2020ರಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಅನುಷ್ಕಾ-ಕೊಹ್ಲಿ ಪೋಸ್ಟ್
ಆಗಸ್ಟ್ ತಿಂಗಳಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಂಪತಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿ ನೀಡಿದರು. ಅನುಷ್ಕಾ-ಕೊಹ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.
ಅನುಷ್ಕಾ ಶರ್ಮಾ ಗರ್ಭಿಣಿ ಎಂದು ಪ್ರಕಟಿಸಿದ ವಿರಾಟ್ ಕೊಹ್ಲಿಯ ಟ್ವಿಟ್ಟರ್ ಪೋಸ್ಟ್ ಈ ವರ್ಷದಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ ಎಂದು ಟ್ವಿಟ್ಟರ್ ಇಂಡಿಯಾ ಘೋಷಿಸಿದೆ.
ಈ ಬಗ್ಗೆ ಟ್ವಿಟ್ಟರ್ ಇಂಡಿಯಾ ಅಧಿಕೃತವಾಗಿ ಟ್ವಿಟ್ಟರ್ ಖಾತೆಯಲ್ಲಿ ಕೊಹ್ಲಿ ಪೋಸ್ಟ್ ಹಂಚಿಕೊಂಡು ಪ್ರಕಟಿಸಿದೆ.

ಆಗಸ್ಟ್ 27 ರಂದು ವಿರಾಟ್ ಕೊಹ್ಲಿ ''ನಾವು ಇನ್ಮುಂದೆ ಮೂವರು, 2021ರಲ್ಲಿ ಹೊಸ ವ್ಯಕ್ತಿಯ ಆಗಮನ'' ಎಂದು ಟ್ವೀಟ್ ಮಾಡಿದ್ದರು. ಇದುವರೆಗೂ ಈ ಪೋಸ್ಟ್‌ಗೆ 644K ಲೈಕ್ಸ್ ಬಂದಿದೆ.
ಅನುಷ್ಕಾ-ಕೊಹ್ಲಿ ದಂಪತಿಗೆ ಜಗತ್ತಿನಾದ್ಯಂತ ಸೆಲೆಬ್ರಿಟಿಗಳು ಟ್ವಿಟ್ಟರ್ ಮೂಲಕ ಶುಭಕೋರಿದ್ದರು. ಅನುಷ್ಕಾ ಗರ್ಭಿಣಿ ಎಂದು ಘೋಷಿಸಿದ ಬಳಿಕ ವಿರಾಟ್ ಪತ್ನಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸ್ವತಃ ಕೊಹ್ಲಿ ಹೇಳಿರುವ ಪ್ರಕಾರ ಹೊಸ ವರ್ಷದಲ್ಲಿ ಅಂದ್ರೆ ಜನವರಿ ತಿಂಗಳಲ್ಲಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡಲಿದ್ದಾರೆ. 2017ರ ಡಿಸೆಂಬರ್ ತಿಂಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ವಿವಾಹವಾಗಿದ್ದರು.


Click it and Unblock the Notifications











