ಪತ್ನಿಯ ಎದುರೇ ಈ ಸೂಪರ್ ಸ್ಟಾರ್‌ಗೆ ಪ್ರಪೋಸ್ ಮಾಡಿದ್ದರು ಕೆಜಿಎಫ್ ಚೆಲುವೆ ರವೀನಾ ಟಂಡನ್..!

ವರ್ಷವೊಂದಕ್ಕೆ ಒಂದು ಚಿತ್ರ ಮಾಡಲು ನಮ್ಮಲ್ಲಿನ ಅನೇಕ ಸ್ಟಾರ್‌ಗಳು ಕವಡೆ ಹಾಕುತ್ತಾರೆ. ಆದರೆ ಇದಕ್ಕೆ ತದ್ವಿರುದ್ದವೆನ್ನುವಂತೆ ಆ ಕಾಲದಲ್ಲಿ ದಿನವೊಂದಕ್ಕೆ ನಾಲ್ಕೈದು ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲಕ್ಕೆ ಅನೇಕರು ಭಾಗಿಯಾಗುತ್ತಿದ್ದರು. ಆ ಪೈಕಿ ಅಂದಕಾಲತ್ತಿಲ್‌ನ ಬಾಲಿವುಡ್‌ನ ಹೀರೋ ನಂಬರ್ ಓನ್ ಗೋವಿಂದ ಕೂಡ ಒಬ್ಬರು.

90ರ ದಶಕದ ಆಸು ಪಾಸು ಭಾರತದ ಅತ್ಯಂತ ಬೇಡಿಕೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗೋವಿಂದ ಏಕಕಾಲಕ್ಕೆ 75 ಚಿತ್ರಗಳನ್ನು ಒಪ್ಪಿಕೊಂಡು ದಾಖಲೆಯನ್ನು ಬರೆದಿದ್ದರು. ಬಾಲಿವುಡ್‌ನಲ್ಲಿ ಅನೇಕರ ಹುಬ್ಬೇರಿಸಿದ್ದರು. ಆದರೆ ಇದೇ ಗೋವಿಂದ ಆ ನಂತರ ತಮ್ಮ 'ನಡಾವಳಿ' ಹಾಗೂ 'ದುರಂಹಕಾರ'ಗಳಿಂದ ತಮ್ಮ 'ಕಾಲ' ಮೇಲೆ ತಾವೇ 'ಚಪ್ಪಡಿ ಕಲ್ಲು' ಎಳೆದುಕೊಂಡರು. 'ಸೂಪರ್ ಸ್ಟಾರ್' ಪಟ್ಟವನ್ನ ಅಲಂಕರಿಸಿ ಆ ನಂತರ ಹೇಳ ಹೆಸರಿಲ್ಲದಂತೆ 'ಬಾಲಿವುಡ್' ನಿಂದ 'ಕಣ್ಮರೆ' ಕೂಡ ಆದರು.

Sunita Ahuja revealed that Raveena Tandon might have married Govinda if she had met him first

ಇಂಥಾ ಗೋವಿಂದ ಬೇಡಿಕೆಯನ್ನು ಕಳೆದುಕೊಂಡ ಮೇಲೆ ಬಾಲಿವುಡ್‌ನಲ್ಲಿ ಈಗಾಗ್ಲೇ ಎರಡು ಮೂರು ಸುತ್ತು ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡಿದ್ದಾರೆ. ಆದರೆ ಬದಲಾದ ಕಾಲದಲ್ಲಿ ಗೆಲುವು ಎನ್ನುವುದು ಇವತ್ತು ಕೂಡ ಗೋವಿಂದ ಪಾಲಿಗೆ ಮರಿಚೀಕೆಯಾಗಿಯೇ ಉಳಿದಿದೆ. ಇವತ್ತು ಕೂಡ ಗೋವಿಂದ ಅವರನ್ನು ಕರೆದು ಬಾಲಿವುಡ್‌ನಲ್ಲಿ ಕೆಲಸ ಕೊಡುವವರ ಸಂಖ್ಯೆ ತೀರಾ ಕಡಿಮೆ. ಹಾಗೊಂದು ವೇಳೆ ಕರೆದು ಅವಕಾಶವನ್ನು ನೀಡಿದರು ಕೂಡ ಅಲ್ಲಿಯೂ ಕೂಡ ಗೋವಿಂದ ಕಿರಿಕ್ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಮುಂಬೈನಲ್ಲಿ ಚಾಲ್ತಿಯಲ್ಲಿದೆ.

