ತನ್ನ ಮಗಳ ಅರೆಬೆತ್ತಲೆ ಫೋಟೊ ನೋಡಿ ಶಾಕ್ ಆದ ತಾಯಿ ಆ ನಂತರ ಮಾಡಿದ್ದೇನು..?
ಮೊದಲೆಲ್ಲಾ ಚಿತ್ರರಂಗ ಅಂದರೆ ಅರೇ, ಅಲ್ಲಿ ನಮ್ಮಂತೋರು ಎಲ್ಲಿ ಬದುಕೋಕಾಗುತ್ತೆ, ದುಡ್ಡಿದ್ದವರಿಗೆ ಮಾತ್ರ ಅದು ಹೇಳಿ ಮಾಡಿಸಿದ ಪ್ರೊಫೆಷನ್ ಎಂದು ಅನೇಕರು ಹೇಳುತ್ತಿದ್ದರು. ಇಂತಹ ಹುಚ್ಚು ಆಲೋಚನೆಯನ್ನು ತಲೆಯಿಂದ ತೆಗೆದು ಹಾಕು ಎಂದು ತಮ್ಮ ಮಕ್ಕಳಿಗೆ ಹಿರಿಯರು ಹೇಳುತ್ತಿದ್ದರು.
ಇನ್ನು, ಹೆಣ್ಣು ಮಕ್ಕಳ ಪಾಲಿಗಂತೂ ಚಿತ್ರರಂಗ ಎನ್ನುವುದು ಗಗನ ಕುಸುಮವಾಗಿತ್ತು. ಚಿತ್ರರಂಗ ಹೆಣ್ಣು ಮಕ್ಕಳಿಗೆ ಸುರಕ್ಷಿತವಾದ ಸ್ಥಳವಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಅವಕಾಶ ನೀಡುವ ನೆಪದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಾರೆ ಎಂದೇ ಅನೇಕರು ಅಂದುಕೊಂಡಿದ್ದರು. ಇಂತಹ ಕಾಲದಲ್ಲಿ ಚಿತ್ರರಂಗಕ್ಕೆ ನಾಯಕಿಯಾಗಿ ಪ್ರವೇಶಿಸುವುದಲ್ಲದೇ, ಈಗಿನಂತೆ ಬೋಲ್ಡ್ ಫೋಟೊಶೂಟ್ ಮಾಡಿಸಿದರೆ ಹೇಗಿರಬೇಡ..?

ಹೌದು, ಅದು 1988. ಆ ಕಾಲದಲ್ಲಿ ಯಶ್ ಚೋಪ್ರಾ ಬಹುತಾರಾಗಣದ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಆ ಚಿತ್ರದ ಹೆಸರು ವಿಜಯ್. ಅನಿಲ್ ಕಪೂರ್, ರಿಶಿ ಕಪೂರ್, ರಾಜೇಶ್ ಖನ್ನಾ, ಹೇಮಾ ಮಾಲಿನಿ, ಮೀನಾಕ್ಷಿ ಶೇಷಾದ್ರಿ ಅವರನ್ನೊಳಗೊಂಡ ಈ ಚಿತ್ರದಲ್ಲಿ ಸೋನಮ್ ಕೂಡ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಆ ನಂತರ ಅಜೂಬಾ ಮತ್ತು ತ್ರಿದೇವ್ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಇವರ ತಿರ್ಚಿ ಟೋಪಿವಾಲೆ ಹಾಡು ಇವತ್ತು ಕೂಡ ಫೇಮಸ್.
ಇಂಥಾ ಸೋನಮ್ ಇತ್ತೀಚೆಗೆ ತಮ್ಮ ಬದುಕಿನ ವಿಶೇಷ ಪ್ರಸಂಗವನ್ನು ನೆನಪು ಮಾಡಿಕೊಂಡಿದ್ದಾರೆ. ಆ ಕಾಲದಲ್ಲಿ ತಾವು ಮಾಡಿಸಿಕೊಂಡಿದ್ದ ಬೋಲ್ಡ್ ಫೋಟೊ ಶೂಟ್ ಹಂಚಿಕೊಂಡು ಮನೆಯವರ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ವಿವರಿಸಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಸೋನಮ್ ಈ ಫೋಟೊಗಳನ್ನು ನೋಡಿದ ನಂತರ ನನ್ನ ತಾಯಿ ನನಗೆ ಕಪಾಳಮೋಕ್ಷ ಮಾಡಿದ್ದರು ಎಂದಿದ್ದಾರೆ.
