'ಕುಡಿದು ಕುಡಿದೇ ಹಾಳಾದೇ' ; ಪಶ್ಚಾತಾಪದ ಬೇಗೆಯಲ್ಲಿ ಎಲ್ಲರೆದುರು ಕಣ್ಣೀರಾಗಿದ್ದರು ದಂತಕತೆ ಧರ್ಮೇಂದ್ರ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೂ ಕೂಡ ಅಮಲಿನಲ್ಲಿ ಅನೇಕರು ತೇಲುತ್ತಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಇನ್ನು, ಚಿತ್ರರಂಗದಲ್ಲಿ ಕೂಡ ಅನೇಕರು ದೇಹದ ದಣಿವು ನೀಗಿಸಲು ಎಣ್ಣೆ ಹೊಡೆಯುತ್ತಾರೆ. ಸಂಪೂರ್ಣ ಬಾಟಲಿ ಖಾಲಿ ಮಾಡದಿದ್ದರೂ ಒಂದೆರಡು ಪೆಗ್ ಆದರೂ ಕೂಡ ಹೊಡೆದೆ ಹೊಡೆಯುತ್ತಾರೆ. ಈ ಪೈಕಿ ಒಬ್ಬರಾಗಿದ್ದವರು ಭಾರತೀಯ ಚಿತ್ರರಂಗದ ದಂತಕತೆ ಧರ್ಮೇಂದ್ರ.

ಹೌದು, ಧರ್ಮೇಂದ್ರ.. ಅಂದಕಾಲತ್ತಿಲ್ ಹೆಂಗಳೆಯರ ಪಾಲಿನ ಆರಾಧ್ಯ ದೈವ. ಹೇಮಾ ಮಾಲಿನಿ ಪಡ್ಡೆ ಹುಡುಗರ ಪಾಲಿಗೆ ಕನಸಿನ ಕನ್ಯೆಯಾಗಿದ್ದರೆ ಹುಡುಗಿಯರ ಪಾಲಿಗೆ ಕನಸಿನ ರಾಜಕುಮಾರನಾಗಿದ್ದರು ಧರ್ಮೇಂದ್ರ.

The He-Man s Heartbreak Dharmendra Who Confessed I Destroyed Myself Finds Final Peace

''ಶೋಲೆ''.. ''ಮೇರಾ ಗಾವ್ ಮೇರಾ ದೇಶ್''.. ''ಧರ್ಮ ವೀರ್''.. ''ಪ್ರತಿಗ್ಯಾ''.. ''ಇನ್ಸಾನಿಯತ್ ಕೆ ದುಷ್ಮನ್''.. ''ಅನುಪಮಾ''.. ''ಬಂಧಿನಿ''.. ''ಫೂಲ್ ಔರ್ ಪತ್ಥರ್''.. ''ಲೋಹಾ''.. ''ದಾದಾಗಿರಿ''.. ''ಹುಕುಮತ್''.. ''ಖತ್ರೋನ್ ಕೆ ಖಿಲಾಡಿ''.. ''ದಿ ಬರ್ನಿಂಗ್ ಟ್ರೈನ್''.. ''ಡ್ರೀಮ್ ಗರ್ಲ್''..

ಹೀಗೆ ತಮ್ಮ ಜೀವಿತಾವಧಿಯಲ್ಲಿ ನಾಯಕನಾಗಿ 200ಕ್ಕೂ ಅಧಿಕ ಚಿತ್ರಗಳಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಧರ್ಮೇಂದ್ರ ಒಟ್ಟಾರೆ ಅಭಿನಯಿಸಿರುವ ಚಿತ್ರಗಳ ಸಂಖ್ಯೆ 300ಕ್ಕೂ ಹೆಚ್ಚು. ಇಂಥಾ ಧರ್ಮೇಂದ್ರ ಹಿಂದೊಮ್ಮೆ ತಮಗೆ ಇದ್ದ ಕುಡಿತದ ಚಟದ ಕುರಿತು ಮಾತನಾಡಿದ್ದರು. ಮಾತನಾಡುತ್ತಾ ಕುಡಿದು ಕುಡಿದೇ ಹಾಳಾದೆ ಎಂದು ಕಣ್ಣೀರು ಹಾಕಿದ್ದರು.

ಹೌದು ಅದು 2010-11ರ ಸಮಯ. ತಮ್ಮ ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಜೊತೆ ಧರ್ಮೇಂದ್ರ ಯಮಲಾ ಪಗಲಾ ದಿವಾನಾ ಚಿತ್ರವನ್ನು ಮಾಡಿದ್ದರು. ನಂತರ ''ಯಮಲಾ ಪಗಲಾ ದಿವಾನಾ 2'' ಚಿತ್ರವನ್ನೂ ಕೂಡ ಮುಂದಿನ ಮೂರು ನಾಲ್ಕು ವರ್ಷಗಳ ಅಂತರದಲ್ಲಿ ಮಾಡಿದ್ದರು. ಆಗ ಧರ್ಮೇಂದ್ರ ಅವರಿಗೆ 77 ವರ್ಷ ವಯಸ್ಸಾಗಿತ್ತು. ಇದೇ ಸಮಯದಲ್ಲಿ ಚಿತ್ರದ ಪ್ರಚಾರದ ಹಿನ್ನೆಲೆ ಹಲವು ಸಂದರ್ಶನಗಳನ್ನು ನೀಡುತ್ತಿದ್ದ ಧರ್ಮೇಂದ್ರ ಕುಡಿದು ಕುಡಿದು ನಾನು ಹಾಳಾದೇ ಎಂದು ಹೇಳಿದ್ದರು.

