ಎಲ್ಲಾ ಶಾಸ್ತ್ರ ಮುಗೀತಾ ಎಂದು ಅನುಶ್ರೀ ಪ್ರಶ್ನೆ; ತರುಣ್- ಸೋನಲ್ ಉತ್ತರ ಏನು?

By ಫಿಲ್ಮಿಬೀಟ್ ಡೆಸ್ಕ್

ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನನ್ ಮಂಥೆರೋ ಇತ್ತೀಚೆಗೆ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಬಹಳ ಅದ್ಧೂರಿಯಾಗಿ ಇಬ್ಬರ ಮದುವೆ ನಡೆಯಿತು. ಕನ್ನಡ ಚಿತ್ರರಂಗದ ಸಾಕಷ್ಟು ನಟ- ನಟಿ, ತಂತ್ರಜ್ಞರು ಮದುವೆ ಸಮಾರಂಭದಲ್ಲಿ ಭಾಗಿ ಆಗಿ ನವಜೋಡಿಗೆ ಶುಭ ಹಾರೈಸಿದ್ದರು.

ಮದುವೆ ಬಳಿಕ ಕಿರುತೆರೆ ಕಾರ್ಯಕ್ರಮಗಳಲ್ಲಿ ತರುಣ್- ಸೋನಲ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹೊಸ ಜೋಡಿಯ ಮದುವೆ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇಯಿದೆ. 'ರಾಬರ್ಟ್' ಸಿನಿಮಾ ಸಮಯದಲ್ಲಿ ಶುರುವಾದ ಪರಿಚಯ ಈಗ ಮದುವೆವರೆಗೂ ಬಂದು ತಲುಪಿದೆ. ಪರಸ್ಪರ ಪ್ರೀತಿಸಿ ಇಬ್ಬರು ಹಸೆಮಣೆ ಏರಿದ್ದಾರೆ.

Tharun Sudhir and Sonal Monteiro open up about their honeymoon pla

ಇತ್ತೀಚೆಗೆ ತರುಣ್- ಸೋನಲ್ ಜೋಡಿ ಡಿಕೆಡಿ ಶೋನಲ್ಲಿ ಭಾಗಿ ಆಗಿದ್ದರು. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಇದೀಗ ಅನುಶ್ರೀ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ದಂಪತಿ ಭಾಗಿ ಆಗಿ ಮಾತನಾಡಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಹನಿಮೂನ್ ಹೋಗುವ ಬಗ್ಗೆಯೂ ಪ್ರಶ್ನೆಗಳು ಎದುರಾಗಿದೆ.

ತರುಣ್- ಸೋನಲ್ ಲವ್‌ಸ್ಟೋರಿ ಹೆಸರಿನ ಯೂಟ್ಯೂಬ್ ಚಾನಲ್ ಕಾರ್ಯಕ್ರಮದಲ್ಲಿ ಅನುಶ್ರೀ ಸಾಕಷ್ಟು ಕಲರ್‌ಫುಲ್ ಮೊಮೆಂಟ್ಸ್ ಇವೆ. ಈವರೆಗೆ ಹೇಳದ ಸಂಗತಿಗಳನ್ನು ಇಬ್ಬರೂ ಬಿಚ್ಚಿಟ್ಟಿದ್ದಾರೆ. 'ರಾಬರ್ಟ್' ಸಿನಿಮಾ ಆಡಿಷನ್‌ಗೂ ಮುನ್ನ ಹಾಸ್ಯನಟ ಚಿಕ್ಕಣ್ಣ ಮನೆ ಬಳಿ ಭೇಟಿ ಆಗಿದ್ದರ ಬಗ್ಗೆಯೂ ಇಬ್ಬರೂ ಮಾತನಾಡಿದ್ದಾರೆ. ಅದೇ ನಮ್ಮ ಮೊದಲ ಭೇಟಿ ಎಂದಿದ್ದಾರೆ.

Tharun Sudhir and Sonal Monteiro open up about their honeymoon pla

ಕಾರ್ಯಕ್ರಮದ ಆರಂಭದಲ್ಲೇ ಅನುಶ್ರೀ ನವಜೋಡಿಗೆ ಮತ್ತೊಮ್ಮೆ ಮದುವೆ ಶುಭಾಶಯ ಕೋರಿದ್ದಾರೆ. ತರುಣ್ ಈಗ ನಮ್ಮ ಮಂಗಳೂರು ಅಳಿಯ ಎಂದು ಅನುಶ್ರೀ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಎಲ್ಲಾ ಶಾಸ್ತ್ರ ಮುಗೀತಾ? ಎಂದು ಪ್ರಶ್ನೆ ಕೇಳಿದ್ದಾರೆ. ತರುಣ್ ಸಹಜವಾಗಿಯೇ ಎಲ್ಲಾ ಮುಗೀತು, ಮಂಗಳೂರಿನಲ್ಲಿ ಒಂದು ರಿಸೆಪ್ಷನ್ ಪಾರ್ಟಿ ಇದೆ ಎಂದು ಹೇಳಿದ್ದಾರೆ.

