ಬಾತ್‌ರೂಂ ವಿಡಿಯೋ To ರಾಣಾ ಜೊತೆ ಅಫೇರ್? ತ್ರಿಶಾ ಸುತ್ತಾ ಸುತ್ತಿಕೊಂಡ ವಿವಾದಗಳು ಒಂದಾ ಎರಡಾ?
ತಮಿಳು ನಟಿ ತ್ರಿಶಾ ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ. ತಮ್ಮದಲ್ಲದ ತಪ್ಪಿಗೂ ಚೆನ್ನೈ ಚೆಲುವೆ ಸಂಕಷ್ಟ ಎದುರಿಸಿದ ಸಂದರ್ಭಗಳಿವೆ. ಒಂದಲ್ಲ ಒಂದು ಕಾರಣಕ್ಕೆ ತ್ರಿಶಾ ಪದೇ ಪದೆ ಸುದ್ದಿ ಆಗುತ್ತಲೇ ಇರುತ್ತಾರೆ. ಸದ್ಯ ರಾಜಕೀಯ ಮುಖಂಡ ಆಕೆಯ ಬಗ್ಗೆ ನೀಡಿರುವ ಅಸಭ್ಯ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಇತ್ತೀಚೆಗೆ ಮಾಜಿ ಎಐಎಡಿಎಂಕೆ ನಾಯಕ ಎವಿ ರಾಜು, ನಟಿ ತ್ರಿಶಾ ಕುರಿತು ಕೀಳುಮಟ್ಟದಲ್ಲಿ ಮಾತನಾಡಿದ್ದರು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. "ಶಾಸಕರೊಬ್ಬರು ನಟಿ ತ್ರಿಶಾಗೆ 25 ಲಕ್ಷ ರೂ. ಕೊಟ್ಟು ರೆಸಾರ್ಟ್‌ಗೆ ಕರೆಸಿಕೊಂಡಿದ್ದರು" ಎಂದು ಎವಿ ರಾಜು ಕಾಮೆಂಟ್ ಮಾಡಿದ್ದರು. ಈ ಸಂಬಂಧ ನಟಿ ತ್ರಿಶಾ ಮಾನಹಾನಿ ನೋಟಿಸ್ ನೀಡಿದ್ದಾರೆ. ಆ ಮೂಲಕ ಕಾನೂನು ಹೋರಾಟ ಆರಂಭಿಸಿದ್ದಾರೆ.

ಅಂದಹಾಗೆ ನಟಿ ತ್ರಿಶಾ ಇಂತಹ ಕೆಟ್ಟ ಕಾಮೆಂಟ್ ಎದುರಿಸುತ್ತಿರುವುದು ಇದೇ ಮೊದಲಲ್ಲ. ಕೆಲವೇ ದಿನಗಳ ಹಿಂದೆ ತಮಿಳು ಪೋಷಕ ನಟ ಮನ್ಸೂರ್ ಅಲಿಖಾನ್ ಆಕೆಯ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿ ದೂರು, ಕೋರ್ಟ್ ವಿಚಾರಣೆವರೆಗೂ ಹೋಗಿತ್ತು.
ಲೋಕೇಶ್ ಕನಕರಾಜ್ 'ಲಿಯೋ' ಚಿತ್ರದ ಕಥೆ ಹೇಳಿದಾಗ ತ್ರಿಶಾ ಜೊತೆಯೂ ರೇ* ಸೀನ್ ಇರುತ್ತೆ ಎಂದುಕೊಂಡಿದ್ದೆ. ಕಾಶ್ಮೀರದಲ್ಲಿ ತ್ರಿಶಾನ ಹಾಗೆ ಎತ್ತಿಕೊಂಡು ಹೋಗಬಹುದು ಎಂದುಕೊಂಡೆ. ಆದರೆ ಕಾಶ್ಮೀರದಲ್ಲಿ ಚಿತ್ರೀಕರಣದ ವೇಳೆ ತ್ರಿಶಾಳನ್ನು ನನಗೆ ತೋರಿಸಲೇಯಿಲ್ಲ" ಎಂದು ಮನ್ಸೂರ್ ಅಲಿಖಾನ್ ಅಸಭ್ಯವಾಗಿ ಮಾತನಾಡಿದ್ದರು. ಈ ಬಗ್ಗೆ ಚಿರಂಜೀವಿ, ಖುಷ್ಬು ಸೇರಿದಂತೆ ಸಾಕಷ್ಟು ನಟ, ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದರು. ತ್ರಿಶಾ ಕೂಡ ಗರಂ ಆಗಿದ್ದರು.

