twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಟು ಪ್ಯಾನ್‌ಇಂಡಿಯಾ: 'ಹೊಂಬಾಳೆ ಸಂಸ್ಥೆ' ಬೆಳೆದು ಬಂದ ಕಥೆ

    |

    ವೀರಾಸ್ವಾಮಿ ಈಶ್ವರಿ ಸಂಸ್ಥೆ, ಕೆಸಿಎನ್ ಸಂಸ್ಥೆ, ಪಾರ್ವತಮ್ಮ ರಾಜ್ ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್, ದ್ವಾರಕೀಶ್ ಚಿತ್ರ, ರಾಕ್‌ಲೈನ್ ವೆಂಕಟೇಶ್ ಅವರ ರಾಕ್‌ಲೈನ್ ಎಂಟರ್‌ಪ್ರೈಸಸ್, ರಾಮು ಫಿಲಂಸ್ ಹೀಗೆ...., ಕನ್ನಡದಲ್ಲಿ ಹಲವು ಯಶಸ್ವಿ ಚಲನಚಿತ್ರ ನಿರ್ಮಾಣ ಸಂಸ್ಥೆಗಳಿವೆ. ಈ ಸಂಸ್ಥೆಗಳಿಂದ ಅನೇಕ ಹಿಟ್ ಚಿತ್ರಗಳು, ಒಳ್ಳೆಯ ಚಿತ್ರಗಳು ಬಂದಿವೆ. ಇಂತಹ ಸಾಲಿಗೆ ಸೇರುವ ಮತ್ತೊಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್.

    ವಿಜಯ್ ಕಿರಗಂದೂರ್ ಸಾರಥ್ಯದ ಹೊಂಬಾಳೆ ಫಿಲಂಸ್ ಸದ್ಯ ಕನ್ನಡದ ಚಿತ್ರರಂಗದ ಹಮ್ಮೆ ಅಂತಾನೇ ಹೇಳಬಹುದು. ರಾಷ್ಟ್ರಮಟ್ಟದಲ್ಲಿ ಕನ್ನಡ ಸಿನಿಮಾ ಹಾಗೂ ಇಂಡಸ್ಟ್ರಿಯ ತಾಕತ್ ಸಾಬೀತು ಪಡಿಸಿದೆ. ಈ ಸಂಸ್ಥೆ ನಿರ್ಮಿಸಿದ ಕೆಜಿಎಫ್ ಚಾಪ್ಟರ್ 1 ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆ ನಿರ್ಮಿಸಿದೆ. ಕನ್ನಡ ಇಂಡಸ್ಟ್ರಿಗೆ ಪ್ಯಾನ್ ಇಂಡಿಯಾ ಮಹತ್ವ ತಂದುಕೊಟ್ಟಿದೆ. ಹೊಂಬಾಳೆ ಫಿಲಂಸ್ ಶುರುವಾಗಿದ್ದು ಯಾವಾಗ? ಈ ಸಂಸ್ಥೆಯ ಅಡಿ ಬಂದ ಸಿನಿಮಾಗಳು ಯಾವುದು? ಎಂಬ ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ...

    ಹೊಂಬಾಳೆ ಫಿಲ್ಮ್ಸ್ ಗೆ 6 ವರ್ಷ: ಪಾರ್ಟಿಯಲ್ಲಿ ಪುನೀತ್, ಯಶ್ ಭಾಗಿಹೊಂಬಾಳೆ ಫಿಲ್ಮ್ಸ್ ಗೆ 6 ವರ್ಷ: ಪಾರ್ಟಿಯಲ್ಲಿ ಪುನೀತ್, ಯಶ್ ಭಾಗಿ

