twitter
    For Quick Alerts
    ALLOW NOTIFICATIONS  
    For Daily Alerts

    ವರ್ಷದ 'ಸಕ್ಸಸ್ ಫುಲ್ ನಿರ್ದೇಶಕ' ಪಟ್ಟ ಯಾರಿಗೆ ಸಿಗಬಹುದು?

    |

    ಸ್ಟಾರ್ ಹೀರೋ, ಹೀರೋಯಿನ್ ಗಳ ಅಬ್ಬರದಲ್ಲಿ ನಿರ್ದೇಶಕರನ್ನು ಮರೆಯುವಂತಿಲ್ಲ. ನಿರ್ದೇಶಕರಿಂದಲೇ ಸದ್ದು ಮಾಡಿದ ಚಿತ್ರಗಳು ಈ ವರ್ಷ ಬಿಡುಗಡೆಯಾಗಿದೆ.

    ಈ ನಿರ್ದೇಶಕ ಸಿನಿಮಾ ಚೆನ್ನಾಗಿ ಮಾಡ್ತಾರೆ ಎಂಬ ನಿರೀಕ್ಷೆಯಿಂದಲೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿರುವ ಉದಾಹರಣೆಗಳಿವೆ. ಕಮರ್ಷಿಯಲ್ ಚಿತ್ರಗಳ ಜೊತೆಗೆ ಉತ್ತಮ ಪ್ರಯೋಗಾತ್ಮಕ ಚಿತ್ರಗಳು ಈ ವರ್ಷ ಬಂದಿದೆ.

    ದರ್ಶನ್, ಸುದೀಪ್, ಶಿವಣ್ಣ, ಪುನೀತ್...ಈ ವರ್ಷ ಬಾಕ್ಸ್ ಆಫೀಸ್ 'ಕಿಂಗ್' ಯಾರು?ದರ್ಶನ್, ಸುದೀಪ್, ಶಿವಣ್ಣ, ಪುನೀತ್...ಈ ವರ್ಷ ಬಾಕ್ಸ್ ಆಫೀಸ್ 'ಕಿಂಗ್' ಯಾರು?

    ಈ ಚಿತ್ರಗಳ ಪೈಕಿ ಗಮನಿಸುವುದಾರೇ ಈ ವರ್ಷ ಗಮನ ಸೆಳೆದ, ಚರ್ಚೆಯಲ್ಲಿದ್ದು, ಹೆಚ್ಚು ಸದ್ದು ಮಾಡಿದ ನಿರ್ದೇಶಕ ಪಟ್ಟಿ ಇಲ್ಲಿದೆ. ಇವರ ಪೈಕಿ 2019ರ ಸಕ್ಸಸ್ ಫುಲ್ ನಿರ್ದೇಶಕ ಪಟ್ಟ ಯಾರಿಗೆ ಸಿಗಬಹುದು? ಮುಂದೆ ಓದಿ...

    ಜಯತೀರ್ಥ ಹಿಟ್ ಚಿತ್ರ

    ಜಯತೀರ್ಥ ಹಿಟ್ ಚಿತ್ರ

    ಕಳೆದ ವರ್ಷ ಸಿನಿಮಾ ಮಾಡದ ನಿರ್ದೇಶಕ ಜಯತೀರ್ಥ ಈ ವರ್ಷ 'ಬೆಲ್ ಬಾಟಂ' ಸಿನಿಮಾ ಮಾಡಿದರು. ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ನಾಯಕರಾಗಿದ್ದರು. ಬಹುತೇಕ ರೆಟ್ರೋ ಸ್ಟೈಲ್ ನಲ್ಲಿ ಮೂಡಿಬಂದಿದ್ದ ಈ ಸಿನಿಮಾ ಶತದಿನ ಆಚರಿಸಿಕೊಂಡಿತ್ತು ಮತ್ತು ಬಾಕ್ಸ್ ಆಫೀಸ್ ನಲ್ಲೂ ಹಿಟ್ ಆಗಿತ್ತು. ಹಾಗಾಗಿ, ಜಯತೀರ್ಥ ಈ ವರ್ಷ ಸಕ್ಸಸ್ ಫುಲ್ ನಿರ್ದೇಶಕರ ಪಟ್ಟಿಯಲ್ಲಿದ್ದಾರೆ.

    ಈ ವರ್ಷ ಕನ್ನಡದ 'ಸಕ್ಸಸ್ ಫುಲ್ ನಾಯಕಿ' ಪಟ್ಟ ಯಾರಿಗೆ ನೀಡಬಹುದು?ಈ ವರ್ಷ ಕನ್ನಡದ 'ಸಕ್ಸಸ್ ಫುಲ್ ನಾಯಕಿ' ಪಟ್ಟ ಯಾರಿಗೆ ನೀಡಬಹುದು?

