twitter
    For Quick Alerts
    ALLOW NOTIFICATIONS  
    For Daily Alerts

    47 ವರ್ಷದ ಹಿಂದೆ 'ಜೈ ಸಂತೋಷಿ ಮಾ' ಸೃಷ್ಟಿಸಿದ್ದ ಇತಿಹಾಸ ಪುನರಾವರ್ತಿಸುತ್ತಿದೆ 'ದಿ ಕಾಶ್ಮೀರ್ ಫೈಲ್ಸ್'

    |

    'ದಿ ಕಾಶ್ಮೀರ್ ಫೈಲ್ಸ್' ಚಿತ್ರ ನೋಡಲು ಜನಸಾಗರವೇ ಥಿಯೇಟರ್ ಕಡೆಗೆ ಹರಿದುಬರುತ್ತಿದೆ. ಚಿತ್ರ ಬಿಡುಗಡೆಯಾದಾಗಿನಿಂದ ಈ ಚಿತ್ರ ಚರ್ಚೆಯಲ್ಲಿದೆ. ಕಡಿಮೆ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಿನಕ್ಕೊಂದು ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಎರಡನೇ ವಾರದಲ್ಲೂ ವಿವೇಕ್ ಅಗ್ನಿಹೋತ್ರಿ ಅವರ ಈ ಚಿತ್ರ ಭರ್ಜರಿ ಗಳಿಕೆ ಮಾಡುತ್ತಿದೆ. ಕಡಿಮೆ ಬಜೆಟ್ ಚಿತ್ರವೊಂದರ ಅಸಾಧಾರಣ ಯಶಸ್ಸುದಿ ಕಾಶ್ಮೀರ್ ಫೈಲ್ಸ್.

    ಈ ಸಿನಿಮಾ ಈಗ 200ಕೋಟಿ ಗಳಿಕೆಯತ್ತ ದಾಪುಗಾಲು ಹಾಕಿದೆ. ಇಂತಹ ಅಸಾಧಾರಣವಾದ ಯಶಸ್ಸಿನ ಸಮಯದಲ್ಲೇ ಈಗ ಸಿನಿಮಾ ವಿಮರ್ಶಕರು ಇತಿಹಾಸವನ್ನು ಹಿಂತಿರುಗಿ ನೋಡಲು ಆರಂಭಿಸಿದ್ದಾರೆ. ಸುಮಾರು 47 ವರ್ಷಗಳ ಹಿಂದೆ ಹೀಗೆ ಒಂದು ಚಿತ್ರ ಬಂದಿತ್ತು. ಅದು ಕೂಡ ಭಾರತೀಯ ಸಿನಿಮಾ ರಂಗದಲ್ಲಿ ಇತಿಹಾಸ ನಿರ್ಮಿಸಿದ 'ಶೋಲೆ' ಚಿತ್ರ ಬಿಡುಗಡೆಯಾದ ಸಮಯದಲ್ಲಿ. ಈಗ ಬಿಡುಗಡೆಯಾಗಿರುವ 'ದಿ ಕಾಶ್ಮೀರ್ ಫೈಲ್ಸ್' ಎರಡನೇ ವಾರದಲ್ಲೂ ಸಹ ಪ್ರೇಕ್ಷಕರಿಂದ ತುಂಬಾ ಪ್ರೀತಿಯನ್ನು ಪಡೆಯುತ್ತಿದೆ, ಚಿತ್ರದ ಎರಡನೇ ವಾರದ ಗಳಿಕೆಯ ವೇಗವು ಈ ಚಿತ್ರ ಭಾರತೀಯ ಸಿನಿಮಾ ರಂಗಕ್ಕೆ ಹೊಸ ಆಯಾಮವನ್ನು ನೀಡುತ್ತಿದೆ. ಇಂತಹದೇ ಒಂದು ಅಸಾಧಾರಣವಾದ ಗಳಿಕೆಯನ್ನು ಕಂಡು ಭಾರಿ ಯಶಸ್ಸನ್ನು ಕಂಡ ಚಿತ್ರ 'ಜೈ ಸಂತೋಷಿ ಮಾತಾ'.

     ವಿದೇಶದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಪ್ರದರ್ಶನಕ್ಕೆ ತಡೆ ವಿದೇಶದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಪ್ರದರ್ಶನಕ್ಕೆ ತಡೆ

    1975ರಲ್ಲಿ ತೆರೆಕಂಡ 'ಜೈ ಸಂತೋಷಿ ಮಾ' ಸಿನಿಮಾ ಅಂದು ಇತಿಹಾಸ ಸೃಷ್ಟಿಸಿದ ಬಾಲಿವುಡ್ ಸಿನಿಮಾ. ಆ ಇತಿಹಾಸವು ಮತ್ತೊಮ್ಮೆ 'ದಿ ಕಾಶ್ಮೀರ ಫೈಲ್ಸ್' ಮೂಲಕ ಪುನರಾವರ್ತನೆಯಾಗುತಿದೆ. ಸಿನಿ ವಿಮರ್ಶಕ ತರಣ್ ಆದರ್ಶ್ ಅವರ ಟ್ವೀಟ್ ಪ್ರಕಾರ, 47 ವರ್ಷಗಳ ನಂತರ ಇದು ಎರಡನೇ ಬಾರಿಗೆ ಕಡಿಮೆ ಬಜೆಟ್ ಚಿತ್ರವೊಂದು ಇಷ್ಟು ದೊಡ್ಡ ಮೊತ್ತವನ್ನು ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ. 47ರ ವರ್ಷಗಳ ಹಿಂದೆ 'ಜೈ ಸಂತೋಷಿ ಮಾ' ಚಿತ್ರ 'ಶೋಲೆ' ಚಿತ್ರಕ್ಕೆ ತೀವ್ರ ಪೈಪೋಟಿ ನೀಡಿ ಇತಿಹಾಸ ಸೃಷ್ಟಿಸಿತ್ತು.

    'ದಿ ಕಾಶ್ಮೀರ್ ಫೈಲ್ಸ್' ಮುಂದೆ ನಿಲ್ಲಲಿಲ್ಲ 'ಬಚ್ಚನ್ ಪಾಂಡೆ'

    'ದಿ ಕಾಶ್ಮೀರ್ ಫೈಲ್ಸ್' ಮುಂದೆ ನಿಲ್ಲಲಿಲ್ಲ 'ಬಚ್ಚನ್ ಪಾಂಡೆ'

    'ಬಚ್ಚನ್ ಪಾಂಡೆ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕೃತಿ ಸನೋನ್ ಅವರಂತಹ ದೊಡ್ಡ ತಾರೆಯರನ್ನು ಹೊಂದಿದ್ದರೂ, 'ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಜನರ ಆಕರ್ಷಣೆಯನ್ನು ಮುರಿಯಲು ಅವರಿಗೆ ಸಾಧ್ಯವಾಗುತ್ತಿಲ್ಲ. 'ಬಚ್ಚನ್ ಪಾಂಡೆ' ಬಿಡುಗಡೆಯಾದ ನಂತರ 'ದಿ ಕಾಶ್ಮೀರ್ ಫೈಲ್ಸ್' ಗಳಿಕೆಯ ವೇಗ ಕುಂಠಿತವಾಗಲಿದೆ ಎಂದು ನಂಬಲಾಗಿತ್ತು, ಆದರೆ ಅಕ್ಷಯ್ ಅವರ ಮ್ಯಾಜಿಕ್ ಈ ಬಾರಿ ಕೆಲಸ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. 'ಕಾಶ್ಮೀರ್ ಫೈಲ್ಸ್' ನೋಡುವವರ ಸಂಖ್ಯೆ ಮೊದಲ ವಾರಕ್ಕಿಂತ ಎರಡನೇ ವಾರದಲ್ಲಿ ದ್ವಿಗುಣಗೊಂಡಿದೆ. ಬಾಕ್ಸಾಫೀಸ್ ಪಂಡಿತರ ಪ್ರಕಾರ 'ಬಚ್ಚನ್ ಪಾಂಡೆ' ಸಿನಿಮಾ ನೋಡುವವರ ಸಂಖ್ಯೆ ತೀರಾ ಕಡಿಮೆ. ಬಿಡುಗಡೆಯಾದ ಮೊದಲ ವಾರವೇ 'ದಿ ಕಾಶ್ಮೀರ್ ಫೈಲ್ಸ್' ಇಂದ ಭಾರಿ ಹೊಡೆತ ಪಡೆದಿರುವ ಚಿತ್ರ ಮುಂದಿನ ವಾರ ಬಿಡುಗಡೆಯಾಗುವ 'RRR' ನಿಂದ ಸಂಪೂರ್ಣವಾಗಿ ಚಿತ್ರಮಂದಿರಗಳಿಂದ ಮಾಯವಾಗಲಿದೆ.

