ಸುದೀಪ್ ಮುಚ್ಚಿಟ್ಟಿದ್ದ 'ಆ' ವಿಷಯವನ್ನು ಬಿಚ್ಚಿಟ್ಟ ಸುನೀಲ್ ಕುಮಾರ್ ದೇಸಾಯಿ.!

Recommended Video

ಸುದೀಪ್ ಮುಚ್ಚಿಟ್ಟಿದ್ದ 'ಆ' ವಿಷಯವನ್ನು ಬಿಚ್ಚಿಟ್ಟ ಸುನೀಲ್ ಕುಮಾರ್ ದೇಸಾಯಿ.! | Filmibeat Kannada

''ಒಂದು ಚಿತ್ರ ಮತ್ತು ಅದರಲ್ಲಿನ ಪಾತ್ರವನ್ನು ಒಪ್ಪಿಕೊಂಡರೆ, ಅದಕ್ಕೆ ನ್ಯಾಯ ಒದಗಿಸುವವರೆಗೂ ಸುದೀಪ್ ಬಿಡಲ್ಲ'' - ಹೀಗಂತ ಹೇಳಿದ್ದು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ.

ಚಿತ್ರ ಜಗತ್ತಿಗೆ ಸುದೀಪ್ ಕಾಲಿಟ್ಟು 25 ವಸಂತಗಳು ತುಂಬಿವೆ. ಕನ್ನಡ ಚಿತ್ರರಂಗದಲ್ಲಿ ಸುದೀಪ್ ಗಟ್ಟಿಯಾಗಿ ನೆಲೆಯೂರಲು ಕಾರಣವಾದ ನಿರ್ದೇಶಕರ ಪೈಕಿ ಸುನೀಲ್ ಕುಮಾರ್ ದೇಸಾಯಿ ಮೊದಲಿಗರು. ಚಿತ್ರರಂಗದಲ್ಲಿ ಮಿಂಚುವ ಕನಸು ಕಾಣುತ್ತಿದ್ದ ಸುದೀಪ್ ಗೆ ಸುನೀಲ್ ಕುಮಾರ್ ದೇಸಾಯಿ ತಮ್ಮ 'ಪ್ರತ್ಯರ್ಥ' ಚಿತ್ರದಲ್ಲಿನ ಸಣ್ಣ ಪಾತ್ರದ ಅವಕಾಶ ಕೊಟ್ಟರು.

ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸುದೀಪ್ ಹೊಟ್ಟೆಯಲ್ಲಿ ನೋವಿದ್ದರೂ, ಯಾರಿಗೂ ತಿಳಿಸದೆ ಆ ನೋವನ್ನು ನುಂಗಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಅಂದು ನೋವಿನ ವಿಷಯವನ್ನು ಮುಚ್ಚಿಟ್ಟು, ಹಠ-ಛಲದಿಂದ ಶೂಟಿಂಗ್ ಮಾಡಿದ ಸುದೀಪ್ ಬಗ್ಗೆ ಇಂದು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಮನ ತುಂಬಿ ಮಾತನಾಡಿದ್ದಾರೆ. 'ಪ್ರತ್ಯರ್ಥ' ಮತ್ತು 'ಸ್ಪರ್ಶ' ಚಿತ್ರದ ಶೂಟಿಂಗ್ ನಡೆಯುವಾಗ ಆದ ಕೆಲ ಘಟನೆಗಳ ಬಗ್ಗೆ ಸುನೀಲ್ ಕುಮಾರ್ ದೇಸಾಯಿ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಹಂಚಿಕೊಂಡಿದ್ದಾರೆ. ಓದಿರಿ...

