For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್‌ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಶ್ರೀದೇವಿ; ಎಷ್ಟು ಅಂತ ಕೇಳಿದರೆ ಅಚ್ಚರಿ ಪಡುತ್ತೀರಿ

  |

  ಬಾಲಿವುಡ್ ಚಿತ್ರರಂಗದ ಸುರಸುಂದರಿ, ದಕ್ಷಿಣ ಭಾರತದ ನಟಿ ಶ್ರೀದೇವಿ ಖ್ಯಾತಿಯ ಬಗ್ಗೆ ಹೇಳಬೇಕಿಲ್ಲ. ಬಹುಭಾಷಾ ನಟಿ ಶ್ರೀದೇವಿ ಮುಟ್ಟಿದೆಲ್ಲ ಚಿನ್ನ. ಒಂದು ಕಾಲದ ಪ್ರಸಿದ್ಧ ನಟಿಯಾಗಿದ್ದ ಶ್ರೀದೇವಿ ಭಾರತೀಯ ಸಿನಿಮಾರಂಗದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಸೌಂದರ್ಯ, ಪ್ರತಿಭೆ, ಬುದ್ಧಿವಂತಿಕೆಯಿಂದ ಚಿತ್ರಪ್ರಿಯರ ಹೃದಯ ಗೆದ್ದಿದ್ದ ಶ್ರೀದೇವಿ, ದಕ್ಷಿಣದಿಂದ ಉತ್ತರದವರೆಗೂ ಖ್ಯಾತಿಗಳಿಸಿದ್ದರು. ಇಂದು ಶ್ರೀದೇವಿ ಇಲ್ಲದಿದ್ದರೂ ಆಗಾಗ ಸುದ್ದಿಯಲ್ಲಿರುತ್ತಾರೆ.

  ಸಿನಿಮಾಗಳ ಮೂಲಕ ಅಭಿಮಾನಿಗಳಲ್ಲಿ ಇನ್ನೂ ಜೀವಂತವಾಗಿರುವ ಶ್ರೀದೇವಿ ದಕ್ಷಿಣ ಭಾರತದ ಅನೇಕ ಸ್ಟಾರ್ ಕಲಾವಿದರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಒಬ್ಬರು. ರಜನಿಕಾಂತ್ ಜೊತೆ ತಮ್ಮ ಮೊದಲ ಸಿನಿಮಾದಲ್ಲೇ ತೆರೆಹಂಚಿಕೊಂಡಿರುವ ಶ್ರೀದೇವಿ ಅಂದು ಸೂಪರ್ ಸ್ಟಾರ್ ಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಎಷ್ಟು ಅಂತ ಗೊತ್ತಾದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಮುಂದೆ ಓದಿ..

  ಸಂಭಾವನೆ ವಿಚಾರ ಬಹಿರಂಗ ಪಡಿಸಿದ್ದ ಶ್ರೀದೇವಿ

  ಸಂಭಾವನೆ ವಿಚಾರ ಬಹಿರಂಗ ಪಡಿಸಿದ್ದ ಶ್ರೀದೇವಿ

  ರಜನಿಕಾಂತ್‌ಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ಬಗ್ಗೆ ಸ್ವತಃ ಶ್ರೀದೇವಿ ಅವರೇ ಬಹಿರಂಗ ಪಡಿಸಿದ್ದರು. ಚಾಟ್ ಶೋ ಒಂದರಲ್ಲಿ ಸಂಭಾವನೆ ವಿಚಾರ ಮಾತನಾಡಿದ್ದ ಶ್ರೀದೇವಿ, ರಜನಿಕಾಂತ್‌ಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ಬಗ್ಗೆ ವಿವರಿಸಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದ ಶ್ರೀದೇವಿ ತಮಿಳು, ತೆಲುಗು, ಮಲಯಾಳಂನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಕಮಲ್ ಹಾಸನ್- ರಜನಿಕಾಂತ್ ಸಿನಿಮಾದಲ್ಲಿ ಶ್ರೀದೇವಿ

