twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ನಲ್ಲಿ ತೆಲುಗು ಸಿನಿಮಾಗಳ ದರ್ಬಾರ್! ಕನ್ನಡ-ತಮಿಳು ಸುಮ್ಮನಿರಲು ಸಾಧ್ಯವೇ?

    |

    ಸದ್ಯಕ್ಕೆ ಬಾಲಿವುಡ್ ಅಂಗಳದಲ್ಲಿ ತೆಲುಗು ನಟರ ಅಥವಾ ಸಿನಿಮಾಗಳ ಹೆಸರು ಕೇಳಿದರೆ ಬೆಚ್ಚಿಬೀಳುತ್ತಿದ್ದಾರೆ. ಅಲ್ಲಿನ ನಿರ್ಮಾಪಕರಂತೂ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವ ದಿನಾಂಕಗಳು ಬಗ್ಗೆ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. 'ಪುಷ್ಪ' ಚಿತ್ರದ ಯಶಸ್ಸು ತೆಲುಗು ಚಿತ್ರಗಳಿಗೆ ವಿಶೇಷವಾದ ಕ್ರೇಜ್ ಹಿಂದಿ ಅಂಗಳದಲ್ಲಿ ಉಂಟುಮಾಡುತ್ತಿದೆ. 'ಪುಷ್ಪ' ಮಾತ್ರವಲ್ಲ 'ಅಖಂಡ' ಚಿತ್ರಕ್ಕೂ ಕೂಡ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. 'ಅಖಂಡ' ಚಿತ್ರವನ್ನು ಹಿಂದಿಗೆ ಡಬ್ ಮಾಡಿ ಥಿಯೇಟರುಗಳಲ್ಲಿ ಬಿಡುಗಡೆ ಮಾಡುವಂತೆ ಹಿಂದಿ ಪ್ರೇಕ್ಷಕರು ಅಭಿಯಾನ ಆರಂಭಿಸಿದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ರಾಮ್ ಚರಣ್ ತೇಜ ಅಭಿನಯದ 'ರಂಗಸ್ಥಳಂ' ಚಿತ್ರ ನೇರವಾಗಿ ಥಿಯೇಟರ್ ಗಳಲ್ಲಿ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಮಾಸ್ ಮಹಾರಾಜ ರವಿತೇಜ ಚಿತ್ರಗಳಿಗೆ ಮೊದಲಿನಿಂದಲೂ ಹಿಂದಿ ಬೆಲ್ಟ್ ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.

    ಹೀಗಾಗಿ ರವಿತೇಜ ಅಭಿನಯದ ಮುಂದಿನ ಚಿತ್ರ 'ಕಿಲಾಡಿ' ಚಿತ್ರದ ಹಕ್ಕುಗಳನ್ನು ಪ್ರತಿಷ್ಠಿತ ಪೆನ್ ಮೀಡಿಯಾ ಭಾರಿ ಮೊತ್ತಕ್ಕೆ ಪಡೆದುಕೊಂಡಿದ್ದು ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಚಿಸುತ್ತಿದೆ. ಅಲ್ಲದೆ ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಭಾರಿ ಪ್ರಶಸ್ತಿ ಕಂಡಿದ್ದ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮಲೋ' ಚಿತ್ರವನ್ನು ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡಲು ಮುಂದಾದಾಗ ಬಾಲಿವುಡ್‌ನಲ್ಲಿ ಅಲ್ಲೋಲ ಕಲ್ಲೋಲವಾಯಿತು.

