ಸಪ್ತ ಸ್ವರಗಳ ಲೋಕದಲ್ಲಿ ಸಹೋದರಿಯರ ಕಲರವ ; ಲತಾ-ಆಶಾ ಹಾಡಿರುವ ಹಿಟ್ ಹಾಡುಗಳಿವು

ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ಪಾಶ್ಚಾತ್ಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ.

ಆದರೆ, ಎಷ್ಟೇ ಹೊಸ ಅಲೆ ಬಂದರೂ.. ಸಂಗೀತದ ಸ್ವರಗಳು ಬದಲಾದರೂ.. ಭಾರತದಲ್ಲಿ ಅಂದು-ಇಂದು-ಎಂದೆಂದೂ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರ ಕಂಠಕ್ಕಿದ್ದ ಬೆಲೆ ಕಡಿಮೆಯಾಗಿಲ್ಲ. ಸಂಗೀತ ಪ್ರಿಯರು ಈ ಸಹೋದರಿಯರ ಸಂಗೀತ ಸೇವೆಯನ್ನು ಕೂಡ ಮರೆಯಲ್ಲ. ಯಾಕೆಂದರೆ ಇವರಿಬ್ಬರ ಹಾಡು ಕೇವಲ ಹಾಡಾಗಿರಲಿಲ್ಲ.

The Melodic Monarchy How Asha amp amp Lata s Golden Duets Sculpted the Soul of Indian Cinema

ಬದಲಿಗೆ ಹಲವರ ಪಾಲಿಗೆ ಇವತ್ತು ಕೂಡ ಎಮೋಷನ್. ಭಾರತೀಯ ಚಿತ್ರರಂಗದ ಘನತೆ ಮತ್ತು ಸಾಂಸ್ಕೃತಿಕ ಅಸ್ಮಿತೆ. ಇಂಥಾ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಆ ಪೈಕಿ ಕೆಲ ಜನಪ್ರಿಯ ಹಾಡುಗಳ ಪಟ್ಟಿ ಇಲ್ಲಿದೆ.

* ಹಾಡು- ಮನ್ ಕ್ಯೂ ಬೆಹಕಾ ರೆ -ಚಿತ್ರದ ಹೆಸರು- ಉತ್ಸವ್-ಬಿಡುಗಡೆಯಾದ ವರ್ಷ -1983

1985ರಲ್ಲಿ ಬಿಡುಗಡೆಯಾದ ಉತ್ಸವ್ ಚಿತ್ರದ ''ಮನ್ ಕ್ಯುನ್ ಬೆಹ್ಕಾ ರಿ ಬೆಹ್ಕಾ ಆಧಿ ರಾತ್ ಕೋ'' ಹಾಡಿನಲ್ಲಿ ನಟಿ ರೇಖಾ ಎಷ್ಟು ಚಂದವಾಗಿ ಕಾಣುತ್ತಾರೋ ಅಷ್ಟೇ ಕಿವಿಗಳಿಗೆ ಇಂಪು ಈ ಹಾಡು.

ಇದು ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರ ಅತ್ಯಂತ ಪ್ರಸಿದ್ಧವಾದ ಯುಗಳ ಗೀತೆ. ಮಧ್ಯರಾತ್ರಿಯಲ್ಲಿ ನೆನಪಾಗುವ ಪ್ರೇಮಿಯ ಬಗ್ಗೆ ಇಬ್ಬರು ಗೆಳತಿಯರ ನಡುವಿನ ಮಾತುಕತೆಯ ಹಾಡು ಇದು. ನಟಿ ರೇಖಾ ಅವರಿಗೆ ಲತಾ ಮಂಗೇಶ್ಕರ್ ಅವರ ಧ್ವನಿ ಮತ್ತು ನಟಿ ಅನುರಾಧಾ ಪಟೇಲ್ ಅವರಿಗೆ ಆಶಾ ಭೋಂಸ್ಲೆ ಧ್ವನಿ ನೀಡಲಾಗಿದೆ.