    ಸುನಿ 'ಬಜಾರ್'

    ಸುನಿ 'ಬಜಾರ್'

    2018ರಲ್ಲಿ ನಿರ್ದೇಶಕ ಸುನಿ ಕೂಡ ಸಿನಿಮಾ ಮಾಡಿಲ್ಲ. ಈ ವರ್ಷದ ಮೊದಲಾರ್ಧದಲ್ಲಿ ಬಜಾರ್ ಸಿನಿಮಾ ಮಾಡಿದ್ರು. ಧನ್ವೀರ್ ಎಂಬ ಯುವ ನಟನನ್ನು ಪರಿಚಯ ಮಾಡಿ ಸಕ್ಸಸ್ ಕಂಡರು. ಸಿನಿಮಾ ಕೂಡ ತಕ್ಕ ಮಟ್ಟಿಗೆ ಸದ್ದು ಮಾಡಿತು. ಧನ್ವೀರ್ ಗೂ ಒಳ್ಳೆಯ ಲಾಂಚ್ ಆಗಿತ್ತು. ಈ ಕ್ರೆಡಿಟ್ ನಿರ್ದೇಶಕ ಸುನಿಗೆ ಸಲ್ಲಬೇಕು.

    ಹರಿಕೃಷ್ಣ 'ಯಜಮಾನ'

    ಹರಿಕೃಷ್ಣ 'ಯಜಮಾನ'

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಯಜಮಾನ' ಚಿತ್ರದ ಮೂಲಕ ಸಂಗೀತ ನಿರ್ದೇಶಕ ಹರಿಕೃಷ್ಣ ಪೂರ್ಣ ಪ್ರಮಾಣದ ಡೈರೆಕ್ಟರ್ ಆದರು. ಹರಿಕೃಷ್ಣ ಜೊತೆ ಪಿ ಕುಮಾರ್ ಜಂಟಿ ನಿರ್ದೇಶಕರಾಗಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡಿತ್ತು. ಚೊಚ್ಚಲ ಚಿತ್ರದಲ್ಲೇ ಹರಿಕೃಷ್ಣಗೆ ಬ್ರೇಕ್ ಸಿಕ್ತು.

    ಪವನ್ ಒಡೆಯರ್

    ಪವನ್ ಒಡೆಯರ್

    ಪವನ್ ಒಡೆಯರ್ ಈ ವರ್ಷ ನಿರ್ದೇಶನ ಮಾಡಿದ್ದು ಒಂದೇ ಚಿತ್ರ. ಪುನೀತ್ ರಾಜ್ ಕುಮಾರ್ ನಟನೆಯ 'ನಟಸಾರ್ವಭೌಮ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಒಡೆಯರ್ ಗೆ ಈ ಚಿತ್ರದಿಂದ ಅಷ್ಟು ದೊಡ್ಡ ಸಕ್ಸಸ್ ಸಿಗಲಿಲ್ಲ. ಅಪ್ಪು ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು ಬಿಟ್ಟರೆ, ನಿರ್ದೇಶನದಲ್ಲಿ ಒಡೆಯರ್ ಮೋಡಿ ಮಾಡಲಿಲ್ಲ.

    ರಮೇಶ್ ಇಂದಿರಾ

    ರಮೇಶ್ ಇಂದಿರಾ

    ಕಿರುತೆರೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದ ರಮೇಶ್ ಇಂದಿರಾ ಪ್ರೀಮಿಯರ್ ಪದ್ಮಿನಿ ಸಿನಿಮಾ ನಿರ್ದೇಶನ ಮಾಡಿದರು. ಇದು ಇವರ ಚೊಚ್ಚಲ ಸಿನಿಮಾ. ಜಗ್ಗೇಶ್ ನಟನೆ ಮತ್ತು ಚಿತ್ರಕಥೆಯಿಂದ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ನಿರ್ದೇಶಕರು ಸಕ್ಸಸ್ ಕಂಡಿದ್ದರು.

    ಅಬ್ಬಬ್ಬಾ! ಬಾಲಿವುಡ್ ಸ್ಟಾರ್ಸ್ ಬಾಡಿಗಾರ್ಡ್ಸ್ ಸಂಬಳ ಕೋಟಿ ಕೋಟಿ, ಯಾರು ಹೆಚ್ಚು?ಅಬ್ಬಬ್ಬಾ! ಬಾಲಿವುಡ್ ಸ್ಟಾರ್ಸ್ ಬಾಡಿಗಾರ್ಡ್ಸ್ ಸಂಬಳ ಕೋಟಿ ಕೋಟಿ, ಯಾರು ಹೆಚ್ಚು?