ಸುದೀಪ್-ಸುನೀಲ್ ಕುಮಾರ್ ದೇಸಾಯಿ ನಡುವಿನ ಒಡನಾಟ

ಸುದೀಪ್-ಸುನೀಲ್ ಕುಮಾರ್ ದೇಸಾಯಿ ನಡುವಿನ ಒಡನಾಟ

''ನನ್ನ ಅವರ (ಸುದೀಪ್) ಒಡನಾಟ 22 ವರ್ಷಗಳಿಂದ ಇದೆ. 1997 ನಲ್ಲಿ ನಾವು ಭೇಟಿ ಆಗಿದ್ವಿ. 1998 ರಲ್ಲಿ ನಾನು 'ಪ್ರತ್ಯರ್ಥ' ಸಿನಿಮಾ ಮಾಡುತ್ತಿದ್ದಾಗ, ಒಂದು ಸಣ್ಣ ಪಾತ್ರ ಇತ್ತು. ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ನಾನು 'ಪ್ರತ್ಯರ್ಥ' ಶೂಟಿಂಗ್ ಪ್ಲಾನ್ ಮಾಡಿದ್ದೆ. ಆ ಟೈಮ್ ನಲ್ಲಿ ಸುದೀಪ್ ಪರಿಚಯ ಆಗಿತ್ತು. ಸಿನಿಮಾ ಮಾಡುವ ಛಲ ಸುದೀಪ್ ಗಿತ್ತು. ಚಿಕ್ಕ ಪಾತ್ರ ಇದೆ ಎಂದು ನಾನು ಹೇಳಿದಾಗ ಮಾಡುವೆ ಎಂದು ಸುದೀಪ್ ಒಪ್ಪಿಕೊಂಡರು'' - ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಕ

ಏಟಾಗಿದ್ದ ವಿಷಯ ಮುಚ್ಚಿಟ್ಟಿದ್ದ ಸುದೀಪ್

ಏಟಾಗಿದ್ದ ವಿಷಯ ಮುಚ್ಚಿಟ್ಟಿದ್ದ ಸುದೀಪ್

''ಪ್ರತ್ಯರ್ಥ' ಚಿತ್ರದಲ್ಲಿ ರಮೇಶ್ ಅರವಿಂದ್ ಗೆ ಸಹಾಯ ಮಾಡುವ ಪಾತ್ರ ಅದು. ಅದರಲ್ಲಿ ಆಕ್ಷನ್ ಕೂಡ ಇತ್ತು. ಸುದೀಪ್ ಫೈಟ್ ಮಾಡಬೇಕಿತ್ತು. ಅದಕ್ಕೂ ಮುನ್ನವೇ ಸುದೀಪ್ ಅವರ ಹೊಟ್ಟೆಗೆ ಏಟಾಗಿತ್ತಂತೆ. ಈ ವಿಷಯವನ್ನು ಸುದೀಪ್ ನನಗೆ ಹೇಳಿರಲಿಲ್ಲ. ನಮ್ಮ ಶೂಟಿಂಗ್ ಗೆ ಡಿಸ್ಟರ್ಬ್ ಆಗಬಾರದು ಅಂತ ಅವರಿಗೆ ಪೆಟ್ಟಾಗಿದ್ದ ವಿಷಯವನ್ನ ಸುದೀಪ್ ಮುಚ್ಚಿಟ್ಟಿದ್ದರು. ನಮಗೆ ಏನೂ ಗೊತ್ತಿಲ್ಲದೆ ಎರಡು ದಿನ ಫೈಟ್ ಶೂಟಿಂಗ್ ಮಾಡಿದ್ದೀವಿ'' - ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಕ.

ವರ್ಕ್ ಕಮ್ಮಿಟ್ಮೆಂಟ್ ಮೆಚ್ಚಬೇಕು.!

ವರ್ಕ್ ಕಮ್ಮಿಟ್ಮೆಂಟ್ ಮೆಚ್ಚಬೇಕು.!

''ಸುದೀಪ್ ರವರ ವರ್ಕ್ ಕಮಿಟ್ಮೆಂಟ್ ನ ಮೆಚ್ಚಬೇಕು. ನೋವನ್ನು ನುಂಗಿಕೊಂಡು, ಇನ್ಜೆಕ್ಷನ್, ಟ್ಯಾಬ್ಲೆಟ್ ತೆಗೆದುಕೊಂಡು, ನನಗೆ ಗೊತ್ತಾಗದ ಹಾಗೆ ಸುದೀಪ್ ನಟಿಸಿದ್ದಾರೆ. ಅಂದು ಸುದೀಪ್ ಗೆ ಹೀಗೆ ಆಗಿತ್ತು ಅಂತ ನನಗೆ ಗೊತ್ತಾಗಿದ್ದೇ 20 ವರ್ಷಗಳ ನಂತರ'' - ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಕ

