ಈ ವರ್ಷ ಕನ್ನಡದ 'ಸಕ್ಸಸ್ ಫುಲ್ ನಾಯಕಿ' ಪಟ್ಟ ಯಾರಿಗೆ ನೀಡಬಹುದು?

ನಿರೀಕ್ಷೆಯಂತೆ ಕನ್ನಡದಲ್ಲಿ ಈ ವರ್ಷ ಕೆಲವೇ ಕೆಲವು ಹೀರೋಯಿನ್ ಗಳು ಹೆಚ್ಚು ಹೆಚ್ಚು ಸಿನಿಮಾ ಮಾಡಿದರು. ಉಳಿದವರು ಅಲ್ಲೊಂದು ಇಲ್ಲೊಂದು ಚಿತ್ರಕ್ಕೆ ಸೀಮಿತವಾದರು. ಒಂದೇ ಸಿನಿಮಾ ಮಾಡಿದ್ರು ಜನರ ಗಮನ ಸೆಳೆಯುವಲ್ಲಿ ಕೂಡ ಕೆಲವು ನಟಿಯರು ಯಶಸ್ವಿಯಾದರು.

ಈ ಮಧ್ಯೆ ಪರಭಾಷೆಯ ನಟಿಯರು ಕೂಡ ಕನ್ನಡಕ್ಕೆ ಎಂಟ್ರಿ ಕೊಟ್ಟು ಹೋದರು. ಮೊದಲ ಹೆಜ್ಜೆಯಲ್ಲೇ 'ಕ್ರಶ್' ಆಗಿ ಪ್ರೇಕ್ಷಕರ ಹೃದಯ ಕದ್ದಿರುವ ನಟಿಯರೂ ಇದ್ದಾರೆ.

ಹಾಗಿದ್ರೆ, ಈ ವರ್ಷದ ಸಕ್ಸಸ್ ಫುಲ್ ನಾಯಕಿ ಪಟ್ಟ ಯಾರಿಗೆ ನೀಡಬಹುದು. ಯಾರು ಎಷ್ಟು ಸಿನಿಮಾದಲ್ಲಿ ಕಾಣಿಸಿಕೊಂಡರು, ಯಾವುದು ಬೆಸ್ಟ್ ಎನಿಸಿತು? ಪೂರ್ತಿ ವಿವರ ಮುಂದೆ ಓದಿ....

ವರ್ಷದ ಬ್ಯುಸಿಯೆಸ್ಟ್ ನಟಿ ರಚ್ಚು

ವರ್ಷದ ಬ್ಯುಸಿಯೆಸ್ಟ್ ನಟಿ ರಚ್ಚು

2019ನೇ ವರ್ಷ ರಚಿತಾ ರಾಮ್ ವರ್ಷ ಎನ್ನಬಹುದು. ಈ ವರ್ಷ ಒಟ್ಟು ಏಳು ಸಿನಿಮಾಗಳಲ್ಲಿ ರಚ್ಚು ನಟಿಸಿದ್ದಾರೆ. ಅದರಲ್ಲಿ ನಾಲ್ಕು ಸಿನಿಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದರೇ, ಮೂರು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ನಿಖಿಲ್ ಜೊತೆ ಸೀತಾರಾಮ ಕಲ್ಯಾಣ, ಪುನೀತ್ ಜೊತೆ ನಟಸಾರ್ವಭೌಮ, ಉಪೇಂದ್ರ ಜೊತೆ ಐ ಲವ್ ಯೂ, ಶಿವಣ್ಣ ಜೊತೆ ಆಯುಷ್ಮಾನ್ ಭವ ಚಿತ್ರಗಳಲ್ಲಿ ಪೂರ್ಣ ಪ್ರಮಾಣ ನಾಯಕಿಯಾಗಿದ್ದರು. ಅಭಿಷೇಕ್ ಅವರ ಅಮರ್, ಶ್ರೀಮುರಳಿಯ ಭರಾಟೆ ಹಾಗೂ ಶಿವಣ್ಣನ ರುಸ್ತುಂ ಸಿನಿಮಾದಲ್ಲಿ ಅತಿಥಿಯಾಗಿದ್ದರು.

ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?