    ನಾಗಣ್ಣನ 'ಕುರುಕ್ಷೇತ್ರ'

    ನಾಗಣ್ಣನ 'ಕುರುಕ್ಷೇತ್ರ'

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಬಳಿಕ ಕುರುಕ್ಷೇತ್ರ ಸಿನಿಮಾ ನಿರ್ದೇಶನ ಮಾಡಿದ ನಾಗಣ್ಣ ಈ ವರ್ಷ ಹೆಚ್ಚು ಸದ್ದು ಮಾಡಿದ್ದರು. ಪೌರಾಣಿಕ ಸಿನಿಮಾ ಆಗಿದ್ದ ಕಾರಣ, ಈ ಚಿತ್ರದಲ್ಲಿ ಮೇಕಿಂಗ್ ಕುರಿತು ಹೆಚ್ಚು ಚರ್ಚೆಯಾಗಿತ್ತು. ನಿರ್ದೇಶಕರ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತಿತ್ತು. ಇಂತಹ ಸಿನಿಮಾಗೆ ನಾಗಣ್ಣ ಫೇಮಸ್ ಎನ್ನುವುದನ್ನು ಈ ಚಿತ್ರದಲ್ಲೂ ಸಾಬೀತು ಮಾಡಿದರು.

    'ಪೈಲ್ವಾನ್' ಕೃಷ್ಣ

    'ಪೈಲ್ವಾನ್' ಕೃಷ್ಣ

    ಹೆಬ್ಬುಲಿ ಬಳಿಕ ಪೈಲ್ವಾನ್ ನಿರ್ದೇಶನ ಮಾಡಿದ್ದ ಕೃಷ್ಣ ಮತ್ತೊಮ್ಮೆ ಮೋಡಿ ಮಾಡಿದರು. ಸುದೀಪ್ ಅವರಿಂದ ಸಿಕ್ಸ್ ಪ್ಯಾಕ್ ಮಾಡಿಸಿ, ವಿಶೇಷವಾಗಿ ಪ್ರಸೆಂಟ್ ಮಾಡಿಸಿದ್ದರು. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ತು. ಬಾಕ್ಸ್ ಆಫೀಸ್ ನಲ್ಲೂ ಪೈಲ್ವಾನ್ ಅಬ್ಬಿಸಿದ್ದ.

    ಚೇತನ್ 'ಭರಾಟೆ'

    ಚೇತನ್ 'ಭರಾಟೆ'

    ಶ್ರೀಮುರಳಿ ನಟಿಸಿದ್ದ ಭರಾಟೆ ಸಿನಿಮಾ ಈ ವರ್ಷ ಹೆಚ್ಚು ಸದ್ದು ಮಾಡಿತ್ತು. ಭರ್ಜರಿ, ಬಹುದ್ಧೂರ್ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ಡೈರೆಕ್ಟರ್ ಎನ್ನುವುದು ಧಮ್ ಹೆಚ್ಚಿಸಿತ್ತು. ಚಿತ್ರಮಂದಿರದಲ್ಲಿ ಸಿನಿಮಾ ಐವತ್ತು ದಿನ ಪೂರೈಸಿ ಇನ್ನು ಪ್ರದರ್ಶನ ಕಾಣುತ್ತಿದೆ. ಉತ್ತರ ಕರ್ನಾಟಕದ 30 ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಓಡುತ್ತಿದೆ. ಕಲೆಕ್ಷನ್ ನಲ್ಲಿ ಮುರಳಿ ಕೆರಿಯರ್ ನಲ್ಲಿ 'ಭರಾಟೆ' ದಾಖಲೆ ಮಾಡಿದೆ.

    ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?

    ಪಿ ವಾಸು 'ಆಯುಷ್ಮಾನ್ ಭವ'

    ಪಿ ವಾಸು 'ಆಯುಷ್ಮಾನ್ ಭವ'

    ಶಿವಲಿಂಗ ಸಿನಿಮಾ ಬಳಿಕ ಕನ್ನಡದಲ್ಲಿ ಪಿ ವಾಸು ಮಾಡಿದ ಸಿನಿಮಾ 'ಆಯುಷ್ಮಾನ್ ಭವ'. ಆಪ್ತಮಿತ್ರ, ಶಿವಲಿಂಗ ರೀತಿಯಲ್ಲೇ ಈ ಸಿನಿಮಾನೂ ಮೋಡಿ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಆ ಚಿತ್ರಗಳಷ್ಟು ಆಯುಷ್ಮಾನ್ ಭವ ಸದ್ದು ಮಾಡಿಲ್ಲ. ಪಿ ವಾಸು ಮೇಲೆ ಇದ್ದ ನಿರೀಕ್ಷೆಯೂ ಹುಸಿಯಾಗಲಿಲ್ಲ. ಹಾಗೆ, ಬ್ಯಾಲೆನ್ಸ್ ಮಾಡಿ ಗಮನ ಸೆಳೆದರು.