ಪಾತ್ರಕ್ಕೆ ನ್ಯಾಯ ಒದಗಿಸುವ ನಟ

ಪಾತ್ರಕ್ಕೆ ನ್ಯಾಯ ಒದಗಿಸುವ ನಟ

''ಸುದೀಪ್ ಅವರ ನಿಷ್ಠೆ ಬಗ್ಗೆ ನನಗೆ ಬಹಳ ಗೌರವ ಇದೆ. ಅವರೊಂದಿಗೆ 'ಸ್ಪರ್ಶ' ಸಿನಿಮಾ ಪ್ಲಾನ್ ಮಾಡಿದ್ವಿ. ಒಂದು ಚಿತ್ರ ಒಪ್ಪಿಕೊಂಡ ನಂತರ, ಒಂದು ಪಾತ್ರ ಒಪ್ಪಿಕೊಂಡ ನಂತರ.. ಅದಕ್ಕೆ ಸುದೀಪ್ ಎಷ್ಟು ನ್ಯಾಯ ಒದಗಿಸುತ್ತಾರೆ ಎಂಬುದು 'ಸ್ಪರ್ಶ' ಮಾಡುವಾಗಲೇ ನನಗೆ ಅರ್ಥ ಆಗಿತ್ತು'' - ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಕ

ಚಳಿಯಲ್ಲಿ, ನೀರಿನಲ್ಲಿ, ಬರಿಗಾಲಿನಲ್ಲಿ ಸುದೀಪ್

ಚಳಿಯಲ್ಲಿ, ನೀರಿನಲ್ಲಿ, ಬರಿಗಾಲಿನಲ್ಲಿ ಸುದೀಪ್

''ಡಾರ್ಜಿಲಿಂಗ್ ನಲ್ಲಿ 'ಚಂದಕ್ಕಿಂತ ಚಂದ' ಹಾಡಿನ ಚಿತ್ರೀಕರಣ ಮಾಡುತ್ತಿದ್ವಿ. ಮೈನಸ್ ಡಿಗ್ರಿ ಇತ್ತು. ತೀರಾ ಚಳಿ. ಕಾಲಿಟ್ಟರೆ, ಮರಗಟ್ಟುತ್ತದೆ. ಕೆಲವು ಡ್ಯಾನ್ಸರ್ ಗಳು ಚಳಿ ತಳಿಯಲಾರದೆ ಮೂರ್ಛೆ ಹೋಗಿದ್ದರು. ಹೀಗಿದ್ದರೂ, ಸುದೀಪ್ ಅವರು ಎರಡು ದಿನ ನದಿ ನೀರಿನಲ್ಲಿ ಬರಿಗಾಲಿನಲ್ಲಿ ನಿಂತಿದ್ದರು. ಕೆಳಗಡೆ ಕಲ್ಲುಗಳು ಬೇರೆ. ಇದ್ಯಾವುದನ್ನೂ ಮುಖ ಭಾವನೆಯಲ್ಲಿ ತೋರಿಸದೆ, ಚಿತ್ರೀಕರಣ ಮಾಡಿದ್ದಾರೆ ಸುದೀಪ್. ಶೂಟಿಂಗ್ ಮುಗಿದ ಮೇಲೆ ನೋಡಿದರೆ ಸುದೀಪ್ ಕಾಲಿನ ಚರ್ಮಕ್ಕೆ ಸಮಸ್ಯೆ ಆಗಿತ್ತು'' - ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಕ.

ಶ್ರದ್ಧೆ, ನಿಷ್ಠೆ ಬಗ್ಗೆ ಹೆಮ್ಮೆ ಇದೆ.!

ಶ್ರದ್ಧೆ, ನಿಷ್ಠೆ ಬಗ್ಗೆ ಹೆಮ್ಮೆ ಇದೆ.!

''ಸಿನಿಮಾ ಬಗ್ಗೆ ಸುದೀಪ್ ಗೆ ತುಂಬಾ ಪ್ಯಾಶನ್ ಇದೆ. ಈಗಲೂ ಕೆಲಸದ ಮೇಲೆ ಸುದೀಪ್ ಗೆ ಇರುವ ಶ್ರದ್ಧೆ, ನಿಷ್ಠೆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಯಾವುದೇ ರಿಸ್ಕ್ ಇದ್ದರೂ, ಮಾಡಬೇಕೆಂಬ ಹಠ-ಛಲ ಸುದೀಪ್ ಗೆ ಇದೆ. ಅದಕ್ಕೆ ಈ 25 ವರ್ಷದಲ್ಲಿ ಈ ಮಟ್ಟಕ್ಕೆ ಬೆಳೆದಿದ್ದಾರೆ'' ಎಂದು ಹೃದಯ ತುಂಬಿ ಮಾತನಾಡಿದರು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ.

More from Filmibeat

English summary
Sudeep at 25: Director Sunil Kumar Desai appreciates Sudeep's work commitment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X