ವರ್ಷವೆಲ್ಲಾ ನಟಿಸಿರುವ ಹರಿಪ್ರಿಯಾ

ವರ್ಷವೆಲ್ಲಾ ನಟಿಸಿರುವ ಹರಿಪ್ರಿಯಾ

ಕಳೆದ ವರ್ಷಕ್ಕಿಂತ ಈ ವರ್ಷ ಹರಿಪ್ರಿಯಾ ಹೆಚ್ಚು ಸಿನಿಮಾ ಮಾಡಿದ್ದಾರೆ. 2018ರಲ್ಲಿ ನಾಲ್ಕು ಸಿನಿಮಾ 2019ರಲ್ಲಿ ಏಳು ಸಿನಿಮಾ. ಆರು ಚಿತ್ರದಲ್ಲಿ ನಾಯಕಿ ಹಾಗೂ ಒಂದು ಚಿತ್ರದಲ್ಲಿ ಅತಿಥಿ ಪಾತ್ರ. ಬೆಲ್ ಬಾಟಂ, ಸೂಜಿದಾರ, ಡಾಟರ್ ಆಫ್ ಪಾರ್ವತಮ್ಮ, ಎಲ್ಲಿದ್ದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ, ಕಥಾ ಸಂಗಮ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರದ ಹಾಡಿನಲ್ಲಿ ಹೆಜ್ಜೆಹಾಕಿ ಪ್ರೇಕ್ಷಕರಿಗೆ ಥ್ರಿಲ್ ಹೆಚ್ಚಿಸಿದ್ದರು.

ಅದಿತಿಗೆ ಅದೃಷ್ಟದ ವರ್ಷ

ಅದಿತಿಗೆ ಅದೃಷ್ಟದ ವರ್ಷ

ಬಜಾರ್ ಸಿನಿಮಾದ ಮೂಲಕ ವರ್ಷ ಆರಂಭಿಸಿದ ಅದಿತಿ, ಚಿರು ಸರ್ಜಾ ಜೊತೆ ಸಿಂಗ, ದಯಾಳ್ ನಿರ್ದೇಶನದ ರಂಗನಾಯಕಿ ಹಾಗೂ ಸತೀಶ್ ನೀನಾಸಂ ಜೊತೆ ಬ್ರಹ್ಮಾಚಾರಿ ಸಿನಿಮಾ ಮಾಡಿದ್ದರು. ಎಲ್ಲ ಚಿತ್ರಗಳಲ್ಲೂ ಅದಿತಿ ವಿಶೇಷವಾಗಿ ಗಮನ ಸೆಳೆದಿದ್ದಾರೆ.

ಯಜಮಾನನ ರಾಣಿ ರಶ್ಮಿಕಾ

ಯಜಮಾನನ ರಾಣಿ ರಶ್ಮಿಕಾ

ರಶ್ಮಿಕಾ ಮಂದಣ್ಣ ಈ ವರ್ಷ ಮಾಡಿದ್ದು ಒಂದೇ ಒಂದು ಕನ್ನಡ ಸಿನಿಮಾ. ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ರಶ್ಮಿಕಾ, ಹೆಚ್ಚು ಸದ್ದು ಮಾಡಿದ್ರು. ಜೊತೆಗೆ ತೆಲುಗಿನ ಡಿಯರ್ ಕಾಮ್ರೇಡ್ ಸಿನಿಮಾ ಕನ್ನಡದಲ್ಲೂ ಬಂದಿತ್ತು.

ವರ್ಷದ ಕ್ರಶ್ ಅನುಪಮಾ

ವರ್ಷದ ಕ್ರಶ್ ಅನುಪಮಾ

ಪುನೀತ್ ರಾಜ್ ಕುಮಾರ್ ಜೊತೆ ನಟಸಾರ್ವಭೌಮ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಅನುಪಮಾ ಪರಮೇಶ್ವರನ್ ವರ್ಷದ ಕ್ರಶ್ ಎನಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಆದ್ಮೇಲೆ ಅನುಪಮಾ ಅವರನ್ನ ನೆಚ್ಚಿಕೊಂಡವರು ಸಂಖ್ಯೆಯೂ ಹೆಚ್ಚಾಗಿತ್ತು.

ಬಸಣ್ಣಿ ಎಂದು ಹೃದಯ ಕದ್ದ ತಾನ್ಯ

ಬಸಣ್ಣಿ ಎಂದು ಹೃದಯ ಕದ್ದ ತಾನ್ಯ

ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ಬಸಣ್ಣಿ ಹಾಡಿಗೆ ಹೆಜ್ಜೆ ಹಾಕಿದ್ದ ತಾನ್ಯ ಹೋಪ್, ಮೊದಲ ಸಿನಿಮಾದಲ್ಲೇ ಕನ್ನಡಿಗರ ಹೃದಯಕ್ಕೆ ಕಲ್ಲು ಹೊಡೆದರು. ಬಳಿಕ ಅಮರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಸುನೀಲ್ ಕುಮಾರ್ ದೇಸಾಯಿ ಅವರ ಉದ್ಘರ್ಷ ಚಿತ್ರದಲ್ಲೂ ತಾನ್ಯ ನಟಿಸಿದ್ದರು. ಈ ವರ್ಷ ಸದ್ದು ಮಾಡಿದ ನಟಿಯರಲ್ಲಿ ತಾನ್ಯ ಕೂಡ ಪ್ರಮುಖರು.

