ಅಕ್ಷಯ್ ಕುಮಾರ್ - ಶಿಲ್ಪಾ ಶೆಟ್ಟಿ ಮದುವೆ ಮುರಿದು ಬಿದ್ದಿದ್ದೇಕೆ ? 25 ವರ್ಷಗಳ ನಂತರ ಕಹಿ ಸತ್ಯ ಹೇಳಿದ ನಿರ್ಮಾಪಕ

ಜೀವಗಳೆರಡು ಭಾವ ಒಂದೇ ಎನ್ನುವ ಪ್ರೀತಿಗೆ ಅನೇಕರು ಹೊತೊರೆಯುತ್ತಾರೆ. ಆದರೆ ಎಲ್ಲರಿಗೂ ಈ ಪ್ರೀತಿಯಲ್ಲಿರುವ ಸುಖ ಗೊತ್ತಾಗಲ್ಲ. ಬಹುತೇಕರಿಗೆ ನಿಜವಾದ ಪ್ರೀತಿ ಸಿಗುವುದಿಲ್ಲ. ಯಾಕೆಂದರೆ ಪ್ರೀತಿ ಹೃದಯದ ಭಾಷೆಯಾದರೂ ಈ ಪ್ರೀತಿಗೆ ಜಾತಿ - ಧರ್ಮ- ಅಂತಸ್ತು- ಮನೆತನ - ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ.

ಇನ್ನು ಕೆಲವರ ಮನೆಯಲ್ಲಿ ಹೆತ್ತವರ ವಿರೋಧ ಪ್ರೀತಿಯನ್ನು ಬಲಿ ಪಡೆಯುತ್ತೆ. ಇನ್ನೂ ಯಾರೇ ಆಗಲಿ ಮದುವೆಯಾಗುವ ಮುನ್ನ ತನ್ನ ಕೈ ಹಿಡಿಯುವ ಹುಡುಗನ ಆಸ್ತಿ, ಅಂತಸ್ತು, ಸ್ಥಾನಮಾನ ನೋಡುತ್ತಾರೆ. ಅದು ಜನಸಾಮಾನ್ಯರೇ ಇರಲಿ. ಚಿತ್ರರಂಗದಲ್ಲಿ ಕನಸೆಂಬ ಕುದರೆಯನ್ನೇರಿದ ಕಲಾವಿದರೇ ಇರಲಿ. . ಹಣ ಇದ್ದರೆ ಮಾತ್ರ ಇಲ್ಲಿ ಸಂಬಂಧ-ಅನುಬಂಧ ಎಲ್ಲವೂ. ಇದಕ್ಕೆ ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಶೆಟ್ಟಿ ಪ್ರೇಮಕತೆ ಸದ್ಯದ ತಾಜಾ ಉದಾಹರಣೆ.

SUNEEL DARSHAN EXPOSES Shilpa Shetty s Parents Conditions Shattered Marriage Plans with Akshay Kumar

ಹೌದು, ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಶೆಟ್ಟಿ 90ರ ದಶಕದ ಜೋಡಿ ಹಕ್ಕಿ. 1994ರಲ್ಲಿ ತೆರೆಗೆ ಬಂದ ಬ್ಲಾಕ್ ಬಸ್ಟರ್ ಚಿತ್ರ ''ಮೇ ಕಿಲಾಡಿ ತು ಅನಾಡಿ'' ಇವರು ಇಬ್ಬರು ಜೊತೆಯಲ್ಲಿ ಅಭಿನಯಿಸಿದ ಮೊದಲ ಚಿತ್ರ. ಇದೇ ಚಿತ್ರದ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಆ ನಂತರ ಬಂದ ''ಇನ್ಸಾಫ್''.. ''ಜಾನವರ್'' ಮತ್ತು ''ದಢ್ಕನ್'' .. ಈ ಸಂಬಂಧಕ್ಕೆ ಭದ್ರಪಾಯ ಅಡಿಪಾಯ ಹಾಕಿದ್ದವು. ಆ ಕಾಲದಲ್ಲಿ ಅತ್ಯಂತ ಹೆಚ್ಚು ಚರ್ಚಿತ ಲವ್ ಸ್ಟೋರಿಗಳಲ್ಲಿ ಇವರದ್ದು ಕೂಡ ಒಂದು.

