ಸುದೀಪ್ ಐತಿಹಾಸಿಕ ಚಿತ್ರದಲ್ಲಿ ನಟಿಸದಿರಲು ದರ್ಶನ್ ತೋಟದಲ್ಲಿ ನಡೆದ ಆ ಘಟನೆ ಕಾರಣ!

ಕನ್ನಡದಲ್ಲಿ ಆಗೊಮ್ಮೆ ಈಗೊಮ್ಮೆ ಐತಿಹಾಸಿಕ ಹಾಗೂ ಪೌರಾಣಿಕ ಸಿನಿಮಾಗಳನ್ನು ಮಾಡುವ ಪ್ರಯತ್ನ ನಡೆಯುತ್ತದೆ. ನಟ ಕಿಚ್ಚ ಸುದೀಪ್ ಕೂಡ ಐತಿಹಾಸಿಕ ಪಾತ್ರಗಳಲ್ಲಿ ನಟಿಸುವ ಪ್ರಯತ್ನ ಮಾಡಿದ್ದರು. ತೆಲುಗಿನ 'ಸೈರಾ' ಹಾಗೂ ತಮಿಳಿನ 'ಪುಲಿ' ಚಿತ್ರಗಳಲ್ಲಿ ವಿಭಿನ್ನ ಗೆಟಪ್‌ಗಳಲ್ಲಿ ಮಿಂಚಿದ್ದರು. 'ವಿಷ್ಣುವರ್ಧನ' ಚಿತ್ರದ ಹಾಡೊಂದರಲ್ಲಿ ರಾಜನ ವೇಷದಲ್ಲಿ ಮಿಂಚಿದ್ದರು.

ಇವತ್ತಿನ ತಂತ್ರಜ್ಞಾನ, ಪ್ಯಾನ್ ಇಂಡಿಯಾ ಮಾರ್ಕೆಟ್ ಐತಿಹಾಸಿಕ, ಪೌರಾಣಿಕ ಸಿನಿಮಾಗಳಿಗೆ ಬಲ ತುಂಬುವಂತಿದೆ. 'ಮದಕರಿ ನಾಯಕ'ನ ಕಥೆಯನ್ನು ಕನ್ನಡದಲ್ಲಿ ಸಿನಿಮಾ ಮಾಡಲು ದರ್ಶನ್ ಹಾಗೂ ಸುದೀಪ್ ಪೈಪೋಟಿಗೆ ಬಿದ್ದಿದ್ದು ಗೊತ್ತೇಯಿದೆ. ಇಬ್ಬರೂ ಸಿನಿಮಾ ಘೋಷಿಸಿದ್ದರು. ಅಂತಿಮವಾಗಿ ಸುದೀಪ್ ಹಿಂದೆ ಸರಿದು ದರ್ಶನ್ ಹೀರೊ ಆಗಿ ಸಿನಿಮಾ ಶುರುವಾಗಿತ್ತು. ಒಂದು ವಾರದ ಚಿತ್ರೀಕರಣ ಬಳಿಕ ಸಿನಿಮಾ ನಿಂತು ಹೋಗಿತ್ತು.

Sudeep Opens Up on Fear of Horse Riding Recalls Darshan s farm house incident

ಇತ್ತೀಚೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಸಿನಿಮಾ, ಬಿಗ್‌ಬಾಸ್, ರಾಜಕೀಯ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಕಿಚ್ಚ ಉತ್ತರಿಸಿದ್ದರು. ಈ ವೇಳೆ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಪ್ರಶ್ನೆ ಎದುರಾಯಿತು. ತಾವು ಯಾಕೆ ಐತಿಹಾಸಿಕ ಸಿನಿಮಾ ಮಾಡದೇ ಕಮರ್ಷಿಯಲ್ ಆಕ್ಷನ್ ಸಿನಿಮಾ ಮಾಡ್ತಿದ್ದೀನಿ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.

"ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ನನಗಿರುವ ಸಮಸ್ಯೆ ನೇರವಾಗಿ ಹೇಳ್ತೀನಿ ಕೇಳಿ. ನನಗೆ ಕುದುರೆ ಸವಾರಿ ಆಗೋಲ್ಲ. ಒಮ್ಮೆ ಇಂಥದ್ದೇ ಅವಕಾಶ ಬಂದು ಕುದುರೆ ಸವಾರಿ ಅಭ್ಯಾಸ ಮಾಡೋಕೆ ಹೋಗಿದ್ದೆ. ಒಂದು ವಾರ ಕಲಿತೆ. ಒಂದು ದಿನ ಇದ್ದಕ್ಕಿದಂತೆ ಕುದುರೆ ಎಗರಿ ನನ್ನನ್ನು 20 ಮೀಟರ್ ನನ್ನನ್ನು ಎಳ್ಕೊಂಡು ಹೋಯ್ತು. ಅವತ್ತು ಆಗಿದ್ದ ಭಯ ಇದ್ಯಲ್ಲ, ಪ್ರಪಂಚನೇ ನೋಡಿಬಿಟ್ಟೆ. ಆಗ ಗೊತ್ತಾಯ್ತು, ಯಾವುದೇ ವಾಹನದ ಮೇಲೆ ಹತ್ತಿದ್ರು, ಬ್ರೇಕ್, ಹ್ಯಾಂಡಲ್ ಎಲ್ಲಿದೆ ಅಂತ ಗೊತ್ತಿರಬೇಕು ಅಂತ. ಕುದುರೆಯಲ್ಲಿ ಎಲ್ಲಿರುತ್ತೋ ಗೊತ್ತಿಲ್ಲ" ಎಂದು ಸುದೀಪ್ ನಕ್ಕಿದ್ದರು.

