twitter
    For Quick Alerts
    ALLOW NOTIFICATIONS  
    For Daily Alerts

    ದಿ ಫ್ಲಾಟ್‌ಫಾರ್ಮ್‌: ದೊಡ್ಡ ರಂಧ್ರದೊಳಗೆ ನಡೆವ ಭಯಾನಕ ಕತೆ

    |

    (ವಾರಕ್ಕೊಂದು, ಭಿನ್ನ ಕತೆ, ನಿರೂಪಣೆ ಹೊಂದಿರುವ ಸಿನಿಮಾಗಳನ್ನು ಪರಿಚಯಿಸುವ ಲೇಖನ ಸರಣಿ 'ಈ ಸಿನಿಮಾ ನೋಡಿದ್ದೀರಾ?)

    ಫ್ರೆಂಚ್ 'ದಿ ಫ್ಲಾಟ್‌ಫಾರ್ಮ್‌' ಬಹಳವೇ ಭಿನ್ನವಾದ ಕತೆ ಹೊಂದಿದ ಆದರೆ ಅದ್ಭುತವಾದ ಸಂದೇಶವನ್ನು, ನೋಡುಗನಲ್ಲಿ ಸಮಾಜದ ಬಗ್ಗೆ, ವ್ಯವಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸುವ ಸಿನಿಮಾ.

    ದೆವ್ವ, ಭೂತದ ಸಿನಿಮಾ ಅಲ್ಲದಿದ್ದರೂ ಭಯಾನಕವಾದ ಈ ಸಿನಿಮಾದ ಮೂಲ ಹೆಸರು 'ಎಲ್‌ ಹೋಯೊ' ಹೀಗೆಂದರೆ ರಂಧ್ರ ಎಂದು ಅರ್ಥ. ಸಿನಿಮಾದಲ್ಲಿ ಹಲವಾರು , ಅಮೂರ್ತ ಹೋಲಿಕೆಗಳು, ಗೂಡಾರ್ಥಗಳು ಇವೆ. ಕ್ರೌರ್ಯ, ಪ್ರೀತಿ, ಚಿಂತನೆ, ವೇದಾಂತ, ಕ್ರಾಂತಿ ಗಳೂ ಇವೆ.

    ಸಿನಿಮಾದ ಕತೆ ಪ್ರಾರಂಭವಾಗುವುದು ನಾಯಕ ಗೋರೆಂಗ್ 48 ನೇ ಕೊಠಡಿಯಲ್ಲಿ ಕಣ್ಣು ಬಿಡುತ್ತಾನೆ. ಅದೊಂದು ಎರಡು ಬೆಡ್ ಇರುವ ಕೊಠಡಿ. ಅಂಥಹಾ 333 ಕೊಠಡಿಗಳುಳ್ಳ ಬಹುಮಹಡಿ ಕಟ್ಟಡದ 48ನೇ ಕೊಠಡಿಯಲ್ಲಿ ಗೋರೆಂಗ್ ಎದ್ದಿದ್ದಾನೆ. ಆತನಿಗೊಬ್ಬ ರೂಮ್ ಮೇಟ್ ಸಹ ಇದ್ದಾನೆ. ಆತನಿಗೆ ವಯಸ್ಸಾಗಿದೆ. ಆತ ಹಲವು ತಿಂಗಳುಗಳಿಂದ ಆ ಕೊಠಡಿಯಲ್ಲಿಯೇ ಇದ್ದಾನೆ. ಪ್ರತಿ ವ್ಯಕ್ತಿಗಳು ಅವರಿಗೆ ಇಷ್ಟವಾಗುವ ಒಂದು ವಸ್ತುವನ್ನು ತೆಗೆದುಕೊಂಡು ಬರಬಹುದು. ಗೋರೆಂಗ್ ಪುಸ್ತಕ ತಂದಿರುತ್ತಾನೆ. ಆತನ ರೂಮ್‌ಮೇಟ್ ಚಾಕು ತಂದಿರುತ್ತಾನೆ.

