twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಸಮಯದಲ್ಲಿ ಹೊಸ ರೀತಿಯ ಸುರಕ್ಷಿತ ಚಿತ್ರಮಂದಿರಗಳು

    |

    ಕೊರೊನಾ ಅವಕೃಪೆಯಿಂದಾಗಿ ಚಿತ್ರಮಂದಿರಗಳು ಬಂದ್ ಆಗಿ ಎರಡು ತಿಂಗಳ ಮೇಲಾಯಿತು. ಸನಿಹದಲ್ಲಿ ಚಿತ್ರಮಂದಿರಗಳು ಪುನಃ ತೆರೆಯುವ ಸಣ್ಣ ಸೂಚನೆಯೂ ಇಲ್ಲ.

    Recommended Video

    ಅಕ್ಷಯ್ ಕುಮಾರ್ ಲಾಕ್ ಡೌನ್ ನಡುವೆ ಶೂಟಿಂಗ್ , ಚಿತ್ರಗಳು ವೈರಲ್ | Akshay Kumar

    ಲಾಕ್‌ಡೌನ್‌ನಿಂದ ಕೆಲವು ವ್ಯಾಪಾರ, ವ್ಯವಹಾರಗಳಿಗೆ ರಿಯಾಯಿತಿ ನೀಡಲಾಗಿದೆ. ಅಂಗಡಿ ಮುಂಗಟ್ಟುಗಳು ಇನ್ನಿತರೆ ವ್ಯವಹಾರಗಳು ಬಹುತೇಕ ಮಾಮೂಲಿನಂತೆಯೇ ನಡೆಯುತ್ತಿವೆ. ಆದರೆ ಚಿತ್ರಮಂದಿರಗಳು ಮಾತ್ರ ಇನ್ನೂ ತೆರೆದಿಲ್ಲ.

    ಅಮಿತಾಬ್ ಬಚ್ಚನ್ ಸಿನಿಮಾ ಒಟಿಟಿಗೆ: ಗರಂ ಆದ ಐನಾಕ್ಸ್ಅಮಿತಾಬ್ ಬಚ್ಚನ್ ಸಿನಿಮಾ ಒಟಿಟಿಗೆ: ಗರಂ ಆದ ಐನಾಕ್ಸ್

    ತಿಳಿದವರು ಹೇಳುವಂತೆ, ಕೊರೊನಾ ಲಾಕ್‌ಡೌನ್‌ ನಲ್ಲಿ ಚಿತ್ರಮಂದಿರಗಳು ಮತ್ತು ಮಾಲ್‌ಗಳು ಕೊನೆಯದಾಗಿ ತೆರೆಯಲ್ಪಡುತ್ತವೆ ಎನ್ನಲಾಗುತ್ತಿದೆ. ಅಂದರೆ ಕೊರೊನಾ ಸಂಪೂರ್ಣವಾಗಿ ಹೋದಬಳಿಕವಷ್ಟೆ ಚಿತ್ರಮಂದಿರಗಳು ಬಾಗಿಲು ತೆರೆಯಲಿವೆ. ಪ್ರಸ್ತುತ ಸನ್ನಿವೇಶ ಗಮಿಸಿದರೆ ಕೊರೊನಾ ಪೂರ್ಣವಾಗಿ ತೊಲಗು ಇನ್ನೂ ಐದು-ಆರು ತಿಂಗಳಂತೂ ಬೇಕು ಎನಿಸುತ್ತದೆ.

    ಕೊರೊನಾ ಹರಡುವ ಸಾಧ್ಯತೆ ಹೆಚ್ಚು

    ಕೊರೊನಾ ಹರಡುವ ಸಾಧ್ಯತೆ ಹೆಚ್ಚು

    ಕೊರೊನಾ ಹರಡುವ ಬಹಳಷ್ಟು ಸಾಧ್ಯತೆ ಚಿತ್ರಮಂದಿರಗಳಲ್ಲಿದೆ. ಅಲ್ಲಿನ ಪಕ್ಕ-ಪಕ್ಕದ ಸೀಟುಗಳಿಂದ ಸಾಮಾಜಿಕ ಅಂತರ ಸಾಧ್ಯವಿಲ್ಲ. ಒಂದೇ ಕಡೆ ಮೂರು ಗಂಟೆ ಕೂರುವುದರಿಂದ ರೋಗ ಹರಡುವ ಸಾಧ್ಯತೆ ಬೇರೆಡಿಗಳಿಗಿಂತಲೂ ಅಧಿಕ. ಹಾಗಾಗಿ ಚಿತ್ರಮಂದಿರವನ್ನು ಕೊನೆಯದಾಗಿ ತೆರೆಯಲಾಗುತ್ತದೆ.

    ಏನಿದು ಸುರಕ್ಷಿತ ಚಿತ್ರಮಂದಿರ?

    ಏನಿದು ಸುರಕ್ಷಿತ ಚಿತ್ರಮಂದಿರ?

