ಶ್ರೀದೇವಿ To ಪವಿತ್ರಾ ಗೌಡ; ಮದುವೆಯಾದ ನಟರೊಟ್ಟಿಗೆ ಪ್ರೀತಿಲಿ ಬಿದ್ದ ನಟಿಯರಿವರು
ಪ್ರೀತಿ ಕುರುಡು ಎನ್ನುವ ಮಾತಿದೆ. ಯಾರಿಗೆ, ಯಾವಾಗ, ಯಾರ ಮೇಲೆ ಪ್ರೀತಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟದ ಕೆಲಸ. ಚಿತ್ರರಂಗದಲ್ಲಿ ನಟ-ನಟಿಯರ ಲವ್‌ಸ್ಟೋರಿಗಳಿಗೆ ಬರವಿಲ್ಲ. ಸ್ಟಾರ್ ನಟ-ನಟಿಯರು ಪ್ರೀತಿಯ ಮದುವೆ ಆಗಿರುವ ಸಾಕಷ್ಟು ಉದಾಹರಣೆ ಇದೆ. ಇನ್ನು ಅದಾಗಲೇ ಮದುವೆ ಆಗಿರುವ ನಟರೊಂದಿಗೆ ಡೇಟಿಂಗ್ ನಡೆಸಿದ ನಟಿಯರು ಇದ್ದಾರೆ.
ಸೌತ್ ಸಿನಿದುನಿಯಾದಲ್ಲಿ ರೇಖಾ, ನಯನತಾರಾ, ಕೀರ್ತಿ ಪಟೌಡಿ ಹೀಗೆ ಹಲವು ನಾಯಕಿಯರು ಮದುವೆ ಆಗಿರುವ ನಟರೊಂದಿಗೆ ಲವ್ವಿ ಡವ್ವಿ ನಡೆಸಿದ್ದು ಭಾರೀ ಚರ್ಚೆ ಆಗಿತ್ತು. ಕೆಲವರ ಲವ್ ಸ್ಟೋರಿ ಗುಟ್ಟಾಗಿದ್ದರೆ ಮತ್ತೆ ಕೆಲವರು ಬಹಿರಂಗವಾಗಿಯೇ ಸುತ್ತಾಡಿದ್ದರು. ಇನ್ನು ಕೆಲವರು ಮದುವೆ ಕೂಡ ಆಗಿದ್ದಾರೆ. ಹೀಗೆ ಪ್ರೀತಿಲಿ ಬಿದ್ದವರು ದೂರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಇಂತಹ ಪ್ರೀತಿಯನ್ನು ಸಮಾಜ ನೋಡುವ ರೀತಿಯೇ ಬೇರೆ ಆಗಿರುತ್ತದೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ನಟಿಯರು ಹೀಗೆ ಮದುವೆಯಾಗಿರುವ ನಟರೊಂದಿಗೆ ಅಫೇರ್ ಇಟ್ಟುಕೊಂಡು ಸುದ್ದಿಯಾಗಿದ್ದರು. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 10 ವರ್ಷಗಳ ತಮ್ಮ ರಿಲೇಷನ್‌ಶಿಪ್ ಬಗ್ಗೆ ನಟಿ ಪವಿತ್ರಾ ಗೌಡ ಪ್ರತಿಕ್ರಿಯಿಸಿದ್ದರು. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಆಕ್ರೋಶ ವ್ಯಕ್ತಪಡಿಸಿ ಭಾರೀ ಸುದ್ದಿ ಆಗಿತ್ತು. ಈ ರೀತಿ ಭಾರೀ ಚರ್ಚೆ ಹುಟ್ಟಾಕ್ಕಿದ ಪ್ರೇಮ್ ಕಹಾನಿಗಳ ಬಗ್ಗೆ ಮುಂದೆ ಓದಿ.
1. ಶ್ರೀದೇವಿ- ಬೋನಿ ಕಪೂರ್
ಮದ್ರಾಸ್‌ನಲ್ಲಿ ಹುಟ್ಟಿಬೆಳೆದ ಶ್ರೀದೇವಿ ಮೊದಲು ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಬಾಲಿವುಡ್ ಪ್ರವೇಶಿಸಿ ಅಲ್ಲೇ ಸೆಟ್ಲ್ ಆಗಿದ್ದರು. ರಿಲೇಷನ್‌ಶಿಪ್ ವಿಚಾರಗಳಿಂದ ಆಕೆ ಭಾರೀ ಸುದ್ದಿ ಆಗಿದ್ದರು. ಅದಾಗಲೇ ಮೊನಾ ಕಪೂರ್ ಜೊತೆ ಮದುವೆ ಆಗಿ ಎರಡು ಮಕ್ಕಳ ತಂದೆಯಾಗಿದ್ದ ಬೋನಿ ಕಪೂರ್ ಜೊತೆ ಶ್ರೀದೇವಿ ಲವ್ವಿ ಡವ್ವಿ ನಡೆಸಿದ್ದರು. ಬಳಿಕ ಇಬ್ಬರೂ ಮದುವೆ ಕೂಡ ಆದರು.