ಲಕ್ಷ್ಮೀಕಾಂತ್-ಪ್ಯಾರೇಲಾಲ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡು, ಇಬ್ಬರು ಗಾಯಕಿಯರ ನಡುವಿನ ಸಮನ್ವಯಕ್ಕೆ ಅತ್ಯುತ್ತಮ ಉದಾಹರಣೆ. ವಸಂತ್ ದೇವ್ ಅವರ ಸಾಹಿತ್ಯ ಈ ಹಾಡಿಗಿತ್ತು.

the-melodic-monarchy-how-asha-lata-s-golden-duets-sculpted-the-soul-of-indian-cinema

ಹಾಡು- ಜಬ್ ಜಬ್ ತುಮ್ಹೇ ಭುಲಾಯಾ ತುಮ್ ಔರ್ ಯಾದ್ ಆಯೇ- ಚಿತ್ರದ ಹೆಸರು- ಜಹಾನ್ ಅರಾ- ಬಿಡುಗಡೆಯಾದ ವರ್ಷ- 1964

ಜಹಾನ್ ಅರಾ ಸಿನಿಮಾದ ಸೂಪರ್ ಹಿಟ್ ''ಜಬ್ ಜಬ್ ತುಮ್ಹೆ ಭುಲಾಯಾ ತುಮ್ ಔರ್ ಯಾದ್ ಆಯೆ'' ಹಾಡು ಯಾರಿಗೆ ತಾನೇ ನೆನಪಿಲ್ಲ ಹೇಳಿ. 1964ರಲ್ಲಿ ಬಿಡುಡೆಯಾದ ಈ ಸಿನಿಮಾದ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರ ಹಿಟ್ ಹಾಡಾಗಿ ಜನಮನದಲ್ಲಿ ಅಚ್ಚುಹೊತ್ತಿದೆ.

ಖ್ಯಾತ ಸಂಗೀತ ಸಂಯೋಜಕ ಮದನ್ ಮೋಹನ್ ಅವರು ಲತಾ ಮಂಗೇಶ್ಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ಆದರೆ ಈ ಹಾಡಿನ ಘಜಲ್‌ನಲ್ಲಿ, ಆಶಾ ಭೋಂಸ್ಲೆ ಅವರ ಧ್ವನಿಯನ್ನು ಬಳಸಿ, ಜನರಿಗೆ ಹೊಸ ರೀತಿಯ ಇಂಪನ್ನು ನೀಡಿದ್ದರು. ಪ್ರೀತಿಯ ಬಗ್ಗೆ ಇಬ್ಬರು ವ್ಯಕ್ತಿಗಳ ದುಃಖ ಮತ್ತು ಉತ್ಕೃಷ್ಟತೆಯನ್ನು ಈ ಸುಮಧುರ ಗೀತೆ ಕಟ್ಟು ಕೊಟ್ಟಿದೆ. ರಾಜೇಂದ್ರ ಕಿಶನ್ ಈ ಹಾಡನ್ನು ಬರೆದಿದ್ದರು.

ಹಾಡು-ಕೋಯಿ ಆಯೇಗಾ ಆಯೇಗಾ- ಚಿತ್ರದ ಹೆಸರು- ಪ್ರೊಫೆಸರ್‌- ಬಿಡುಗಡೆಯಾದ ವರ್ಷ- 1962

''ಪ್ರೊಫೆಸರ್‌'' ಸಿನಿಮಾದ ಕೊಯಿ ಆಯೇಗಾ ಆಯೇಗಾ ಹಾಡಿನಲ್ಲಿ ಇಬ್ಬರು ಖ್ಯಾತ ಸಹೋದರಿಯರು ದನಿ ನೀಡಿದ್ದಾರೆ. ಸಂಗೀತ ಸಂಯೋಜಕ ಶಂಕರ್ - ಜೈಕಿಶನ್ ಮತ್ತೆ ಇಬ್ಬರನ್ನು ಒಟ್ಟಿಗೆ ಸೇರಿಸಿದ್ದರು. 1962ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಹಸರತ್ ಜೈಪುರಿ ಸಾಹಿತ್ಯ ಈ ಹಾಡಿಗಿತ್ತು.

ಹಾಡು- ಪಾಕೆ ಅಕೇಲಿ ಮೊಹೆ ಛೇದ್ ರಾಹಾ- ಚಿತ್ರದ ಹೆಸರು- ಜೈಲ್ ಯಾತ್ರಾ- ಬಿಡುಗಡೆ ವರ್ಷ- 1981

1981ರಲ್ಲಿ ಬಿಡುಗಡೆಯಾದ ''ಜೈಲ್ ಯಾತ್ರಾ'' ಚಿತ್ರದ ''ಪಾಕೆ ಅಕೇಲಿ ಮೊಹೆ ಛೇದ್ ರಾಹಾ'' ಹಾಡಿನಲ್ಲಿ ಇಬ್ಬರು ಸಹೋದರಿಯರು ಒಂದಾಗಿದ್ದರು. ವಿನೋದ್ ಖನ್ನಾ ಅಭಿನಯದ ಸಿನಿಮಾದಲ್ಲಿ ಗಾಯಕಿ ಸಹೋದರಿಯರನ್ನು ಒಟ್ಟಿಗೆ ಸೇರಿಸುವುದು ನಿರ್ದೇಶಕ ಆರ್‌ಡಿ ಬರ್ಮನ್‌ ಅವರಿಗೆ ಸವಾಲಿನ ಕೆಲಸವಾಗಿತ್ತು ಎನ್ನಲಾಗುತ್ತದೆ.

