ಮತ್ತೆ ತೆರೆಗೆ ಬರಲಿದೆ ಜನಪ್ರಿಯ ಚಿತ್ರ 'ದಿ ಕಾಶ್ಮೀರ್ ಫೈಲ್ಸ್'
ರಿ ರಿಲೀಸ್ ಟ್ರೆಂಡ್ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದಿನಿಂದಲೂ ಹಿಟ್ ಆದ ಚಿತ್ರಗಳನ್ನು ಮರು ಬಿಡುಗಡೆ ಮಾಡುವ ಅಭ್ಯಾಸ ಇದ್ದರೂ ಸಹ ಇತ್ತೀಚೆಗಿನ ದಿನಗಳಲ್ಲಿ ಈ ಹವ್ಯಾಸ ತುಸು ಜಾಸ್ತಿ ಎನ್ನಬಹುದು. ಇನ್ನು ಕಳೆದ ವರ್ಷ ತೆಲುಗಿನ ಸ್ಟಾರ್ ನಟ ಹುಟ್ಟುಹಬ್ಬಗಳ ಪ್ರಯುಕ್ತ ಹೆಚ್ಚಾದ ಈ ರಿ ರಿಲೀಸ್ ಹಾವಳಿ ದೊಡ್ಡ ಮಟ್ಟದ ಗಳಿಕೆ ಕಂಡ ನಂತರ ಇದೀಗ ಬಾಲಿವುಡ್‌ಗೂ ತಲುಪಿದೆ. ಹೌದು, ಬಾಲಿವುಡ್ ಚಿತ್ರರಂಗದ ಕಳೆದ ವರ್ಷದ ಬೆರಳೆಣಿಕೆ ಹಿಟ್‌ಗಳಲ್ಲಿ ಒಂದಾಗಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಮರು ಬಿಡುಗಡೆಯಾಗಲು ಸಜ್ಜಾಗಿದೆ.

ಭಾರೀ ಬೇಡಿಕೆ ಮೇರೆಗೆ ಜನರ ಅಚ್ಚುಮೆಚ್ಚಿನ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಮರು ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರತಂಡ ಪೋಸ್ಟರ್ ಹಂಚಿಕೊಂಡಿದೆ. ಹೌದು, ಚಿತ್ರ ನಾಳೆ ( ಜನವರಿ 19 ) ಪ್ರದರ್ಶನವನ್ನು ಕಾಣಲಿದೆ. ಇನ್ನು ಬೆಂಗಳೂರಿನಲ್ಲೂ ಸಹ ಚಿತ್ರ ಮರು ಬಿಡುಗಡೆಯಾಗುತ್ತಿದ್ದು, ಮೆಕ್ ಗ್ರಾ ರಸ್ತೆಯ ಗರುಡ ಮಾಲ್ ಐನಾಕ್ಸ್, ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಐನಾಕ್ಸ್ ಹಾಗೂ ರಾಯಲ್ ಮೀನಾಕ್ಷಿ ಮಾಲ್ ಸಿನಿಪೊಲಿಸ್ ಚಿತ್ರಮಂದಿರಗಳಲ್ಲಿ ತಲಾ ಒಂದೊಂದು ಪ್ರದರ್ಶನವನ್ನು ಕಾಣಲಿದೆ.
ಇನ್ನು ಈ ಸಾಲಿಗೆ ಕನ್ನಡದ ಗಂಧದ ಗುಡಿ ಸಹ ಸೇರ್ಪಡೆಯಾಗಲಿದ್ದು, ಮಾರ್ಚ್ 17ರಂದು ಪುನೀತ್ ಹಬ್ಬದ ಪ್ರಯುಕ್ತ ಮರು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.


Click it and Unblock the Notifications











