For Quick Alerts
  ALLOW NOTIFICATIONS  
  For Daily Alerts

  ಸನ್ನಿ ಲಿಯೋನ್ ಪೋರ್ನ್ ಉದ್ಯಮಕ್ಕೆ ಕಾಲಿಟ್ಟಿದ್ದು ಏಕೆ? ಹೇಗೆ?

  By ಫಿಲ್ಮಿಬೀಟ್ ಡೆಸ್ಕ್
  |

  ಕರಣ್‌ಜೀತ್ ಕೌರ್ ವೊಹ್ರಾ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ ಅದೇ ಸನ್ನಿ ಲಿಯೋನ್ ಎಂದ ಕೂಡಲೇ ಕಣ್ಣರಳುತ್ತದೆ. ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಮೂಲ ಹೆಸರು ಕರಣ್ ಜೀತ್‌ ಕೌರ್. ಬಾಲಿವುಡ್‌ನಲ್ಲಿ ನಟಿಯಾಗಿ, ವಿಶೇಷ ಹಾಡುಗಳ ನೃತ್ಯಗಾರ್ತಿಯಾಗಿ ತಮ್ಮದೇ ಆದ ಗುರುತು ಮೂಡಿಸಿರುವ ಈ ಚೆಲುವೆ ಈ ಹಿಂದೆ ಪೋರ್ನ್ ನಟಿಯಾಗಿದ್ದರು. ಈಗಲೂ ಇವರ ನೀಲಿ ಚಿತ್ರಗಳು ಅಂತರ್ಜಾಲದಲ್ಲಿ ಬಹಳ ಜನಪ್ರಿಯ.

  ಸಿಖ್‌ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಕರಣ್‌ಜೀತ್ ಕೌರ್ ವಿಶ್ವದ ಟಾಪ್ 10 ಪೋರ್ನ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಪೋರ್ನ್ ಸಿನಿಮಾಗಳ ಮೂಲಕ ದೊಡ್ಡ ಮೊತ್ತದ ಹಣ ಸಂಪಾದಿಸಿದ ಸನ್ನಿ ಲಿಯೋನ್, ಕೋಟ್ಯಂತರ ಅಭಿಮಾನಿಗಳನ್ನು ಸಹ ಸಂಪಾದಿಸಿದರು.

  ಆದರೆ 2013ರಲ್ಲಿ ಸನ್ನಿ ಲಿಯೋನ್ ಏಕಾಏಕಿ ಪೋರ್ನ್ ಉದ್ಯಮಕ್ಕೆ ನಿವೃತ್ತಿ ಘೋಷಿಸಿ ಭಾರತದಲ್ಲಿ ನೆಲೆ ನಿಲ್ಲಲು ನಿಶ್ಚಯಿಸಿದರು. ಆದರೆ ಪೋರ್ನ್ ಉದ್ಯಮವನ್ನು ಸನ್ನಿ ಬಿಟ್ಟರೂ ಸನ್ನಿಯನ್ನು ಪೋರ್ನ್ ಬಿಟ್ಟಿಲ್ಲ. ಈಗಲೂ ಸನ್ನಿಯ ಹಳೆಯ ಪೋರ್ನ್ ವಿಡಿಯೋಗಳು ಅಂತರ್ಜಾಲದಲ್ಲಿ ಹಾಟ್ ಫೇವರಿಟ್. ತಮ್ಮ ಹಳೆಯ ವಿಡಿಯೋಗಳಿಂದ ಈಗಲೂ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ ಸನ್ನಿ ಲಿಯೋನ್.

  ಸಂಪ್ರದಾಯಸ್ಥ ಭಾರತೀಯ ಸಿಖ್ ಕುಟುಂಬದ ಕರಣ್‌ಜೀತ್ ಕೌರ್ ವೊಹ್ರಾ, ಸನ್ನಿ ಲಿಯೋನ್ ಆಗಿ ಬದಲಾಗಿದ್ದು ಹೇಗೆ? ಪೋರ್ನ್ ಉದ್ಯಮವನ್ನು ಸನ್ನಿ ಸೇರಿಕೊಂಡಿದ್ದು ಹೇಗೆ? ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