ಮನಸ್ಸಿನಲ್ಲಿ ಉಳಿಯದ ಭಾವನಾ

ಮನಸ್ಸಿನಲ್ಲಿ ಉಳಿಯದ ಭಾವನಾ

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 99 ಚಿತ್ರದಲ್ಲಿ ನಾಯಕಿಯಾಗಿದ್ದ ಭಾವನಾ ಈ ವರ್ಷ ಮಾಡಿದ್ದು ಒಂದೇ ಕನ್ನಡ ಸಿನಿಮಾ. ತಮಿಳಿನಲ್ಲಿ ತ್ರಿಷಾ ಮಾಡಿದ್ದ ಪಾತ್ರ ಇದು. ತಮಿಳಿನಲ್ಲಿ ಹಿಟ್ ಆದ ಈ ಚಿತ್ರ ಕನ್ನಡದಲ್ಲಿ ಅಷ್ಟು ಸದ್ದು ಮಾಡಿಲ್ಲ.

ಶ್ರೀ ಲೀಲಾ ಮೋಡಿ

ಶ್ರೀ ಲೀಲಾ ಮೋಡಿ

ಶ್ರೀಲೀಲಾ ಈ ವರ್ಷದ ಹೊಸ ನಟಿ. ಎರಡು ಸಿನಿಮಾ ಮಾಡಿದರು. ಎಪಿ ಅರ್ಜುನ್ ನಿರ್ದೇಶನ 'ಕಿಸ್' ಮತ್ತು ಶ್ರೀಮುರಳಿ ಜೊತೆ 'ಭರಾಟೆ'. ಎರಡೂ ಚಿತ್ರದಲ್ಲೂ ತಮ್ಮ ನಟನೆಯ ಮೂಲಕ ಮೋಡಿ ಮಾಡಿದರು.

ಆಕಾಂಕ್ಷ ಸಿಂಗ್

ಆಕಾಂಕ್ಷ ಸಿಂಗ್

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಮೂಲಕ ಕನ್ನಡಕ್ಕೆ ಬಂದ ನಟಿ ಆಕಾಂಕ್ಷಾ ಸಿಂಗ್. ಮೊದಲ ಸಿನಿಮಾದಲ್ಲೇ ಸ್ಯಾಂಡಲ್ವುಡ್ ಗಮನ ಸೆಳೆದರು. ಅನುಪಮಾ ಪರಮೇಶ್ವರನ್ ಬಳಿಕ ಆಕಾಂಕ್ಷ ಅವರಿಗೆ ಹೆಚ್ಚು ಕ್ರೇಜ್ ಸೃಷ್ಟಿಯಾಗಿತ್ತು.

ಶಾನ್ವಿ ಶ್ರೀವಾಸ್ತವ್

ಶಾನ್ವಿ ಶ್ರೀವಾಸ್ತವ್

ಕಳೆದ ವರ್ಷ ಮೂರು ಸಿನಿಮಾ ಮಾಡಿದ್ದ ಶಾನ್ವಿ, ಈ ವರ್ಷ ಎರಡು ಚಿತ್ರಗಳಲ್ಲಿ ನಟಿಸಿದರು. ಗಣೇಶ್ ಜೊತೆ ಗೀತಾ ಸಿನಿಮಾ ಮಾಡಿದ್ದರು. ರಕ್ಷಿತ್ ಶೆಟ್ಟಿ ಜೊತೆ ಕಾಣಿಸಿಕೊಂಡಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾ ಡಿಸೆಂಬರ್ 20ಕ್ಕೆ ತೆರೆಕಾಣುತ್ತಿದೆ.

1 ಚಿತ್ರಕ್ಕೆ ನಿಂತ ಅನುಭವಿ ನಟಿಯರು

1 ಚಿತ್ರಕ್ಕೆ ನಿಂತ ಅನುಭವಿ ನಟಿಯರು

ಸಣ್ಣ ಗ್ಯಾಪ್ ನ ಬಳಿಕ ರಾಧಿಕಾ ಪಂಡಿತ್ 'ಆದಿಲಕ್ಷ್ಮಿಪುರಾಣ' ಸಿನಿಮಾ ಮಾಡಿದರು. ಅಷ್ಟಾಗಿ ಸಕ್ಸಸ್ ಸಿಗಲಿಲ್ಲ. ಆಮೇಲೆ ಎರಡನೇ ಮಗುವಿಗೆ ಜನ್ಮ ನೀಡಿದ ಕಾರಣ ಮತ್ತೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಉಪೇಂದ್ರ ಈ ವರ್ಷ 'ದೇವಕಿ' ಗಮನ ಸೆಳೆದರು. ರಾಗಿಣಿ ಮಾಡಿದ್ದು ಒಂದೇ ಸಿನಿಮಾ ಅಧ್ಯಕ್ಷ ಇನ್ ಅಮೇರಿಕಾ. ರಾಧಿಕಾ ಕುಮಾರಸ್ವಾಮಿ ಮಾಡಿದ್ದು ಒಂದೇ ಸಿನಿಮಾ ದಮಯಂತಿ.

More from Filmibeat

English summary
Aditi prabhudeva, Rachita ram, Haripriya, Ragini dwivedi who is the successful actress of kannada in 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X