ರೆಸ್ಟೋರೆಂಟ್, ಜ್ಯುವೆಲ್ಲರಿ ಶಾಪ್; ಸವಾಲು ಮೆಟ್ಟಿ ಉದ್ಯಮ ಕ್ಷೇತ್ರಕ್ಕೆ ತನಿಷಾ ಎಂಟ್ರಿ

ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳು ಉದ್ಯಮಶೀಲತೆಯತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಕೇವಲ ಮನೆಗಳಲ್ಲಿ ಮಾತ್ರವಲ್ಲ ಉದ್ಯಮ ಕ್ಷೇತ್ರದಲ್ಲಿ ಕೂಡ ನಾವು ಯಾರಿಗಿಂತ ಕಮ್ಮಿ ಇಲ್ಲ ಎಂದು ರುಜುವಾತು ಮಾಡುತ್ತಿದ್ದಾರೆ. ಮನರಂಜನಾ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ನಟಿಯರು, ಮಹಿಳಾ ತಂತ್ರಜ್ಞರು ಕೂಡ ಸಿನಿಮಾ, ಧಾರಾವಾಹಿ ಬಿಟ್ಟು ಬೇರೆ ಉದ್ಯಮಗಳಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ.

ಬಿಗ್‌ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಕೂಡ ಮೊದಲಿನಿಂದಲೂ ಮಹತ್ವಾಕಾಂಕ್ಷಿ. ಎರಡು ವರ್ಷಗಳ ಹಿಂದೆಯೇ ಅಪ್ಪೂಸ್ ಕಿಚ್ಚನ್ ಎನ್ನುವ ರೆಸ್ಟೋರೆಂಟ್ ಆರಂಭಿಸಿದ್ದರು. ಕಾರಣಾಂತರಗಳಿಂದ ಅದು ಅದರಲ್ಲಿ ಅಷ್ಟಾಗಿ ಸಫಲರಾಗಲಿಲ್ಲ. ಬಳಿಕ 'ಕುಪ್ಪಂಡಸ್ ಜ್ಯುವೆಲ್ಲರಿ' ಶಾಪ್ ತೆರೆದಿದ್ದಾರೆ. ಇದು ಕೈ ಹಿಡಿಯುತ್ತಿದ್ದಂತೆ ಮತ್ತಷ್ಟು ಯೋಜನೆಗಳನ್ನು ರೂಪಿಸಿ ಮುಂದೆ ನಾನಾ ಬಗೆಯ ಪ್ರಾಜೆಕ್ಟ್‌ಗಳಿಗೆ ಕೈ ಹಾಕುತ್ತಿದ್ದಾರೆ.

Tanisha Kuppanada started Kuppanda s jewellery in Bengaluru after Bigg Boss 10

ಕೊಡಗಿನ ಮೂಲದ ತನಿಷಾ ಬೆಂಗಳೂರಿನಲ್ಲೇ ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದ ಆಕೆ ಬಳಿಕ ನಿಧಾನವಾಗಿ ಸಿನಿಮಾಗಳಲ್ಲಿ ಕೂಡ ನಟಿಸಿದರು. ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ತಮ್ಮ ಅದ್ಭುತ ಆಟದಿಂದ ವೀಕ್ಷಕರ ಮನಗೆದ್ದರು. 15 ವಾರಗಳ ಕಾಲ ಮನೆಯೊಳಗೆ ಇದ್ದು ಟಫ್ ಕಾಂಪಿಟೇಟರ್ ಎನಿಸಿಕೊಂಡಿದ್ದರು.

ಬಿಗ್‌ಬಾಸ್ ಮನೆಗೆ ಹೋಗಿ ಬಂದ ಮೇಲೆ ತನಿಷಾ ಕುಪ್ಪಂಡ ಜನಪ್ರಿಯತೆ ಹೆಚ್ಚಾಯಿತು. ಆ ವಿಚಾರವನ್ನು ಅವರು ಒಪ್ಪಿಕೊಳ್ಳುತ್ತಾರೆ. ಇನ್ನು ನಟಿಯಾಗಿದ್ದು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಅವರು ಫಿಲ್ಮಿಬೀಟ್‌ಗೆ ಮಾತನಾಡಿದ್ದಾರೆ. ಇಲ್ಲಿನ ಸವಾಲುಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮುಂದೆ ಮತ್ತಷ್ಟು ಕನಸುಗಳನ್ನು ನನಸು ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.