  ಸಿಖ್ ಕುಟುಂಬದ ಸನ್ನಿ ಲಿಯೋನ್ ಹುಟ್ಟಿದ್ದು ಕೆನಡಾದಲ್ಲಿ. ಸನ್ನಿಗೆ ಒಬ್ಬ ಸಹೋದರನೂ ಇದ್ದಾನೆ. ಸನ್ನಿ ಪೋಷಕರು ಬಹಳ ಶಿಸ್ತಿನವರಾಗಿದ್ದರು. ಮಗಳು ಪಬ್ಲಿಕ್ ಶಾಲೆಗೆ ಹೋಗುವುದು ಸುರಕ್ಷಿತವಲ್ಲ ಎಂದು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಕ್ಯಾಥೊಲಿಕ್ ಶಾಲೆಗೆ ಸೇರಿಸಿದ್ದರು. ಸನ್ನಿ ಸಹ ಎಳವೆಯಲ್ಲಿ ಬಹಳ ಗಟ್ಟಿಗಿತ್ತಿ. ಹುಡುಗರೊಟ್ಟಿಗೆ ಸೇರಿ ಮನೆಯ ಮುಂದೆ ಹಾಕಿ ಇನ್ನಿತರೆ ಆಟಗಳನ್ನು ಆಡುತ್ತಿದ್ದರು. ಸನ್ನಿಯ ಬಾಲ್ಯ ಅಷ್ಟೇನೂ ಸುಂದರವಾಗಿರಲಿಲ್ಲ. ಸಾಕಷ್ಟು ಮೂದಲಿಕೆ, ಭೇದ-ಭಾವ, ದೌರ್ಜನ್ಯಗಳನ್ನು ಅನುಭವಿಸಿಯೇ ಅವರು ತಮ್ಮ ಬಾಲ್ಯ ಕಳೆದರು.

  ಬೇಕರಿ, ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿದ್ದ ಸನ್ನಿ

  ಬೇಕರಿ, ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿದ್ದ ಸನ್ನಿ

  ಸನ್ನಿ ಲಿಯೋನ್‌ರದ್ದು ಶ್ರೀಮಂತ ಕುಟುಂಬವಲ್ಲ. ಹರೆಯದ ವಯಸ್ಸಿನಲ್ಲಿಯೇ ಸನ್ನಿ ಹಣಕ್ಕಾಗಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಅದಕ್ಕೂ ಮುನ್ನ ಬೇಕರಿಯೊಂದರಲ್ಲಿ ಕೆಲಸ ಮಾಡಿದರು. ಆ ನಂತರ ಪೆನ್ಶನ್ ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಈ ನಡುವೆ ನರ್ಸ್‌ ಆಗಲು ಶಿಕ್ಷಣ ಸಹ ಪಡೆಯಲು ಆರಂಭಿಸಿದ್ದರು ಸನ್ನಿ. ತನ್ನ ಓರಗೆಯವರ ಐಶಾರಾಮಿತ್ವ ಸನ್ನಿಗೆ ಇರಲಿಲ್ಲ. ಇದು ಸನ್ನಿಯನ್ನು ಬಹುವಾಗಿ ಕಾಡುತ್ತಿತ್ತು. ಹಣ ಸಂಪಾದಿಸಲು ಹಲವು ಯತ್ನಗಳನ್ನು ಸನ್ನಿ ಮಾಡಿದರು ಆದರೆ ಬೇಕರಿ, ಬಂಕ್‌ಗಳಲ್ಲಿ ಬರುತ್ತಿದ್ದ ಸಂಬಳ ಬಹಳ ಕಡಿಮೆ ಆಗಿತ್ತು. ಸನ್ನಿಯ ಕನಸುಗಳನ್ನು ಪೂರೈಸಿಕೊಳ್ಳಲು ಅದು ಸಾಕಾಗುತ್ತಿರಲಿಲ್ಲ.

