತ್ನಲು' ಖ್ಯಾತಿಯ ನವೀನ್ ಪೋಲಿ ಶೆಟ್ಟಿ ಅಂತ ಯುವಕನ ಜೊತೆ ಈಗ ನಾಯಕಿಯಾಗಿ ನಟಿಸುತ್ತಿದ್ದಾಳೆ.

  2. ಪೂಜಾ ಹೆಗಡೆ

  2. ಪೂಜಾ ಹೆಗಡೆ

  ಟಾಲಿವುಡ್ ನಿಂತ ಬಾಲಿವುಡ್ ವರೆಗೂ ಸದ್ಯಕ್ಕೆ ಇವಳ ಹವಾ ಜೋರಾಗಿದೆ. ತೆಲುಗು, ತಮಿಳು ಹಾಗೂ ಹಿಂದಿಯ ಟಾಪ್ ಸ್ಟಾರ್ ಗಳ ಜೊತೆಯಲ್ಲಿ ನಟಿಸುತ್ತಿರುವ ಪೂಜಾ ವಯಸ್ಸು ಈಗ ಮೂವತ್ತು. ಈ ಗ್ಲಾಮರ್ ಗೊಂಬೆ ಸದ್ಯಕ್ಕೆ ಸಿನಿಮಾವೊಂದಕ್ಕೆ ಬರೋಬ್ಬರಿ ಎರಡೂವರೆಯಿಂದ ಮೂರು ಕೋಟಿ ಪಡೆಯುತ್ತಿದ್ದಾಳೆ. ಪ್ರಸ್ತುತ ಕೈಯಲ್ಲಿ ಏಳು ಚಿತ್ರಗಳನ್ನು ಇಟ್ಟುಕೊಂಡಿರುವ ಈಕೆ ಮದುವೆ ಬಗ್ಗೆ ಸದ್ಯಕ್ಕೆ ಯೋಚನೆ ಮಾಡುವ ಲಕ್ಷಣಗಳು ಇಲ್ಲ.

  ಕನಸಿನ ರಾಜಕುಮಾರನ ಬಗ್ಗೆ ಮನಬಿಚ್ಚಿ ಮಾತನಾಡಿದ ರಾಶಿ ಖನ್ನಾ!ಕನಸಿನ ರಾಜಕುಮಾರನ ಬಗ್ಗೆ ಮನಬಿಚ್ಚಿ ಮಾತನಾಡಿದ ರಾಶಿ ಖನ್ನಾ!

  3. ಶ್ರುತಿ ಹಾಸನ್

  3. ಶ್ರುತಿ ಹಾಸನ್

  ಪ್ರಶಾಂತ್ ನೀಲ್ ಅವರ 'ಸಲಾರ್' ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸುತ್ತಿರುವ ಶ್ರುತಿ ಹಾಸನ್ ಗೆ ಈಗ 35ವರ್ಷ ವಯಸ್ಸಾಗಿದೆ. ಕೆಲವು ಪ್ರೇಮ ಪ್ರಕರಣಗಳು ಮತ್ತು ಗಾಸಿಪ್ ಗಳು ಹೊರತಾಗಿ ಈಗಲೂ ಈಕೆ ಇನ್ನೂ ಮದುವೆಯಾಗಿಲ್ಲ.