Sudeep Opens Up on Fear of Horse Riding Recalls Darshan s farm house incident

ಎರಡನೇ ಬಾರಿ ಕುದುರೆ ಸವಾರಿ ಮಾಡಲು ಹೋಗಿ ಭಯಬಿದ್ದ ಘಟನೆಯನ್ನು ಕಿಚ್ಚ ನೆನಪಿಸಿಕೊಂಡಿದ್ದರು. "ಮತ್ತೊಮ್ಮೆ ದರ್ಶನ್ ಮೈಸೂರು ತೋಟಕ್ಕೆ ಹೋಗಿದ್ವಿ. ಅಲ್ಲಿ ಹೋದಾಗ ಕುದುರೆ ಹತ್ತೋಕೆ ಬಹಳ ಬಲವಂತ ಮಾಡ್ದ. ನೀನು ತಿಪ್ಪರಲಾಗ ಹಾಕಿದ್ರು, ನೀನು ಬೇಡ ನಿನ್ನ ಕುದುರೆ ಸಹವಾಸ ಕೂಡ ಬೇಡ ಎಂದಿದ್ದೆ. ಆದ್ರು ಕುದುರೆ ಹತ್ತಿಸಿದ್ರು. ಅವ್ನು ಕುದುರೆ ಏರಿ ಚೆನ್ನಾಗಿ ಸವಾರಿ ಮಾಡ್ತಿದ್ದ. ಇದ್ದಕ್ಕಿಂದಂತೆ ಜಾರಿ ಬಿದ್ದ. ಅದನ್ನು ಕಣ್ಣಾರೆ ನೋಡಿದ ನಾನು ಮತ್ತೆ ಕುದುರೆ ಏರುವ ಸಾಹಸ ಮಾಡ್ಲಿಲ್ಲ. ಐತಿಹಾಸಿಕ ಅಂದಾಕ್ಷಣ ಯುದ್ಧ, ಕುದುರೆ ಸವಾರಿ ಅಂತೀರಾ. ಈಗ ಮಾಡ್ತಿರೋ ಸಿನಿಮಾಗಳಲ್ಲಿ ಬೈಕ್ ಅಲ್ಲಿ ಬರ್ತೀನಿ, ಬೇಗ ಶೂಟಿಂಗ್ ಮುಗಿಯತ್ತೆ, ಮನೆಗೆ ಹೋಗ್ತೀನಿ" ಎಂದು ಸುದೀಪ್ ವಿವರಿಸಿದ್ದಾರೆ.

ಮಾತು ಮುಂದುವರೆಸಿದ ಕಿಚ್ಚ "ಬಿಲ್ಲ ರಂಗ ಬಾಷ ಚಿತ್ರದ ಒಂದು ಪಾತ್ರಕ್ಕೆ 2 ಗಂಟೆ ಮೇಕಪ್ ಹಾಕಿಕೊಳ್ಳಬೇಕು. ನನ್ನ ಲೈಫ್‌ನಲ್ಲಿ ಯಾವತ್ತು ಕೂಡ ಅಷ್ಟು ಹೊತ್ತು ಮೇಕಪ್ ಹಾಕಲಿಲ್ಲ. ಬಿಲ್ಲ ಪಾತ್ರಕ್ಕೆ ಹಾಕಿಕೊಳ್ಳುವ ಆ ಮೇಕಪ್ ತೆಗೆಯಲು ಅರ್ಧ ಗಂಟೆ ಬೇಕು" ಎಂದು ಸುದೀಪ್ ಹೇಳಿದ್ದಾರೆ. 'ಬಿಲ್ಲ ರಂಗ ಬಾಷ' ಜೊತೆ 'ಮಾರ್ಕ್' ಎಂಬ ಮತ್ತೊಂದು ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 12 ಇದೇ ತಿಂಗಳ 27ರಂದು ಶುರುವಾಗಲಿದೆ. ಸಿನಿಮಾಗಳ ಚಿತ್ರೀಕರಣದ ನಡುವೆ ಸುದೀಪ್ ಶೋ ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಯಾರೆಲ್ಲಾ ದೊಡ್ಮನೆ ಒಳಗೆ ಹೋಗುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

More from Filmibeat

English summary
Sudeep Says Historical Films Are Not for Him, Remembers Darshan’s Horse Mishap
Read more about: darshan sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X