  ಮೊದಲ ಹೆಜ್ಜೆ ಇಟ್ಟಿದ್ದು ಹೀಗೆ

  ಮೊದಲ ಹೆಜ್ಜೆ ಇಟ್ಟಿದ್ದು ಹೀಗೆ

  ಇಂಥಹುದೇ ಸಮಯದಲ್ಲಿ ಮಾದಕ ನೃತ್ಯ ಮಾಡುವ ಯುವತಿಯೊಬ್ಬಳ ಗೆಳೆತನ ಸನ್ನಿಗೆ ದೊರಕಿತು. ಆಗೆಲ್ಲ ಮಾದಕ ನೃತ್ಯ (ಎಕ್ಸಾಟಿಕ್ ಡಾನ್ಸ್‌)ನಿಂದ ಸಾಕಷ್ಟು ಹಣ ಬರುತ್ತಿತ್ತು. ಸನ್ನಿ ಸಹ ಅದನ್ನು ಪ್ರಯತ್ನಿಸಿದರು. ಇದುವೇ ಸನ್ನಿಯ ಪೋರ್ನ್ ಲೋಕದೆಡೆಗೆ ಪಯಣದ ಮೊದಲ ಹೆಜ್ಜೆ. ನಂತರ ಅದೇ ಗೆಳತಿಯ ಸಹಾಯದಿಂದಲೇ ಪೆಂಟ್‌ಹೌಸ್ ಮ್ಯಾಗಜಿನ್‌ನ ಕವರ್ ಪೇಜ್‌ಗಾಗಿ ಗ್ಲಾಮರಸ್ ಆಗಿ ಫೋಸ್‌ ನೀಡಿದರು ಸನ್ನಿ. ಆ ನಂತರ 2011ರಲ್ಲಿ ಹಸ್ಟ್ಲರ್ ಮ್ಯಾಗಜೀನ್‌ಗೆ ಫೋಸು ನೀಡಿದರು. ಆ ನಂತರ ಇನ್ನೂ ಹಲವು ಮ್ಯಾಗಜೀನ್‌ನ ಮುಖಪುಟಗಳಲ್ಲಿ ಕಾಣಿಸಿಕೊಂಡರು. ಗ್ಲಾಮರಸ್ ಫೊಟೊದಿಂದ ಆರಂಭ ಮಾಡಿ ಅರೆ ಬೆತ್ತಲೆ, ಬೆತ್ತಲೆ ಫೊಟೊಗಳವರೆಗೆ ಬಂದರು ಸನ್ನಿ. ಇದರಿಂದ ಸಾಕಷ್ಟು ಹಣವನ್ನು ಸಹ ಸಂಪಾದಿಸಿದರು.

  ಪೋರ್ನ್ ಉದ್ಯಮಕ್ಕೆ ಬಂದಿದ್ದು 2003ರಲ್ಲಿ

  ಪೋರ್ನ್ ಉದ್ಯಮಕ್ಕೆ ಬಂದಿದ್ದು 2003ರಲ್ಲಿ

  ಸನ್ನಿ, ಪೂರ್ಣ ಪ್ರಮಾಣದಲ್ಲಿ ಪೋರ್ನ್ ಉದ್ಯಮಕ್ಕೆ ಬಂದಿದ್ದು 2003ರಲ್ಲಿ. ವಿವಿದ್ ಎಂಟಟೇರ್ನ್‌ಮೆಂಟ್‌ ಎಂಬ ಪೋರ್ನ್ ವಿಡಿಯೋ ತಯಾರಿಕಾ ಸಂಸ್ಥೆಯೊಂದಿಗೆ ಮೂರು ವರ್ಷದ ಒಪ್ಪಂದಕ್ಕೆ 2003ರಲ್ಲಿ ಸನ್ನಿ ಲಿಯೋನ್ ಸಹಿ ಹಾಕಿದರು. ಒಪ್ಪಂದ ಮಾಡಿಕೊಂಡಾಗ ತಾವು ಪುರುಷರೊಟ್ಟಿಗೆ ಲೈಂಗಿಕ ದೃಶ್ಯಗಳಲ್ಲಿ ನಟಿಸುವುದಿಲ್ಲ ಬದಲಿಗೆ ಮಹಿಳೆಯೊಂದಿಗಿನ ಲೈಂಗಿಕ ದೃಶ್ಯಗಳಲ್ಲಿ ಮಾತ್ರವೇ ನಟಿಸುವುದಾಗಿ ಒಪ್ಪಂದ ಮಾಡಿಕೊಂಡರು. ಸನ್ನಿ ಲಿಯೋನ್ ಬೈಸೆಕ್ಷುಲ್ (ಪುರುಷ, ಮಹಿಳೆ ಇಬ್ಬರಿಗೂ ಆಕರ್ಷಿತಗೊಳ್ಳುವವರು) ಆಗಿದ್ದರಿಂದ ಇದು ಸನ್ನಿಗೆ ಮಹಿಳೆಯರೊಟ್ಟಿಗೆ ಲೈಂಗಿಕ ದೃಶ್ಯಗಳಲ್ಲಿ ನಟಿಸುವುದು ಸುಲಭವಾಗಿತ್ತು. ವಿವಿದ್ ಜೊತೆಗೆ ಹಲವು ಪೋರ್ನ್ ಸಿನಿಮಾಗಳಲ್ಲಿ ಸನ್ನಿ ನಟಿಸಿದರು. ಆರಂಭದಲ್ಲಿ ಮಹಿಳೆಯೊಟ್ಟಿಗೆ ಮಾತ್ರವೇ ನಟಿಸಿದ ಸನ್ನಿ ಆ ನಂತರದ ವರ್ಷಗಳಲ್ಲಿ ಪುರುಷರೊಟ್ಟಿಗೆ ಸಹ ನಟಿಸಿದರು. ಸನ್ನಿಯ ಪತಿ ಡ್ಯಾನಿಯರ್ ವೆಬರ್ ಸಹ ಪೋರ್ನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋರ್ನ್ ಸೆಟ್‌ನಲ್ಲಿಯೇ ಭೇಟಿಯಾಗಿ ನಂತರ ಇಬ್ಬರೂ ಪ್ರೀತಿಸಿ 2011ರಲ್ಲಿ ವಿವಾಹವಾದರು.