  4. ತ್ರಿಶಾ

  4. ತ್ರಿಶಾ

  ಸದ್ಯಕ್ಕೆ ಮಣಿರತ್ನಂ ಅವರ ಚಿತ್ರದಲ್ಲಿ ನಟಿಸುತ್ತಿರುವ ತ್ರಿಶಾಗೆ ಈಗ ಬರೋಬ್ಬರಿ 38 ವರ್ಷ. ಕೆಲವು ನಾಯಕ ನಟರ ಜೊತೆಗೆ ಈಕೆಯ ಹೆಸರು ತಳುಕು ಹಾಕಿಕೊಂಡರು, ಉದ್ಯಮಿ ವರುನ್ ಮನಿಯನ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಎಂಗೇಜ್ಮೆಂಟ್ ಮುರಿದು ಹೋದ ಮೇಲೆ ನಾಯಕ ನಟ ರಾನಾ ಜೊತೆ ಈಕೆ ಮದುವೆಯಾಗುವ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಕಳೆದ ವರ್ಷ ರಾನಾ- ಮಿಹಿಕ ಬಜಾಜ್ ಜೊತೆ ವಿವಾಹವಾಗುವ ಮೂಲಕ ತ್ರಿಶಾ ಜೊತೆಗಿನ ಒಡನಾಟಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ. ಈಗಿರುವ ಪ್ರಶ್ನೆ ತ್ರಿಶಾ ಮದುವೆ ಯಾರೊಂದಿಗೆ? ಯಾವಾಗ?

  5. ನಯನಾತಾರ

  5. ನಯನಾತಾರ

  ಪ್ರಭುದೇವ ಜೊತೆಗಿನ ಪ್ರೇಮಾಯಣ ಮದುವೆವರೆಗೂ ಬಂದು ಮುರಿದುಬಿದ್ದ ಮೇಲೆ ತಮಿಳು ನಿರ್ದೇಶಕ ವಿಜ್ಞೇಶ ಜೊತೆಗೆ ಲಿವಿಂಗ್ ಟುಗೆದರ್ ನಲ್ಲಿರುವ ನಯನಾಳಿಗೆ ಈಗ 36 ವರ್ಷ ವಯಸ್ಸು. ಇತ್ತ ಸೀನಿಯರ್ ನಟರಾದ ಚಿರಂಜೀವಿ, ರಜನಿಕಾಂತ್ ಜೊತೆಗೂ ಬಾಲಿವುಡ್ನ ಶಾರುಖ್ ಖಾನ್ ಅಂತ ನಟನ ಜೊತೆಗೆ ಹಾಗೆ ಯಂಗ್ ಹೀರೋಗಳ ಜೊತೆಗೂ ನಟಿಸುತ್ತಾ ತನ್ನ ಗ್ಲಾಮರ್ ಡೋಸ್ ಇಂದ ಹುಚ್ಚೆಬ್ಬಿಸುತ್ತಿರುವ ಈಕೆ ಮೂರು ನಾಲ್ಕು ವರ್ಷದಿಂದ ಮದುವೆಯಾಗುವುದಾಗಿ ಹೇಳುತ್ತಲೇ ಬಂದಿದ್ದಾಳೆ, ಆದರೆ ಇನ್ನೂ ವಿಘ್ನೇಶನ ಜೊತೆಗೆ ಹಸೆಮಣೆ ಏರುವ ಶಾಸ್ತ್ರ ಮಾಡಿ ಮುಗಿಸಿಲ್ಲ. ವಯಸ್ಸಾದರೂ ಈಕೆಯ ಗ್ಲಾಮರ್ ಗೆ ಕಮ್ಮಿಯಾಗಿಲ್ಲ, ಡಿಮ್ಯಾಂಡು ಕೂಡ ಕುಂದಿಲ್ಲ.

  6. ನಿತ್ಯಾ ಮೆನನ್

  6. ನಿತ್ಯಾ ಮೆನನ್

  ಯಾವುದೇ ಗಾಸಿಪ್ ಗಳಿಗೆ ಆಹಾರ ವಾಗದ, ಆರೋಗ್ಯಪೂರ್ಣವಾದ ಆಲೋಚನೆಗಳ, ನಟಿ, ಗಾಯಕಿ ಬಹುಮುಖ ಪ್ರತಿಭೆಯ ನಿತ್ಯಾಗೆ ಈಗ 33 ವರ್ಷ. ಮೂಲತಃ ಮಲಯಾಳಿ ಮಾತೃಭಾಷೆಯಾದರೂ ಈಕೆ ಅಪ್ಪಟ ಕನ್ನಡತಿ. ಯಾವುದೇ ಪಾತ್ರಕ್ಕಾದರೂ ಸಮರ್ಥವಾಗಿ ನ್ಯಾಯ ಒದಗಿಸುವ ಈ ಪ್ರತಿಭೆ ಕೂಡ ಇನ್ನೂ ವಿವಾಹವಾಗಿಲ್ಲ.