ಇಬ್ಬರ ನಡುವೆ ಇದ್ದ ಸಲುಗೆ.. ಆತ್ಮೀಯತೆ ಮತ್ತು ಪ್ರೀತಿಯನ್ನು ಕಂಡು ಹಲವರು ಇವರು ಇಬ್ಬರು ಮದುವೆಯಾಗುತ್ತಾರೆ ಎಂದುಕೊಂಡಿದ್ದರು. ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪೂರಕವಾಗಿ ಇಬ್ಬರು ಮದುವೆಯಾಗಲು ಸಿದ್ಧರಾಗಿದ್ದರು ಕೂಡ.

ಆದರೆ.. 2000ನೇ ಇಸ್ವಿಯಲ್ಲಿ ''ದಢ್ಕನ್'' ತೆರೆಗೆ ಬರುವ ಸಮಯದಲ್ಲಿ ಇಬ್ಬರ ಬದುಕು ಮಹತ್ತರವಾದ ತಿರುವು ಪಡೆದಿತ್ತು. ಇಬ್ಬರ ಸಂಬಂಧ ಮುರಿದು ಬಿದ್ದಿತ್ತು. ಸಂಬಂಧ ಮುರಿದು ಬಿದ್ದು 25 ವರ್ಷವಾದರೂ ಇವತ್ತು ಕೂಡ ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಶೆಟ್ಟಿ ''ದಢ್ಕನ್'' ಚಿತ್ರದ ನಂತರ ತೆರೆ ಹಂಚಿಕೊಳ್ಳಲೇ ಇಲ್ಲ.

SUNEEL DARSHAN EXPOSES Shilpa Shetty s Parents Conditions Shattered Marriage Plans with Akshay Kumar

''ಧಡ್ಕನ್'' ನಂತರ ಖುದ್ದು ಜೀವನದಲ್ಲಿ ಇನ್ಯಾವತ್ತು ಅಕ್ಷಯ್ ಕುಮಾರ್ ಜೊತೆ ನಾನು ಆಕ್ಟ್ ಮಾಡಲಾರೆ ಎಂದು ಖಂಡತುಂಡವಾಗಿ ಎಲ್ಲರೆದುರು ಹೇಳಿದ್ದರು. ಹೀಗಾಗಿ ಇವರ ಮದುವೆ ಮುರಿದು ಬಿದ್ದಿದ್ದೇಕೆ..? ಅಭಿನಯಿಸುವುದೇ ಇಲ್ಲ ಎಂದು ಶಿಲ್ಪಾ ಶಪಥ ಮಾಡುವಂತಹದ್ದು ಏನಾಯ್ತು..? ಎಂಬ ಪ್ರಶ್ನೆ ಹಲವರಲ್ಲಿತ್ತು. ಈ ಪ್ರಶ್ನೆಗಳಿಗೆ ಈಗ ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ, ಬರಹಗಾರ ಸುನೀಲ್ ದರ್ಶನ್ ಉತ್ತರ ನೀಡಿದ್ದಾರೆ.

ಹೌದು, ಸುನಿಲ್ ದರ್ಶನ್.. ಒಂದ್ಕಾಲದಲ್ಲಿ ಅಕ್ಷಯ್ ಕುಮಾರ್ ಅವರ ಆತ್ಮೀಯ. ''ಜಾನವರ್''.. ''ಏಕ್ ರಿಷ್ತಾ''.. ''ಹಾ ಮೈನೇ ಬಿ ಪ್ಯಾರ್ ಕೀಯಾ ಹೈ''.. ''ತಲಾಶ್''.. ''ಅಂದಾಜ್''.. ''ದೋಸ್ತಿ''.. ''ಮೇರೆ ಜೀವನ್ ಸಾಥಿ''..

ಹೀಗೆ ಒಂದಾದ ಮೇಲೊಂದರಂತೆ ಅಕ್ಷಯ್ ಕುಮಾರ್ ಜೊತೆ 7 ಚಿತ್ರಗಳಲ್ಲಿ ಕೆಲಸ ಮಾಡಿದವರು ಇವರು. ಇಂಥಾ ಸುನಿಲ್ ದರ್ಶನ್ ಸದ್ಯ ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಶೆಟ್ಟಿ ಮದುವೆ ಮುರಿದು ಬೀಳಲು ಶಿಲ್ಪಾ ಶೆಟ್ಟಿ ಅವರ ಪೋಷಕರೇ ಕಾರಣ ಎಂದು ಹೇಳಿದ್ದಾರೆ.

