'ಸು ಫ್ರಂ ಸೋ' ಭಾನು ಪಾತ್ರಧಾರಿ ಸಂಧ್ಯಾ ಅರಕೆರೆ ಬೇಬಿ ಬಂಪ್ ಫೋಟೊಶೂಟ್
2025ರ ಬ್ಲಾಕ್‌ಬಸ್ಟರ್ ಸಿನಿಮಾ 'ಸು ಫ್ರಂ ಸೋ'. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 125 ಕೋಟಿ ರೂ. ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಚಿತ್ರದ ಪ್ರತಿ ಪಾತ್ರ, ಪ್ರತಿ ಸನ್ನಿವೇಶ ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅದರಲ್ಲೂ ಕೊನೆಗೆ ರವಿಯಣ್ಣನ ಕೈಹಿಡಿಯುವ ಭಾನು ಮರೆಯೋಕೆ ಸಾಧ್ಯವೇ?
ಸದ್ಯ ಭಾನು ಪಾತ್ರದಲ್ಲಿ ನಟಿಸಿದ್ದ ನಟಿ ಸಂಧ್ಯಾ ಅರಕೆರೆ ತಾಯಿ ಆಗುವ ಸಂಭ್ರಮದಲ್ಲಿದ್ದಾರೆ. ಸೀಮಂತ ಶಾಸ್ತ್ರ ಕೂಡ ನೆರವೇರಿದ್ದು ಬೇಬಿ ಬಂಪ್ ಫೋಟೊಶೂಟ್ ಮಾಡಿಸಿ ಮಿಂಚಿದ್ದಾರೆ. ಪತಿ ಶೋಧನ್ ಬಸ್ರೂರ್ ಜೊತೆ ಸೇರಿ ಕಲರ್‌ಫುಲ್ ಫೋಟೊಶೂಟ್ ಮಾಡಿಸಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

'ಸು ಫ್ರಮ್ ಸೋ' ಚಿತ್ರದಲ್ಲಿ ಬಹುತೇಕ ಕರಾವಳಿ ಭಾಗದ ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದರು. ಆದರೆ ಭಾನು ಎಂಬ ಮುಗ್ಧ ಯುವತಿಯ ಪಾತ್ರದಲ್ಲಿ ನಟಿಸಿದ್ದ ಸಂಧ್ಯಾ ಮಾತ್ರ ಮಂಡ್ಯ ಮೂಲದವರು. ಮೂಲತಃ ರಂಗಭೂಮಿ ಕಲಾವಿದರಾಗಿರುವ ಸಂಧ್ಯಾ ಭಾವನಾತ್ಮಕ ಸನ್ನಿವೇಶಗಳಲ್ಲಿ ಬಹಳ ಅದ್ಭುತವಾಗಿ ನಟಿಸುತ್ತಾರೆ. ಅದಕ್ಕೆ ಭಾನು ಪಾತ್ರವೇ ಉತ್ತಮ ಉದಾಹರಣೆ.
ಶ್ರೀರಂಗಪಟ್ಟಣದ ಅರಕೆರೆ ಮೂಲದ ಸಂಧ್ಯಾ ನೀನಾಸಂನಲ್ಲಿ ನಟನೆಯ ಪಟ್ಟುಗಳನ್ನು ಕಲಿತವರು. ಬಳಿಕ ಚಿತ್ರರಂಗದತ್ತ ಮುಖ ಮಾಡಿದ್ದರು. ಪತಿ ಶೋಧನ್ ಬಸ್ರೂರ್ ಕೂಡ ಕಲಾವಿದ.
ತಿಂಗಳ ಹಿಂದೆ ಸಂಧ್ಯಾ ಅರಕೆರೆ ಅವರ ಸೀಮಂತ ಶಾಸ್ತ್ರ ನಡೆದಿತ್ತು. ಈ ಬಗ್ಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಸೀಮಂತ ಶಾಸ್ತ್ರದ ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಬ್ಲ್ಯಾಕ್ ಹಾಗೂ ವೈಟ್ ಥೀಮ್ ಕಾಸ್ಟ್ಯೂಮ್‌ನಲ್ಲಿ ಬೇಬಿ ಬಂಪ್ ಫೋಟೊಶೂಟ್‌ನಲ್ಲಿ ಸಂಧ್ಯಾ ಕಾಣಿಸಿಕೊಂಡಿದ್ದಾರೆ. ಪತಿ ಕೂಡ ಸಾಥ್ ಕೊಟ್ಟಿದ್ದಾರೆ. ಫೋಟೊಗ್ರಾಫರ್ ಚಂದು ಎಸ್ ಆಚಾರ್ಯ ಫೋಟೊಗಳನ್ನು ಸೆರೆ ಹಿಡಿದಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮಾಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
'ಸುಳಿ' ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಸಂಧ್ಯಾ ಬಣ್ಣ ಹಚ್ಚಿದ್ದರು. 'ಭೀಮಸೇನ ನಳಮಹರಾಜ', 'ಒಂದಲ್ಲ ಎರಡಲ್ಲ', 'ಟೋಬಿ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ 'ಸು ಫ್ರಮ್ ಸೋ' ಚಿತ್ರದ ಭಾನು ಪಾತ್ರ ದೊಡ್ಡ ಹೆಸರು ತಂದುಕೊಟ್ಟಿದೆ. ಆ ಬಳಿಕ ಸಾಕಷ್ಟು ಅವಕಾಶಗಳು ಸಂಧ್ಯಾ ಅವರನ್ನು ಹುಡುಕಿ ಹೋಗುತ್ತಿದೆ.
ಶೀಘ್ರದಲ್ಲೇ ಸಂಧ್ಯಾ ಹಾಗೂ ಶೋಧನ್ ಬಸ್ರೂರ್ ಮನೆಗೆ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಸಂಧ್ಯಾ ಬೇಬಿ ಬಂಪ್ ಫೋಟೊಶೂಟ್ ವೈರಲ್ ಆಗ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 14 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಸಂಧ್ಯಾ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು ಆಗಾಗ್ಗೆ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ.


Click it and Unblock the Notifications