  ನನಗೆ ಉದ್ಯಮವಾಗಿ ಕಂಡಿತು ಅಷ್ಟೆ: ಸನ್ನಿ ಲಿಯೋನ್

  ನನಗೆ ಉದ್ಯಮವಾಗಿ ಕಂಡಿತು ಅಷ್ಟೆ: ಸನ್ನಿ ಲಿಯೋನ್

  ಸನ್ನಿ ಲಿಯೋನ್ ಈ ಮುಂಚಿನ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿರುವಂತೆ ''ನನ್ನ ಸ್ವ-ಇಚ್ಛೆಯಿಂದಲೇ ನಾನು ಪೋರ್ನ್ ಉದ್ಯಮಕ್ಕೆ ಹೋದೆ. ಅದು ನನಗೆ ಉದ್ಯಮವಾಗಿ ಕಂಡಿತು. ಅಲ್ಲಿ ನಾನು ಅವಕಾಶವನ್ನಷ್ಟೆ ನೋಡಿದೆ. ನಾನೊಬ್ಬ ಉದ್ಯಮಶೀಲೆಯಂತೆ ಆ ಅವಕಾಶದ ಬಗ್ಗೆ ಯೋಚಿಸಿದೆ. ನಾನು ಪೋರ್ನ್ ಉದ್ಯಮ ಪ್ರವೇಶ ಮಾಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ'' ಎಂದು ಹೇಳಿಕೊಂಡಿದ್ದಾರೆ. ಆದರೆ ಆಕೆಯ ನಿರ್ಣಯದಿಂದ ಆಕೆಯ ಪೋಷಕರು ಅನುಭವಿಸಿದ ನೋವಿನ ಬಗ್ಗೆ ದೊಡ್ಡ ವಿಷಾದ ಸನ್ನಿಗೆ ಈಗಲೂ ಇದೆ. ''ನಾನು ನನ್ನ ಜೀವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ'' ಎಂದು ಸನ್ನಿ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಪೋಷಕರ ಸಾವಿಗೆ ತಾವೇ ಕಾರಣ ಎಂದುಕೊಳ್ಳುವಷ್ಟು ಅಪರಾಧ ಭಾವ ಸನ್ನಿಯನ್ನು ಕಾಡಿತ್ತು.

  ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು: ಸನ್ನಿ

  ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು: ಸನ್ನಿ

  ''ನಾನು ಪೋರ್ನ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಾಗ ನಮ್ಮ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದರು. ನಾನು ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ಅವರಿಗೆ ತುಸುವೂ ಇಷ್ಟವಿರಲಿಲ್ಲ. ನನ್ನ ಅಪ್ಪ-ಅಮ್ಮ ಸದಾ ಅಳುತ್ತಿರುತ್ತಿದ್ದರು. ನನ್ನ ಸಹೋದರ ಸಹ ಬೇಸರದಲ್ಲಿರುತ್ತಿದ್ದ ಆದರೆ ಆತ ನನ್ನ ನಿರ್ಣಯವನ್ನು ಬೆಂಬಲಿಸುವ ಮಾತುಗಳನ್ನೂ ಆಡುತ್ತಿದ್ದ. ಪೋಷಕರಿಗೆ ನಾನು ಬಹಳ ನೋವು ಕೊಟ್ಟಿದ್ದೇನೆ. ನಮ್ಮದು ಎಲ್ಲರಂತೆ ಸಾಮಾನ್ಯ ಕುಟುಂಬವಾಗಿತ್ತು, ಆದರೆ ನಾನು ತೆಗೆದುಕೊಂಡ ನಿರ್ಣಯದಿಂದ ಕುಟುಂಬದಲ್ಲಿ ತೂಫಾನು ಎದ್ದಿತು. ನನ್ನ ಪೋಷಕರಿಗೆ ನೋವು ಕೊಟ್ಟಿದ್ದಕ್ಕೆ ನನಗೆ ಬಹಳ ವಿಷಾದವಿದೆ'' ಎಂದಿದ್ದರು ಸನ್ನಿ. ಸನ್ನಿ ಲಿಯೋನ್ ತಾಯಿ 2008ರಲ್ಲಿ ನಿಧನ ಹೊಂದಿದರೆ ತಂದೆ 2010ರಲ್ಲಿ ಕ್ಯಾನ್ಸರ್‌ನಿಂದ ಹೋರಾಡಿ ನಿಧನ ಹೊಂದಿದರು.

  ಬಾಲಿವುಡ್‌ಗೆ ಕಾಲಿರಿಸಿದ್ದು ಹೇಗೆ?

  ಬಾಲಿವುಡ್‌ಗೆ ಕಾಲಿರಿಸಿದ್ದು ಹೇಗೆ?

  ಸನ್ನಿ ಲಿಯೋನ್ ಪೋರ್ನ್ ಉದ್ಯಮದಿಂದ ಹೊರಗೆ ಬರಲು ಕಾರಣವಾಗಿದ್ದು ಹಿಂದಿ ಬಿಗ್‌ಬಾಸ್ ಶೋ. ಸನ್ನಿ ಲಿಯೋನ್ ಬಿಗ್‌ಬಾಸ್‌ ಶೋಗೆ ಸ್ಪರ್ಧಿಯಾಗಿ ಪಾಲ್ಗೊಂಡರು. ಆ ಸಮಯದಲ್ಲಿ ಸನ್ನಿಗೆ ಭಾರತದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳು ಹುಟ್ಟಿಕೊಂಡರು. ಬಿಗ್‌ಬಾಸ್‌ ಶೋಗೆ ಹೋಗಿದ್ದ ನಿರ್ದೇಶಕ ಮಹೇಶ್ ಭಟ್ ಸನ್ನಿಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಅಂತೆಯೇ ಬಿಗ್‌ಬಾಸ್‌ನಿಂದ ಹೊರಗೆ ಬಂದ ನಂತರ ಸನ್ನಿಲಿಯೋನ್ ಅನ್ನು ಮುಖ್ಯ ಪಾತ್ರದಲ್ಲಿರಿಸಿ 'ಜಿಸ್ಮ್ 2' ಸಿನಿಮಾ ಮಾಡಲಾಯಿತು. ಆ ಸಿನಿಮಾವನ್ನು ಮಹೇಶ್ ಭಟ್ ಮಗಳು ಪೂಜಾ ಭಟ್ ನಿರ್ದೇಶಿಸಿ, ನಿರ್ಮಾಣ ಸಹ ಮಾಡಿದರು. ಆ ಸಿನಿಮಾ ಹಿಟ್ ಆಯಿತು. ಅಲ್ಲಿಗೆ ಸನ್ನಿ ಲಿಯೋನ್ ಪೋರ್ನ್ ಬಿಟ್ಟು ಬಾಲಿವುಡ್‌ನಲ್ಲಿ ಸೆಟಲ್ ಆಗಲು ಪೂರ್ಣವಾಗಿ ನಿರ್ಧರಿಸಿದರು. 2012 ರಲ್ಲಿ ಸನ್ನಿಯ ಮೊದಲ ಬಾಲಿವುಡ್ ಸಿನಿಮಾ 'ಜಿಸ್ಮ್ 2' ಬಿಡುಗಡೆ ಆಯ್ತು. 2013ರಲ್ಲಿ ಸನ್ನಿ ಲಿಯೋನ್ ಪೋರ್ನ್ ಉದ್ಯಮದಿಂದ ತಾವು ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಿಸಿದರು. ಬಾಲಿವುಡ್‌ನಲ್ಲಿಯೇ ಸೆಟಲ್ ಆಗಲು ನಿಶ್ಚಯಿಸಿದರು. ಆದರೆ ಸನ್ನಿ ಭಾರತದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯ್ತು.