     ತೆಲುಗಿನ ಡಬ್ಬಿಂಗ್ ಚಿತ್ರಗಳು

    ತೆಲುಗಿನ ಡಬ್ಬಿಂಗ್ ಚಿತ್ರಗಳು

    ಈಗಾಗಲೇ ಇದರ ರಿಮೇಕ್ ಕಾರ್ತಿಕ್ ಆರ್ಯನ್ ಅಭಿನಯದ 'ಶಹಜಾದ' ಬಹುತೇಕ ಚಿತ್ರೀಕರಣಗೊಂಡಿದ್ದು ನಾಳೆ 'ಅಲಾ ವೈಕುಂಠಪುರಮಲೋ' ಬಿಡುಗಡೆಯಾದರೆ ಈ ಚಿತ್ರಕ್ಕೆ ಪೆಟ್ಟು ಕೊಡುತ್ತದೆ ಎಂದು ಚಿತ್ರವನ್ನು ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಂತೆ ನೋಡಿಕೊಂಡಿದ್ದಾರೆ. ಪ್ರಭಾಸ್ ಈಗ ಅಲ್ಲು ಅರ್ಜುನ್ ಜೊತೆಗೆ ಮುಂಬರುವ ದಿನಗಳಲ್ಲಿ ಎನ್ ಟಿ ಆರ್, ರಾಮ್ ಚರಣ್ ತೇಜ, ಮಹೇಶ್ ಬಾಬು, ವಿಜಯ್ ದೇವರಕೊಂಡಚಿತ್ರಗಳ ನೇರವಾಗಿ ಹಿಂದಿಯಲ್ಲಿ ಬಿಡುಗಡೆಯಾಗುವುದರಿಂದ ಆ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ. ಇನ್ನು ಮಾಸ್ ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳನ್ನು ಹೊಂದಿರುವ ರವಿತೇಜ ಚಿತ್ರವು ಬಿಡುಗಡೆಯಾದರೆ ಮುಂದೆ ಅದು ಬಾಲಿವುಡ್ ಚಿತ್ರಗಳಿಗೆ ಭಾರಿ ಪೆಟ್ಟು ನೀಡುತ್ತದೆ ಎಂಬ ಮಾತು ಬಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ.

    ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುವ ತೆಲುಗಿನ ಡಬ್ಬಿಂಗ್ ಚಿತ್ರಗಳು ಮೊದಲಿನಿಂದಲೂ ಅಲ್ಲಿ ದೊಡ್ಡ ಹೊಡೆತವನ್ನೇ ಕೊಡುತ್ತಿದೆ. ಇದರ ಜೊತೆಗೆ ಇನ್ನು ಮುಂದೆ ಪ್ರತಿ ದೊಡ್ಡ ತೆಲುಗು ಚಿತ್ರ ನೇರವಾಗಿ ಹಿಂದಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಖಚಿತ. ಕ್ರಮೇಣ ತೆಲುಗು ಚಿತ್ರಗಳು ಹಿಂದಿ ಮಾರುಕಟ್ಟೆ ಕಬ್ಜಾ ಮಾಡಿಕೊಳ್ಳುತ್ತಿದೆ. ಸುದ್ದಿ ಹೀಗಿರುವಾಗಲೇ ಇತರ ಸೌತ್ ಸಿನಿಮಾಗಳ ದಾಳಿ ಕೂಡ ಮುಂದಿನ ದಿನಗಳಲ್ಲಿ ಜೋರಾಗಿರುತ್ತದೆ ಎಂಬ ಮಾತುಗಳು ಬಾಲಿವುಡ್ ಅಕ್ಷರಶಃ ಬೆಚ್ಚಿ ಬೀಳುವಂತೆ ಮಾಡುತ್ತಿದೆ.