2. ಅಮಿತಾಬ್ ಬಚ್ಚನ್- ರೇಖಾ
ಬಿಗ್ ಬಿ ಅಮಿತಾಬ್ ಹಾಗೂ ರೇಖಾ ಸೀಕ್ರೆಟ್ ಲವ್ ಕಹಾನಿ ಬಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. 'ದೋ ಅಂಜಾನೆ' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಬ್ಬರು ನಡುವೆ ಪ್ರೀತಿ ಹುಟ್ಟಿತ್ತು ಎನ್ನಲಾಗುತ್ತದೆ. ಅದಾಗಲೇ ಜಯಾ ಬಚ್ಚನ್ ಕೈ ಹಿಡಿದಿದ್ದ ಬಿಗ್‌ಬಿ ರೇಖಾ ಜೊತೆಗೂ ಅಫೇರ್ ಮುಂದುವರಿಸಿದ್ದರು ಎಂದು ಸುದ್ದಿ ಆಗಿತ್ತು. ರಹಸ್ಯವಾಗಿ ಇಬ್ಬರೂ ಮದುವೆ ಸಹ ಆಗಿದ್ದಾರೆ ಎನ್ನಲಾಯಿತು.
3. ನಾಗಾರ್ಜುನ- ತಬು
ಬಾಲಿವುಡ್ ನಟಿ ತಬು ವಯಸ್ಸು 50 ದಾಟಿದ್ರು ಮದುವೆಯಾಗದೇ ಉಳಿದುಬಿಟ್ಟಿದ್ದಾರೆ. ಆದರೆ ತೆಲುಗು ನಟ ನಾಗಾರ್ಜುನ ಜೊತೆ ಆಕೆ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ಹೇಳಲಾಗಿತ್ತು. ನಟಿ ಅಮಲಾ ಜೊತೆ ನಾಗಾರ್ಜುನ ಮದುವೆ ಆಗಿದ್ದರು. ಇನ್ನು 15 ವರ್ಷಗಳ ಕಾಲ ನಾಗ್-ತಬು ಅಫೇರ್ ವಿಚಾರ ಸೀಕ್ರೆಟ್ ಆಗಿಯೇ ಇತ್ತು ಎನ್ನಲಾಗುತ್ತದೆ. ಪತ್ನಿಯಿಂದ ದೂರಾಗಲು ನಾಗಾರ್ಜುನ ನಿರಾಕರಿಸಿದ್ದಕ್ಕೆ ತಬು ಜೊತೆಗಿನ ಲವ್‌ಸ್ಟೋರಿಗೆ ಬ್ರೇಕ್ ಬಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು.

4. ಪ್ರಭುದೇವ- ನಯನತಾರಾ
ಕಾಲಿವುಡ್ ನಟ, ನಿರ್ದೇಶಕ, ಕೊರಿಯೋಗ್ರಫರ್ ಪ್ರಭುದೇವ ಹಾಗೂ ನಟಿ ನಯನತಾರ ಲವ್ವಿ ಡವ್ವಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇಬ್ಬರು ಮದುವೆ ಆಗುವ ಮಟ್ಟಕ್ಕೆ ಹೋಗಿದ್ದರು. ಪ್ರಭು ಜೊತೆ ಮದುವೆ ಆಗಲು ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ನಯನತಾರ ಮತಾಂತರವಾಗಿದ್ದು ಎನ್ನಲಾಗಿತ್ತು. ಪ್ರಭುದೇವ ತಮ್ಮ ಮಡದಿಗೆ ಲತಾಗೆ ವಿಚ್ಛೇದನ ನೀಡಿದ್ದರು. ಆದರೆ ಬಳಿಕ ಇಬ್ಬರೂ ದೂರಾಗಿ ಬೇರೆಯವರೊಟ್ಟಿಗೆ ಮದುವೆ ಆಗಿದ್ದಾರೆ.