    ಮತ್ತೆ ನೆನಪಾದ 'ಜೈ ಸಂತೋಷಿ ಮಾ'

    ಮತ್ತೆ ನೆನಪಾದ 'ಜೈ ಸಂತೋಷಿ ಮಾ'

    'ದಿ ಕಾಶ್ಮೀರ್ ಫೈಲ್ಸ್' ಬಾಕ್ಸ್ ಆಫೀಸ್ ಯಶಸ್ಸು ಸಿನಿ ವಿಶ್ಲೇಷಕರನ್ನು ಬೆರಗುಗೊಳಿಸಿದೆ. ಯಾವುದೇ ದೊಡ್ಡ ಬ್ಯಾನರ್ ಇಲ್ಲದೆ, ಯಾವುದೇ ಸೂಪರ್ ಸ್ಟಾರ್ ಗಳೆಂದು ಕರೆಯಲ್ಪಡುವವರು ಚಿತ್ರದಲ್ಲಿ ಇಲ್ಲ, ಹಿಟ್ ಹಾಡುಗಳು ಮತ್ತು ಡ್ಯಾನ್ಸ್ ಗಳಿಲ್ಲ ಬಹುಮುಖ್ಯವಾಗಿ ಮನೋರಂಜನೆ ಇಲ್ಲ ಮತ್ತು ಮುಖ್ಯವಾಗಿ, ಯಾವುದೇ ದೊಡ್ಡ ಮಾರುಕಟ್ಟೆ, ಬಜೆಟ್ ಇಲ್ಲದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಿಟ್ ಆಗಿದೆ. ಪ್ರತಿದಿನವೂ ಕೂಡ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚುತ್ತಿರುವ ಗ್ರಾಫ್ ಅನ್ನು ಮುಂದುವರೆಸಿದೆ. ಈ ತರದ ಯಶಸ್ಸು ಸಿನಿ ವಿಶ್ಲೇಷಕರಿಗೆ 1975 ರಲ್ಲಿ ನಿರ್ಮಿಸಲಾದ 'ಜೈ ಸಂತೋಷಿ ಮಾ' ಚಲನಚಿತ್ರದ ಮತ್ತೊಂದು ಐತಿಹಾಸಿಕ ಪ್ರದರ್ಶನವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. 'ಜೈ ಸಂತೋಷಿ ಮಾತಾ' 1975 ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ 'ಶೋಲೆ'ಗೆ ಕಠಿಣ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿ ಭಾರಿ ಯಶಸ್ಸು ಕಂಡಿತ್ತು.

    ಮೊದಲ ಬಾರಿ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ ಪೇಜಾವರ ಶ್ರೀ: ಯಾವುದಾ ಸಿನಿಮಾ?ಮೊದಲ ಬಾರಿ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ ಪೇಜಾವರ ಶ್ರೀ: ಯಾವುದಾ ಸಿನಿಮಾ?

