ಸಿನಿಮಾ ಸೆಟ್‌ನಲ್ಲಿ ಟೀ ಕೊಡುವವನಿಗೂ ನಟ ಪ್ರಕಾಶ್ ರಾಜ್‌ಗೂ ದೊಡ್ಡ ಜಗಳವಾಗಿತ್ತು!
ಕರ್ನಾಟಕ ಮೂಲದ ನಟ ಪ್ರಕಾಶ್ ರಾಜ್ ಈಗ ಬಹುಭಾಷಾ ನಟನಾಗಿ ಗುರ್ತಿಸಿಕೊಂಡಿದ್ದಾರೆ. ವಿವಾದಗಳಿಂದಲೂ ಅವರು ಆಗಾಗ್ಗೆ ಸುದ್ದಿ ಆಗುತ್ತಾರೆ. ಪ್ರಧಾನಿ ಮೋದಿ, ಬಿಜೆಪಿ ಸರ್ಕಾರ, ಆರ್‌ಎಸ್‌ಎಸ್ ಬಗ್ಗೆ ಪದೇ ಪದೆ ಟೀಕೆ ಮಾಡಿ ಸುದ್ದಿ ಆಗುತ್ತಾರೆ. ತಮ್ಮ ನೇರಾನೇರ ಮಾತುಗಳಿಂದ ಪ್ರಕಾಶ್ ರಾಜ್ ಗಮನ ಸೆಳೆಯುತ್ತಾರೆ.
ರಂಗಭೂಮಿ ಮೂಲಕ ಪ್ರಕಾಶ್ ರಾಜ್ ಚಿತ್ರರಂಗ ಪ್ರವೇಶಿಸಿದರು. ಅಭಿನಯ ತರಂಗದ ವಿದ್ಯಾರ್ಥಿಯಾಗಿ ರಂಗಭೂಮಿಯಲ್ಲಿ ಗುರ್ತಿಸಿಕೊಂಡು ಬಳಿಕ ಕಿರುತೆರೆ ಪ್ರವೇಶಿಸಿದ್ದರು. ನಿಧಾನವಾಗಿ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದಿದ್ದರು. ಆರಂಭದಲ್ಲಿ ಕಾಮಿಡಿ ಪಾತ್ರಗಳ ಮೂಲಕ ಗಮನ ಸೆಳೆದರು. ಬಳಿಕ ನೆಗೆಟಿವ್ ಪಾತ್ರಗಳಲ್ಲಿ ನಟಿಸೋಕೆ ಆರಂಭಿಸಿದರು. ಅಲ್ಲಿಂದ ಮುಂದೆ ನೆಗೆಟಿವ್, ಸಪೋರ್ಟಿಂಗ್ ರೋಲ್‌ಗಳಲ್ಲಿ ನಟಿಸುತ್ತ ಸ್ಟಾರ್ ಆಗಿಬಿಟ್ಟರು. ಚಿಕ್ಕಂದಿನಿಂದ ಬಹಳ ತುಂಟ, ಧೈರ್ಯವಾಗಿ ಮಾತನಾಡುವ ಸ್ವಭಾವ ಅವರದ್ದು.

ಸಿನಿಮಾ ಶೂಟಿಂಗ್ ಸಮಯದಲ್ಲಿ ಕೂಡ ಸೆಟ್‌ನಲ್ಲಿ ಪ್ರಕಾಶ್ ರಾಜ್ ಇದೇ ರೀತಿ ಇರುತ್ತಾರೆ. ತಮ್ಮ ಪಾಲು ತಮಗೆ ಸಿಗಲೇಬೇಕು. ಎಲ್ಲವನ್ನು ನೇರವಾಗಿ ಕೇಳುವ ಗುಣ ಅವರದ್ದು. ಒಮ್ಮೆ ಸಿನಿಮಾ ಸೆಟ್‌ನಲ್ಲಿ ಇದೇ ಕಾರಣಕ್ಕೆ ಟೀ ಕೊಡುವವರನಿಗೂ ಪ್ರಕಾಶ್ ರಾಜ್ ಅವರಿಗೂ ದೊಡ್ಡ ಜಗಳವಾಗಿತ್ತು ಎಂದು ಹಾಸ್ಯನಟ ಜಯರಾಮ್ ನೆನಪಿಸಿಕೊಂಡಿದ್ದಾರೆ. 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಪ್ರಕಾಶ್ ರಾಜ್ ಜೊತೆಗಿನ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ನಮಗೆ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ. ಸಿಕ್ಕ ಅವಕಾಶಗಳನ್ನು ಉಳಿಸಿಕೊಳ್ಳುವುದು ಬಹಳ ಅನಿವಾರ್ಯವಾಗಿತ್ತು. ಹಾಗಾಗಿ ಸಂಭಾವನೆ, ಕನ್ವಿನೆಸ್ಸ್ ಕೂಡ ಸರಿಯಾಗಿ ಸಿಗುತ್ತಿರಲಿಲ್ಲ. ಜಾಸ್ತಿ ಮಾತನಾಡಿದ್ರೆ, ಅವಕಾಶ ಕಳೆದುಕೊಳ್ಳುವ ಭಯ ಇತ್ತು ಎಂದು ನಟ ಜಯರಾಮ್ ಹೇಳಿದ್ದಾರೆ. "ಪ್ರಕಾಶ್ ರಾಜ್ ಅವಾಗ್ಲೆ ಬೈತಿದ್ದ. ಅವ್ನು ಏಕ್ ಮಾರ್ ದೋ ತುಕ್ಡಾ ಎನ್ನುವಂತೆ ಮಾತನಾಡ್ತಿದ್ದ. ನೀನು ಪಾತ್ರ ಮಾಡ್ತೀಯಾ, ಅವ್ರು ಹಣ ಕೊಡ್ತಾರೆ, ಯಾಕೋ ಕನ್ವಿನೆಸ್ಸ್ ಕೇಳಿ ತಗೊಳ್ದೆ ಹೋದೆ ಎನ್ನುತ್ತಿದ್ದ" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಇವತ್ತು ನೇರಾನೇರ ಮಾತನಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ಏನೂ ಇಲ್ಲದ ದಿನಗಳಲ್ಲಿ ಕೂಡ ಅವನ ಕ್ಯಾರೆಕ್ಟರ್ ಅದೇ ರೀತಿ ಇತ್ತು. 10 ರೂಪಾಯಿ ಇದ್ರು, ಸ್ಟೈಲ್ ಆಗಿ ಆಟೋದಲ್ಲಿ ಬರ್ತಿದ್ದ. ಏಯ್ ಬಾರೋ ಇಲ್ಲಿ ಟೀ ತಗೊಂಡ್ ಬಾ ಎನ್ನುತ್ತಿದ್ದ ಎಂದು ಮೆಲುಕು ಹಾಕಿದ್ದಾರೆ. "ಟೀ ಕೊಡುವವನಿಗೂ ಪ್ರಕಾಶ್ ರಾಜ್‌ಗೂ ಒಮ್ಮೆ ಸೆಟ್‌ನಲ್ಲಿ ಜಗಳವಾಗಿತ್ತು. ಏಯ್ ಟೀ ತಗೊಂಡ್ ಬಾರೋ ಅಂದ. ಅವ್ನು ಹತ್ರ ಬಂದು 'ಪ್ರಕಾಶ್ ರೈ ನಿಂಗೆ ಟ್ಯಾಲೆಂಟ್ ಐತೆ, ಆದ್ರೆ ಕೊಬ್ಬು ಜಾಸ್ತಿ ನಿಂಗೆ' ಎಂದುಬಿಟ್ಟ. ಹ್ಞೂಂ ಕಣೊ ಕೊಬ್ಬು ನಂಗೆ. ಇವತ್ತು ಆರ್ಟಿಸ್ಟ್, ನಾಳೆ ಡೈರೆಕ್ಟರ್, ನಾಡಿದ್ದು ಪ್ರೊಡ್ಯೂಸರ್, ನೀನೇನ್ ಆಗ್ತಿಯೋ ಅಂದ. ಹೀಗೆ ಇಬ್ರಿಗೂ ಜಗಳ ಆಯ್ತು.. ನಾವೆಲ್ಲಾ ಸೇರಿ ಜಗಳ ನಿಲ್ಲಿಸಿದ್ವಿ" ಎಂದು ಜಯರಾಮ್ ಹೇಳಿದ್ದಾರೆ.
ಕೆಲ ದಿನಗಳ ಬಳಿಕ ನಾನು ಆ ಪ್ರೊಡಕ್ಷನ್ ಅವ್ರನ್ನು ಕೇಳ್ದೆ. ಅಂಬರೀಶ್ ಅಂತ ಹುಡುಗ ಟೀ ಕೊಡ್ತಿದ್ದ. ಈಗ ಎಲ್ಲಿ ಅವ್ನು ಅಂತ ಕೇಳ್ದೆ. ಅಯ್ಯೋ, ಅವರ ಜಮೀನು, ಹೊಲ ಎಲ್ಲಾ ಒಳ್ಳೆ ಬೆಲೆ ಮಾರಾಟವಾಗಿ ಇವತ್ತು ಅವ್ನು ಕುಬೇರ ಅಂದ್ರು.. ಆ ಟೀ ಕೊಡುತ್ತಿದ್ದ ಅಂಬರೀಶ ಎಲ್ಲಿದ್ದಾನೋ ಗೊತ್ತಿಲ್ಲ. ಪ್ರಕಾಶ್ ರಾಜ್ ನಮ್ಮ ಮುಂದೆ ಇದ್ದಾನೆ. ಅವತ್ತು ಜಗಳ ಆಡಿದ ಇಬ್ಬರೂ ಹೀಗೆ ಎಲ್ಲಿಗೋ ಹೋಗಿದ್ದಾರೆ, ಜಗಳ ನೋಡಿದ ನಾವು ಇಲ್ಲೇ ಇದ್ದೀವಿ ಎಂದು ಜಯರಾಮ್ ವಿವರಿಸಿದ್ದಾರೆ.


Click it and Unblock the Notifications