"2022 ಡಿಸೆಂಬರ್‌ನಲ್ಲಿ 'ಅಪ್ಪುಸ್ 93 ಕಿಚನ್' ರೆಸ್ಟೊರೆಂಟ್ ಶುರು ಮಾಡಿದ್ದು. ಮೊದಲ ಬಾರಿ ನಾನು ಏನಾದರೂ ಹೂಡಿಕೆ ಮಾಡಬೇಕು ಎಂದು ಅದನ್ನು ಮಾಡಿದ್ದು. ಬಹಳ ಕಠಿಣ ನಿರ್ಧಾರ ಅದು. ಒಬ್ಬ ನಟಿಯಾಗಿ ದುಡಿದ ಹಣವನ್ನು ಹೂಡಿಕೆ ಮಾಡುವುದು ಅಷ್ಟು ಸುಲಭವಲ್ಲ. ಒಳ್ಳೆ ಪ್ರಚಾರ ಸಿಕ್ತು. ಜನ ಬಂದರು. ಆದರೆ ಅದು ಅಷ್ಟು ಯಶಸ್ವಿ ಆಗಲಿಲ್ಲ. 193 ರೂ. ಆಫರ್ ಬಿಟ್ಟಿದ್ವಿ. ಮೆಂಟೇನ್ ಮಾಡುವುದು ಕಷ್ಟವಾಯಿತು. ಬಿಗ್‌ಬಾಸ್ ಮನೆಗೆ ಹೋಗಿ ಬಂದಮೇಲೆ ಕಾರಣಾಂತರಗಳಿಂದ ಅದನ್ನು ಮುಚ್ಚಿದೆವು"

Tanisha Kuppanada started Kuppanda s jewellery in Bengaluru after Bigg Boss 10

ಮತ್ತೆ ಕೆಫೆ ಮಾಡುವ ಪ್ಲ್ಯಾನ್ ಇದೆ. ಹಾಗಾಗಿ ಸದ್ಯಕ್ಕೆ 'ಅಪ್ಪುಸ್ 93 ಕಿಚನ್' ಕ್ಲೋಸ್ ಮಾಡಿದ್ದೀವಿ. ಸದ್ಯಕ್ಕೆ 'ಕುಪ್ಪಂಡಸ್ ಜ್ಯುವೆಲ್ಲರಿ' ಮಾತ್ರ ಇದೆ. ಅದಕ್ಕೆ ಹೆಚ್ಚು ಬಂಡವಾಳ ಹೂಡಿದ್ದೇವೆ. ನನ್ನ ಪಾರ್ಟ್ನರ್ ಕೂಡ ಇರುವುದರಿಂದ ಈಗ ಟ್ರ್ಯಾಕ್‌ಗೆ ಬರ್ತಿದ್ದೀವಿ. ಆದಷ್ಟು ಬೇಗ ಮತ್ತೊಂದು ಯೋಜನೆ ಆರಂಭಿಸುತ್ತಿದ್ದೇವೆ. ಕುಪ್ಪಂಡಸ್ ಪ್ರೊಡಕ್ಷನ್ಸ್ ಹೌಸ್ ಕೂಡ ಆರಂಭಿಸುತ್ತಿದ್ದೇವೆ. ನಟ ಕೋಮಲ್ ಹೀರೊ ಆಗಿ ಒಂದು ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದೇವೆ"

"ನನ್ನ ಸ್ನೇಹಿತರೆಲ್ಲಾ ಈಗ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅವರೆಲ್ಲರ ಸಹಕಾರದಿಂದ ಪ್ರೊಡಕ್ಷನ್ ಹೌಸ್ ಶುರುವಾಗುತ್ತಿದೆ. ನಮ್ಮ ತಂಡದಲ್ಲೇ ಒಬ್ಬರು ನಿರ್ದೇಶಕರು, ನಿರ್ಮಾಪಕರು, ಸಹ ನಿರ್ದೇಶಕರು ಇದ್ದಾರೆ. ನಮ್ಮ ತಂಡಕ್ಕೆ ಕೋಮಲ್ ಹೊಸ ಸೇರ್ಪಡೆ. ನನ್ನ ಹುಟ್ಟುಹಬ್ಬಕ್ಕೆ(ಆಗಸ್ಟ್ 10) ಸಿನಿಮಾ ಟೀಸರ್ ಬಿಡುಗಡೆ ಆಗಬಹುದು" ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ.

