ಬೆಳಿಗ್ಗೆ ಎದ್ದ ಕೂಡಲೇ ಮುಖಕ್ಕೆ ಉಗುಳು ಹಚ್ಚಿಕೊಳ್ಳುತ್ತಾರೆ ಈ ಸ್ಟಾರ್ ನಟಿ..!

ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ.

ಇನ್ನೂ ಕೆಲವರು ಮನೆ ಮದ್ದುಗಳ ಬಳಕೆಯನ್ನು ಮಾಡುತ್ತಾರೆ. ಪಪ್ಪಾಯಿ ಕಾಯಿಯ ಸಿಪ್ಪೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಹಿಡಿದು ಅರಿಶಿನ ಹಾಗೂ ಹಾಲಿನ ಕೆನೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಮತ್ತೂ ಕೆಲವರು ಸೌತೆಕಾಯಿ ಬಿಲ್ಲೆಗಳಿಂದ ಮುಖವನ್ನು ನಯವಾಗಿ ಉಜ್ಜಿ 10-15 ನಿಮಿಷ ಮಸಾಜ್ ಮಾಡಿದರೆ, ಇನ್ನು ಕೆಲವರು ಕಡಲೇ ಹಿಟ್ಟಿನೊಂದಿಗೆ ಸ್ವಲ್ಪ ಅರಿಶಿನ ಬೆರೆಸಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು ಹತ್ತು ಹದಿನೈದು ನಿಮಿಷದ ನಂತರ ಮುಖ ತೊಳೆದುಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ನಾಯಕಿ ತನ್ನ ತ್ವಚೆಯನ್ನು ಸುಂದರವಾಗಿಸಲು ದುಬಾರಿ ಉತ್ಪನ್ನಗಳನ್ನು ಬಳಸುವ ಬದಲು ತನ್ನ ಉಗುಳನ್ನು ಬಳಸುತ್ತಾರೆ. ಆ ನಾಯಕಿ ಬೇರೆ ಯಾರು ಅಲ್ಲ ಬದಲಿಗೆ ತಮನ್ನಾ ಭಾಟಿಯಾ ಎನ್ನುವುದೇ ಅಚ್ಚರಿ.

tamannaah-bhatia-revealed-that-she-applies-morning-saliva-to-treat-skin-problems

ಹೌದು, ಹಾಲುಬಣ್ಣದ ಚೆಲುವೆ ಎಂದೇ ಜಗದ್ವಿಖ್ಯಾತಿಯಾದ ತಮನ್ನಾ ಬೆಳಗ್ಗೆ ಎದ್ದ ಕೂಡಲೇ ತಮ್ಮ ಎಂಜಲನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಖುದ್ದು ಸಂದರ್ಶನವೊಂದರಲ್ಲಿ ತಮನ್ನಾ ಈ ಹಿಂದೆ ಈ ವಿಚಾರವನ್ನು ಹೇಳಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ತಮನ್ನಾ ಎಲ್ಲರಂತೆ ನನಗೂ ಕೂಡ ಮೊಡವೆ ಸಮಸ್ಯೆ ಇದೆ ಈ ಸಮಸ್ಯೆಯಿಂದ ನನ್ನ ಮುಖ ಕೆಂಪಾಗುತ್ತೆ ಹೀಗೆ ಮುಖ ಕೆಂಪಾಗುವ ಸಮಸ್ಯೆಗೆ ನಮ್ಮ ಉಗಳು ಅತ್ಯುತ್ತಮ ಔಷಧವೆಂದು ಹೇಳಿದ್ದರು.