    ಆದರೆ ಈ ಸನ್ನಿವೇಶದಲ್ಲಿ ಸುರಕ್ಷತೆಯುಳ್ಳ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡಿದರೆ ಹೇಗೆ? ಎಂಬ ಚರ್ಚೆ ನಡೆಯುತ್ತಿದೆ. ಏನಿದು ಸುರಕ್ಷಿತ ಚಿತ್ರಮಂದಿರ? ಚಿತ್ರಮಂದಿರಗಳು ಕೊರೊನಾ ಸುರಕ್ಷಿತ ಹೇಗಿರಲು ಸಾಧ್ಯ? ಇವೇ ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ತಮಿಳು ಚಿತ್ರರಂಗ: ಸೂರ್ಯ ಒಂದು ದಾರಿ, ಧನುಶ್-ವಿಜಯ್ ಮತ್ತೊಂದು ದಾರಿತಮಿಳು ಚಿತ್ರರಂಗ: ಸೂರ್ಯ ಒಂದು ದಾರಿ, ಧನುಶ್-ವಿಜಯ್ ಮತ್ತೊಂದು ದಾರಿ

    ಸುಲಭವಾಗಿ ಸಿನಿಮಾ ಪ್ರದರ್ಶಿಸಬಹುದು

    ಸುಲಭವಾಗಿ ಸಿನಿಮಾ ಪ್ರದರ್ಶಿಸಬಹುದು

    'ಡ್ರೈವ್ ಇನ್ ಥೀಯೇಟರ್' ಎಂಬ ಯೋಚನೆ ಹೊರದೇಶಗಳಲ್ಲಿ ಅಲ್ಲಲ್ಲಿ ಇದೆ. ಭಾರತದಲ್ಲೂ ಡ್ರೈವ್ ಇನ್ ಥಿಯೇಟರ್‌ಗಳಿವೆ. ಈ ಥಿಯೇಟರ್‌ಗಳಲ್ಲಿ ಸಾಮಾಜಿಕ ಅಂತರ, ಸುರಕ್ಷತೆ ಕಾಪಾಡಿಕೊಂಡು ಸುಲಭವಾಗಿ ಸಿನಿಮಾ ಪ್ರದರ್ಶನ ಮಾಡಬಹುದು.

    ಏನಿದು ಡ್ರೈವ್ ಇನ್ ಥಿಯೇಟರ್?

    ಏನಿದು ಡ್ರೈವ್ ಇನ್ ಥಿಯೇಟರ್?

    ಡ್ರೈವ್ ಇನ್ ಥೀಯೇಟರ್ ಎಂದರೆ ಅದು ಹೊರಾಂಗಣದಲ್ಲಿನ ಚಿತ್ರಮಂದಿರ. ಕೇವಲ ಸಿನಿಮಾ ಸ್ಕ್ರೀನ್ ಮಾತ್ರವೇ ಇರುತ್ತದೆ. ನೋಡುಗರು, ತಮ್ಮ ಕಾರುಗಳನ್ನು ಪರದೆಯ ಮುಂದೆ ಪರದೆ ಕಾಣುವಂತೆ ಪಾರ್ಕ್ ಮಾಡಿ ಕಾರಿನಲ್ಲಿ ಕೂತೇ. ಅಥವಾ ಹೊರಾಂಗಣದಲ್ಲಿ ಸೂಕ್ತವೆನಿಸಿದ ಜಾಗದಲ್ಲಿ ಕುರ್ಚಿ ಹಾಕಿಕೊಂಡೊ, ಮಲಗಿಕೊಂಡೋ ಸಿನಿಮಾ ವೀಕ್ಷಿಸಬಹುದಾಗಿದೆ.

    ಓಟಿಟಿ ನಲ್ಲಿ ಸಿನಿಮಾ ರಿಲೀಸ್ ಮಾಡಿದರೆ ತಪ್ಪೆನ್ನಲಾಗದು: ಓಟಿಟಿ ಪರ ಸತೀಶ್ ನಿಲವುಓಟಿಟಿ ನಲ್ಲಿ ಸಿನಿಮಾ ರಿಲೀಸ್ ಮಾಡಿದರೆ ತಪ್ಪೆನ್ನಲಾಗದು: ಓಟಿಟಿ ಪರ ಸತೀಶ್ ನಿಲವು

    ಹೆಚ್ಚು ಥಿಯೇಟರ್‌ಗಳು ತಲೆಎತ್ತಬಹುದು

    ಹೆಚ್ಚು ಥಿಯೇಟರ್‌ಗಳು ತಲೆಎತ್ತಬಹುದು

    ಭಾರತದಲ್ಲಿ ಈಗಾಗಲೇ ಡ್ರೈವ್ ಇನ್ ಥೀಯೇಟರ್‌ಗಳಿವೆ ಆದರೆ ಇವು ಹೆಚ್ಚು ಪ್ರಸಿದ್ಧವಲ್ಲ. ಅಹ್ಮದಾಬಾದ್, ಚೆನ್ನೈ ಮತ್ತು ಇತ್ತೀಚೆಗೆ ವೈಜಾಗ್ ನಲ್ಲಿ ಆಗಿದೆ. ಈ ಡ್ರೈವ್ ಇನ್ ಥಿಯೇಟರ್‌ಗಳ ಬಗ್ಗೆ ಚರ್ಚೆ ಎದ್ದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇನ್ನಷ್ಟು ಡ್ರೈವ್ ಇನ್ ಥೀಯೇಟರ್‌ಗಳು ತಲೆ ಎತ್ತಬಹುದು.

    'ರಾಬರ್ಟ್' ಚಿತ್ರತಂಡಕ್ಕೆ ಕೈಮುಗಿದ ಚಿತ್ರಮಂದಿರ ಮಾಲೀಕ'ರಾಬರ್ಟ್' ಚಿತ್ರತಂಡಕ್ಕೆ ಕೈಮುಗಿದ ಚಿತ್ರಮಂದಿರ ಮಾಲೀಕ

    English summary
    Talks happening about drive in theaters in corona situation. Viewers Can maintain social distancing while watching movie.
    Tuesday, May 26, 2020, 17:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X