ನಾನು ಆಗ ಚರ್ಮದ ಬಣ್ಣ ಇರುವ ಡ್ರೆಸ್ ಹಾಕಿಕೊಂಡು, ಹುಲ್ಲು ಎತ್ತರವಾಗಿ ಬೆಳೆದ ಸ್ಥಳದಲ್ಲಿ ಕುಳಿತು ಮ್ಯಾಗ್‌ಜೀನ್‌ನ ಕವರ್ ಪೇಜ್‌ಗೆ ಫೋಟೊಶೂಟ್ ಮಾಡಿಸಿದ್ದೆ. ಆದರೆ ನಾವೆಷ್ಟೇ ಮುಂದುವರೆದರು, ಬೋಲ್ಡ್ ಆದರೂ, ಹೆತ್ತವರು ಸಂಪ್ರದಾಯಕ್ಕೆ ಬದ್ದರಾಗಿರುತ್ತಾರೆ. ಹೀಗಾಗಿಯೇ ಮ್ಯಾಗ್‌ಜೀನ್ ಮಾರುಕಟ್ಟೆಗೆ ಬಂದಾಗ ಅದನ್ನು ಕೈಯಲ್ಲಿ ಹಿಡಿದುಕೊಂಡು ಬಂದ ನನ್ನ ಅಮ್ಮ ನನ್ನ ಕೆನ್ನೆಗೆ ಬಾರಿಸಿದ್ದರು, ನನ್ನ ಕಣ್ಣೇದುರು ಆ ಮ್ಯಾಗ್‌ಜೀನ್‌ನ ಹರಿದು ಹಾಕಿದರು ಎಂದು ಆ ಫೋಟೊಗಳನ್ನು ಹಂಚಿಕೊಂಡು ಅಂದಿನ ದಿನಗಳನ್ನು ಸೋನಮ್ ಖಾನ್ ನೆನಪು ಮಾಡಿಕೊಂಡಿದ್ದಾರೆ.
ಅಂದ್ಹಾಗೇ ವಿಶ್ವಾತ್ಮಾ, ತ್ರಿದೇವ್ ಸೇರಿ ಸರಿ ಸುಮಾರು 35 ಚಿತ್ರಗಳಲ್ಲಿ ಅಭಿನಯಿಸಿರುವ ಸೋನಮ್, ತೆಲುಗು ಚಿತ್ರರಂಗದಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಮೋಹನ್ ಬಾಬು ಮತ್ತು ಚಿರಂಜೀವಿ ಜೊತೆ ನಟಿಸಿದ್ದರು. ಇನ್ನು, ಖ್ಯಾತಿಯ ತುತ್ತ ತುದಿಯಲ್ಲಿದ್ದಾಗಲೇ ತನಗಿಂತ 17 ವರ್ಷ ಹಿರಿಯರಾಗಿದ್ದ ನಿರ್ದೇಶಕ ರಾಜೀವ್ ರೈ ಅವರ ಜೊತೆ ಮದುವೆಯಾದರು. ಆದರೆ ಈ ಸಂಬಂಧ ಕೇವಲ ಹತ್ತು ವರ್ಷಗಳಲ್ಲಿ ಮುರಿದು ಬಿತ್ತು. ಅಲ್ಲಿಂದ ಬಾಲಿವುಡ್‌ನಿಂದ ದೂರವೇ ಉಳಿದಿರುವ ಸೋನಂ ಖಾನ್ ಸದ್ಯ ವಿದೇಶದಲ್ಲಿಯೇ ಬದುಕು ನಿರೂಪಿಸಿಕೊಂಡಿದ್ದರು. 2020ರಲ್ಲಿ ತಮ್ಮ ಮಗನ ಜೊತೆ ಯುರೋಪ್‌ದಿಂದ ಭಾರತಕ್ಕೆ ಮರಳಿದ ಸೋನಂ ಸದ್ಯ ಮುಂಬೈನಲ್ಲಿ ವಾಸ ಮಾಡುತ್ತಿದ್ದಾರೆ. ಬಾಲಿವುಡ್‌ಗೆ ಮರಳಿ ಬರುವ ಪ್ರಯತ್ನವನ್ನು ಮಾಡುತ್ತಿದ್ದಾರೆ.


Click it and Unblock the Notifications











