Anushka shetty: ರಾಣಿ ಅಬ್ಬಕ್ಕ ಅವತಾರದಲ್ಲಿ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ.. ಪೋಸ್ಟರ್ ಫುಲ್ ವೈರಲ್

ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಟಾಲಿವುಡ್‌, ಕಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದು ಗೊತ್ತೇಯಿದೆ. ಮಂಗಳೂರಿನ ಚೆಲುವೆ ಕನ್ನಡ ಚಿತ್ರದಲ್ಲಿ ಇನ್ನು ನಟಿಸಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ. ಕೋಡ್ಲು ರಾಮಕೃಷ್ಣ ನಿರ್ದೇಶನದ ಕನ್ನಡದ ಚಿತ್ರದಲ್ಲಿ ಸ್ವೀಟಿ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.

ತೆಲುಗಿನ 'ಸೂಪರ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅನುಷ್ಕಾ ಶೆಟ್ಟಿ ನಂತರ ಹಿಂತಿರುಗಿ ನೋಡಲೇಯಿಲ್ಲ. ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದರು. ತೆಲುಗು, ತಮಿಳಿನ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡರು. ರಾಜಮೌಳಿ ನಿರ್ದೇಶನದ 3 ಸಿನಿಮಾಗಳಲ್ಲಿ ಅನುಷ್ಕಾ ನಾಯಕಿಯಾಗಿ ನಟಿಸಿದ್ದು ವಿಶೇಷ.

Anushka-Shetty-as-Rani-Abbakka-AI-poster

ಅರುಂಧತಿ, ದೇವಸೇನಾ, ಭಾಗಮತಿ, ರುದ್ರಮ ದೇವಿ ಹೀಗೆ ಪವರ್‌ಫುಲ್ ರೋಲ್‌ಗಳಲ್ಲಿ ನಟಿಸಿ ಅನುಷ್ಕಾ ಸೈ ಎನಿಸಿಕೊಂಡಿದ್ದಾರೆ. ಗ್ಲಾಮರ್‌ಗೂ ಸೈ ಆಕ್ಟಿಂಗ್ ಜೈ ಎಂದು ಸಿನಿರಸಿಕರನ್ನು ರಂಜಿಸಿದರು. ಇತ್ತೀಚಿನ ವರ್ಷಗಳಲ್ಲಿ ಆಕೆ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸಲಿಲ್ಲ. 'ಬಾಹುಬಲಿ-2' ಬಳಿಕ ಕೆಲವೇ ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ನಟಿಸಿದ್ದರು. ಕಾಮಿಡಿ ಎಂಟರ್‌ಟೈನರ್ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.

ಈ ಹಿಂದೆ ಸಾಕಷ್ಟು ಬಾರಿ ಅನುಷ್ಕಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಯಾವುದೂ ಪಕ್ಕ ಆಗಲಿಲ್ಲ. ರಾಣಿ ಅಬ್ಬಕ್ಕ ಪಾತ್ರದಲ್ಲಿ ಸ್ವೀಟಿ ನಟಿಸುತ್ತಾರೆ ಎನ್ನುವ ಗುಸು ಗುಸು ಕೂಡ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ತುಳುನಾಡಿನ ರಾಣಿ ಅಬ್ಬಕ್ಕ ಕುರಿತು ಸಿನಿಮಾ ಮಾಡಲು ಸಾಕಷ್ಟು ಮಂದಿ ಪ್ರಯತ್ನಿಸುತ್ತಲೇ ಇದ್ದಾರೆ. ನಿರ್ದೇಶಖ ಮಂಸೋರೆ ಕೂಡ ಆ ಪ್ರಯತ್ನಕ್ಕೆ ಕೈ ಹಾಕಿದ್ದರು.

ಕೊರೋನಾ ಹಾವಳಿಗೂ ಮುನ್ನ ಮಂಸೋರೆ ರಾಣಿ ಅಬ್ಬಕ್ಕ ಸಿನಿಮಾ ಘೋಷಣೆಗೆ ಮುಂದಾಗಿದ್ದರು. ಅಷ್ಟರಲ್ಲಿ ಲಾಕ್‌ಡೌನ್ ಆಗಿ ಆ ಸಿನಿಮಾ ತಡವಾಯಿತು. ಖ್ಯಾತ ನಟಿಯೊಬ್ಬರು ಅಬ್ಬಕ್ಕ ಪಾತ್ರದಲ್ಲಿ ನಟಿಸುವ ಬಗ್ಗೆ ಚರ್ಚೆ ಕೂಡ ನಡೆದಿದೆ ಎಂದಿದ್ದರು. ಇದೀಗ ಅಬ್ಬ ಅವತಾರದಲ್ಲಿ ಅನುಷ್ಕಾ ಶೆಟ್ಟಿ ಪೋಸ್ಟರ್ ರಿಲೀಸ್ ಆಗಿದೆ.

ಕನ್‌ಫ್ಯೂಸ್ ಆಗಬೇಡಿ. ಇದು ನಿಜವಾಗಿಯೂ ಮಂಸೋರೆ ನಿರ್ದೇಶನದ 'ರಾಣಿ ಅಬ್ಬಕ್ಕ' ಸಿನಿಮಾ ಪೋಸ್ಟರ್ ಅಲ್ಲ. ಅನುಷ್ಕಾ ಶೆಟ್ಟಿ ಅಬ್ಬಕ್ಕ ಆಗಿ ಹೇಗೆ ಕಾಣಬಹುದು ಎಂದು ಗ್ರಾಫಿಕ್ಸ್ ಡಿಸೈನರ್ ದೀಪೇಶ್ ಉಪ್ಪಾಲ ಡಿಸೈನ್ ಮಾಡಿರುವ AI ಆರ್ಟ್ ವರ್ಕ್. ಇತ್ತೀಚೆಗೆ ರಾಜ ಇಮ್ಮಡಿ ಪುಲಿಕೇಶಿ ಅವತಾರದಲ್ಲಿ ನಟ ದರ್ಶನ್ ಪೋಸ್ಟರ್ ಕೂಡ ಸದ್ದು ಮಾಡಿತ್ತು. ಆ ಪೋಸ್ಟರ್ ಡಿಸೈನ್ ಮಾಡಿದ್ದು ಕೂಡ ಇದೇ ದೀಪೇಶ್ ಉಪ್ಪಾಲ.

Anushka-Shetty-as-Rani-Abbakka-AI-poster

ಇದಕ್ಕು ಮುನ್ನ ಕನ್ನಡ ಕಲಾವಿದರನ್ನು ಮಹಾಭಾರತದ ಪಾತ್ರಗಳಲ್ಲಿ ಕಲ್ಪಿಸಿಕೊಂಡು ದೀಪೇಶ್ ಉಪ್ಪಾಲ ಪೋಸ್ಟರ್‌ಗಳನ್ನು ಡಿಸೈನ್ ಮಾಡಿದ್ದರು. ಅವೆಲ್ಲಾ ಸಖತ್ ವೈರಲ್ ಆಗಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಕ ತುಳುನಾಡಿನ ರಾಣಿ ಅಬ್ಬಕ್ಕ ಆಗಿ ಸ್ವೀಟಿ ಲುಕ್‌ ಕೂಡ ಗಮನ ಸೆಳೆಯುತ್ತಿದೆ.

ಅನುಷ್ಕಾ ಶೆಟ್ಟಿ ಮಾತೃಭಾಷೆ ತುಳು. ಸ್ವೀಟಿ ಕರಾವಳಿಯವರೇ ಆಗಿರುವುದರಿಂದ ಪವರ್‌ಫುಲ್ ಪಾತ್ರಗಳಲ್ಲಿ ನಟಿಸಿ ಗೆದ್ದಿರುವುದರಿಂದ ಅಬ್ಬಕ್ಕನ ಪಾತ್ರ ಆಕೆಗೆ ಒಪ್ಪುತ್ತದೆ ಅನ್ನೋದು ಕೆಲವರ ವಾದ. ಒಳ್ಳೆ ಕತೆ ಸಿಕ್ಕರೆ ಯಾವುದೇ ಭಾಷೆಯಲ್ಲಿ ನಟಿಸಲು ಸಿದ್ಧ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಕೆ ಹೇಳಿದ್ದರು. ಸದ್ಯ ಮಲಯಾಳಂ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ರಾಣಿ ಅಬ್ಬಕ್ಕನ ಪಾತ್ರದಲ್ಲಿ ನಟಿಸೋ ಅವಕಾಶ ಸಿಕ್ಕರೆ ಸ್ವೀಟಿ ಕಂಡಿತ ಕೈಬಿಡಲ್ಲ. 16ನೇ ಶತಮಾನದಲ್ಲಿ ಚೌಟ ವಂಶಸ್ಥಳಾಗಿದ್ದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಡಿದ್ದಳು. ಉಳ್ಳಾಲವನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದ್ದ ಪೋರ್ಚುಗೀಸರನ್ನು 4 ದಶಕಗಳ ಕಾಲ ಹಿಮ್ಮೆಟ್ಟಿಸಿದ್ದಳು. ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಈಕೆ ಎನ್ನಲಾಗುತ್ತದೆ. ಇಂತಹ ಮಹಾನ್ ನಾಯಕಿಯ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ.

More from Filmibeat

English summary
AI Art poster work of Anushka Shetty as Rani Abbakka goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X