    ಶೋಲೆ ಮೊದಲವಾರ ಫ್ಲಾಪ್ ಸಿನಿಮಾ ಆಗಿತ್ತು

    ಶೋಲೆ ಮೊದಲವಾರ ಫ್ಲಾಪ್ ಸಿನಿಮಾ ಆಗಿತ್ತು

    'ಜೈ ಸಂತೋಷಿ ಮಾ' ಚಿತ್ರವು 1975 ರ ಆಗಸ್ಟ್ 15 ರಂದು ಬಿಡುಗಡೆಯಾಯಿತು, ಅದೇ ದಿನ ಮುಂಬೈಯಲ್ಲಿ ಶೋಲೆ ಚಲನಚಿತ್ರವನ್ನು ಬಿಡುಗಡೆ ಮಾಡಲಾಯಿತು. 'ಶೋಲೆ' ಭಾರತೀಯ ಚಿತ್ರರಂಗದ ಅತಿ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ನಿರ್ದೇಶಕ ರಮೇಶ್ ಸಿಪ್ಪಿ ಅವರ ಮೊದಲ ಚಿತ್ರ ಶೋಲೆ. ಇದು ಧರ್ಮೇಂದ್ರ, ಅಮಿತಾಬ್ ಬಚ್ಚನ್, ಸಂಜೀವ್ ಕುಮಾರ್, ಹೇಮಾ ಮಾಲಿನಿ, ಮತ್ತು ಜಯಾ ಬಚ್ಚನ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿತ್ತು. ಆ ಕಾಲದ ದೊಡ್ಡ ಸಂಗೀತಗಾರರಲ್ಲಿ ಒಬ್ಬರಾದ ಆರ್‌ಡಿ ಬರ್ಮನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಖ್ಯಾತ ಬರಹಗಾರರಾದ ಸಲೀಂ-ಜಾವೇದ್ ಈ ಚಿತ್ರವನ್ನು ಬರೆದಿದ್ದಾರೆ. ಶೋಲೆಯಲ್ಲಿನ ಹಾಡುಗಳಿಗೆ ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರಂತಹ ಗಾಯಕರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಇಷ್ಟೆಲ್ಲಾ ಇದ್ದರೂ 3 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಶೋಲೆ ಮೊದಲ ವಾರದಲ್ಲಿಯೇ ಫ್ಲಾಪ್ ಆಗಿತ್ತು. ಮೊದಲ ಎರಡು ವಾರ ಶೋಲೆ ಚಿತ್ರವನ್ನು ಕೇಳುವವರೇ ಇರಲಿಲ್ಲ. ಆದರೆ ನಿಧಾನವಾಗಿ ಮೌತ್ ಪಬ್ಲಿಸಿಟಿ ಚಿತ್ರಕ್ಕೆ ಪೂರಕವಾದ ಅಂಶವಾಗಿತ್ತು. ಆದರೆ ಇದೇ ಸಮಯದಲ್ಲಿ ಬಿಡುಗಡೆಯಾಗಿದ್ದ ಸಣ್ಣ ಬಜೆಟ್ಟಿನ ಯಾರು ಗುರುತಿಸದೆ ಇದ್ದಂತಹ ಚಿತ್ರ 'ಜೈ ಸಂತೋಷಿ ಮಾ' ಬಿರುಗಾಳಿಯನ್ನೇ ಬಾಕ್ಸಾಫೀಸಿನಲ್ಲಿ ಮಾಡಿತ್ತು. ಅಕ್ಟೋಬರ್ 11 ರಂದು ದೇಶದ ಇತರ ಭಾಗಗಳಲ್ಲಿ ಬಿಡುಗಡೆಯಾದ ನಂತರವೇ 'ಶೋಲೆ' ಬಾಕ್ಸ್ ಆಫೀಸ್‌ನಲ್ಲಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು!