    ತೆಲುಗು ಚಿತ್ರಗಳಿಗೆ ಮೊದಲಿನಿಂದಲೂ ಡಿಮ್ಯಾಂಡ್

    ತೆಲುಗು ಚಿತ್ರಗಳಿಗೆ ಮೊದಲಿನಿಂದಲೂ ಡಿಮ್ಯಾಂಡ್

    ಹಾಗೆ ನೋಡಿದರೆ 2005ರಲ್ಲಿ ಡಬ್ಬಿಂಗ್ ಸಂಸ್ಕೃತಿ ಹಿಂದಿಯಲ್ಲಿ ಆರಂಭವಾಯಿತು. ಗೋಲ್ಡ್ ಮೈನ್ಸ್ ಅಧಿಪತಿ ಮನೀಶ ಶಾ ಹೇಳುವಂತೆ ' 2005ರ ಹೊತ್ತಿಗೆ ಹಿಂದಿ ಸಿನಿಮಾರಂಗ ಪೂರ್ತಿಯಾಗಿ ಬದಲಾಗಿತ್ತು, ಅಲ್ಲಿ ಮಾಸ್ ಎಂಟರ್ಟೈನ್ಮೆಂಟ್ ಗಳ ಕೊರತೆ ದೊಡ್ಡದಾಗಿ ಕಾಣುತ್ತಿತ್ತು. ಆದರೆ ಈ ಮಾಸ್ ಎಂಟರ್ಟೈನ್ಮೆಂಟ್ ಚಿತ್ರಗಳನ್ನು ನೋಡುವ ಒಂದು ದೊಡ್ಡ ವರ್ಗವೇ ಉತ್ತರಭಾರತದಲ್ಲಿ ಇದೆ. ಹೀಗಾಗಿ ಮೊದಲು ನಾಗಾರ್ಜುನ ಅಭಿನಯದ 'ಮಾಸ್' ಚಿತ್ರವನ್ನು ಡಬ್ ಮಾಡಿದೆ. ಆದರೆ ಆ ಸಮಯದಲ್ಲಿ ಇದನ್ನು ನೇರವಾಗಿ ಥಿಯೇಟರುಗಳಿಗೆ ತೆಗೆದುಕೊಂಡು ಹೋಗಿ ಬಿಡುಗಡೆ ಮಾಡಲು ಆಗುತ್ತಿರಲಿಲ್ಲ ಹೀಗಾಗಿ ಸ್ಯಾಟಲೈಟ್ ಚಾನೆಲ್ನಲ್ಲಿ ಇದರ ಪ್ರಸಾರ ಮಾಡಲಾಯಿತು. ಸೋನಿ ಸೆಟ್ ಮ್ಯಾಕ್ಸ್ ನಲ್ಲಿ ಬುಧವಾರ ರಾತ್ರಿ ಚಿತ್ರ ಪ್ರಸಾರವಾಯಿತು. ನೇರ ಹಿಂದಿ ಚಿತ್ರದ TRP O.8 ಇದ್ದರೆ 'ಮಾಸ್' ಚಿತ್ರದ TRP 1.4 ರಷ್ಟಿತ್ತು. ಇದರಿಂದ ಹಿಂದಿ ಬೆಲ್ಟ್ ನಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಒಳ್ಳೆ ಮಾರುಕಟ್ಟೆ ಇದೆ ಎಂಬುದು ಖಾತ್ರಿಯಾಯಿತು. ಮುಂದೆ ಸಾಕಷ್ಟು ತೆಲುಗು ಚಿತ್ರಗಳನ್ನು ಡಬ್ ಮಾಡಿ ಬಿಡುಗಡೆ ಮಾಡಲು ಆರಂಭಿಸಿದೆ ಮುಂದೆ ನನ್ನದೇ ಯುಟ್ಯೂಬ್ ಚಾನೆಲ್ ಆರಂಭಿಸಿ ಅದರ ಮೂಲಕ ಡಬ್ಬಿಂಗ್ ಚಿತ್ರಗಳನ್ನು ಪ್ರಸಾರ ಮಾಡುವುದನ್ನು ಆರಂಭಿಸಿದೆ' ಎನ್ನುತ್ತಾರೆ ಪುಷ್ಪ ಹಿಂದಿ ಅವತರಣಿಕೆಯ ನಿರ್ಮಾಪಕರೂ ಆಗಿರುವ ಮನೀಶ್.

    ಡಬ್ಬಿಂಗ್ ಚಿತ್ರಗಳಿಗೆ ಎಷ್ಟು ಹಣ ನೀಡುತ್ತಾರೆ?

    ಡಬ್ಬಿಂಗ್ ಚಿತ್ರಗಳಿಗೆ ಎಷ್ಟು ಹಣ ನೀಡುತ್ತಾರೆ?

    2005ರಲ್ಲಿ ಡಬ್ಬಿಂಗ್ ಸಂಸ್ಕೃತಿ ಆರಂಭವಾದರೂ ಇದು ಕಳೆದ ಐದು ವರ್ಷಗಳಿಂದ ಈಚೆಗೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಡಬ್ಬಿಂಗ್ ಮಾರುಕಟ್ಟೆ ತಜ್ಞರ ಪ್ರಕಾರ ತೆಲುಗು ಸಿನಿಮಾಗಳಿಗೆ ಪ್ರೇಕ್ಷಕವರ್ಗ 90ರಷ್ಟು ಇದ್ದರೆ, ತಮಿಳಿಗೆ ಅದು 80ರಷ್ಟು ಕನ್ನಡಕ್ಕೆ 60ರಷ್ಟು ಇದೆ. ಇದರ ಆಧಾರದ ಮೇಲೆ ವಹಿವಾಟು ವಾಟು ನಡೆಯುತ್ತದೆ. ಅಂದರೆ ತೆಲುಗು ಚಿತ್ರಕ್ಕೆ 15 ರಿಂದ 20 ಕೋಟಿ ಕೆಲವೊಮ್ಮೆ 25ಕೋಟಿ ಕೂಡ ನೀಡಲಾಗುತ್ತದೆ. ತಮಿಳು ಚಿತ್ರಗಳಿಗೆ 15 ಕೋಟಿ, ಕನ್ನಡ ಚಿತ್ರಗಳಿಗೆ 10ರಿಂದ 15 ಕೋಟಿ ಇರುವವರೆಗೂ ವ್ಯವಹಾರ ನಡೆಸಲಾಗುತ್ತದೆ. ಆದರೆ OTT ವೇದಿಕೆ ಗಳಲ್ಲಿ ಹೆಚ್ಚು ಆಕರ್ಷಣೆ ಹೊಂದಿರುವ ಮಲಯಾಳಂ ಚಿತ್ರಗಳಿಗೆ ಸ್ಯಾಟಲೈಟ್ ಮತ್ತು ಯುಟ್ಯೂಬ್ ಚಾನೆಲ್ ಗಳಲ್ಲಿ ಅಂತಹ ಕ್ರೇಜ್ ಇಲ್ಲ.