    ಕನಸುಗಳ ಬಗ್ಗೆ ಕುತೂಹಲ ಹುಟ್ಟಿಸುವ 'ಕನಸಿನ ಸಿನಿಮಾ'ಕನಸುಗಳ ಬಗ್ಗೆ ಕುತೂಹಲ ಹುಟ್ಟಿಸುವ 'ಕನಸಿನ ಸಿನಿಮಾ'

    333 ಕೊಠಡಿಗಳ ಮಧ್ಯ ಭಾಗದಲ್ಲಿ ಒಂದು ದೊಡ್ಡ ಚೌಕಾಕಾರದ ರಂಧ್ರವಿದೆ. ಬಹುಮಹಡಿಗಳಿಗೆ ಲಿಫ್ಟ್‌ ರಂಧ್ರ ಇದ್ದಂತೆ. ಆ ರಂಧ್ರದಲ್ಲಿ ಮೇಲ್ಭಾಗದಿಂದ ದೊಡ್ಡ ಟೇಬಲ್‌ ನಲ್ಲಿ ಊಟ ಬರುತ್ತದೆ. ಪ್ರತಿ ಕೊಠಡಿಬಳಿ ಒಂದು ನಿಮಿಷ ನಿಲ್ಲುತ್ತದೆ ನಂತರ ಕೆಳಗಿನ ಕೊಠಡಿಗೆ ಹೋಗುತ್ತದೆ. ಅಷ್ಟರಲ್ಲಿ ಆ ಕೊಠಡಿಯ ಇಬ್ಬರು ಊಟ ಮಾಡಬೇಕು. ಊಟ ಎತ್ತಿಟ್ಟುಕೊಂಡರೆ ಅವರಿಗೆ ತೀವ್ರ ಚಳಿ ಕಾಡುತ್ತದೆ, ಹಾಗಾಗಿ ಊಟ ಎತ್ತಿಟ್ಟುಕೊಳ್ಳುವ ಹಾಗಿಲ್ಲ.

    150 ನೇ ಕೊಠಡಿ ಕೆಳಗಿರುವವರಿಗೆ ಊಟ ಸಿಗುವುದಿಲ್ಲ

    150 ನೇ ಕೊಠಡಿ ಕೆಳಗಿರುವವರಿಗೆ ಊಟ ಸಿಗುವುದಿಲ್ಲ

    ಪ್ರತಿತಿಂಗಳು ಅಲ್ಲಿನ ನಿವಾಸಿಗಳ ಕೊಠಡಿ ಬದಲಾಗುತ್ತದೆ. ಮೇಲಿನಿಂದ ಬರುವ ಊಟ ಸುಮಾರು 150ನೇ ಕೊಠಡಿಗೆ ಬರುವ ವೇಳೆಗೆ ಖಾಲಿಯಾಗಿಬಿಡುತ್ತದೆ. ಅದಕ್ಕಿಂತಲೂ ಕೆಳಗಿರುವರಿಗೆ ಊಟವೇ ಸಿಗುವುದಿಲ್ಲ. ಒಂದು ತಿಂಗಳು ಅವರು ಆಹಾರವಿಲ್ಲದೆ ನರಳಬೇಕು, ಅಥವಾ ತಮ್ಮ ರೂಮ್‌ಮೇಟ್ ಅನ್ನು ಕೊಂದು ತಿನ್ನಬೇಕು. ಮೊದಲ ತಿಂಗಳು 48 ನೇ ಕೊಠಡಿಯಲ್ಲಿದ್ದ ನಾಯಕ ಗೋರೆಂಗ್ ಎರಡನೇ ತಿಂಗಳಿಗೆ 171 ನೇ ಕೊಠಡಿಗೆ ಶಿಫ್ಟ್‌ ಆಗುತ್ತಾನೆ ಗೋರೆಂಗ್ ಮತ್ತು ಆತನ ರೂಮ್‌ಮೇಟ್. ಊಟ ಹೊತ್ತ ಲಿಫ್ಟ್‌ ಅಲ್ಲಿಗೆ ಬರುವವೇಳೆಗೆ ಊಟ ಖಾಲಿಯಾಗಿರುತ್ತದೆ.

