For Quick Alerts
  ALLOW NOTIFICATIONS  
  For Daily Alerts

  ದರ್ಶನ್, ಸುದೀಪ್, ಶಿವಣ್ಣ, ಪುನೀತ್...ಈ ವರ್ಷ ಬಾಕ್ಸ್ ಆಫೀಸ್ 'ಕಿಂಗ್' ಯಾರು?

  |
  2019 ರಲ್ಲಿ 150 ಕೋಟಿ ಕಲೆಕ್ಷನ್ ಮಾಡಿದ ಹೀರೊ ಇವರೆ..?

  ಪ್ರತಿವರ್ಷದಂತೆ ಈ ವರ್ಷವೂ ಸ್ಯಾಂಡಲ್ವುಡ್ನಲ್ಲಿ ಭರ್ಜರಿ ಸಿನಿಮಾಗಳು ತೆರೆಕಂಡಿವೆ. ಅದರಲ್ಲೂ ಸ್ಟಾರ್ ನಟರು ಈ ವರ್ಷ ಹೆಚ್ಚು ಸದ್ದು ಮಾಡಿದ್ದಾರೆ. ಡಿ ಬಾಸ್ ದರ್ಶನ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ವರ್ಷವೆಲ್ಲಾ ಸುದ್ದಿಯಲ್ಲಿದ್ದರು.

  ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಒಂದೊಂದೆ ಚಿತ್ರಕ್ಕೆ ವರ್ಷಕ್ಕೆ ವಿದಾಯ ಹೇಳಿದ್ದರು. ಗಣೇಶ್ ಮತ್ತು ಜಗ್ಗೇಶ್ ತಮ್ಮದೇ ಟ್ಯಾಕ್ ನಲ್ಲಿ ಪ್ರೇಕ್ಷಕರನ್ನು ರಂಜಿಸಿದರು.

  ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?

  ಉಳಿದವರು ಅಲ್ಲೊಂದು ಇಲ್ಲೊಂದು ಚಿತ್ರದ ಮೂಲಕ ಸಿನಿಪ್ರೇಕ್ಷಕರ ಮುಂದೆ ಬಂದು ಹೋದರು. ಹಾಗಿದ್ರೆ, ಈ ವರ್ಷದ ಸಕ್ಸಸ್ ಫುಲ್ ನಟ ಯಾರು? ಯಾವ ನಟನಿಗೆ 2019 ವರದಾನ ಆಯ್ತು? ಮುಂದೆ ಓದಿ....

  ರೂಲ್ ಮಾಡಿದ ಡಿ-ಬಾಸ್

  ರೂಲ್ ಮಾಡಿದ ಡಿ-ಬಾಸ್

  ವರ್ಷಕ್ಕೆ ಒಂದೇ ಸಿನಿಮಾ ಮಾಡ್ತಿದ್ದ ದರ್ಶನ್ ಈ ವರ್ಷ ಮೂರು ಸಿನಿಮಾ ಬಿಡುಗಡೆ ಮಾಡಿದ್ದಾರೆ. ಮೊದಲು ತೆರೆಕಂಡ 'ಯಜಮಾನ' ಸಿನಿಮಾ ಶತದಿನ ಆಚರಿಸಿಕೊಂಡಿತ್ತು. 45-50 ಕೋಟಿ ಗಳಿಕೆ ಕಂಡಿತ್ತು ಎನ್ನಲಾಗಿದೆ. ಆಮೇಲೆ ಬಂದ 'ಕುರುಕ್ಷೇತ್ರ' ಸಿನಿಮಾನೂ ಶತದಿನ ಆಚರಿಸಿಕೊಂಡು, 100 ಕೋಟಿ ಕ್ಲಬ್ ಸೇರಿದ ಸಂಭ್ರಮ ಆಚರಿಸಿದ್ದರು. ವರ್ಷಾಂತ್ಯಕ್ಕೆ ಬಂದ 'ಒಡೆಯ' ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಒಟ್ನಲ್ಲಿ ಈ ವರ್ಷ ದರ್ಶನ್ ಮೂರು ಸಿನಿಮಾಗಳ ಮೂಲಕ ಹೆಚ್ಚು ಸದ್ದು ಮಾಡಿದ್ದಾರೆ.

  ಮಿಂಚಿದ ಹ್ಯಾಟ್ರಿಕ್ ಹೀರೋ

  ಮಿಂಚಿದ ಹ್ಯಾಟ್ರಿಕ್ ಹೀರೋ

  ಪ್ರತಿವರ್ಷದಂತೆ ಈ ವರ್ಷವೂ ಶಿವಣ್ಣನ ಚಿತ್ರಗಳು ಅಬ್ಬರಿಸಿದವು. ಆರಂಭದಲ್ಲಿ ಬಂದ 'ಕವಚ' ಸೆಂಚುರಿ ಸ್ಟಾರ್ ಗೆ ಖ್ಯಾತಿ ಹೆಚ್ಚಿಸಿತ್ತು. ನಂತರ ಬಂದ 'ರುಸ್ತುಂ' ಸಿನಿಮಾ ಹಾಗೂ 'ಆಯುಷ್ಮಾನ್ ಭವ' ಸೂಪರ್ ಡೂಪರ್ ಹಿಟ್ ಆಗಿಲ್ಲ ಅಂದ್ರೂ ಜನರ ಮೆಚ್ಚುಗೆ ಗಳಿಸುವಲ್ಲಿ ಸಕ್ಸಸ್ ಆಯ್ತು.