ಈ ಕುರಿತು ''ಬಾಲಿವುಡ್ ಥಿಕಾನಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುನೀಲ್ ದರ್ಶನ್,
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಎಲ್ಲರಿಗೆ ಗೊತ್ತಿರುವಂತೆ ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಶೆಟ್ಟಿ ಮದುವೆಯಾಗಬೇಕಿತ್ತು ಎಂದು ಹೇಳಿದ್ದಾರೆ. ಆದರೆ.. ಈ ಸಮಯದಲ್ಲಿ ಇವರ ಪ್ರೇಮಕ್ಕೆ ಶಿಲ್ಪಾ ಶೆಟ್ಟಿಯ ಪೋಷಕರು ಅಡ್ಡಿಯಾದರು ಎಂದು ಹೇಳಿರುವ ಸುನೀಲ್ ದರ್ಶನ್, ಅಕ್ಷಯ್ ಕುಮಾರ್ ಎದುರು ಅವರು ಕೆಲವರು ಷರತ್ತುಗಳನ್ನು ಇಟ್ಟಿದ್ದರು ಎಂದು ಹೇಳಿದ್ದಾರೆ. ಈ ಷರತ್ತುಗಳಿಂದನೇ ಮದುವೆ ಮುರಿದು ಬಿತ್ತು ಎಂದಿದ್ದಾರೆ.

SUNEEL DARSHAN EXPOSES Shilpa Shetty s Parents Conditions Shattered Marriage Plans with Akshay Kumar

ಆ ಷರತ್ತುಗಳೇನು..? ಎನ್ನುವ ಪ್ರಶ್ನೆಗೆ ಸಂಪೂರ್ಣ ಉತ್ತರ ನೀಡದ ಸುನೀಲ್ ದರ್ಶನ್, ಸಹಜವಾಗಿ ತಮ್ಮ ಮಗಳ ಭವಿಷ್ಯ ಮತ್ತು ಭಧ್ರತೆಯ ಕುರಿತು ಅವರ ಪೋಷಕರು ಷರತ್ತುಗಳನ್ನು ಹಾಕಿದ್ದರು ಎಂದು ಹೇಳಿದ್ದಾರೆ. ಎಲ್ಲ ತಂದೆ ತಾಯಿಯಂತೆ ಅವರು ಕೂಡ ತಮ್ಮ ಮಗಳ ಭದ್ರತೆಯ ಕುರಿತು ಆಲೋಚನೆ ಮಾಡಿದ್ದರು ಎಂದಿದ್ದಾರೆ.

ಶಿಲ್ಪಾ ಶೆಟ್ಟಿಯ ತಂದೆ ತಾಯಿಯ ಬೇಡಿಕೆಗಳನ್ನು ಈಡೇರಿಸಿದ್ದರೆ, ಷರತ್ತು ಪೂರೈಸಿದ್ದರೆ, ಈ ಸುಂದರ ಜೋಡಿ ನಿಜ ಜೀವನದಲ್ಲಿ ಒಂದಾಗುತ್ತಿತ್ತು, ಇಬ್ಬರ ಬದುಕು ಸಂಪೂರ್ಣ ಭಿನ್ನವಾಗಿರುತ್ತಿತ್ತು ಎಂದು ಹೇಳಿರುವ ಸುನೀಲ್ ದರ್ಶನ್, ವಿಧಿಲಿಖಿತ ಬೇರೆ ಇತ್ತು ಎಂದು ಹೇಳಿದ್ದಾರೆ. ಅಕ್ಷಯ್ ಮತ್ತು ಶಿಲ್ಪಾ ದೂರವಾಗಿದ್ದು ದುರದೃಷ್ಟಕರ, ಹೀಗಾಗಬಾರದಿತ್ತು ಎಂಬ ಭಾವನೆ ನನಗೆ ಆಗ ಬಂದಿತ್ತು ಎಂದು ಕೂಡ ಹೇಳಿದ್ದಾರೆ.