    ಗೋರೆಂಗ್ ಅನ್ನು ತಿನ್ನಲು ಯತ್ನಿಸುತ್ತಾರೆ ವೃದ್ಧ ರೂಮ್‌ಮೇಟ್

    ಗೋರೆಂಗ್ ಅನ್ನು ತಿನ್ನಲು ಯತ್ನಿಸುತ್ತಾರೆ ವೃದ್ಧ ರೂಮ್‌ಮೇಟ್

    ಆಗ ಗೋರೆಂಗ್ ನ ವೃದ್ಧ ರೂಮ್‌ಮೇಟ್ ಗೋರೆಂಗ್ ಏಳುವ ಮುನ್ನವೇ ಆತನ್ನು ಕಟ್ಟಿಹಾಕಿ, ಹಾಕಿ ಆತನನ್ನು ಕತ್ತರಿಸಿ ತಿನ್ನಲು ಯತ್ನಿಸುತ್ತಾನೆ ಅಷ್ಟರಲ್ಲಿಯೇ, ಆ ಲಿಫ್ಟ್‌ನ ಜೊತೆಗೆ ಮಿಹಾರು ಹೆಸರಿನ ಯುವತಿಯೊಬ್ಬಳು ಬಂದು ವೃದ್ಧನನ್ನು ಹೊಡೆದು ಜೋರೆಂಗ್ ಅನ್ನು ರಕ್ಷಿಸುತ್ತಾಳೆ. ಜೋರೆಂಗ್ ತನ್ನೊಂದಿಗೆ ತಂದಿದ್ದ ಪುಸ್ತಕವನ್ನು ತಿಂದು ಬದುಕುತ್ತಾನೆ. ಮುಂದಿನ ತಿಂಗಳು ಗೋರೆಂಗ್ 33ನೇ ಕೊಠಡಿಯಲ್ಲಿ ಏಳುತ್ತಾನೆ. ಅಲ್ಲಿ ಮಹಿಳೆಯೊಬ್ಬಾಕೆ ಆತನೊಂದಿಗೆ ಇರುತ್ತಾಳೆ. ಅಲ್ಲಿ ಸಾಕಷ್ಟು ಆಹಾರ ಅವರಿಗೆ ಸಿಗುತ್ತದೆ. ಆದರೆ ಇಬ್ಬರೂ ಕಡಿಮೆ ಆಹಾರ ತಿನ್ನುತ್ತಾರೆ. ಅವರ ಕೆಳಗಿನವರಿಗೂ ಕಡಿಮೆ ಆಹಾರ ತಿನ್ನುವಂತೆ ಹೇಳುತ್ತಾರೆ ಆದರೆ ಅವರು ಕೇಳುವುದಿಲ್ಲ.

    ಮಹಿಳೆಯನ್ನು ತಿಂದು ಬದುಕುತ್ತಾನೆ ಗೋರೆಂಗ್

    ಮಹಿಳೆಯನ್ನು ತಿಂದು ಬದುಕುತ್ತಾನೆ ಗೋರೆಂಗ್

    ಮುಂದಿನ ತಿಂಗಳು ಗೋರೆಂಗ್ ಹಾಗೂ ಮಹಿಳೆಯನ್ನು 202ನೇ ಕೊಠಡಿಗೆ ಶಿಫ್ಟ್ ಮಾಡಲಾಗುತ್ತದೆ. ಗೋರೆಂಗ್ ಏಳುವ ಹೊತ್ತಿಗೆ ಮಹಿಳೆ ನೇಣು ಹಾಕಿಕೊಂಡಿರುತ್ತಾಳೆ. ಮಹಿಳೆ ಮೊದಲೇ ಹೇಳಿದ್ದಂತೆ, ಗೋರೆಂಗ್ ಅವಳನ್ನೇ ತುಂಡು ಮಾಡಿ ತಿನ್ನುತ್ತಾನೆ. ಮುಂದಿನ ತಿಂಗಳು ಗೋರೆಂಗ್ ಅನ್ನು 6 ನೇ ಕೊಠಡಿಗೆ ಹಾಕಲಾಗುತ್ತದೆ. ಅಲ್ಲಿ ಕಪ್ಪುವರ್ಣೀಯ ಭಾರಟ್ ಎಂಬಾತ ರೂಮ್‌ಮೇಟ್. ಆತ ತನ್ನಲ್ಲಿರುವ ಹಗ್ಗದ ಸಹಾಯದಿಂದ ಮೇಲಿನ ಕೊಠಡಿಗೆ ಹೋಗಲು ಯತ್ನಿಸುತ್ತಲೇ ಇರುತ್ತಾನೆ, ಆದರೆ ಮೇಲಿನವರು ಅವನನ್ನು ಹಿಯಾಳಿಸಿ ಕೆಳಗೆ ತಳ್ಳುತ್ತಿರುತ್ತಾರೆ.