ಈ ಕುರಿತು ಮಾತನಾಡಿದ್ದ ಧರ್ಮೇಂದ್ರ ಎಣ್ಣೆಯ ಸಹವಾಸ ಮಾಡಿ ನನ್ನನ್ನೂ ನಾನೇ ನಾಶ ಮಾಡಿಕೊಂಡೆ ಎಂದು ಹೇಳಿದ್ದರು. ಕುಡಿತಕ್ಕೆ ದಾಸನಾದ ಕಾರಣ ನನ್ನಲ್ಲಿನ ಸಂಪೂರ್ಣ ಅಭಿನಯದ ಸಾಮರ್ಥ್ಯ ಹೊರಗಡೆ ಬರಲಿಲ್ಲ ಎಂದು ಹೇಳಿದ್ದ ಧರ್ಮೇಂದ್ರ ನನ್ನ ತಪ್ಪಿನ ಅರಿವು ನನಗಾಗಿದೆ, ನಾನು ಈಗ ಎಣ್ಣೆಯನ್ನು ಮುಟ್ಟುವುದು ಇಲ್ಲ ಎಂದು ಹೇಳಿದ್ದರು. ನಾವು ಮೂವರು (ಧರ್ಮೇಂದ್ರ..ಸನ್ನಿ ಡಿಯೋಲ್..ಬಾಬಿ ಡಿಯೋಲ್)ತುಂಬಾನೇ ಕಷ್ಟಪಟ್ಟು ಇಷ್ಟ ಪಟ್ಟು ಈ ಚಿತ್ರ ಮಾಡಿದ್ದೇವೆ ನಿಮ್ಮೆಲ್ಲರಿಗೆ ಇಷ್ಟವಾಗುತ್ತೆ ಎನ್ನುವ ಭರವಸೆ ನಮ್ಮದು ಎಂದು ಹೇಳಿದ್ದರು.

The He-Man s Heartbreak Dharmendra Who Confessed I Destroyed Myself Finds Final Peace

ಅಂದ್ಹಾಗೇ ಒಂದು ಕಾಲದಲ್ಲಿ ಬಾಲಿವುಡ್‌ ಧರ್ಮೇಂದ್ರ ಅವರಿಗೆ ಹಗಲು ಕುಡುಕ ಎಂದೇ ಇವರ ಬೆನ್ನ ಹಿಂದೆ ಕರೆಯುತ್ತಿತ್ತು. ಆಡಿಕೊಳ್ಳುತ್ತಿತ್ತು. ಧರ್ಮೇಂದ್ರ ಅವರ ವರ್ತನೆ ಕೂಡ ಹಾಗೇ ಇತ್ತು. ಸಾರ್ವಕಾಲಿಕ ದಾಖಲೆ ಬರೆದ ''ಶೋಲೆ'' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕ್ಯಾಮರಾಮ್ಯಾನ್ ಜಿಮ್ ತಮಗೆಂದು ತಂದು ಇಡುತ್ತಿದ್ದ ಬಿಯರ್ ಬಾಟಲಿಗಳನ್ನು ಕದ್ದು ಕುಡಿದು ಖಾಲಿ ಮಾಡುತ್ತಿದ್ದರು ಧರ್ಮೇಂದ್ರ. ಅದೊಂದು ದಿನ 12 ಬಿಯರ್ ಬಾಟಲಿಗಳನ್ನು ಖಾಲಿ ಮಾಡಿದಾಗ ತಾವೇ ಅಚ್ಚರಿಗೊಳಗಾಗಿದ್ದರು. ಈ ಪ್ರಸಂಗವನ್ನು ಈ ಹಿಂದೆ ಖುದ್ದು ಧರ್ಮೇಂದ್ರ ಅವರೇ ನೆನಪು ಮಾಡಿಕೊಂಡಿದ್ದರು. ಇನ್ನೂ ಬಿಯರ್‌ನ್ನು ಲಸ್ಸಿಯೆಂದು ಮರೆ ಮಾಚಿ ಧರ್ಮೇಂದ್ರ ಅದೆಷ್ಟು ಬಾರಿ ಚಿತ್ರೀಕರಣದ ಸಮಯದಲ್ಲಿ ಕುಡಿದಿದ್ದರು ಎನ್ನುವುದಕ್ಕೆ ಲೆಕ್ಕ ಇಲ್ಲ.

ಅಂದ್ಹಾಗೇ 2010ರಲ್ಲಿ ''ಯಮಲಾ ಪಗಲಾ ದಿವಾನಾ'' ಮೊದಲ ಭಾಗದ ಬಿಡುಗಡೆಯ ಆಚೀಚೆ ಧರ್ಮೇಂದ್ರ ತೀವೃ ಅನಾರೋಗ್ಯಕ್ಕೀಡಾಗಿದ್ದರು. ಈ ಸಮಯದಲ್ಲಿ ತಮ್ಮ ಮಗಳು ಈಶಾ ಡಿಯೋಲ್ ಮೇಲೆ ಧರ್ಮೇಂದ್ರ ಇನ್ಮುಂದೆ ಕುಡಿಯಲ್ಲ ಎಂದು ಪ್ರಮಾಣ ಮಾಡಿದ್ದರು. ಅದ್ರಂತೆ ಕೊನೆಯ ಉಸಿರು ಇರುವವರೆಗೆ ಧರ್ಮೇಂದ್ರ ಮದ್ಯದ ಬಾಟಲ್ ಎತ್ತಲಿಲ್ಲ.

More from Filmibeat

English summary
Dharmendra, the legendary action hero, passes away. We revisit his candid reflections on his addiction and the power of his honesty: 'I destroyed myself as an actor.'
Read more about: dharmendra drinks bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X