  ದೂರು ನೀಡಿದ್ದ ಹಾಲಿ ಮಂತ್ರಿ ಅನುರಾಗ್ ಠಾಕೂರ್

  ದೂರು ನೀಡಿದ್ದ ಹಾಲಿ ಮಂತ್ರಿ ಅನುರಾಗ್ ಠಾಕೂರ್

  2011ರಲ್ಲಿ ಸನ್ನಿ ಮೊದಲ ಬಾರಿಗೆ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದಾಗ ಹಲವರು ಚಾನೆಲ್‌ ವಿರುದ್ಧ ಸನ್ನಿ ವಿರುದ್ಧ, ಸಲ್ಮಾನ್ ಖಾನ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಈಗ ಕೇಂದ್ರದಲ್ಲಿ ಸಚಿವರಾಗಿರುವ ಅನುರಾಗ್ ಠಾಕೂರ್ ಆಗ ಸನ್ನಿ ಲಿಯೋನ್ ವಿರುದ್ಧ ದೂರು ನೀಡಿ, ''ಸನ್ನಿಯನ್ನು ಕರೆತರುವ ಮೂಲಕ ಪೋರ್ನೋಗ್ರಫಿಯನ್ನು ಪ್ರಚಾರ ಮಾಡಲಾಗುತ್ತಿದೆ'' ಎಂದು ಆರೋಪಿಸಿದ್ದರು. ಅನುರಾಗ್ ಮಾತ್ರವೇ ಅಲ್ಲದೆ ಬಿಜೆಪಿಯ ಹಲವರು ಮತ್ತು ಹಲವು ಮಹಿಳಾ ಸಂಘಗಳು, ಟಿವಿ ಕಲಾವಿದರ ಸಂಘ ಸಹ ಸನ್ನಿ ಲಿಯೋನ್ ಬಿಗ್‌ಬಾಸ್ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

  ಸಿಖ್ ಸಮುದಾಯದವರಿಂದ ತೀವ್ರ ವಿರೋಧ

  ಸಿಖ್ ಸಮುದಾಯದವರಿಂದ ತೀವ್ರ ವಿರೋಧ

  ಸನ್ನಿ ಲಿಯೋನ್‌ ಪಂಜಾಬ್‌ನ ಸಿಖ್‌ ಸಮುದಾಯದಿಂದ ತೀವ್ರ ವಿರೋಧ ಎದುರಿಸಬೇಕಾಯಿತು. 'ಆಕೆ ನೀಲಿ ಚಿತ್ರತಾರೆ ಆಗಿರುವ ಕಾರಣ ಕೌರ್ ಹೆಸರನ್ನು ಸನ್ನಿ ಲಿಯೋನ್ ಬಳಸುವಂತಿಲ್ಲ' ಎಂದರು. ಅದಕ್ಕೆ ಸಂದರ್ಶನವೊಂದರಲ್ಲಿ ಉತ್ತರಿಸಿದ ಸನ್ನಿ ಲಿಯೋನ್, ನಾನು ಪೋರ್ನ್ ಸಿನಿಮಾದಲ್ಲಿ ನಟಿಸುವಾಗ ಕೌರ್ ಹೆಸರನ್ನು ಬಳಸುವುದಿಲ್ಲ ನನ್ನ ಹೆಸರು ಸನ್ನಿ ಲಿಯೋನ್, ನನ್ನ ಪಾಸ್‌ಪೋರ್ಟ್‌ನಲ್ಲಿ ಕೌರ್ ಹೆಸರಿದೆ ಅದನ್ನು ನಾನು ಇಟ್ಟುಕೊಂಡಿದ್ದಲ್ಲ ನನ್ನ ಪೋಷಕರು ಇಟ್ಟಿದ್ದು, ಹಾಗಾಗಿ ಅದು ನನ್ನ ತಪ್ಪಲ್ಲ'' ಎಂದು ಧೈರ್ಯದಿಂದಲೇ ಉತ್ತರಿಸಿದರು.

  ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು

  ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು

  ಹಲವಾರು ಬಾರಿ ಸನ್ನಿ ವಿರುದ್ಧ ಮಹಿಳಾ ಸಂಘಗಳು, ಹಿಂದು ಪರ ವೇದಿಕೆಗಳು ದೂರುಗಳನ್ನು ಸಲ್ಲಿಸಿದವು, ಚಿತ್ರೀಕರಣ ಸೆಟ್‌ ಹೋಗಿ ಪ್ರತಿಭಟನೆ ಮಾಡಿದವು. 2015ರಲ್ಲಿ ಮುಂಬೈ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸನ್ನಿಲಿಯೋನ್ ವೆಬ್‌ಸೈಟ್ ವಿರುದ್ಧ ದೂರು ನೀಡಿದ್ದರು. ಸನ್ನಿ ಲಿಯೋನ್ ವಿರುದ್ಧ ಎಫ್‌ಐಆರ್ ಸಹ ದಾಖಲಾಯಿತು. ಆ ನಂತರ 2017ರಲ್ಲಿ ಬೆಂಗಳೂರಿನಲ್ಲಿ 'ಸನ್ನಿ ನೈಟ್ಸ್‌' ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ ಹಾಕಿದವು. ಕೊನೆಗೆ ಆಗಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸನ್ನಿ ನೈಟ್ಸ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದರು. 2018ರಲ್ಲಿ ಚೆನ್ನೈನಲ್ಲಿ ಸನ್ನಿ ಲಿಯೋನ್, ಪೋರ್ನೊಗ್ರಫಿ ಪ್ರಚಾರ ಮಾಡುತ್ತಿದ್ದಾರೆಂದು ದೂರು ದಾಖಲಾಯ್ತು. 'ಪಟೇಲ್‌ ಕಿ ಪಂಜಾಬಿ ಶಾದಿ' ಸಿನಿಮಾದ ನಿರ್ಮಾಪಕ 'ಸನ್ನಿ ಲಿಯೋನ್ ತಮ್ಮ ಸಿನಿಮಾದ ಹಾಡಿಗೆ ನರ್ತಿಸುವುದಾಗಿ ಹೇಳಿ ಹಣ ಪಡೆದು ನರ್ತಿಸಿಲ್ಲ' ಎಂದು ದೂರು ನೀಡಿದರು. ಕೇರಳದ ಉದ್ಯಮಿಯೊಬ್ಬ, 'ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿ ಸನ್ನಿ ಹಣ ಪಡೆದದರು ಆದರೆ ಕಾರ್ಯಕ್ರಮಕ್ಕೆ ಬರಲಿಲ್ಲ' ಎಂದು ಆರೋಪಿಸಿ ದೂರು ನೀಡಿದರು. ಈ ಬಗ್ಗೆ ತನಿಖೆ, ಸನ್ನಿಯ ವಿಚಾರಣೆ ಸಹ ನಡೆಯಿತು.

  ಬಾಂಗ್ಲಾದೇಶಿ, ನೇಪಾಳಿ ಸಿನಿಮಾಗಳಲ್ಲಿಯೂ ನಟನೆ

  ಬಾಂಗ್ಲಾದೇಶಿ, ನೇಪಾಳಿ ಸಿನಿಮಾಗಳಲ್ಲಿಯೂ ನಟನೆ

  ಏನೇ ಆದರೂ ಸನ್ನಿ ಲಿಯೋನ್ ಜನಪ್ರಿಯತೆ ಭಾರತದಲ್ಲಿ ಏರುತ್ತಲೇ ಇದೆ. ವಿಶೇಷವೆಂದರೆ ಭಾರತದ ನೆರೆ ರಾಷ್ಟ್ರಗಳಲ್ಲೂ ಸನ್ನಿ ಜನಪ್ರಿಯತೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಅವರು ಬಾಂಗ್ಲಾದೇಶಿ ಸಿನಿಮಾ ಹಾಗೂ ನೇಪಾಳಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಥವಾ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ವಿಶೇಷ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ. ಸನ್ನಿಗೆ ಈಗ ವಯಸ್ಸು 40 ಆದರೂ ಜನಪ್ರಿಯತೆ ಕುಗ್ಗಿಲ್ಲ. ಕೆಲವು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಸ್ವಂತ ಮನೆ ಖರೀದಿಸಿರುವ ಸನ್ನಿ ಲಿಯೋನ್ ಭಾರತದಲ್ಲಿಯೇ ಕುಟುಂಬದೊಂದಿಗೆ ಸೆಟಲ್ ಆಗುವ ಯೋಜನೆಯಲ್ಲಿದ್ದಾರೆ.

  English summary
  Sunny Leone life story, how she started her journey in indecent video business how she became famous. how she started her career in Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X