    ಸಿನಿಮಾ ಅನೌನ್ಸ್ ಮಾಡಿದ ದಿನವೇ ಹಣ ಕೊಟ್ಟು ಹೋಗುತ್ತಾರೆ

    ಸಿನಿಮಾ ಅನೌನ್ಸ್ ಮಾಡಿದ ದಿನವೇ ಹಣ ಕೊಟ್ಟು ಹೋಗುತ್ತಾರೆ

    ತೆಲುಗು ಯುವ ನಿರ್ದೇಶಕ ಪ್ರಶಾಂತ್ ವರ್ಮಾ ಹೇಳುವಂತೆ ಈಗ ಹೈದರಾಬಾದಿನಲ್ಲಿ ಒಂದು ಸಿನಿಮಾ ಅನೌನ್ಸ್ ಮಾಡುವುದೇ ತಡ ತಕ್ಷಣ ಮುಂಬೈಯಿಂದ ಚಿತ್ರದ ಡಬ್ಬಿಂಗ್ ರೈಟ್ಸ್ ಗಾಗಿ ನಿರ್ಮಾಪಕರು ಓಡಿ ಬರುತ್ತಾರೆ. ದೊಡ್ಡ ನಟರ ಸಿನಿಮಾಗಳನ್ನು ಖರೀದಿ ಮಾಡಲು ಅವರ ಕೈಯಲ್ಲಿ ಆಗುವುದಿಲ್ಲ. ಏಕೆಂದರೆ ಅದರ ವ್ಯಾಪ್ತಿ ಮತ್ತು ಬಿಸಿನೆಸ್ ಬೇರೇನೆ ಇರುತ್ತದೆ.ಆದರೆ ಮೀಡಿಯಂ ಬಜೆಟ್ನ ಮತ್ತು ಎರಡನೇ ಹಂತದ ನಾಯಕರ ಚಿತ್ರಗಳಿಗೆ ಈಗ 15ರಿಂದ 20 ಕೋಟಿ ಕೊಟ್ಟು ಅದರ ಡಬ್ಬಿಂಗ್ ರೈಟ್ಸ್ ಪಡೆದುಕೊಂಡು ಹೋಗುತ್ತಿದ್ದಾರೆ. ಮೊದಲೆಲ್ಲ ಸ್ಯಾಟಲೈಟ್ ಮತ್ತು ಯುಟ್ಯೂಬ್ ಚಾನೆಲ್ ಗಳಿಗಾಗಿ ಇದನ್ನು ಖರೀದಿ ಮಾಡುತ್ತಿದ್ದರು ಆದರೆ ಈಗ ಈ ಚಿತ್ರಗಳು ಇನ್ನುಮೇಲೆ ನೇರವಾಗಿ ಉತ್ತರಭಾರತದಲ್ಲಿ ಚಿತ್ರಮಂದಿರಗಳಲ್ಲಿ ಕಾಣಸಿಗುತ್ತದೆ. ಹಿಂದೆ ಕೂಡ ಹಿಂದಿ ಬೆಲ್ಟ್ ನಲ್ಲಿ ತೆಲುಗು ಚಿತ್ರಗಳಿಗೆ ಕ್ರೇಜ್ ಇತ್ತು ಆದರೆ ಈಗ ಅದು ದುಪ್ಪಟ್ಟಾಗಿದೆ" ಎಂದು ಅಭಿಪ್ರಾಯಪಡುತ್ತಾರೆ ಜಾಂಬಿ ರೆಡ್ಡಿ ಚಿತ್ರದ ನಿರ್ದೇಶಕ.

    ಬಹುತೇಕ ತೆಲುಗು ಸಿನಿಮಾಗಳು ಈಗ ಪ್ಯಾನ್ ಇಂಡಿಯಾ

    ಬಹುತೇಕ ತೆಲುಗು ಸಿನಿಮಾಗಳು ಈಗ ಪ್ಯಾನ್ ಇಂಡಿಯಾ

    ತೆಲುಗು ಸಿನಿಮಾಗಳ ಪಾಪ್ಯುಲಾರಿಟಿ ಬೆಳೆದಂತೆ ಅದರ ಮಾರ್ಕೆಟ್ ಕೂಡ ದೊಡ್ಡದಾಗಿದೆ. 'ಆರ್ ಆರ್ ಆರ್' ,'ರಾಧೇಶ್ಯಾಮ್' 'ಲೈಗರ್', 'ಮೇಜರ್''ಸಲಾರ್', 'RC 15', :ಪುಷ್ಪ- 2' ಹೀಗೆ ಸಾಲು ಸಾಲು ಚಿತ್ರಗಳು ಈ ವರ್ಷ ಬಿಡುಗಡೆಯಾಗುತ್ತಿದೆ. ಇನ್ನು ನಾಗ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'Project-K' ಅಂತೂ ಸುಮಾರು 700 ಕೋಟಿ ಬಂಡವಾಳ ಹೂಡಲಾಗಿದೆ. ಈ ಸೈನ್ಸ್ ಫಿಕ್ಷನ್ ಚಿತ್ರವನ್ನು ಹಾಲಿವುಡ್ ನಲ್ಲಿ ಕೂಡ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ.