5. ಕಮಲ್ ಹಾಸನ್- ಗೌತಮಿ
ತಮಿಳು ನಟ ಕಮಲ್ ಹಾಸನ್ ವಾಣಿ ಗಣಪತಿಗೆ ಡಿವೋರ್ಸ್ ನೀಡಿ ಸಾರಿಕಾ ಜೊತೆ ಮದುವೆ ಆಗಿದ್ದರು. ಆ ಬಳಿಕ ಕೂಡ ಕಮಲ್ ಜೊತೆ ಮತ್ತೊಬ್ಬ ನಟಿ ಗೌತಮಿ ಪ್ರೀತಿಲಿ ಬಿದ್ದಿದ್ದರು. ಬಹಳ ವರ್ಷಗಳ ಕಾಲ ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದರು. 2016ರಲ್ಲಿ ಇಬ್ಬರೂ ದೂರಾಗಿದ್ದರು.
6. ಪವನ್ ಕಲ್ಯಾಣ್- ರೇಣು ದೇಸಾಯಿ
ಅದಾಗಲೇ ಮದುವೆ ಆಗಿದ್ದ ತೆಲುಗು ನಟ ಪವನ್ ಕಲ್ಯಾಣ್ ಮೇಲೆ ನಟಿ ರೇಣು ದೇಸಾಯಿಗೆ ಲವ್ವಾಗಿತ್ತು. 'ಬದ್ರಿ', 'ಜಾನಿ' ಚಿತ್ರದಲ್ಲಿ ಇಬ್ಬರು ನಟಿಸಿದ್ದರು. 2009ರಲ್ಲಿ ಮದುವೆ ಕೂಡ ಆಗಿದ್ದರು. ಆದರೆ 2012ರಲ್ಲಿ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಡಿವೋರ್ಸ್ ಪಡೆದು ದೂರಾಗಿದ್ದರು.
7. ದುನಿಯಾ ವಿಜಯ್- ಕೀರ್ತಿ
ಕನ್ನಡ ನಟ ದುನಿಯಾ ವಿಜಯ್ ಹಾಗೂ ನಟಿ ಕೀರ್ತಿ ಮದುವೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೂ ಮುನ್ನ ನಾಗರತ್ನ ಎಂಬುವವರ ಜೊತೆ ವಿಜಯ್ ಮದುವೆ ನಡೆದಿತ್ತು. ಪತ್ನಿಯ ಒಪ್ಪಿಗೆ ಮೇರೆಗೆ ನಟಿ ಕೀರ್ತಿ ಜೊತೆ ಮದುವೆ ಆಗಿರುವುದಾಗಿ ವಿಜಯ್ ಹೇಳಿದ್ದರು. 'ಜಸ್ಟ್ ಮಾತ್ ಮಾತಲ್ಲಿ', 'ನನ್ನುಸಿರೇ', 'ಜಾಲಿಡೇಸ್' ಚಿತ್ರಗಳಲ್ಲಿ ಕೀರ್ತಿ ನಟಿಸಿದ್ದರು.
8. ದರ್ಶನ್- ಪವಿತ್ರಾ ಗೌಡ
ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಲವ್ ಕಮ್ ಆರೇಂಜ್ಡ್ ಮ್ಯಾರೇಜ್. ಆದರೆ ಕೆಲ ವರ್ಷಗಳಿಂದ ದರ್ಶನ್ ಜೊತೆ ನಟಿ ಪವಿತ್ರಾ ಗೌಡ ಹೆಸರು ತಳುಕು ಹಾಕಿಕೊಂಡಿತ್ತು. ಇತ್ತೀಚೆಗೆ ಈ ವಿಚಾರವನ್ನು ಸ್ವತಃ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ನಮ್ಮಿಬ್ಬರದ್ದು 10 ವರ್ಷಗಳ ರಿಲೇಷನ್‌ಶಿಪ್ ಎಂದು ಬರೆದುಕೊಂಡಿದ್ದರು. ದರ್ಶನ್ ಜೊತೆಗಿನ ಆತ್ಮೀಯ ಫೋಟೊಗಳನ್ನು ಹಂಚಿಕೊಂಡಿದ್ದರು. ಆದರೆ ಈ ಬಗ್ಗೆ ನಟ ದರ್ಶನ್ ಮಾತ್ರ ಮೌನ ವಹಿಸಿದ್ದಾರೆ.


Click it and Unblock the Notifications