    'ಜೈ ಸಂತೋಷಿ ಮಾ' ನೋಡಲು ಜನಸಾಗರವೇ ಹರಿದು ಬಂತು

    'ಜೈ ಸಂತೋಷಿ ಮಾ' ನೋಡಲು ಜನಸಾಗರವೇ ಹರಿದು ಬಂತು

    'ಜೈ ಸಂತೋಷಿ ಮಾ' 20 ಲಕ್ಷ ರೂಪಾಯಿಗಿಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರವಾಗಿದ್ದು ಗಲ್ಲಾಪೆಟ್ಟಿಗೆಯಲ್ಲಿ 'ದೀವಾರ್' ಮತ್ತು 'ಶೋಲೆ'ಯಂತಹ ಸೂಪರ್ ಸ್ಟಾರ್ ಚಿತ್ರಗಳನ್ನು ಎದುರಿಸಿ ಭಾರಿ ಹಿಟ್ ಆಯಿತು. 'ಜೈ ಸಂತೋಷಿ ಮಾ' ಚಿತ್ರದಲ್ಲಿ ಅಷ್ಟಾಗಿ ತಿಳಿದಿಲ್ಲದ ತಾರಾಗಣವಿತ್ತು. ಚಲನಚಿತ್ರವು ಪ್ರಮುಖ ನಟರಲ್ಲಿ ಭರತ್ ಭೂಷಣರನ್ನು ಹೊಂದಿತ್ತು ಆದರೆ ಅವರ ಯುಗವು 1975 ರ ಹೊತ್ತಿಗೆ ತೀವ್ರ ಕುಸಿತವನ್ನು ಕಂಡಿತ್ತು. ಸಿ.ಅರ್ಜುನ್ ಚಿತ್ರಕ್ಕೆ ಸಂಗೀತ ನೀಡಿದರೆ ಉಷಾ ಮಂಗೇಶ್ಕರ್ ಮತ್ತು ಮಹೇಂದ್ರ ಕಪೂರ್ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದರು. ಭಕ್ತಿಪ್ರಧಾನ ಚಿತ್ರದ ಬಗ್ಗೆ ಜನ ಮಾತನಾಡಿಕೊಳ್ಳಲಾರಂಭಿಸುತ್ತಿದ್ದಂತೆಯೇ ಜನಸಂದಣಿ ತಾನಾಗಿಯೇ ಥಿಯೇಟರ್‌ಗಳತ್ತ ಮುಖ ಮಾಡಿ ಚಿತ್ರ ಬಂಪರ್ ಹಿಟ್ ಆಯಿತು. 'ಜೈ ಸಂತೋಷಿ ಮಾ' ಎಷ್ಟು ನಿಖರವಾಗಿ ಸಾರ್ವಜನಿಕರವನ್ನು ಸೆಳೆಯಿತು ಎಂದರೆ ವೀಕ್ಷಕರು ತಮ್ಮ ಪಾದರಕ್ಷೆಗಳನ್ನು ಸಿನಿಮಾ ಹಾಲ್‌ನ ಹೊರಗೆ ಬಿಟ್ಟು ಯಾವುದೋ ದೇವಸ್ಥಾನದಲ್ಲಿ ದೇವರನ್ನು ಪೂಜಿಸಲು ಹೋಗುವಂತೆ ಚಿತ್ರ ನೋಡಲು ಹೋಗುತ್ತಿದ್ದರು.

    ಮೊದಲ ದಿನ ಅದು ಗಳಿಸಿದ ಗಳಿಕೆ ಎಷ್ಟು ಗೊತ್ತೆ?

    ಮೊದಲ ದಿನ ಅದು ಗಳಿಸಿದ ಗಳಿಕೆ ಎಷ್ಟು ಗೊತ್ತೆ?

    'ಜೈ ಸಂತೋಷಿ ಮಾ' ಶೋಲೆ ನಂತರ ಅತಿ ಹೆಚ್ಚು ಮೊತ್ತ ಗಳಿಸಿ ಚಿತ್ರವಾಗಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಈ ಚಿತ್ರ ನೋಡಲು ದೂರದೂರುಗಳಿಂದ ಎತ್ತಿನ ಬಂಡಿಯಲ್ಲಿ ಜನ ಬರುತ್ತಿದ್ದರು. ಆದರೆ ಈ ಚಿತ್ರ ಬಿಡುಗಡೆಯಾದ ಮೊದಲ ದಿನ ಕಂಡ ಗಳಿಕೆ ಎಷ್ಟು ಗೊತ್ತೆ? ಬಾಂಬೆಯಲ್ಲಿ ಅಂದರೆ ಇಂದಿನ ಮುಂಬೈಯಲ್ಲಿ ಅದು ಬಿಡುಗಡೆಯಾಗಿದ್ದ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನದಲ್ಲಿ 56 ರೂ., ಎರಡನೇ ಪ್ರದರ್ಶನದಲ್ಲಿ 64 ರೂ. ಮತ್ತು ಸಂಜೆಯ ಪ್ರದರ್ಶನದಲ್ಲಿ 98 ರೂ., ಮತ್ತು ರಾತ್ರಿ ಶೋನಲ್ಲಿ ಕೇವಲ 100 ರೂ. ಗಳಿಸಿತ್ತು. ಆದರೆ ಇದರ ನಂತರ, ಚಿತ್ರವು ಜನರ ಮೇಲೆ ಪರಿಣಾಮ ಬೀರಿತು, ಚಿತ್ರವು ತಿಂಗಳುಗಟ್ಟಲೆ ತೆರೆಯ ಮೇಲೆ ಉಳಿಯಿತು. ಪ್ರಸ್ತುತ ಮಾಹಿತಿಯ ಪ್ರಕಾರ, ಜೈ ಸಂತೋಷಿ ಮಾ ಚಿತ್ರದ ವಿಶ್ವಾದ್ಯಂತ ಸಂಗ್ರಹವು ಸುಮಾರು 10 ಕೋಟಿ ರೂ.ಗಳಷ್ಟಿತ್ತು, ಆ ವರ್ಷ ಶೋಲೆ ನಂತರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. 'ದಿ ಕಾಶ್ಮೀರ್ ಫೈಲ್ಸ್' ಗಲ್ಲಾಪೆಟ್ಟಿಗೆಯಲ್ಲಿ ಸಾಧಿಸಿದ ಯಶಸ್ಸು, ಇತರ ದೊಡ್ಡ-ಬಜೆಟ್ ಚಿತ್ರಗಳಾದ ಶೋಲೆ ಮತ್ತು ದೀವಾರ್ ಬಿಡುಗಡೆಯಾದ ಅದೇ ಸಮಯದಲ್ಲಿ ಬಿಡುಗಡೆಯಾದ 'ಜೈ ಸಂತೋಷಿ ಮಾಾ' ಚಿತ್ರದ ವಾಣಿಜ್ಯ ಯಶಸ್ಸನ್ನು ಜನರು ನೆನಪಿಸಿಕೊಳ್ಳುವಂತೆ ಮಾಡುತ್ತಿದೆ.