    ಕನ್ನಡ- ತಮಿಳು ಹೀರೋಗಳ ಪ್ಯಾನ್ ಇಂಡಿಯಾ ಸಿನಿಮಾಗಳು

    ಕನ್ನಡ- ತಮಿಳು ಹೀರೋಗಳ ಪ್ಯಾನ್ ಇಂಡಿಯಾ ಸಿನಿಮಾಗಳು

    ಡಬ್ಬಿಂಗ್ ಸಿನಿಮಾಗಳ ವಿಷಯಕ್ಕೆ ಬಂದರೆ ಈಗಲೂ ಕೂಡ ತೆಲುಗು ಚಿತ್ರಗಳಿಗೆ ಅಗ್ರಸ್ಥಾನ. ಇತರ ಸೌತ್ ಸಿನಿಮಾಗಳಿಗೆ ಕಂಪೇರ್ ಮಾಡಿದರೆ ತೆಲಗು ಹೀರೋಗಳು ಹಿಂದಿ ಬೆಲ್ಟ್ ನಲ್ಲಿ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದಾರೆ. ಹಾಗಂತ ಇತರ ಸಿನಿಮಾ ರಂಗಗಳ ಹೀರೋಗಳು ಜನಪ್ರಿಯರಲ್ಲ ಅಂತ ಹೇಳಲು ಬರುವುದಿಲ್ಲ. ಕನ್ನಡದ ಯಶ್ ಅವರಿಗೆ ಪ್ರಭಾಸ್, ಅಲ್ಲು ಅರ್ಜುನ್ ಇರುವಷ್ಟೇ ಜನಪ್ರಿಯತೆ ಹಿಂದಿ ಬೆಲ್ಟ್ ನಲ್ಲಿ ಇದೆ. ಅಲ್ಲದೆ 'ಕೆಜಿಎಫ್-2' ಅಲ್ಲಿನ ಜನ ಕೂಡ ಅತ್ಯಂತ ಹೆಚ್ಚಿನ ನಿರೀಕ್ಷೆಯಿಂದ ಎದುರು ನೋಡುತ್ತಿರುವ ಚಿತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ.

    ತೆಲುಗು ಸಿನಿಮಾಗಳಷ್ಟೇ ಅಲ್ಲ. ಕನ್ನಡ, ತಮಿಳು ಸಿನಿಮಾಗಳೂ ಹಿಂದಿ ಪ್ರೇಕ್ಷಕರನ್ನು ಒಂದು ರೇಂಜ್ ನಲ್ಲಿ ರಂಜಿಸುತ್ತಿವೆ. ಸದ್ಯ ಬಾಲಿವುಡ್ ನಲ್ಲಿ ದಕ್ಷಿಣ ಚಿತ್ರರಂಗದ ಯಾವುದೇ ಸಿನಿಮಾ ಬಂದರೂ ಸ್ವಾಗತಿಸುವ ಪರಿಸ್ಥಿತಿ ಇದೆ. ಅದಕ್ಕಾಗಿಯೇ ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳುವುದು ಎಲ್ಲಾ ಸಿನಿಮಾರಂಗದ ಖ್ಯಾತ ನಟರು ಎದುರುನೋಡುತ್ತಿದ್ದಾರೆ. ತಮಿಳು ನಟರ ಪೈಕಿ ಧನುಷ್ ತಕ್ಕಮಟ್ಟಿಗೆ ಈಗಾಗಲೇ ಹಿಂದಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವಿಜಯ್ ಇತರ ತಮಿಳು ಹೀರೋಗಳಿಗೆ ಹೋಲಿಸಿದರೆ ಹಿಂದಿ ನಲ್ಲಿ ಜನಪ್ರಿಯರಾಗಿದ್ದಾರೆ. ಇನ್ನು ಸೂರ್ಯ- ಅಜಿತ್- ವಿಕ್ರಮ್ ಚಿತ್ರಗಳಿಗೆ ತಕ್ಕಮಟ್ಟಿಗೆ ಅಲ್ಲಿ ಡಿಮ್ಯಾಂಡ್ ಇದೆ.