"ಎಲ್ಲಾ ಕ್ಷೇತ್ರಗಳಲ್ಲಿ ಸವಾಲುಗಳು ಇರುತ್ತವೆ. ಆ ಸವಾಲುಗಳನ್ನು ಎದುರಿಸುವುದೇ ದೊಡ್ಡ ಸವಾಲು ಆಗಿಬಿಡುತ್ತದೆ. ಹಣ ಹೂಡಿ ಏನಾದರೂ ಬ್ಯುಸಿನೆಸ್ ಮಾಡ್ತೀವಿ ಅಂದ್ರೆ ನಾವು ಎಲ್ಲದ್ದಕ್ಕೂ ಸಿದ್ಧರಿರಬೇಕು. ನಾವೇ ಮಾಹಿತಿ ಸಂಗ್ರಹಿಸಿ, ಅದನ್ನು ಮತ್ತೊಬ್ಬರಿಗೆ ಹೇಳಿ ಒಪ್ಪಿಸಿ ಎಲ್ಲವನ್ನು ಕಾರ್ಯರೂಪಕ್ಕೆ ತರಬೇಕು. ಕೆಲವೊಮ್ಮೆ ಎಲ್ಲವನ್ನು ನಾವೇ ಮಾಡಬೇಕಾಗುತ್ತದೆ. ಬಿಗ್‌ಬಾಸ್‌ಗೂ ಮುಂಚೆ ರೆಸ್ಟೊರೆಂಟ್‌ನಲ್ಲಿ ಏನಾದರೂ ಕಮ್ಮಿ ಇದ್ರೆ ನಾನೇ ತಂದು ಕೊಡುತ್ತಿದ್ದೆ. ಅಷ್ಟು ರಿಸ್ಕ್ ಇರುತ್ತದೆ"

"ಕೆಲವೊಮ್ಮೆ ಸಪ್ಲೇ ಮಾಡುವುದು ಲೇಟ್ ಆಗುತ್ತಿದೆ ಎನಿಸಿದಾಗ ನಾವೇ ಹೋಗಿ ಸಪ್ಲೇ ಮಾಡಬೇಕಾಗುತ್ತದೆ. ನಾನು ಮಾಡಿದ್ದೀನಿ. ಕೆಲವರು ಅದನ್ನು ನೋಡಿ ತನಿಷಾ ಸಪ್ಲೇ ಮಾಡುತ್ತಾಳೆ ಎಂದು ಬರುತ್ತಾರೆ. ಇದನ್ನು ನೋಡಿ ಏಯ್ ತನಿಷಾ ಬಂದು ಸಪ್ಲೇ ಮಾಡಲ್ಲ, ಅದೆಲ್ಲಾ ಸುಳ್ಳು ಎಂದು ಆಡಿಕೊಳ್ಳುತ್ತಾರೆ. ಪ್ರತಿ ಸಲ ನಾನೇ ಸಪ್ಲೇ ಮಾಡಲು ಆಗಲ್ಲ, ಕುಪ್ಪಂಡಸ್ ಜ್ಯುವೆಲ್ಲರಿ ಶಾಪ್‌ನಲ್ಲೂ ಅದೇ ರೀತಿ ಆಗುತ್ತಿದೆ. ನಾನೇ ಕೆಲವೊಮ್ಮೆ ಗ್ರಾಹಕರನ್ನು ಕನ್ವಿನ್ಸ್ ಮಾಡಬೇಕಾಗುತ್ತದೆ. ಎಲ್ಲಾ ಕಷ್ಟ ಇದೆ. ಮುಂದೆ ಮತ್ತಷ್ಟು ಯೋಜನೆಗಳಿವೆ" ಎಂದು ತನಿಷಾ ವಿವರಿಸಿದ್ದಾರೆ.

More from Filmibeat

English summary
Tanisha kuppanda Talks about appu's 93 kitchen and Kuppandas Jewellery shop;
Read more about: filmibeat original bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X