ಹೀಗಿರುವಾಗ ಗೋವಿಂದ ಅವರ ಪತ್ನಿ ಸುನೀತಾ ತಮ್ಮ ಪತಿ ದೇವರು ಗೋವಿಂದ ಅವರ ಬಗ್ಗೆ ಕೆಲ ವಿಚಾರಗಳನ್ನು ಮಾತನಾಡಿದ್ದಾರೆ. ರವೀನಾ ಟಂಡನ್ ನನ್ನ ಗಂಡನನ್ನು ಮದುವೆಯಾಗಲು ಬಯಸಿದ್ದರು ಎಂದು ಹೇಳಿದ್ದಾರೆ. ಈ ಕುರಿತು ಹಿಂದಿ ರಶ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುನೀತಾ ಅವು ಗೋವಿಂದ ಖ್ಯಾತಿಯ ತುತ್ತ ತುದಿಯನ್ನು ತಲುಪಿದ್ದ ದಿನಗಳು. ಆಗಷ್ಟೇ ನಮ್ಮ ಮಗಳು ಟೀನಾ ಜನಿಸಿದ್ದಳು. ಹೀಗಾಗಿ ನಾನು ನನ್ನ ಮಗಳ ಲಾಲನೆ ಪಾಲನೆ ಕಡೆ ಗಮನ ಕೊಡುತ್ತಿದ್ದೆ, ಇನ್ನೊಂದು ಕಡೆ ಗೋವಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದರು, ಮಲಗಲು ಮಾತ್ರ ಮನೆಗೆ ಬರುತ್ತಿದ್ದರು ಎಂದು ಹೇಳಿದ್ದಾರೆ.

Sunita Ahuja revealed that Raveena Tandon might have married Govinda if she had met him first
\

ಮುಂದುವರೆದು ಆ ಕಾಲದಲ್ಲಿ ಮಾತೆತ್ತಿದ್ದರೆ ಶಿಮ್ಲಾ, ಕಾಶ್ಮೀರ್ ಎಂದು ನನ್ನ ಗಂಡ ಗೋವಿಂದ ಚಿತ್ರೀಕರಣದ ಪ್ರಯುಕ್ತ ಸುತ್ತಾಡುತ್ತಲೇ ಇರುತ್ತಿದ್ದರು ಎಂದಿರುವ ಸುನೀತಾ ಅಪರೂಪಕ್ಕೆ ಮದ್ರಾಸ್, ಹೈದರಾಬಾದ್‌ ಸುತ್ತ ಮುತ್ತ ಚಿತ್ರೀಕರಣ ನಡೆಯುತ್ತಿದ್ದಾಗ ನಾನು ಹೋಗುತ್ತಿದ್ದೇ ಎಂದು ಹೇಳಿದ್ದಾರೆ. ಚಿತ್ರೀಕರಣ ಮುಕ್ತಾಯವಾದ ನಂತರ ಉಳಿದ ಸಮಯದಲ್ಲಿ ಕೆಲ ಹೊತ್ತು ನೆಮ್ಮದಿಯಾಗಿರುತ್ತಿದ್ದೆವು ಎಂದು ಹೇಳಿದ್ದಾರೆ.

ಇನ್ನು ಇದೇ ಸಂದರ್ಶನದಲ್ಲಿ ಮಾತನಾಡಿರುವ ಸುನೀತಾ, ನನ್ನ ಗಂಡ ಗೋವಿಂದ ಅವರನ್ನು ಮದ್ವೆಯಾಗಲು ರವೀನಾ ಟಂಡನ್ ಅವರಿಗೆ ತುಂಬಾನೇ ಆಸೆ ಇತ್ತು ಎಂದು ಕೂಡ ಹೇಳಿದ್ದಾರೆ. ಚಿತ್ರದ ಚಿತ್ರೀಕರಣದ ಸ್ಥಳಕ್ಕೆ ನಾನು ಹೋದಾಗೆಲ್ಲ ನೀವು ನನಗೆ ಮೊದಲೇ ಸಿಕ್ಕಿದ್ದರೆ ನಾನು ನಿಮ್ಮನ್ನೇ ಮದುವೆಯಾಗುತ್ತಿದ್ದೆ ಎಂದು ರವೀನಾ ನನ್ನೆದುರು ಹೇಳುತ್ತಿದ್ದರು ಎಂದಿರುವ ಸುನೀತಾ , ರವೀನಾ ಅವರ ಈ ಮಾತುಗಳನ್ನು ಕೇಳಿದ ಮೇಲೆ ನಾನು ಮೊದಲು ಕರೆದುಕೊಂಡು ಹೋಗು ಆ ನಂತರ ನಿನಗೆ ಗೊತ್ತಾಗುತ್ತೆ ಎಂದು ತಮಾಷೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ನನ್ನ ಗಂಡ ಗೋವಿಂದ ಮತ್ತು ರವೀನಾ ಟಂಡನ್ ಅವರ ಕೆಮೆಸ್ಟ್ರೀ ನನಗೆ ಆಗಲೂ ಇಷ್ಟ ಈಗಲೂ ಇಷ್ಟ ಎಂದು ಕೂಡ ಸುನೀತಾ ಹೇಳಿದ್ಧಾರೆ.

More from Filmibeat

Read more about: govinda raveena tandon bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X