ಈ ಮಾತುಕತೆ ಪ್ರೋಮೊ ರಿಲೀಸ್ ಆದಾಗಲೇ ವೈರಲ್ ಆಗಿತ್ತು. ಇದೀಗ ಕಂಪ್ಲೀಟ್ ಸಂದರ್ಶನದ ವೀಡಿಯೋ ಅಪ್‌ಲೋಡ್ ಆಗಿದೆ. ತರುಣ್ ಮಾತಿಗೆ ಸುಮ್ಮನಾಗದ ಅನುಶ್ರೀ ನಗುತ್ತಲೇ ಎಲ್ಲಾ ಶಾಸ್ತ್ರ ಮುಗೀತಾ? ಎಂದು ಮತ್ತೆ ಕೇಳಿದ್ದಾರೆ. ಕೂಡಲೇ ತರುಣ್- ಸೋನಲ್ ನಾಚುತ್ತಾ ಜೋರಾಗಿ ನಕ್ಕಿದ್ದಾರೆ. ಮಂಗಳೂರು ರಿಸೆಪ್ಷನ್ ಈವೆಂಟ್ ಬಹಳ ಮುಖ್ಯ ಎಂದು ತರುಣ್ ಸುಧೀರ್ ಎಂದಾಗ ಮೂವರ ನಗು ನೂರ್ಮಡಿಸಿತ್ತು.

ಮಾತು ಮುಂದುವರೆಸಿರುವ ಅನುಶ್ರೀ ಬಳಿಕ ಹನಿಮೂನ್ ಪ್ಲ್ಯಾನ್ ಆಗಿದ್ಯಾ? ಎಲ್ಲಿಗೆ? ಎಂದು ಮತ್ತೊಂದು ಪ್ರಶ್ನೆ ಮುಂದಿಟ್ಟಿದ್ದಾರೆ. ಯಾರ ಪ್ಲ್ಯಾನ್ ಎಂದಾಗ ಎಲ್ಲಾ ಸೋನಲ್ ಅವ್ರದ್ದು. ನಾನು ಚಿತ್ರೀಕರಣಕ್ಕಾಗಿ ಈಗಾಗಲೇ ಸಾಕಷ್ಟು ದೇಶಗಳಿಗೆ ಹೋಗಿಬಂದಿದ್ದೇನೆ. ಆದರೆ ಅದೊಂದು ಜಾಗಕ್ಕೆ ಮದುವೆ ಬಳಿಕ ಹೋಗಬೇಕು ಎಂದುಕೊಂಡಿದ್ದೆ. ಅದು ಮಾಲ್ಡೀವ್ಸ್. ಅದನ್ನು ಸೋನಲ್‌ಗೆ ಹೇಳಿದಾಗ ಆಕೆ ಕೂಡ ಒಪ್ಪಿಕೊಂಡರು ಎಂದು ಹೇಳಿದ್ದಾರೆ.

'ರಾಬರ್ಟ್' ಸಿನಿಮಾ ಆಡಿಷನ್‌ ವೇಳೆ ಮೊದಲಿಗೆ ನಾನು- ಸೋನಲ್ ಭೇಟಿ ಮಾಡಿದ್ದು ಎಂದು ಹೇಳಿದ್ದಾರೆ. ಬಳಿಕ ಅದಕ್ಕೂ ಮುಂಚೆ ಒಮ್ಮೆ ನಟ ಚಿಕ್ಕಣ್ಣ ಫ್ಲಾಟ್ ಹುಡುಕಿ ಹೋದಾಗ ಸೋನಲ್ ಸಿಕ್ಕಿದ್ದರು ಎಂದಿದ್ದಾರೆ. ಚಿಕ್ಕಣ್ಣ ಆಗ ಫ್ಲಾಟ್ ಖಾಲಿ ಮಾಡಿದ್ದರು. ಆ ಮನೆಗೆ ಸೋನಲ್ ಬಾಡಿಗೆಗೆ ಹೋಗಿದ್ದರು. ನನಗೆ ಗೊತ್ತಿರಲಿಲ್ಲ.

ಆ ಮನೆ ಬಳಿ ಹೋದಾಗ ಸೋನಲ್ ಅವರ ತಾಯಿ ಜೊತೆ ನಾಯಿ ಹಿಡಿದು ರೋಡಲ್ಲಿ ನಿಂತಿದ್ದರು. ನನಗೆ ತರುಣ್ ಯಾರು ಎಂದು ಗೊತ್ತಿತ್ತು. ಆದರೆ ನಾನು ಆಗ ಇನ್ನು ಹೆಚ್ಚು ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಹಾಗಾಗಿ ನನ್ನ ಪರಿಚಯ ತರುಣ್‌ ಅವರಿಗೆ ಇರಲಿಲ್ಲ. ಅಲ್ಲಿ ಚಿಕ್ಕಣ್ಣ ಮನೆ ಹುಡುಕುತ್ತಿದ್ದ ತರುಣ್‌ಗೆ ಪಕ್ಕದ ರೋಡಿಗೆ ಹೋಗಬೇಕು ಎಂದು ಹೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ.

More from Filmibeat

English summary
Tharun Sudhir and Sonal Monteiro talked about their love story in Anushree Anchor interview;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X