1200 ಚಿತ್ರಗಳಲ್ಲಿ ನಟಿಸಿರುವ ಬ್ರಹ್ಮಿ ಬಳಿ ಎಷ್ಟು ಕೋಟಿ ಆಸ್ತಿ ಇದೆ? ಸಂಭಾವನೆ ಎಷ್ಟು?

ಬ್ರಹ್ಮಾನಂದಂ. ತೆಲುಗಿನ ಸ್ಟಾರ್ ಕಾಮೆಡಿಯನ್. ತಮ್ಮ ವಿಭಿನ್ನ ಮ್ಯಾನರಿಸಂ, ಕಾಮಿಡಿಯಿಂದ ಭಾಷೆ ಗಡಿ ಮೀರಿ ಅಸಂಖ್ಯಾತ ಅಭಿಮಾನಿಗಳನ್ನು ಬ್ರಹ್ಮಿ ಸಂಪಾದಿಸಿದ್ದಾರೆ. 1000ಕ್ಕೂ ಅಧಿಕ ಸಿನಿಮಾ ಸಿನಿಮಾಗಳಲ್ಲಿ ನಟಿಸಿ ಕಮಾಲ್ ಮಾಡಿದ್ದಾರೆ.

ತೆಲುಗು ಚಿತ್ರರಂಗದ ದಂತಕಥೆ ಬ್ರಹ್ಮಾನಂದಂ. ತೆಲುಗು ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಬ್ರಹ್ಮಾನಂದಂ ನಾಟಕಗಳ ಗೀಳಿನಿಂದ ಚಿತ್ರರಂಗಕ್ಕೆ ಬರುವಂತಾಯಿತು. ಚಿರಂಜೀವಿ ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ನಟಿಸೋಕೆ ಆರಂಭಿಸಿದ ಬ್ರಹ್ಮಾನಂದಂ ಮುಂದೆ ತೆಲುಗು ಚಿತ್ರರಂಗದ ಸ್ಟಾರ್ ಕಾಮೆಡಿಯನ್ ಆಗಿ ಬೆಳೆದುಬಿಟ್ಟರು. ಅದ್ಯಾವಮಟ್ಟಿಗೆ ಅಂದರೆ ಕೆಲ ಸಿನಿಮಾಗಳು ಬ್ರಹ್ಮಿಯಿಂದಲೇ ಗೆದ್ದು ಉದಾಹರಣೆಯೂ ಇದೆ. ಬಹಳ ಕಡಿಮೆ ಸಮಯದಲ್ಲಿ ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದರು.

ಕೊರೋನಾ ಹಾವಳಿ ನಂತರ ಬ್ರಹ್ಮಾನಂದಂ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಯಿತು. ಆರೋಗ್ಯ ಸಮಸ್ಯೆಯಿಂದಲೂ ಅಷ್ಟಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಇತ್ತೀಚೆಗೆ ಬಾಲಕೃಷ್ಣ ನಟನೆಯ 'ವೀರಸಿಂಗ ರೆಡ್ಡಿ' ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದರು.

ಬ್ರಹ್ಮಾನಂದಂ ಸಂಭಾವನೆ ಎಷ್ಟು?

ಬ್ರಹ್ಮಾನಂದಂ ಸಂಭಾವನೆ ಎಷ್ಟು?

ಸ್ಟಾರ್ ಕಾಮೆಡಿಯನ್ ಬ್ರಹ್ಮಾನಂದಂ ಸಂಭಾವನೆ ಎಷ್ಟು? ಚಿತ್ರವೊಂದಕ್ಕೆ ಎಷ್ಟು ಚಾರ್ಜ್ ಮಾಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಈ ಬಗ್ಗೆ ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಡುಕಾಟ ನಡೆಸುತ್ತಿರುತ್ತಾರೆ. ಖ್ಯಾತ ಹಾಸ್ಯ ಕಲಾವಿದ ಬ್ರಹ್ಮಾನಂದಂ ಚಿತ್ರವೊಂದಕ್ಕೆ ಒಂದರಿಂದ ಎರಡು ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗುತ್ತದೆ. ಒಂದ್ಕಾಲದಲ್ಲಿ ದಿನಗಳ ಲೆಕ್ಕದಲ್ಲಿ ಬ್ರಹ್ಮಿ ಲಕ್ಷ ಲಕ್ಷ ಸಂಭಾವನೆ ಎಣಿಸುತ್ತಿದ್ದರು.

ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?

ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?

ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರಿಗೆ ಸರಿ ಸಮನಾಗಿ ಸ್ಟಾರ್ ಸ್ಟೇಟಸ್ ಹೊಂದಿರುವ ನಟ ಬ್ರಹ್ಮಾನಂದಂ. ಹೈದರಾಬಾದ್‌ನ ಜ್ಯೂಬ್ಲಿಹಿಲ್ಸ್‌ನಲ್ಲಿ ಐಶಾರಾಮಿ ಬಂಗಲೆಯಲ್ಲಿ ಬ್ರಹ್ಮಾನಂದಂ ವಾಸವಾಗಿದ್ದಾರೆ. ಹುಟ್ಟೂರು ಸತ್ತೆನಪಲ್ಲಿಯಲ್ಲಿ ಕೋಟ್ಯಂತರ ಬೆಲೆಬಾಳುವ ಆಸ್ತಿ ಇದೆ. ರಿಯಲ್ ಎಸ್ಟೇಟ್‌ನಲ್ಲೂ ಸಾಕಷ್ಟು ಹಣವನ್ನು ತೊಡಗಿಸಿದ್ದಾರೆ. ಜೊತೆಗೆ ಒಂದಷ್ಟು ಬ್ಯುಸಿನೆಸ್‌ಗಳು ಕೂಡ ಇದೆಯಂತೆ. ಇನ್ನು ಜಮೀನನ ಮೇಲೆ ಹೆಚ್ಚು ಹಣ ತೊಡಗಿದಿದ್ದಾರಂತೆ. ಬ್ರಹ್ಮಿ ಸ್ಥಿರಾಸ್ತಿ ಮತ್ತು ಚರಾಸ್ತಿ ಎಲ್ಲಾ ಸೇರಿ ಅಂದಾಜು 300 ಕೋಟಿಗೂ ಅಧಿಕ ಆಸ್ತಿ ಇದೆ ಅಂದಾಜಿಸಲಾಗುತ್ತದೆ. ಇದೆಲ್ಲಾ ಬರೀ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಿರುವ ವಿಚಾರ ಅಷ್ಟೇ. ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ.

ಚಿತ್ರಕಲೆಯಲ್ಲಿ ಅಪಾರ ಆಸಕ್ತಿ

ಚಿತ್ರಕಲೆಯಲ್ಲಿ ಅಪಾರ ಆಸಕ್ತಿ

ಬ್ರಹ್ಮಾನಂದಂ ಅವರಿಗೆ ವರ್ಷಕ್ಕೆ ಕೋಟಿ ಕೋಟಿ ವರಮಾನ ಬರುತ್ತೆ ಎನ್ನಲಾಗುತ್ತದೆ. ಇನ್ನು ಜಾಹೀರಾತುಗಳಿಂದ ಸಂಪಾದನೆ ಮಾಡುತ್ತಾರೆ. ಹಣದ ವಿಚಾರದಲ್ಲಿ ಬಹಳ ಕಟ್ಟು ನಿಟ್ಟಾಗಿ ಇರುವ ಹಾಸ್ಯ ನಟ, ದುಂದು ವೆಚ್ಚ ಮಾಡುವುದಿಲ್ಲವಂತೆ. ಕ್ರಮ ಶಿಕ್ಷಣದಿಂದಲೇ ಇಷ್ಟೆಲ್ಲಾ ಆಸ್ತಿ ಸಂಪಾದಿಸಿದ್ದಾರೆ ಎಂದು ಫಿಲ್ಮ್‌ನಗರ್ ಮಂದಿ ಹೇಳುತ್ತಾರೆ. ಸಿನಿಮಾ ಬಿಟ್ಟರೆ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಇದೆ. ಬಿಡುವಿನ ಸಮಯದಲ್ಲಿ ದೇವರ ಚಿತ್ರಗಳನ್ನು ಬಿಡಿಸುತ್ತಿರುತ್ತಾರೆ. ಅವರು ಚಿತ್ರಿಸಿದ ವೆಂಕಟೇಶ್ವರ ಸ್ವಾಮಿ ಚಿತ್ರ ಬಹಳ ಸುದ್ದಿ ಮಾಡಿತ್ತು.

ಆತ್ಮಕಥನ ಬರೆಯುತ್ತಿರುವ ಬ್ರಹ್ಮಿ

ಆತ್ಮಕಥನ ಬರೆಯುತ್ತಿರುವ ಬ್ರಹ್ಮಿ

ಪದ್ಮಶ್ರೀ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಬ್ರಹ್ಮಾನಂದಂ ಅವರನ್ನು ಅರಸಿ ಬಂದಿದೆ. ತಮ್ಮ ಹಾಸ್ಯಪ್ರಜ್ಞೆಯಿಂದ ಬ್ರಹ್ಮಾನಂದಂ ಸದಾ ನಗುತ್ತಾ ಎಲ್ಲರನ್ನು ನಗಿಸುತ್ತಾ ಇರುತ್ತಾರೆ. ಸದ್ಯ ತಮ್ಮ ಆತ್ಮಕಥೆ ಬರೆಯುವುದರಲ್ಲಿ ಬ್ರಹ್ಮಿ ಮಗ್ನರಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿರುವುದರಿಂದ ಮಕ್ಕಳು, ಮೊಮ್ಮೊಕ್ಕಳ ಜೊತೆ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ. ಒಳ್ಳೆ ಅವಕಾಶಗಳು ಸಿಕ್ಕರೆ ಮಾತ್ರ ಸಿನಿಮಾ ನಟಿಸುವ ಬಗ್ಗೆ ಯೋಚಿಸುತ್ತಾರೆ.

More from Filmibeat

English summary
Star comedian Brahmanandam Net worth. He is the one of the Highest Paid Comedian of Telugu Film Industry. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X