ಕೆಲ ವರ್ಷಗಳ ಹಿಂದೆ ಸುಚಿ ಲೀಕ್ಸ್ ಸೌತ್ ಸಿನಿದುನಿಯಾದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿತ್ತು. ತಮಿಳು, ತೆಲುಗು ಕಲಾವಿದರ ಕೆಲ ಖಾಸಗಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ರಾದ್ಧಾಂತವಾಗಿತ್ತು. ಇದರಲ್ಲಿ ರಾಣಾ- ತ್ರಿಶಾ ಹಾಗೂ ಧನುಷ್ -ತ್ರಿಶಾ ಆತ್ಮೀಯವಾಗಿರುವಂತಹ ಫೋಟೊಗಳು ವೈರಲ್ ಆಗಿತ್ತು. ಇವರಿಬ್ಬರ ಜೊತೆಗೂ ನಟಿ ತ್ರಿಶಾಗೆ ಅಫೇರ್ ಇದೆ ಎನ್ನುವ ಚರ್ಚೆ ನಡೆದಿತ್ತು.
7 ವರ್ಷಗಳ ಹಿಂದೆ ನಟಿ ತ್ರಿಶಾ ಪೇಟಾ ಸಂಸ್ಥೆ ಬೆಂಬಲಿಸಿ ಜಲ್ಲಿಕಟ್ಟು ಸ್ಪರ್ಧೆ ವಿರುದ್ಧ ಪರೋಕ್ಷವಾಗಿ ಟ್ವೀಟ್ ಮಾಡಿದ್ದರು. ಜಲ್ಲಿಕಟ್ಟು ಆಚರಣೆಗೆ ಅವಕಾಶ ಕೋರಿ ಹೋರಾಟ ನಡೆಯುತ್ತಿದ್ದ ಸಮಯದಲ್ಲಿ ಅದರ ವಿರುದ್ಧ ಆಕೆ ಮಾತನಾಡಿದ್ದಳು. ಹಾಗಾಗಿ ಆಕೆ ಭಾರೀ ಆಕ್ರೋಶ ಎದುರಿಸುವಂತಾಯಿತು. ಕೊನೆಗೆ ಕ್ಷಮೆ ಕೋರಿದ ಬಳಿಕ ವಿವಾದ ತಣ್ಣಗಾಗಿತ್ತು.
ಇನ್ನು ನಟಿ ತ್ರಿಶಾ ಮದುವೆ ಕೂಡ ಮುರಿದು ಬಿದ್ದಿತ್ತು. ವರುಣ್ ಮಣಿಯನ್ ಎಂಬ ಉದ್ಯಮಿ ಜೊತೆ ಅದ್ಧೂರಿಯಾಗಿ ತ್ರಿಶಾ ಎಂಗೇಜ್‌ಮೆಂಟ್ ನಡೆದಿತ್ತು. ಬಳಿಕ ಕಾರಣಾಂತರಗಳಿಂದ ತ್ರಿಶಾ ಮದುವೆ ಆಗಲು ನಿರಾಕರಿಸಿದ್ದರು. ಇನ್ನು ಹಲವರೊಟ್ಟಿಗೆ ಆಕೆಯ ಹೆಸರು ತಳುಕು ಹಾಕಿಕೊಂಡಿದ್ದು ಇದೆ.
ತ್ರಿಶಾ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಆಕೆ ರೀತಿ ಕಾಣುವ ಯುವತಿಯ ಬಾತ್‌ರೂಂ ವಿಡಿಯೋ ವೈರಲ್ ಆಗಿತ್ತು. ಕೆಲವರು ಇದು ತ್ರಿಶಾ ಸ್ನಾನ ಮಾಡುತ್ತಿರುವ ವಿಡಿಯೋ ಎಂದು ಅಂದುಕೊಂಡಿದ್ದರು. ಆದರೆ ಅದು ಸುಳ್ಳು, ಮಾರ್ಪ್ ಮಾಡಿರುವ ಫೇಕ್ ವಿಡಿಯೋ ಎಂದು ತ್ರಿಶಾ ಸ್ಪಷ್ಟನೆ ನೀಡಿದ್ದರು. ಒಟ್ನಲ್ಲಿ ಈ ವಿಚಾರ ಅವತ್ತಿನ ಕಾಲಕ್ಕೆ ಭಾರೀ ಸದ್ದು ಮಾಡಿದ್ದು ಸುಳ್ಳಲ್ಲ. ಸದ್ಯ ತೆಲುಗಿನಲ್ಲಿ ಚಿರಂಜೀವಿ ಜೊತೆ ಸಿನಿಮಾವೊಂದರಲ್ಲಿ ತ್ರಿಶಾ ನಟಿಸುತ್ತಿದ್ದಾರೆ.


Click it and Unblock the Notifications











