twitter
    For Quick Alerts
    ALLOW NOTIFICATIONS  
    For Daily Alerts

    ಥ್ಯಾನೋಸ್‌ನ ಚಿಟಿಕೆ ಮತ್ತು ಕೊರೊನಾ

    |

    ಥ್ಯಾನೋಸ್‌ ಕೈ ಬೆರಳಿನ ಒಂದು ಚಿಟಿಕೆಯಿಂದ ಪ್ರಪಂಚದ ಅರ್ಧದಷ್ಟು ಜನ ನಿಂತ ನಿಲುವಿನಲ್ಲೇ ಗಾಳಿಯಲ್ಲಿ ಸೇರಿಹೋಗಿಬಿಡುತ್ತಾರೆ. ತೋಳ ತೆಕ್ಕೆಯಲ್ಲಿದ್ದ ಗೆಳತಿ, ಕೈ ಹಿಡಿದಿದ್ದ ಗೆಳೆಯ, ಅಪ್ಪ-ಅಮ್ಮ, ಅಕ್ಕ-ತಂಗಿ ನಿಂತಲ್ಲೆ ಒಣಗಿ ಗಾಳಿಗೆ ಹಾರಿಹೋಗಿಬಿಡುತ್ತಾರೆ.

    ಮಾರ್ವೆಲ್‌ನ 'ಅವೆಂಜರ್ಸ್‌; ಇನ್‌ಫಿನಿಟಿ ವಾರ್‌' ಸಿನಿಮಾದ ದೃಶ್ಯವಿದು. ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿ ಇಂದಿಗೆ ಸರಿಯಾಗಿ ಮೂರು ವರ್ಷ. ಕೊರೊನಾದ ಸಮಯದಲ್ಲಿ ಥಾನ್ಯೋಸ್‌ನ ಚಿಟಿಕೆ ಇನ್ನಿಲ್ಲದಂತೆ ನೆನಪಾಗುತ್ತಿದೆ.

    ವಾಟ್ಸ್‌ಅಪ್, ಫೇಸ್‌ಬುಕ್, ಟ್ವಿಟ್ಟರ್‌ ತುಂಬೆಲ್ಲ ಸಾವಿನದ್ದೇ ಸುದ್ದಿ. ನೆರೆ-ಹೊರೆಯವರು, ಸ್ನೇಹಿತರು, ಜೊತೆಯಲ್ಲಿ ಕೆಲಸ ಮಾಡಿದವರು, ಕುಟುಂಬದವರು, ತೆರೆ ಮೇಲೆ ನೋಡಿ ಸಂಭ್ರಮಿಸಿದ್ದ ಸಿನಿತಾರೆಯರು, ಮೆಚ್ಚಿದ್ದ ರಾಜಕಾರಣಿಗಳು ಕಣ್ಣಿಗೆ ಕಾಣದ ವೈರಾಣುಗೆ ಜೀವಗಳು ತರಗೆಲೆಗಳಂತೆ ಹಾರಿಹೋಗುತ್ತಿವೆ. ಥ್ಯಾನೋಸ್ ಎಲ್ಲೊ ನಿಂತು ಚಿಟಿಕೆ ಹೊಡೆದುಬಿಟ್ಟಿದ್ದಾನೇನೋ ಎನಿಸುತ್ತಿದೆ.

    ಇವ್ಯಾವೂ ಸಿನಿಮಾದ ದೃಶ್ಯಗಳಲ್ಲ

    ಇವ್ಯಾವೂ ಸಿನಿಮಾದ ದೃಶ್ಯಗಳಲ್ಲ

    ಅಪ್ಪನ ಸ್ಟ್ರೆಚರ್‌ ತಳ್ಳುತ್ತಿರುವ ಪುಟ್ಟ ಕಂದಮ್ಮ. ಉಸಿರಾಡಲು ಹೆಣಗುತ್ತಿರುವ ಅಮ್ಮನನ್ನು ಎಬ್ಬಿಸಲು ಜೋರಾಗಿ ಚೀರುವ ಮಗಳು, ಆಕ್ಸಿಜನ್ ಸಿಲಿಂಡರ್ ಹಿಡಿದು ರಸ್ತೆಯಲ್ಲಿ ಮಲಗಿದ ರೋಗಿಗಳು, ಚಿತಾಗಾರದ ಮುಂದೆ ಸಾಲು-ಸಾಲು ಹೆಣಗಳು, ಸತ್ತವರ ಸಾಮೂಹಿಕ ಅಂತ್ಯಕ್ರಿಯೆ ಇದ್ಯಾವುದು ಸಿನಿಮಾದ ದೃಶ್ಯಗಳೇನೋ ಎನಿಸುತ್ತದೆ. ದುರಾದೃಷ್ಟಕ್ಕೆ ಇವೆಲ್ಲವೂ ಸತ್ಯ.