    ಕನ್ನಡದ ಯಾವ ಯಾವ ನಟರ ಚಿತ್ರಗಳಿಗೆ ಇದೆ ಡಿಮ್ಯಾಂಡ್

    ಕನ್ನಡದ ಯಾವ ಯಾವ ನಟರ ಚಿತ್ರಗಳಿಗೆ ಇದೆ ಡಿಮ್ಯಾಂಡ್

    ಎಲ್ಲರಿಗೂ ಗೊತ್ತಿರುವಂತೆ ಕನ್ನಡ ನಟರ ಪೈಕಿ ಹಿಂದಿ ಪ್ರಾಂತ್ಯದಲ್ಲಿ ಅತ್ಯಂತ ಜನಪ್ರಿಯ ನಟ ಯಶ್ ಹೀಗಾಗಿ ಅವರ ಚಿತ್ರಗಳಿಗೆ ಹೆಚ್ಚಿನ ಡಿಮ್ಯಾಂಡ್ ಅಲ್ಲಿ ಕಂಡುಬರುತ್ತದೆ. ನಂತರ ನಂತರದ ಸ್ಥಾನದಲ್ಲಿ ಸಲ್ಮಾನ್ ಖಾನ್ ವಿರುದ್ಧ ತೊಡೆತಟ್ಟಿದ್ದ ಕಿಚ್ಚ ಸುದೀಪ್ ನಿಲ್ಲುತ್ತಾರೆ. ಸುದೀಪ್ ಅವರ 'ವಿಕ್ರಾಂತ್ ರೋಣ' ಬಗ್ಗೆ ಕೂಡ ಅಲ್ಲಿ ಜನ ನಿರೀಕ್ಷೆಗಳನ್ನು ಇಟ್ಟುಕೊಂಡು ಎದುರುನೋಡುತ್ತಿದ್ದಾರೆ. ದರ್ಶನ್ ಚಿತ್ರಗಳು ಕೂಡ ಸ್ಯಾಟಲೈಟ್ ಮತ್ತು ಯೂಟ್ಯೂಬಿನಲ್ಲಿ ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ ಹೀಗಾಗಿ ಅವರು ಕೂಡ ಸಾಕಷ್ಟು ಜನಪ್ರಿಯರಾಗಿದ್ದಾರೆ. ಆದರೆ ದರ್ಶನ್ ಅವರ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ಸನ್ನು ಕಂಡ ನಂತರ ಅವರ ಜನಪ್ರಿಯತೆ ನಿರ್ಧಾರವಾಗುತ್ತದೆ. ಸದ್ಯಕ್ಕೆ 'ಕ್ರಾಂತಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ದರ್ಶನ್.

    ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತ ಹೇಳಲಾಗುತ್ತಿದ್ದು ಇದು ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡರೆ ಭವಿಷ್ಯ ದರ್ಶನ್ ಅವರ ಪ್ರತಿ ಚಿತ್ರವೂ ಹಿಂದಿಯಲ್ಲಿ ಕೂಡ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿರುತ್ತದೆ. ಇನ್ನು ಧ್ರುವ ಸರ್ಜಾ ಅವರ 'ಮಾರ್ಟಿನ್' ಬಗ್ಗೆ ಒಳ್ಳೆ ಮಾತುಗಳು ಹಿಂದಿ ವಲಯದಲ್ಲಿ ಕೂಡ ಕೇಳಿ ಬರುತ್ತಿದೆ. ರಕ್ಷಿತ್ ಶೆಟ್ಟಿಯವರ 'ಚಾರ್ಲಿ' ಕೂಡ ನಿರೀಕ್ಷೆಗಳನ್ನು ಉಂಟುಮಾಡಿದೆ. ಶ್ರೀಮುರಳಿ ಅವರ ಮಾಸ್ ಇಮೇಜ್ ಕೂಡ ವರ್ಕೌಟ್ ಆಗುತ್ತದೆ. ಇವರಿಗೆಲ್ಲಾ ಬೇಕಾಗಿರುವುದು ಹಿಂದಿನಲ್ಲಿ ಒಂದು ದೊಡ್ಡ ಹಿಟ್. 'ಕೆಜಿಎಫ್-2'ಖಂಡಿತ ದೊಡ್ಡ ಯಶಸ್ಸು ಆಗುತ್ತೆ ಆದರೆ ಇದನ್ನು ಹೊರತಾಗಿ ಕೂಡ ಮತ್ತೊಂದು ದೊಡ್ಡ ಚಿತ್ರ ಬೇಕು. ಕೆಜಿಎಫ್ ಫ್ರಾಂಚೈಸಿ ಹೊರತಾದ ಮತ್ತೊಂದು ದೊಡ್ಡ ಡಬ್ಬಿಂಗ್ ಚಿತ್ರ ಕನ್ನಡದಿಂದ ಮೂಡಿ ಬಂದ ಮೇಲೆ ಕನ್ನಡ ಸಿನಿಮಾರಂಗ ಕೂಡ ಹಿಂದಿ ವಲಯದಲ್ಲಿ ಭಾರಿ ಡಿಮ್ಯಾಂಡ್ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ.