    2014ರಲ್ಲಿ ಹೊಂಬಾಳೆ ಫಿಲಂಸ್ ಆರಂಭ

    2014ರಲ್ಲಿ ಹೊಂಬಾಳೆ ಫಿಲಂಸ್ ಆರಂಭ

    2014ರಲ್ಲಿ 'ನಿನ್ನಿಂದಲೇ' ಚಿತ್ರ ನಿರ್ಮಾಣ ಮಾಡುವುದರ ಮೂಲಕ ಹೊಂಬಾಳೆ ಸಂಸ್ಥೆ ಸ್ಯಾಂಡಲ್‌ವುಡ್ ಪ್ರವೇಶಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಈ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ತಯಾರಾಗಿತ್ತು. ಚಿತ್ರದ ಬಹುತೇಕ ಶೂಟಿಂಗ್ ವಿದೇಶದಲ್ಲಿ ನಡೆದಿತ್ತು. ಆದರೆ, ಸಿನಿಮಾ ರಿಲೀಸ್ ಆದ್ಮೇಲೆ ನಿರೀಕ್ಷೆಯಂತೆ ಸಕ್ಸಸ್ ಸಿಕ್ಕಿಲ್ಲ. ಅಪ್ಪು ಫ್ಯಾನ್ಸ್ ನಿರಾಸೆಯಾದರು.

    ತೆಲುಗು ಡೈರೆಕ್ಟರ್ ಜಯಂತ್

    ತೆಲುಗು ಡೈರೆಕ್ಟರ್ ಜಯಂತ್

    'ನಿನ್ನಿಂದಲೇ' ಚಿತ್ರ ನಿರ್ದೇಶನ ಮಾಡಿದ್ದು ತೆಲುಗಿನ ಖ್ಯಾತ ನಿರ್ದೇಶಕ ಜಯಂತ್ ಸಿ ಪರಂಜಿ. ಈಶ್ವರ್, ಶಂಕರ್ ದಾದಾ ಎಂಬಿಬಿಎಸ್, ತೀನ್‌ಮಾರ್ ಅಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ಜಯಂತ್, ಕನ್ನಡದಲ್ಲಿ ಮಾಡಿದ ಮೊದಲ ಚಿತ್ರ. ಔಟ್ ಅಂಡ್ ಔಟ್ ಲವ್ ಸ್ಟೋರಿ ರೆಡಿ ಮಾಡಿ, ಮಿಲನ ರೀತಿ ಹಿಟ್ ಆಗಲಿದೆ ಎಂಬ ಭರವಸೆಯಲ್ಲಿ ನಿರ್ಮಿಸಿದ ಚಿತ್ರ ಇದು. ಆದರೆ ಹೊಂಬಾಳೆ ಸಂಸ್ಥೆಗೂ ನಿರಾಸೆ ಆಯಿತು.

    ಸಿನಿ ಕಾರ್ಮಿಕರ ನೆರವಿಗೆ ನಿಂತ ಹೊಂಬಾಳೆ: 32 ಲಕ್ಷ ರೂ. ನೀಡಿದ ವಿಜಯ್ ಕಿರಗಂದೂರ್ಸಿನಿ ಕಾರ್ಮಿಕರ ನೆರವಿಗೆ ನಿಂತ ಹೊಂಬಾಳೆ: 32 ಲಕ್ಷ ರೂ. ನೀಡಿದ ವಿಜಯ್ ಕಿರಗಂದೂರ್

    ಅದೃಷ್ಟ ಕೊಟ್ಟ ಮಾಸ್ಟರ್‌ಪೀಸ್

    ಅದೃಷ್ಟ ಕೊಟ್ಟ ಮಾಸ್ಟರ್‌ಪೀಸ್

    2015ರಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ 'ಮಾಸ್ಟರ್ ಪೀಸ್' ಸಿನಿಮಾ ಮಾಡಿದರು. ಕಮರ್ಷಿಯಲ್ ಆಗಿ ಈ ಸಿನಿಮಾ ಹೆಚ್ಚು ಸಕ್ಸಸ್ ಆಯಿತು. ಬಾಕ್ಸ್ ಆಫೀಸ್‌ನಲ್ಲೂ ಒಳ್ಳೆಯ ಗಳಿಕೆ ಕಂಡಿತ್ತು. ಮಂಜು ಮಾಂಡವ್ಯ ನಿರ್ದೇಶನ ಮಾಡಿದ್ದರು. ಹೊಂಬಾಳೆ ಹಾಗೂ ಯಶ್ ಕಾಂಬಿನೇಷನ್ ಮೊದಲ ಸಿನಿಮಾ ಇದು.