    ವೆಚ್ಚ ಭರಿಸಲಾಗದೆ ಮನೆಯಲ್ಲಿ ಉಸಿರುಬಿಟ್ಟವರ ಮಾಹಿತಿ ಇಲ್ಲ

    ವೆಚ್ಚ ಭರಿಸಲಾಗದೆ ಮನೆಯಲ್ಲಿ ಉಸಿರುಬಿಟ್ಟವರ ಮಾಹಿತಿ ಇಲ್ಲ

    ಸರ್ಕಾರ ಕೊಡುವ ಮಾಹಿತಿಯಂತೆ ಕೊರೊನಾಕ್ಕೆ ಈವರೆಗೆ ಸುಮಾರು 2 ಲಕ್ಷ ಜನ ಭಾರತವೊಂದರಲ್ಲೇ ನಿಧನ ಹೊಂದಿದ್ದಾರೆ. ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಆಸ್ಪತ್ರೆಯ ಬಿಲ್ಲುಗಳಿಗೆ ಹೆದರಿ, ಕಾಳಮಾರುಕಟ್ಟೆಯಲ್ಲಿ ರೆಮ್‌ಡಿಸಿವಿರ್‌ ಕೊಳ್ಳಲಾಗದೆ, ಆಮ್ಲಜನಕ ಸಿಲಿಂಡರುಗಳು ಕೊಳ್ಳಲು ಹಣವಿಲ್ಲದೆ ಮನೆಯಲ್ಲೇ ಕಣ್ಣೀರು ಹಾಕುತ್ತಾ ಕೊನೆ ಉಸಿರೆಳೆದ ಸಂಖ್ಯೆ ಸರ್ಕಾರಕ್ಕೆ ಗೊತ್ತಿಲ್ಲ.

    ಒಮ್ಮೆ ಹೋದವರನ್ನು ಮತ್ತೆ ತರಲಾಗದು

    ಒಮ್ಮೆ ಹೋದವರನ್ನು ಮತ್ತೆ ತರಲಾಗದು

    ಮತ್ತೆ ಥ್ಯಾನೋಸ್‌ ವಿಷಯಕ್ಕೆ ಬರೋಣ. ಥ್ಯಾನೋಸ್‌ ಹೊಡೆದ ಚಿಟಿಕೆಯಿಂದ ಲೋಕದಿಂದ ಕಣ್ಮರೆ ಆದವರನ್ನು ಅತಿಮಾನುಷ ಶಕ್ತಿಯುಳ್ಳ ಅವೆಂಜರ್ಸ್‌ಗಳು 'ಅವೆಂಜರ್ಸ್‌; ಎಂಡ್‌ ಗೇಮ್' ಸಿನಿಮಾದಲ್ಲಿ ವಾಪಸ್ ಭೂಮಿಗೆ ತರುತ್ತಾರೆ. ಆದರೆ ಇದು ನಿಜ ಜೀವನ, ಇಲ್ಲಿ ಒಮ್ಮೆ ಹೋದವರನ್ನು ಮರಳಿ ಭೂಮಿಗೆ ತರಲಾಗದು.

    ಅವೆಂಜರ್ಸ್‌ ಒಗ್ಗಟ್ಟು ನಮಗೆ ಪಾಠವಾಗಲಿ

    ಅವೆಂಜರ್ಸ್‌ ಒಗ್ಗಟ್ಟು ನಮಗೆ ಪಾಠವಾಗಲಿ

    ನಮಗೆ ಉಳಿದಿರುವ ಆಯ್ಕೆ ಒಂದೇ ವೈರಾಣುವಿನ ಹಿಡಿತಕ್ಕೆ ಸಿಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಸರ್ಕಾರ ನೀಡುತ್ತಿರುವ ಲಸಿಕೆಯನ್ನು ತೆಗೆದುಕೊಳ್ಳುವುದು. ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು. ಇವಿಷ್ಟೆ ನಮ್ಮನ್ನು ವೈರಾಣುವಿನಿಂದ ಕಾಪಾಡಬಲ್ಲದು. ಸಿನಿಮಾ ಇತಿಹಾಸದ ಅತ್ಯಂತ ಶಕ್ತಿಶಾಲಿ ವಿಲನ್ ಎಂದೇ ಖ್ಯಾತವಾಗಿರುವ ಥ್ಯಾನೋಸ್‌ ವಿರುದ್ಧ ಅವೆಂಜರ್ಸ್‌ಗಳು ಒಗ್ಗಟ್ಟಾಗಿ ಹೋರಾಡಿದ ಕಾರಣಕ್ಕಷ್ಟೆ ಗೆದ್ದರು. ನಾವೂ ಸಹ ಈ ವೈರಾಣುವಿನ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ.

    English summary
    Thanos whipped out half of the world by snapping his finger. Due to coronavirus people are dying as never seen before.
    Tuesday, April 27, 2021, 19:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X