ದ್ವಿತೀಯ ಪಿಯುಸಿಯಲ್ಲಿ ಸೂರ್ಯ-ಜ್ಯೋತಿಕಾ ಮಗಳು ಗಳಿಸಿದ ಅಂಕ ಎಷ್ಟು ?
ಅಪ್ಪ ಸ್ಟಾರ್ ಆದರೆ ಮಕ್ಕಳು ಕೂಡ ಸ್ಟಾರಾಗುವುದು, ಅಪ್ಪ ರಾಜಕಾರಣಿಯಾದರೆ ಮಕ್ಕಳು ಕೂಡ ರಾಜಕಾರಣಿಯಾಗುವುದು ಈಗೀಗ ಕಾಮನ್ನು. ಹೇಗೂ ಒಂದಿಲ್ಲೊಂದು ದಿನ ಚಿತ್ರರಂಗಕ್ಕೆ ಕಾಲಿಡುವುದು ಅವರಿಗೂ ಕೂಡ ಖಾತ್ರಿಯಾದ ಕಾರಣ ಅನೇಕ ಸ್ಟಾರ್‌ಗಳ ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ನಾಮ್ ಕೆ ವಾಸ್ತೆ ಸುಮ್ಮನೆ ಶಾಲೆಗೆ ಅಥವಾ ಕಾಲೇಜ್‌ಗೆ ಹೋಗಿ ಬರುತ್ತಾರೆ.
ಎಷ್ಟೋ ಜನ ಕಾಲೇಜ್‌ನ ಮೆಟ್ಟಿಲನ್ನು ಕೂಡ ಹತ್ತುವುದಿಲ್ಲ. ಆದರೆ.. ಇದಕ್ಕೆ ತದ್ವಿರುದ್ದ ಎನ್ನುವಂತೆ ಅಲ್ಲಲ್ಲಿ ಕೆಲವರು ತಮ್ಮ ತಂದೆ ತಾಯಿಯ ಜನಪ್ರಿಯತೆಯನ್ನು ತಮ್ಮ ತಲೆಗೇರಿಸಿಕೊಳ್ಳದೇ ಶ್ರದ್ಧೆ, ಭಕ್ತಿ, ಶಿಸ್ತಿನಿಂದ ಓದುತ್ತಾರೆ. ಹತ್ತು-ಹನ್ನೆರಡನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಪಾಸಾಗುತ್ತಾರೆ. ತಮ್ಮ ತಂದೆ ತಾಯಿಯ ಗೌರವ ಹೆಚ್ಚಿಸುತ್ತಾರೆ. ಉದಾಹರಣೆಗೆ ಸೂರ್ಯ ಮತ್ತು ಜ್ಯೋತಿಕಾ ಅವರ ಮಗಳು ದಿಯಾ ಅವರನ್ನೇ ತೆಗೆದುಕೊಳ್ಳಿ.

ಹೌದು, ಕಾಲಿವುಡ್‌ನ ನೆಚ್ಚಿನ ಸ್ಟಾರ್ ಜೋಡಿಗಳಾದ ಸೂರ್ಯ ಮತ್ತು ಜ್ಯೋತಿಕಾ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಹಿರಿಯ ಮಗಳ ಹೆಸರು ದಿಯಾ ಆದರೆ ಮಗನ ಹೆಸರು ದೇವ್. ತಳುಕು ಬಳುಕಿನ ಪ್ರಪಂಚದಿಂದ ತುಸು ಹೆಚ್ಚಿನ ಅಂತರವನ್ನು ಕಾಪಾಡಿಕೊಂಡಿರುವ ಇಬ್ಬರು ಓದಿನಲ್ಲಿ ಮುಂದು. ಅದರಲ್ಲಿಯೂ ಮಗಳು ದಿಯಾ ತುಂಬಾನೇ ಚುರುಕು. ಇದಕ್ಕೆ ಹನ್ನೆರಡನೇ ತರಗತಿಯಲ್ಲಿ ದಿಯಾ ಪಡೆದ ಅಂಕಗಳೇ ಅತ್ಯುತ್ತಮ ಸಾಕ್ಷಿ.