    ಕನ್ನಡ- ತಮಿಳು ಹೀರೋಗಳ ಪ್ಯಾನ್ ಇಂಡಿಯಾ ಸಿನಿಮಾಗಳು

    ಕನ್ನಡ- ತಮಿಳು ಹೀರೋಗಳ ಪ್ಯಾನ್ ಇಂಡಿಯಾ ಸಿನಿಮಾಗಳು

    ಡಬ್ಬಿಂಗ್ ಸಿನಿಮಾಗಳ ವಿಷಯಕ್ಕೆ ಬಂದರೆ ಈಗಲೂ ಕೂಡ ತೆಲುಗು ಚಿತ್ರಗಳಿಗೆ ಅಗ್ರಸ್ಥಾನ. ಇತರ ಸೌತ್ ಸಿನಿಮಾಗಳಿಗೆ ಕಂಪೇರ್ ಮಾಡಿದರೆ ತೆಲಗು ಹೀರೋಗಳು ಹಿಂದಿ ಬೆಲ್ಟ್ ನಲ್ಲಿ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದಾರೆ. ಹಾಗಂತ ಇತರ ಸಿನಿಮಾ ರಂಗಗಳ ಹೀರೋಗಳು ಜನಪ್ರಿಯರಲ್ಲ ಅಂತ ಹೇಳಲು ಬರುವುದಿಲ್ಲ. ಕನ್ನಡದ ಯಶ್ ಅವರಿಗೆ ಪ್ರಭಾಸ್, ಅಲ್ಲು ಅರ್ಜುನ್ ಇರುವಷ್ಟೇ ಜನಪ್ರಿಯತೆ ಹಿಂದಿ ಬೆಲ್ಟ್ ನಲ್ಲಿ ಇದೆ. ಅಲ್ಲದೆ ಕೆಜಿಎಫ್-2 ಅಲ್ಲಿನ ಜನ ಕೂಡ ಅತ್ಯಂತ ಹೆಚ್ಚಿನ ನಿರೀಕ್ಷೆಯಿಂದ ಎದುರು ನೋಡುತ್ತಿರುವ ಚಿತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ತೆಲುಗು ಸಿನಿಮಾಗಳಷ್ಟೇ ಅಲ್ಲ.

    ಕನ್ನಡ, ತಮಿಳು ಸಿನಿಮಾಗಳೂ ಹಿಂದಿ ಪ್ರೇಕ್ಷಕರನ್ನು ಒಂದು ರೇಂಜ್ ನಲ್ಲಿ ರಂಜಿಸುತ್ತಿವೆ. ಸದ್ಯ ಬಾಲಿವುಡ್ ನಲ್ಲಿ ದಕ್ಷಿಣ ಚಿತ್ರರಂಗದ ಯಾವುದೇ ಸಿನಿಮಾ ಬಂದರೂ ಸ್ವಾಗತಿಸುವ ಪರಿಸ್ಥಿತಿ ಇದೆ. ಅದಕ್ಕಾಗಿಯೇ ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳುವುದು ಎಲ್ಲಾ ಸಿನಿಮಾರಂಗದ ಖ್ಯಾತ ನಟರು ಎದುರುನೋಡುತ್ತಿದ್ದಾರೆ. ತಮಿಳು ನಟರ ಪೈಕಿ ಧನುಷ್ ತಕ್ಕಮಟ್ಟಿಗೆ ಈಗಾಗಲೇ ಹಿಂದಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವಿಜಯ್ ಇತರ ತಮಿಳು ಹೀರೋಗಳಿಗೆ ಹೋಲಿಸಿದರೆ ಹಿಂದಿ ನಲ್ಲಿ ಜನಪ್ರಿಯರಾಗಿದ್ದಾರೆ. ಇನ್ನು ಸೂರ್ಯ- ಅಜಿತ್- ವಿಕ್ರಂ ಚಿತ್ರಗಳು ತಕ್ಕಮಟ್ಟಿಗೆ ಅಲ್ಲಿ ಡಿಮ್ಯಾಂಡ್ ಇದೆ.