ಮುಂಜಾನೆ ಎದ್ದ ನಂತರ ಮೊಡವೆಗೆ ನಮ್ಮ ಎಂಜಲು ಹಚ್ಚಿಕೊಳ್ಳಬೇಕು ಯಾಕೆಂದರೆ ಮೊಡವೆಗಳನ್ನು ಒಣಗಿಸುವ ಶಕ್ತಿ ಈ ಲಾಲಾರಸಕ್ಕೆ ಇದೆ ಎಂದು ಹೇಳಿದ್ದ ತಮನ್ನಾ ನಾನು ನನ್ನ ಎಂಜಲನ್ನು ಮುಖಕ್ಕೆ ಹಚ್ಚಿಕೊಳ್ಳುತ್ತೇನೆ ಎಂದರೆ ನಿಮಗೆ ಅದರಿಂದ ಅಸಹ್ಯವಾಗಬಹುದು ಆದರೆ ನನ್ನ ಪ್ರಕಾರ ಇದು ಅತ್ಯುತ್ತಮ ಮೆಡಿಸಿನ್ ಎಂದು ಹೇಳಿದ್ದರು. ಸದ್ಯಕ್ಕೆ ಅಂದು ತಮನ್ನಾ ಮಾತನಾಡಿದ್ದ ಮಾತು ಇಂದು ಮತ್ತೊಮ್ಮೆ ವೈರಲ್ ಆಗುತ್ತಿದೆ.

ಅಂದ್ಹಾಗೇ 2019ರಲ್ಲಿ ನಡೆದ ಅಧ್ಯಯನದ ಪ್ರಕಾರ ತಮನ್ನಾ ಅವರ ಈ ಮಾತು ನೂರಕ್ಕೆ ನೂರು ಸತ್ಯ. ಈ ಅಧ್ಯಯನದ ಪ್ರಕಾರ ಮನುಷ್ಯನ ಉಗುಳು ಚರ್ಮದ ಗಾಯ ಕಡಿಮೆ ಮಾಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಮಾನವನ ಲಾಲಾರಸ ಒಪಿಯೋರ್ಫಿನ್ ಹೊಂದಿರುತ್ತದೆ ಇದಲ್ಲದೇ ಹಿಸ್ಟಾಟಿನ್ ಎಂಬ ಪ್ರೋಟೀನ್ ಕೂಡ ಇದರಲ್ಲಿ ಕಂಡುಬರುತ್ತೆ ಎನ್ನುವ ವಿಚಾರ ಈ ಅಧ್ಯಯನದಲ್ಲಿ ಬಹಿರಂಗವಾಗಿತ್ತು. ಇದೇ ಸಮಯದಲ್ಲಿ ಮೊಡವೆ ಯಾಕೆ ಕಾಣಿಸಿಕೊಳ್ಳುತ್ತಿದೆ ಎನ್ನುವುದನ್ನು ಕೂಡ ಪತ್ತೆ ಮಾಡುವುದು ಮುಖ್ಯವೆಂದು ಹೇಳಲಾಗಿತ್ತು. ಸದ್ಯ ತಮನ್ನಾ ಅವರ ಈ ಬ್ಯೂಟಿ ಸೀಕ್ರೆಟ್ ಕೇಳಿ ಅನೇಕರು ಮೂಗು ಮುರಿಯುತ್ತಿದ್ದಾರೆ. ಇನ್ನು ಕೆಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನುಳಿದಂತೆ ತಮನ್ನಾ ಮತ್ತು ವಿಜಯ್ ವರ್ಮಾ ಅವರ ಮದುವೆ ಈ ವರ್ಷ ನಡೆಯುವ ನಿರೀಕ್ಷೆ ಇದೆ. ತಮನ್ನಾ ಮತ್ತು ವಿಜಯ್ ವರ್ಮಾ ಜೊತೆಯಲ್ಲಿ ವಾಸ ಮಾಡಲು ಭವ್ಯವಾದ ಬಂಗಲೆಯನ್ನು ಹುಡುಕುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಆದರೆ, ವಿಜಯ್ ವರ್ಮಾ ಆಗಲಿ, ತಮನ್ನಾ ಆಗಲಿ ಈ ವಿಚಾರದ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಂಡಿಲ್ಲ.ತಮ್ಮ ಮದುವೆಯ ಕುರಿತು ಹಬ್ಬಿರುವ ಈ ಸುದ್ದಿಗೆ ಪ್ರತಿಕ್ರಿಯೆಯನ್ನು ಕೂಡ ನೀಡಿಲ್ಲ. ಸದ್ಯ ಇಬ್ಬರು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು ಹಲವು ಚಿತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.

More from Filmibeat

Read more about: tamannah tamannaah beauty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X