    ಇಂಡಸ್ಟ್ರಿ ಹಿಟ್ ರಾಜಕುಮಾರ

    ಇಂಡಸ್ಟ್ರಿ ಹಿಟ್ ರಾಜಕುಮಾರ

    'ನಿನ್ನಿಂದಲೇ' ಹಿನ್ನಡೆ ಬಳಿಕ ಪುನೀತ್ ಜೊತೆ 'ರಾಜಕುಮಾರ' ಮಾಡಿದರು. 2017ರಲ್ಲಿ ಬಂದ ಈ ಸಿನಿಮಾ ಇಂಡಸ್ಟ್ರಿ ಹಿಟ್. ವರದಿಗಳ ಪ್ರಕಾರ 75 ಕೋಟಿವರೆಗೂ ಬಿಸಿನೆಸ್ ಮಾಡಿದೆ. 'ರಾಜಕುಮಾರ' ಸಿನಿಮಾ ಮೂಲಕ ಸಂತೋಷ್ ಆನಂದ್ ಮೊದಲ ಸಲ ಹೊಂಬಾಳೆ ಸಂಸ್ಥೆ ಜೊತೆ ಕೈ ಜೋಡಿಸಿದರು.

    ಇತಿಹಾಸ ನಿರ್ಮಿಸಿದ ಕೆಜಿಎಫ್

    ಇತಿಹಾಸ ನಿರ್ಮಿಸಿದ ಕೆಜಿಎಫ್

    'ಮಾಸ್ಟರ್ ಪೀಸ್' ನಂತರ ಯಶ್ ಜೊತೆ ಕೆಜಿಎಫ್ ಚಾಪ್ಟರ್ 1 ಶುರು ಮಾಡಿದರು. 'ಉಗ್ರಂ' ಯಶಸ್ಸಿನಲ್ಲಿದ್ದ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜವಾಬ್ದಾರಿ ತೆಗೆದುಕೊಂಡಿದ್ದರು. ಕನ್ನಡದಲ್ಲಿ ಮಾತ್ರ ಅಂದುಕೊಂಡು ಆರಂಭಿಸಿದ ಈ ಪ್ರಾಜೆಕ್ಟ್ ಸಿನಿಮಾ ಮುಗಿಯುತ್ತಿಗೆ ಪ್ಯಾನ್ ಇಂಡಿಯಾ ಬಿಡುಗಡೆ ಮಾಡಲು ನಿರ್ಧರಿಸಿದರು. ರಿಲೀಸ್ ಆದ್ಮೇಲೆ ಈ ಚಿತ್ರಕ್ಕೆ ಸಿಕ್ಕ ಯಶಸ್ಸು ಕನ್ನಡ ಇಂಡಸ್ಟ್ರಿಗೆ ಹೆಮ್ಮೆ. ಈ ಸಿನಿಮಾದ ಸಕ್ಸಸ್, ಹೊಂಬಾಳೆ ಸಂಸ್ಥೆಗೆ ಪ್ಯಾನ್ ಇಂಡಿಯಾ ಗುರುತು ತಂದುಕೊಡ್ತು.

    ಪುನೀತ್ 'ಯುವರತ್ನ' ಹಿಟ್

    ಪುನೀತ್ 'ಯುವರತ್ನ' ಹಿಟ್

    ಪುನೀತ್ ರಾಜ್ ಕುಮಾರ್ ಜೊತೆ ಹೊಂಬಾಳೆ ಮಾಡಿದ ಮೂರನೇ ಸಿನಿಮಾ ಯುವರತ್ನ. ಸಂತೋಷ್ ಆನಂದ್ ರಾಮ್ ಜೊತೆ ಎರಡನೇ ಸಿನಿಮಾ. ಕಳೆದ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಕಾಂಬಿನೇಷನ್‌ನಲ್ಲಿ ಇನ್ನೊಂದು ಚಿತ್ರ ಬರಲಿದೆ. ಸ್ವತಃ ಸಂತೋಷ್ ಈ ಕುರಿತು ಅಧಿಕೃತ ಮಾಡಿದ್ದರು.