ತಮಿಳಿನಲ್ಲಿ 96, ಇಂಗ್ಲಿಷ್ ನಲ್ಲಿ 97, ಅಕೌಂಟ್ಸ್ ನಲ್ಲಿ 94, ಭೌತಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 98, ಕಂಪ್ಯೂಟರ್ ಸೈನ್ಸ್ ನಲ್ಲಿ 97 ಅಂಕಗಳನ್ನು ಪಡೆದ ದಿಯಾ ಒಟ್ಟು 600ಕ್ಕೆ 581 ಅಂಕಗಳನ್ನು ಪಡೆದಿದ್ದರು.
ಸದ್ಯ ದಿಯಾ ಅವರ ಈ ಮಾರ್ಕ್ಸ್ ಕಾರ್ಡ್‌ನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಿಯಾ ಪಡೆದ ಅಂಕ ಅನೇಕರ ಹುಬ್ಬೇರಿಸಿದೆ. ಹಾಗಂಥ ಸೂರ್ಯ ಮತ್ತು ಜ್ಯೋತಿಕಾ ಅವರ ಮಗಳು ದಿಯಾ ಅವರ ಈ ಅಂಕ ಪಟ್ಟಿ ವೈರಲ್ ಆಗುತ್ತಿರುವುದು ಇದು ಮೊದಲಲ್ಲ. ಈ ಮಾರ್ಕ್ಸ್ ಕಾರ್ಡ್ ಈ ವರ್ಷದ್ದು ಅಲ್ಲ. ಬದಲಿಗೆ ಇದು ಹಳೆಯದ್ದು. ಕಳೆದ ವರ್ಷ ಕೂಡ ಇದೇ ಸಮಯದಲ್ಲಿ ದಿಯಾ ಅವರ ಈ ಮಾರ್ಕ್ಸ್ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಅಂದ್ಹಾಗೇ ಸೂರ್ಯ ಮತ್ತು ಜ್ಯೋತಿಕಾ ಸದ್ಯ ಚೆನ್ನೈನಲ್ಲಿ ವಾಸ ಮಾಡುತ್ತಿಲ್ಲ. ಕೆಲ ವರ್ಷಗಳ ಹಿಂದೆ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಇಬ್ಬರು ಮುಂಬೈಗೆ ಸ್ಥಳಾಂತರಗೊಂಡಿದ್ದಾರೆ. ಇನ್ನು. 17ರ ಹರೆಯದ ದಿಯಾಗೆ ಚಿತ್ರರಂಗದಲ್ಲಿ ಆಸಕ್ತಿ ಇದೆ. ಕಳೆದ ವರ್ಷ ಲೀಡಿಂಗ್ ಲೈಟ್ ಎಂಬ ಡಾಕ್ಯೂಮೆಂಟರಿಯನ್ನು ದಿಯಾ ನಿರ್ದೇಶಿಸಿದ್ದರು. ವಿಶೇಷ ಅಂದರೆ ಈ ಡಾಕ್ಯೂಮೆಂಟರಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಕೂಡ ದಿಯಾಗೆ ಲಭಿಸಿತ್ತು.
ಇನ್ನುಳಿದಂತೆ ಸದ್ಯ ಸೂರ್ಯ ಅಭಿನಯದ ರೆಟ್ರೋ ಚಿತ್ರ ತೆರೆಗೆ ಬಂದಿದೆ. ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಕೂಡ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಚಿತ್ರ 09 ದಿನದಲ್ಲಿ ₹54 ಕೋಟಿಯನ್ನು ಚಿತ್ರ ಗಳಿಸಿದೆ. ಇನ್ನು ಸೂರ್ಯ ಅಭಿನಯದ ಹಿಂದಿನ ಚಿತ್ರ ಕಂಗುವಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಹಿನ್ನೆಲೆ ಸೂರ್ಯ ಪಾಲಿಗೆ ರೆಟ್ರೋ ಗೆಲ್ಲಲೇ ಬೇಕಿದ್ದು ಚಿತ್ರ ನೂರು ಕೋಟಿಯ ಗಡಿಯನ್ನು ದಾಟುತ್ತಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