    'ಐ ಲವ್ ಯೂ' ಎಂದ ಆರ್ ಚಂದ್ರು

    'ಐ ಲವ್ ಯೂ' ಎಂದ ಆರ್ ಚಂದ್ರು

    ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್ ನಲ್ಲಿ ಬಂದ ಸಿನಿಮಾ ಐ ಲವ್ ಯೂ. ಈ ಸಿನಿಮಾ ಗಾಂಧಿನಗರದಲ್ಲಿ ಶತದಿನ ಆಚರಿಸಿಕೊಂಡಿದ್ದು ಸ್ಮರಿಸಬಹುದು. ಉಪ್ಪಿ ಸ್ಟೈಲ್ ನಲ್ಲಿ ಮೂಡಿಬಂದಿದ್ದ ಈ ಚಿತ್ರ ನಿರೀಕ್ಷೆಯಂತೆ ಟ್ರೆಂಡ್ ಸೃಷ್ಟಿಸಿಲ್ಲವಾದರೂ, ಆರ್ ಚಂದ್ರು ಹೆಚ್ಚು ಸದ್ದು ಮಾಡಿದ್ದರು.

    ಗಮನ ಸೆಳದ ನಿರ್ದೇಶಕರು

    ಗಮನ ಸೆಳದ ನಿರ್ದೇಶಕರು

    'ಚಂಬಲ್' ಸಿನಿಮಾ ಮಾಡಿ ಜಾಕಬ್ ವರ್ಗೀಸ್ ಗಮನ ಸೆಳೆದರು. ಕವಚ ಚಿತ್ರದ ನಿರ್ದೇಶಕ ಜಿವಿ ಆರ್ ವಾಸು, ಕವಲುದಾರಿ ನಿರ್ದೇಶಕ ಹೇಮಂತ್ ರಾವ್, ಗಂಟುಮೂಟೆ ನಿರ್ದೇಶಕಿ ರೂಪಾರಾವ್, ರಂಗನಾಯಕಿ ನಿರ್ದೇಶಕ ದಯಾಳ್ ಪದ್ಮನಾಭನ್, ಕಾಳಿದಾಸ ಕನ್ನಡ ಮೇಷ್ಟ್ರು ನಿರ್ದೇಶಕ ಕವಿರಾಜ್, ಕಥಾ ಸಂಗಮ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ತಂಡ, ದೇವಕಿ ನಿರ್ದೇಶಕ ಲೋಹಿತ್ ಈ ವರ್ಷ ಒಳ್ಳೆಯ ಸಿನಿಮಾ ನೀಡಿ ಗಮನ ಸೆಳೆದರು.

    ಇವರನ್ನು ಮರೆಯುವಂತಿಲ್ಲ

    ಇವರನ್ನು ಮರೆಯುವಂತಿಲ್ಲ

    ಯೋಗರಾಜ್ ಭಟ್ 'ಪಂಚತಂತ್ರ' ಸಿನಿಮಾ ಮಾಡಿದ್ರು. ಪ್ರೀತಂ ಗುಬ್ಬಿ '99' ಸಿನಿಮಾ ಮಾಡಿದ್ರು. ಸುನೀಲ್ ಕುಮಾರ್ ದೇಸಾಯಿ 'ಉದ್ಘರ್ಷ' ಮಾಡಿದ್ರು. ನಾಗಶೇಖರ್ 'ಅಮರ್' ನಿರ್ದೇಶಿಸಿದರು. ರವಿವರ್ಮ 'ರುಸ್ತುಂ', ಎಪಿ ಅರ್ಜುನ್ 'ಕಿಸ್' ಹಾಗೂ ವಿಜಯ್ ನಾಗೇಂದ್ರ 'ಗೀತಾ' ಸಿನಿಮಾ ಮಾಡಿ ಸದ್ದು ಮಾಡಿದರು.

    English summary
    V Harikrishna, Jayatheertha, Dayal Padmanabhan, Hemanth Rao, Naganna who is the successful director of 2019 in sandalwood?
    Wednesday, December 18, 2019, 19:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X