    ದೇಶದಾದ್ಯಂತ ಸಂತೋಷಿ ಮಾತಾ ದೇವಾಲಯಗಳ ನಿರ್ಮಾಣ

    ದೇಶದಾದ್ಯಂತ ಸಂತೋಷಿ ಮಾತಾ ದೇವಾಲಯಗಳ ನಿರ್ಮಾಣ

    ಕೇವಲ ಬಾಕ್ಸ್ ಆಫೀಸ್ ಯಶಸ್ಸು 'ಜೈ ಸಂತೋಷಿ ಮಾ' ಚಿತ್ರದ ಯಶಸ್ಸಾಗಿರಲಿಲ್ಲ, ಇದು ಯಾವುದೇ ಚಿತ್ರ ಸಾಧಿಸದ ಸಾಧನೆ ಮಾಡಿದೆ. ಚಲನಚಿತ್ರವು ವಾಸ್ತವವಾಗಿ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಅವರು ಮೊದಲು ಕೇಳಿರದ ಹಿಂದೂ ದೇವತೆ ಯೊಂದನ್ನು ಪರಿಚಯಿಸಿತು. ಹೌದು, 'ಜೈ ಸಂತೋಷಿ ಮಾ' ಚಿತ್ರ ಬಿಡುಗಡೆಗೂ ಮುನ್ನ ಸಂತೋಷಿ ದೇವಿಯ ಬಗ್ಗೆ ಹೆಚ್ಚು ಜನ ಕೇಳಿರಲಿಲ್ಲ. ಆದರೆ ಸಿನಿಮಾ ರಿಲೀಸ್ ಆದ ನಂತರ ಲಕ್ಷಾಂತರ ಜನ ಆಕೆಯ ಭಕ್ತರಾದರು. ಸಂತೋಷಿ ಮಾತಾ ದೇವಾಲಯಗಳನ್ನು ನಿರ್ಮಿಸಲಾಯಿತು ಮತ್ತು ಧಾರ್ಮಿಕ ಆಚರಣೆಗಳನ್ನು ಪ್ರಾರಂಭಿಸಲಾಯಿತು. ಹೀಗಾಗಿ, ಸಂತೋಷಿ ಮಾ "ಸೆಲ್ಯುಲಾಯ್ಡ್ ದೇವತೆ" ಎಂದೂ ಕರೆಯುತ್ತಾರೆ.

    English summary
    The kashmir Files is repeating the history of Jai Santoshimata after 47 years in the box office. Biggest Indian hit movie Sholay was considered as a flop movie inforant of 'Jai Santoshi Mata'! In the releasing first two weeks.
    Tuesday, March 22, 2022, 14:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X