    ಊಟವನ್ನು ಕೊನೆಯ ಕೊಠಡಿಗೆ ಕೊಂಡೊಯ್ಯಲು ನಿರ್ಧರಿಸುತ್ತಾರೆ

    ಊಟವನ್ನು ಕೊನೆಯ ಕೊಠಡಿಗೆ ಕೊಂಡೊಯ್ಯಲು ನಿರ್ಧರಿಸುತ್ತಾರೆ

    ಕೊನೆಗೆ ಗೋರೆಂಗ್ ಮತ್ತು ಭಾರಟ್ ಇಬ್ಬರೂ , 'ಆಹಾರವನ್ನು ಕೊನೆಯ ಕೊಠಡಿಯ ವರೆಗೆ ತೆಗೆದುಕೊಂಡು ಹೋಗಲು ನಿರ್ಧರಿಸಿ ಆಹಾರದ ಲಿಫ್ಟ್‌ಮೇಲೆ ಅಸ್ತ್ರಗಳನ್ನು ಹಿಡಿದು ಹತ್ತುತ್ತಾರೆ' ಅಂತೆಯೇ ಪ್ರತಿ ಕೊಠಡಿಗೆ ಹೋದಾಗ ಬೆದರಿಸಿಯಾದರೂ ಅವರಿಗೆ ಅವಶ್ಯಕ ಇರುವಷ್ಟೇ ಆಹಾರ ಕೊಡುತ್ತಾರೆ. ಲಿಫ್ಟ್‌ನಲ್ಲಿ ಕೆಳಗೆ ಹೋಗುತ್ತಿರುಬೇಕಾದರೆ ಒಂದು ಕೋಣೆಯಲ್ಲಿ ವ್ಯಕ್ತಿಯೊಬ್ಬ ಮಿಹಾರು ಅನ್ನು ಕೊಲ್ಲುತ್ತಿರುವುದು ಕಾಣುತ್ತದೆ. ಆಕೆಯನ್ನು ಬದುಕಿಸುವ ಪ್ರಯತ್ನ ಮಾಡುತ್ತಾರೆ ಆದರೆ ಆಗುವುದಿಲ್ಲ. ಇಬ್ಬರಿಗೂ ತೀವ್ರ ಗಾಯಗಳಾಗುತ್ತವೆ.

    ಕೊನೆಯ ಕೊಠಡಿಯಲ್ಲಿ ಪುಟ್ಟ ಮಗು ಸಿಗುತ್ತದೆ

    ಕೊನೆಯ ಕೊಠಡಿಯಲ್ಲಿ ಪುಟ್ಟ ಮಗು ಸಿಗುತ್ತದೆ

    ಕೊನೆಯ 333ನೇ ಕೊಠಡಿಗೆ ಬಂದಾಗ ಅಲ್ಲಿ ಒಂದು ಪುಟ್ಟ ಹೆಣ್ಣು ಮಗು ಕಾಣುತ್ತದೆ. ಗೋರೆಂಗ್ ಹಾಗೂ ಭರಟ್ ಮೇಲಿನವರಿಗೆ ಅಂದರೆರಂಧ್ರಕ್ಕೆ ಆಹಾರ ಕಳಿಸುತ್ತಿರುವವರಿಗೆ, (ರಂಧ್ರದ ಒಳಗೆ ಏನಾಗುತ್ತಿದೆ ಎಂಬುದು ಅವರಿಗೂ ಗೊತ್ತಿರುವುದಿಲ್ಲ) ಸಂದೇಶ ಕಳಿಸಲೆಂದು ಇಟ್ಟುಕೊಂಡಿದ್ದ 'ಪ್ಯಾನಾ ಕೋಟಾ' ಕೇಕ್ ಅನ್ನು ಮಗುವಿಗೆ ಕೊಡುತ್ತಾರೆ. ಆ ಮಗುವೇ ನಾವು ಮೇಲಿನವರಿಗೆ ಕೊಡುವ ಸಂದೇಶ ಎಂದು ವಾಪಸ್ ಮೇಲಕ್ಕೆ ಹೋಗುತ್ತಿರುವ ಲಿಫ್ಟ್‌ ಮೇಲೆ ಮಗುವನ್ನು ಮಲಗಿಸುತ್ತಾರೆ.

    ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ

    ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ

    ಸಮಾಜದಲ್ಲಿನ ಅಸಮಾನತೆ, ಮೇಲಿನವರ ಸಣ್ಣತನಗಳು, ಕೆಳಗಿನವರ ಪ್ರಯತ್ನಗಳು, ಪರಸ್ಪರ ಕಿತ್ತಾಟಗಳು ಹೀಗೆ ಹಲವು ವಿಷಯಗಳ ಬಗ್ಗೆ ಸಿನಿಮಾ ಬೆಳಕು ಚೆಲ್ಲುತ್ತದೆ. ಸಿನಿಮಾವು ಸಮಾಜದಲ್ಲಿನ ಅಸಮಾನತೆಯನ್ನು ಪ್ರೇಕ್ಷಕನೆದುರು ತೆರೆದಿಡುತ್ತದೆ. ಸಿನಿಮಾವನ್ನು ಗಾಲ್ಡೆರ್ ಗಾಸ್ತೆಲು ನಿರ್ದೇಶಿಸಿದ್ದು, ನೆಟ್‌ಫ್ಲಿಕ್ಸ್‌ ನಲ್ಲಿ ವೀಕ್ಷಣೆಗೆ ಲಭ್ಯವಿದೆ.

    English summary
    The Platform or El Hoyo is a Spanish movie. Its a dark movie but strongly talks about discrimination in society.
    Saturday, November 7, 2020, 14:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X