  ಕಮಲ್ ಹಾಸನ್- ರಜನಿಕಾಂತ್ ಸಿನಿಮಾದಲ್ಲಿ ಶ್ರೀದೇವಿ

  'ಮೂಂಡ್ರು ಮುಡಿಚು' ಸಿನಿಮಾ ಮೂಲಕ ಶ್ರೀದೇವಿ ಮೊದಲ ಬಾರಿಗೆ ತಮಿಳಿನಲ್ಲಿ ನಾಯಕಿಯಾಗಿ ತೆರೆಮೇಲೆ ಮಿಂಚಿದರು. ವಿಶೇಷ ಎಂದರೆ ಶ್ರೀದೇವಿ ಮೊದಲ ಸಿನಿಮಾದಲ್ಲೇ ಕಮಲ್ ಹಾಸನ್ ಮತ್ತು ರಜನಿಕಾಂತ್ ಇಬ್ಬರು ಕಾಣಿಸಿಕೊಂಡಿದ್ದರು. ಮೊದಲ ಸಿನಿಮಾದ ಅನುಭವ ಬಿಚ್ಚಿಟ್ಟಿದ್ದ ಶ್ರೀದೇವಿ ಸೂಪರ್ ಸ್ಟಾರ್ ಸಂಭಾವನೆಯನ್ನು ರಿವೀಲ್ ಮಾಡಿದ್ದರು.

  ತಮಿಳಿನ ಮೊದಲ ಸಿನಿಮಾಗೆ 5 ಸಾವಿರ ಸಂಭಾವನೆ

  ತಮಿಳಿನ ಮೊದಲ ಸಿನಿಮಾಗೆ 5 ಸಾವಿರ ಸಂಭಾವನೆ

  ದಿ ನ್ಯೂಸ್ ಮಿನಿಟ್ ವರದಿ ಮಾಡಿದ ಪ್ರಕಾರ, 1976ರಲ್ಲಿ ರಿಲೀಸ್ ಆಗಿದ್ದ ಮೂಂಡ್ರು ಮುಡಿಚು ಚಿತ್ರದ ಮೂಲಕ ಶ್ರೀದೇವಿ ಮೊದಲ ಬಾರಿಗೆ ನಾಯಕಿಯಾಗಿ ತಮಿಳು ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ನಟಿಸಲು ಶ್ರೀದೇವಿ 5 ಸಾವಿರ ರೂ. ಸಂಭಾವನೆ ಪಡೆದಿದ್ದರು. ಆಶ್ಚರ್ಯವೆನಿಸಿದರೂ ಇದು ನಿಜ. ಆದರೆ ಆ ಕಾಲಕ್ಕೆ ಅದು ದೊಡ್ಡ ಮೊತ್ತವಾಗಿತ್ತು.

  2 ಸಾವಿರ ಸಂಭಾವನೆ ಪಡೆದಿದ್ದ ರಜನಿಕಾಂತ್

  2 ಸಾವಿರ ಸಂಭಾವನೆ ಪಡೆದಿದ್ದ ರಜನಿಕಾಂತ್

  ಅದೇ ಚಿತ್ರಕ್ಕೆ ಕಮಲ್ ಹಾಸನ್ ಬರೋಬ್ಬರಿ 50 ಸಾವಿರ ಸಂಭಾವನೆ ಪಡೆದಿದ್ದರು. ಅಷ್ಟೊತ್ತಿಗಾಗಲೇ ಕಮಲ್ ಹಾಸನ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರು. ಆದರೆ ರಜನಿಕಾಂತ್ 2 ಸಾವಿರ ಸಂಭಾವನೆ ಪಡೆದಿದ್ದರು. ಶ್ರೀದೇವಿಗಿಂತ ಮೂರು ಸಾವಿರ ಸಂಭಾವನೆ ಕಡಿಮೆ ಇತ್ತು. ರಜನಿಕಾಂತ್ ಇನ್ನು ಚಿತ್ರರಂಗಕ್ಕೆ ಹೊಸಬರಾಗಿದ್ದರು ಎಂದು ಶ್ರೀದೇವಿ ಬಹಿರಂಗ ಪಡಿಸಿದ್ದಾರೆ.