    ಮತ್ತೊಂದು ಹಂತಕ್ಕೆ ಕೆಜಿಎಫ್ ಚಾಪ್ಟರ್

    ಮತ್ತೊಂದು ಹಂತಕ್ಕೆ ಕೆಜಿಎಫ್ ಚಾಪ್ಟರ್

    ನಿರೀಕ್ಷೆಗೆ ಮೀರಿದ ಯಶಸ್ಸು ತಂದುಕೊಟ್ಟ ಕೆಜಿಎಫ್ ಸಿನಿಮಾದ ಮುಂದುವರಿದ ಭಾಗ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಮೇಲೆ ಹೆಚ್ಚು ಲೆಕ್ಕಾಚಾರ ಹುಟ್ಟಿಕೊಂಡಿದೆ. ಗಳಿಕೆ, ರೆಕಾರ್ಡ್ ಎಲ್ಲದರ ಮೇಲೂ ದೊಡ್ಡ ಚರ್ಚೆಗಳೇ ನಡೆಯುತ್ತಿದೆ. ಈ ಚಿತ್ರದ ಬಳಿಕ ಹೊಂಬಾಳೆ ಸಂಸ್ಥೆಯ ಇಮೇಜ್ ಮತ್ತಷ್ಟು ಎತ್ತರಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

    ಪ್ರಭಾಸ್ ಜೊತೆ ಸಲಾರ್

    ಪ್ರಭಾಸ್ ಜೊತೆ ಸಲಾರ್

    ಪ್ರಭಾಸ್ ಸಿನಿಮಾವೊಂದಕ್ಕೆ 100 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ವರದಿ ಇದೆ. ಅಂತಹ ನಟನ ಜೊತೆ ಹೊಂಬಾಳೆ ಸಂಸ್ಥೆ ಸಲಾರ್ ಚಿತ್ರ ಮಾಡ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದ್ರೆ ನೂರು ಕೋಟಿ ಖರ್ಚು ಮಾಡೋಕು ರೆಡಿ, ನೂರು ಕೋಟಿ ಸಂಭಾವನೆ ಕೊಡೋಕು ರೆಡಿ ಇರುವ ಸಂಸ್ಥೆ ಎಂದು ಪರಿಗಣಿಸಬಹುದು.

    ಮುಂದಿನ ಸಿನಿಮಾಗಳು

    ಮುಂದಿನ ಸಿನಿಮಾಗಳು

    ಭಾರತೀಯ ಸಿನಿಮಾರಂಗದಲ್ಲಿ ತನ್ನದೇ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಹೊಂಬಾಳೆ ಸಂಸ್ಥೆಯಲ್ಲಿ ಇನ್ನು ಹಲವು ಚಿತ್ರಗಳು ಬರಲಿದೆ. ಸದ್ಯಕ್ಕೆ ಶ್ರೀಮುರಳಿ ಜೊತೆ 'ಬಘೀರಾ', ಪುನೀತ್-ಪವನ್ ಕುಮಾರ್ ಜೋಡಿಯಲ್ಲಿ 'ದ್ವಿತ್ವ', ರಕ್ಷಿತ್ ಶೆಟ್ಟಿ ಜೊತೆ 'ರಿಚರ್ಡ್ ಆಂಟನಿ' ಸಿನಿಮಾ ಪ್ರಕಟಿಸಿದೆ. ತೆಲುಗಿನ ಸ್ಟಾರ್ ನಟರ ಜೊತೆಯೂ ಮಾತುಕತೆ ನಡೆಯುತ್ತಿವೆ ಎನ್ನುವ ಮಾಹಿತಿ ಇದೆ.

    English summary
    Kannada to Pan India: The story of rise of the Hombale Films Production.
    Wednesday, July 21, 2021, 12:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X