ಹಾಡು- ಸಖಿ ಸರೇ ತುಜೆ ಮಿಲೇ - ಚಿತ್ರದ ಹೆಸರು-ತೋಹ್ಫಾ-ಬಿಡುಗಡೆಯಾದ ವರ್ಷ- 1984

ಜಿತೇಂದ್ರ ಮತ್ತು ಶ್ರೀದೇವಿ ಅಭಿನಯದ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ''ತೋಹ್ಫಾ''ದ ಹಾಡೊಂದಕ್ಕೆ ಇಬ್ಬರು ಸಹೋದರಿಯರು ಧ್ವನಿಯಾಗಿದ್ದರು. ಬಪ್ಪಿ ಲಹರಿ ಅವರ ಸಂಗೀತ ನಿರ್ದೇಶನ ಈ ಹಾಡಿಗಿತ್ತು.

ಹಾಡು-ಕ್ಯಾ ಹುವಾ, ಯೇ ಮುಜೆ ಕ್ಯಾ ಹುವಾ-ಚಿತ್ರದ ಹೆಸರು- ಜಿಸ್ ದೇಶ್ ಮೇ ಗಂಗ್ತಾ ಬೆಹ್ತಿ ಹೈ- ಬಿಡುಗಡೆಯಾದ ವರ್ಷ- 1960

1960ರಲ್ಲಿ ಬಿಡುಗಡೆಯಾದ ''ಜಿಸ್ ದೇಶ್ ಮೇ ಗಂಗ್ತಾ ಬೆಹ್ತಿ ಹೈ'' ಸಿನಿಮಾದ ''ಕ್ಯಾ ಹುವಾ, ಯೇ ಮುಜೆ ಕ್ಯಾ ಹುವಾ'' ಹಾಡು ಕೇಳಿ ರಾಜ್ ಕಪೂರ್ ಲತಾ ಮಂಗೇಶ್ಕರ್ ಅವರ ಧ್ವನಿಗೆ ಅಭಿಮಾನಿಯಾಗಿದ್ದರು. ಇಬ್ಬರು ಸಹೋದರಿಯರು ಹಾಡುತ್ತಾ ತಮ್ಮ ಪ್ರೇಮ ಪ್ರಣಯದ ವಿಷಯವ್ನನು ಹಂಚಿಕೊಲ್ಳುವ ಈ ಹಾಡಿಗೆ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಜೀವ ತುಂಬಿದ್ದರು. ಹಾಡಿಗೆ ಶಂಕರ್-ಜೈಕಿಶನ್ ಸಂಗೀತ ನೀಡಿದ್ದರು.

ಕೇವಲ ಈ ಹಾಡುಗಳು ಮಾತ್ರವಲ್ಲ ''ಏಕ್ ಸೇ ಬಡ್ಕರ್ ಏಕ್'' ಚಿತ್ರದ ''ಲಾರೆ ಲಪ್ಪಾ ಲಾರೆ ಲಪ್ಪಾ ಲಾಯಿ ರಖ್ತಾ''..''ಫೂಲ್ ಖಿಲೇ ಹೈ ಗುಲ್ಶನ್ ಗುಲ್ಶನ್'' ಚಿತ್ರದ ''ಪ್ಯಾರ್ ಕಿ ಪೆಹ್ಲಿ ನಜರ್ ನೇ''..''ಮೇನ್ ತುಳಸಿ ತೇರೆ ಆಂಗನ್ ಕಿ'' ಚಿತ್ರದ ''ಚಾಪ್ ತಿಲಕ್ ಸಬ್ ಛೀನಿ''..''ಹಮ್ ಪಾಂಚ್'' ಚಿತ್ರದ ''ಹಮ್ ಪಾಂಚೋಂ ಪಾಂಡವ್ ಅಪ್ನಿ ಮಾತಾ ಕೆ''.. ಹೀಗೆ ಹಲವಾರು ಜನಪ್ರಿಯ ಹಾಡುಗಳನ್ನು ಈ ಸಹೋದರಿಯರು ಹಾಡಿದ್ದರು. ತಮ್ಮ ಕಂಠದ ಮೂಲಕ ಜನ ಮನ ಗೆದ್ದಿದ್ದರು.

More from Filmibeat

English summary
Two sisters, one throne. Explore the top Asha Bhosle and Lata Mangeshkar collaborations that transformed Indian cinema. Click to hear the stories behind the masterpieces that made them the undisputed Queens of Melody.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X