  7. ರಮ್ಯಾ

  7. ರಮ್ಯಾ

  ಹತ್ತು ಹದಿನೈದು ವರ್ಷ ಹಿಂದೆ ಸರಿದರೆ ಅಲ್ಲಿ ರಕ್ಷಿತಾ- ರಮ್ಯಾ ಮಧ್ಯೆ ನಂಬರ್ ಒನ್ ಪಟ್ಟದ ಮೇಲೆ ದೊಡ್ಡ ಪೈಪೋಟಿ ನಡೆಯುತ್ತಿತ್ತು. ಇಬ್ಬರ ಮಧ್ಯದ ಕೋಳಿ ಜಗಳ ಕೂಡ ಬಹಳ ದೊಡ್ಡ ಸುದ್ದಿಯಾಗುತ್ತಿತ್ತು. ರಕ್ಷಿತಾ ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗಿ ಸಂಸಾರ ಬಂಧನದಲ್ಲಿ ಒಂದು ಮಗುವಿನ ತಾಯಿಯಾದರು. ನಂತರ ನಿರ್ಮಾಪಕಿ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಪಾತ್ರ ಕೂಡ ಈಗ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಭಿನ್ನವಾಗಿ ರಮ್ಯಾ ರಾಜಕಾರಣಕ್ಕೆ ಧುಮುಕಿ ಮಂಡ್ಯದಿಂದ ಚುನಾವಣೆಯಲ್ಲಿ ಗೆದ್ದು ಲೋಕಸಭಾ ಸದಸ್ಯೆ ಯಾದಳು. 'ಟೀಮ್ ರಾಹುಲ್ ಗಾಂಧಿ' ಯಲ್ಲಿ ಅತ್ಯಂತ ಪ್ರಮುಖ ಸದಸ್ಯ ಕೂಡ ಆಗಿದ್ದ ರಮ್ಯಾ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆಯಾಗಿ ಕೂಡ ಸಕ್ರಿಯರಾಗಿದ್ದರು. 2013ರ ಬೈ ಎಲೆಕ್ಷನ್ ಅಲ್ಲಿ ಗೆದ್ದಿದ್ದ ರಮ್ಯಾ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡರು. ಕ್ರಮೇಣ ಕಾಂಗ್ರೆಸ್ ಪಕ್ಷದಿಂದ ಕೂಡ ದೂರ ಸರಿದರು. ಈಕೆ ತನ್ನ ಸ್ವಿಸ್ ನ ಬಹುಕಾಲದ ಗೆಳೆಯ ರಫೆಲ್ ಜೊತೆ ಮದುವೆಯಾಗುವ ಸುದ್ದಿ ಕೇಳಿಬಂದರೂ ಅಧಿಕೃತವಾಗಿ ಇನ್ನೂ ಆಕೆ ಮದುವೆ ಮಾತ್ರ ಆಗಿದ್ದಿಲ್ಲ. ಅಂದಹಾಗೆ ಈಗ ರಮ್ಯಾ ವಯಸ್ಸು 39 ವರ್ಷ. ಸದ್ಯಕ್ಕೆ ಸಿನಿಮಾ ರಾಜಕೀಯದಿಂದ ದೂರವೇ ಸರಿದಿದ್ದರು, ಈಗಲೂ ಕೂಡ ಈಕೆ ಸಿನಿಮಾಗೆ ಮತ್ತೆ ಎಂಟ್ರಿ ಕೊಟ್ಟರೆ ಸ್ವಾಗತಿಸಲು ಸ್ಯಾಂಡಲ್ ವುಡ್ ತುದಿಗಾಲಿನ ಮೇಲೆ ನಿಂತಿದೆ.

  English summary
  South Indian Actresses Who Are Over 30 And Still Unmarried.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X