  ಕಮಲ್ ಹಾಸನ್ ಹಾಗೆ ಸ್ಟಾರ್ ಆಗುವ ಕನಸು ಕಂಡಿದ್ದರು ರಜನಿ

  ಕಮಲ್ ಹಾಸನ್ ಹಾಗೆ ಸ್ಟಾರ್ ಆಗುವ ಕನಸು ಕಂಡಿದ್ದರು ರಜನಿ

  'ರಜನಿಕಾಂತ್ ತನ್ನ ತಾಯಿಗೆ ತುಂಬಾ ಹತ್ತಿರವಾಗಿದ್ದರು. ಮಗನಂತೆ ಇದ್ದರು. ನಾವೆಲ್ಲರೂ ಮಾತನಾಡುವಾಗ ರಜನಿಕಾಂತ್ , ಕಮಲ್ ಹಾಸನ್ ಹಾಗೆ ದೊಡ್ಡ ಸ್ಟಾರ್ ಆಗುವುದು ಹೇಗೆ ಎಂದು ಕೇಳುತ್ತಿದ್ದರು. ಆಗ ನನ್ನ ತಾಯಿ ಹೇಳುತ್ತಿದ್ದರು, ಖಂಡಿತವಾಗಿಯೂ ಹಾಗೆ ಆಗುತ್ತೀರಿ ಎಂದು ಹೇಳಿದ್ದರು. ಆ ಸಮಯಕ್ಕೆ ರಜನಿಕಾಂತ್ 30 ಸಾವಿರ ಸಂಭಾವನೆ ಪಡೆಯಬೇಕೆಂದು ಹಂಬಲಿಸುತ್ತಿದ್ದರು' ಎಂದು ಶ್ರೀದೇವಿ ಹೇಳಿದ್ದರು.

  ಎಲ್ಲಾ ಮುಗಿದು ಹೋದ ಕಥೆ, ಇದನ್ನೆಲ್ಲಾ ನೋಡಿದ್ರೆ ನೋವಾಗುತ್ತೆ | Filmibeat Kannada
  ರಜನಿಕಾಂತ್‌ರನ್ನು ಹಾಡಿ ಹೊಗಳಿದ್ದ ಶ್ರೀದೇವಿ

  ರಜನಿಕಾಂತ್‌ರನ್ನು ಹಾಡಿ ಹೊಗಳಿದ್ದ ಶ್ರೀದೇವಿ

  ರಜನಿಕಾಂತ್ ಬಗ್ಗೆ ಅಪಾರ ಗೌರವ ಹೊಂದಿದ್ದ ಶ್ರೀದೇವಿ, 'ಅವರು ತುಂಬಾ ವಿನಮ್ರ ಮತ್ತು ತುಂಬಾ ಒಳ್ಳೆಯ ವ್ಯಕ್ತಿ' ಎಂದು ಹೇಳಿದ್ದರು. 'ಯಾವಾಗಲು ಬೇರೆಯವರಿಗೆ ಸಹಾಯ ಮಾಡಲು ಬಯಸುತ್ತಾರೆ. ಎಲ್ಲರೂ ಸಂತೋಷವಾಗಿ ಇರಬೇಕೆಂದು ಬಯಸುತ್ತಾರೆ. ತುಂಬಾ ಪ್ರತಿಭಾವಂತ' ಎಂದು ವಿವರಿಸಿದ್ದಾರೆ.

  English summary
  Actress Sridevi paid more than Rajinikanth for Moondru Mudichu film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X