    ಕಾಲಿವುಡ್‌ನಲ್ಲೂ ತಯಾರಾಗುತ್ತಿದೆ ಪ್ಯಾನ್ ಇಂಡಿಯಾ ಸಿನಿಮಾಗಳು

    ಕಾಲಿವುಡ್‌ನಲ್ಲೂ ತಯಾರಾಗುತ್ತಿದೆ ಪ್ಯಾನ್ ಇಂಡಿಯಾ ಸಿನಿಮಾಗಳು

    ಮೊದಲಿನಿಂದಲೂ ಸೌತ್ ಸಿನಿಮಾಗಳಲ್ಲಿ ತಮಿಳು ಚಿತ್ರರಂಗವೇ ಅಗ್ರಸ್ಥಾನದಲ್ಲಿದ್ದು. ಮಣಿರತ್ನಂ ಮೇಕಿಂಗ್, ಶಂಕರ್ ಅವರ ಟೆಕ್ನೋಲಜಿ ಕಮಲ್ ಹಾಸನ್ ಆಕ್ಟಿಂಗ್, ರಜನಿಕಾಂತ್ ಮೇನಿಯಾ, ಪ್ರಭುದೇವ ಡ್ಯಾನ್ಸಿಂಗ್, ಎ. ಆರ್ .ರೆಹಮಾನ್ ಅವರ ಸಂಗೀತ ಇದೆಲ್ಲಾ ಭಾರತವನ್ನೇ ಗಮನ ಸೆಳೆಯುತ್ತಿದ್ದ ಸಂಗತಿಗಳಾಗಿತ್ತು. ಆದರೆ ಯಾಕೋ ಇತ್ತೀಚಿನ ದಿನಗಳಲ್ಲಿ ತಮಿಳು ಚಿತ್ರರಂಗ ಆ ಸ್ಥಾನವನ್ನು ಕಳೆದುಕೊಂಡಿದೆ. ಮತ್ತೆ ಭಾರತದ ಮಟ್ಟದಲ್ಲಿ ಸುದ್ದಿಯಾಗಲು ಕಾಲಿವುಡ್ ಕೂಡ ಸಜ್ಜಾಗುತ್ತಿದೆ. ಕಾಲಿವುಡ್ ನಲ್ಲಿ ಮಣಿರತ್ನಂ ನಿರ್ದೇಶನದಲ್ಲಿ 'ಪೊನ್ನಿಯನ್ ಸೆಲ್ವನ್' ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಕಾಣುತ್ತಿದೆ. ಬಾಹುಬಲಿ ರೇಂಜ್‌ನಲ್ಲಿ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ವಿಕ್ರಮ್ ಮತ್ತು ಐಶ್ವರ್ಯ ರೈ ಪ್ರಮುಖ ಪಾತ್ರದಲ್ಲಿ ಬರುತ್ತಿದ್ದಾರೆ.

    'ಪೊನ್ನಿಯನ್ ಸೆಲ್ವನ್' ಟಾರ್ಗೆಟ್ ಕೂಡ ಬಾಲಿವುಡ್ ಮೇಲೆ ದಂಡಯಾತ್ರೆ ಮಾಡುವುದೇ ಆಗಿದೆ. ಕಮಲ್ ಹಾಸನ್ ನಾಯಕನಾಗಿ ಇಂಡಿಯನ್ ಸಿನಿಮಾದ ಸೀಕ್ವೆಲ್ ಆಗಿ ಬರುತ್ತಿರುವ 'ಇಂಡಿಯನ್- 2' ಬಾಲಿವುಡ್ ನಲ್ಲೂ ಸದ್ದು ಮಾಡಲಿದೆ. ಕಾಲಿವುಡ್ ಸ್ಟಾರ್ ಹೀರೋ ಸೂರ್ಯ 'ಈಟಿ' ಚಿತ್ರದ ಮೂಲಕ ಹಿಂದಿ ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದ್ದಾರೆ. ಸೂರ್ಯ ಪವರ್ ಫುಲ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ನಟಿಸಿರುವ 'ಈಟಿ' ಮೇಲೆ ಸೂರ್ಯ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಟ್ಟಾರೆ ಬಾಲಿವುಡ್ ಚಿತ್ರರಂಗದಲ್ಲಿ ದಕ್ಷಿಣ ಚಿತ್ರರಂಗದ ವಾತಾವರಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹಿಂದಿ ಪ್ರೇಕ್ಷಕರು ಸೌತ್ ಸಿನಿಮಾಗಳ ಜನಪ್ರಿಯತೆಯನ್ನು ದ್ವಿಗುಣಗೊಳಿಸುತ್ತಿದ್ದಾರೆ.

    English summary
    Telugu movies are ruling Bollywood right now. Kannada and Tamil will soon dominant Bollywood. The line between north and south is disappearing, the combined Indian film industry has become internationally acclaimed.
    Wednesday, January 26, 2022, 17:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X