ಇನ್ನು ಮದುವೆ ಮುರಿದು ಬಿದ್ದ ನಂತರ ಅಕ್ಷಯ್ ಕುಮಾರ್, ವ್ಯೆಯಕ್ತಿಕ ಬದುಕಿನಲ್ಲಾದ ಈ ಆಘಾತದಿಂದ ಕಣ್ಣೀರು ಹಾಕುತ್ತಾ ಕೂರಲಿಲ್ಲ ಬದಲಿಗೆ ಕೆಲಸದಲ್ಲಿ ಸಂಪೂರ್ಣ ಮುಳುಗಿ ಹೋದರು ಎಂದು ಹೇಳಿರುವ ಸುನೀಲ್ ದರ್ಶನ್, ಶಿಲ್ಪಾ ಶೆಟ್ಟಿ ಜೊತೆ ಸಂಬಂಧ ಮುರಿದು ಬಿದ್ದ ನಂತರ ಅಕ್ಷಯ್ ಕುಮಾರ್ ''ಹೇರಾಫೇರಿ''.. ''ಏಕ್ ರಿಶ್ತಾ'' ಚಿತ್ರಗಳಲ್ಲಿ ಏಕಕಾಲಕ್ಕೆ ಅಭಿನಯಿಸುತ್ತಿದ್ದರು. ಈ ಮೂಲಕ ತಮ್ಮ ಗಮನ ತಮ್ಮ ವೃತ್ತಿ ಜೀವನದ ಕಡೆ ವಹಿಸಿದರು ಎಂದು ಹೇಳಿದ್ದಾರೆ.

ಮುಂದುವರೆದು ಇದೇ ಸಮಯದಲ್ಲಿ ಅಂದರೆ ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಶೆಟ್ಟಿ ಸಂಬಂಧ ಮುರಿದು ಬೀಳುವ ಮುಂಚೆಯೇ ರಾಜೇಶ್ ಖನ್ನಾ ಅವರಿಗೆ ಅವರ ಆಪ್ತರಾಗಿದ್ದ ಜ್ಯೋತಿಷಿಯೊಬ್ಬರು, ಅಕ್ಷಯ್ ಕುಮಾರ್ ಮದುವೆ ಟ್ವಿಂಕಲ್ ಖನ್ನಾ ಜೊತೆ ನಡೆಯುತ್ತೆ ಎಂದು ಭವಿಷ್ಯ ಹೇಳಿದ್ದರು ಎಂದು ನೆನಪು ಮಾಡಿಕೊಂಡಿರುವ ಸುನೀಲ್ ದರ್ಶನ್, ವಿಶೇ‍ಷ ಅಂದರೆ ಜ್ಯೋತಿಷಿ ಈ ಭವಿಷ್ಯ ಹೇಳಿದ್ದಾಗ ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ನಡುವೆ ಅಷ್ಟೊಂದು ಆತ್ಮೀಯತೆ ಕೂಡ ಇರಲಿಲ್ಲ ಎಂದು ಹೇಳಿದ್ದಾರೆ.

ಸದ್ಯ ಸುನೀಲ್ ದರ್ಶನ್ ಅವರ ಈ ಸಂದರ್ಶನ ಬಾಲಿವುಡ್‌ನಲ್ಲಿ ವ್ಯಾಪಕ ಚರ್ಚೆಗೀಡಾಗುತ್ತಿದೆ. ಈ ಮೂಲಕ ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಶೆಟ್ಟಿ ಲವ್ & ಬ್ರೇಕಪ್ ಸ್ಟೋರಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇನ್ನುಳಿದಂತೆ ಶಿಲ್ಪಾ ಶೆಟ್ಟಿ ಅವರಿಂದ ದೂರವಾದ ನಂತರ ಅಕ್ಷಯ್ ಕುಮಾರ್ 2001ರಲ್ಲಿ ಜ್ಯೋತಿಷಿ ನುಡಿದ ಭವಿಷ್ಯದಂತೆ ಟ್ವಿಂಕಲ್ ಖನ್ನಾ ಜೊತೆ ಮದುವೆಯಾದರು. ಇವರ ಪ್ರೇಮ ಸಂಕೇತವಾಗಿ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನೂ 2009ರವರೆಗೆ ಸಿಂಗಲ್ ಆಗಿದ್ದ ಶಿಲ್ಪಾ ಶೆಟ್ಟಿ 2009ರಲ್ಲಿ ಉದ್ಯಮಿ ರಾಜ್ ಕುಂದ್ರಾ ಜೊತೆ ಸಪ್ತಪದಿ ತುಳಿದರು. ರಾಜ್ ಕುಂದ್ರಾಗೆ ಶಿಲ್ಪಾ ಶೆಟ್ಟಿ ಎರಡನೇ ಪತ್ನಿ. ಇವರಿಗೂ ಕೂಡ ಇಬ್ಬರು ಮಕ್ಕಳಿದ್ದಾರೆ.

More from Filmibeat

English summary
Director Suneel Darshan exposes the conditions that broke up Akshay Kumar and Shilpa Shetty. Find out how the Khiladi star reacted to the parental demands.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X