  2019ರಲ್ಲಿ ಅತಿ ಹೆಚ್ಚು ಟ್ರೋಲ್ ಆದ ಕನ್ನಡದ ಸಿನಿಮಾಗಳಿವು2019ರಲ್ಲಿ ಅತಿ ಹೆಚ್ಚು ಟ್ರೋಲ್ ಆದ ಕನ್ನಡದ ಸಿನಿಮಾಗಳಿವು

  ಮ್ಯಾಜಿಕ್ ಮಾಡಿದ ಪೈಲ್ವಾನ್

  ಮ್ಯಾಜಿಕ್ ಮಾಡಿದ ಪೈಲ್ವಾನ್

  ಕನ್ನಡದಲ್ಲಿ ಕಿಚ್ಚ ಸುದೀಪ್ ಮಾಡಿದ್ದ ಈ ವರ್ಷ ಒಂದೇ ಸಿನಿಮಾ. ಬಾಡಿ ಬಿಲ್ಡಿಂಗ್, ಸಿಕ್ಸ್ ಪ್ಯಾಕ್, ಕುಸ್ತಿ ಎಂದೆಲ್ಲಾ ಕುತೂಹಲ ಮೂಡಿಸಿದ್ದ ಸುದೀಪ್ ಪ್ರೇಕ್ಷಕರನ್ನ ನಿರಾಸೆ ಮಾಡಿಲ್ಲ. ಪೈಲ್ವಾನ್ ಸಿನಿಮಾ ಮೂಲಕ ಮ್ಯಾಜಿಕ್ ಮಾಡಿ ಗೆಲುವು ಕಂಡರು. ಜೊತೆಗೆ ತೆಲುಗಿನ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ಮುಖ್ಯಪಾತ್ರ ಮಾಡಿ ಗಮನ ಸೆಳೆದರು.

  ಮೋಡಿ ಮಾಡಿದ ಜಗ್ಗೇಶ್

  ಮೋಡಿ ಮಾಡಿದ ಜಗ್ಗೇಶ್

  ಹಿರಿಯ ನಟ ಜಗ್ಗೇಶ್ ಅಭಿನಯದ ಎರಡು ಚಿತ್ರಗಳು ಈ ವರ್ಷ ರಿಲೀಸ್ ಆಯ್ತು. ಎರಡೂ ಸಿನಿಮಾನೂ ಪ್ರೇಕ್ಷಕರ ಮನ ಸೆಳೆಯಿತು. ಭಾವನಾತ್ಮಕವಾಗಿ ಗೆಲುವು ಕಂಡ ಸಿನಿಮಾ ಪ್ರೀಮಿಯರ್ ಪದ್ಮಿನಿ ಮತ್ತು ಭಾಷಾಭಿಮಾನದ ಗೆಲುವು ಕಂಡ ಕಾಳಿದಾಸ ಕನ್ನಡ ಮೇಷ್ಟ್ರು ಈ ವರ್ಷ ಜಗ್ಗೇಶ್ ಅವರಿಗೆ ಖುಷಿ ತಂದಿದೆ.

  ಈ ವರ್ಷದಲ್ಲಿ 'ವಿವಾದ'ಕ್ಕೆ ಗುರಿಯಾಗಿದ್ದ ಸ್ಟಾರ್ ನಟರ ಚಿತ್ರಗಳುಈ ವರ್ಷದಲ್ಲಿ 'ವಿವಾದ'ಕ್ಕೆ ಗುರಿಯಾಗಿದ್ದ ಸ್ಟಾರ್ ನಟರ ಚಿತ್ರಗಳು

  ನಿರಾಸೆ ಮಾಡದ ಸತೀಶ್

  ನಿರಾಸೆ ಮಾಡದ ಸತೀಶ್

  ಸತೀಶ್ ನೀನಾಸಂ ನಟನೆಯ ಎರಡು ಚಿತ್ರಗಳು ಈ ವರ್ಷ ಬಿಡುಗಡೆಯಾಗಿತ್ತು. ಆರಂಭದಲ್ಲಿ 'ಚಂಬಲ್' ಸಿನಿಮಾ ಬಂದಿತ್ತು. ಆಮೇಲೆ 'ಬ್ರಹ್ಮಾಚಾರಿ' ಬಂತು. ಐಎಎಸ್ ಅಧಿಕಾರಿಯ ಸುತ್ತ ಬಂದಿದ್ದ ಚಂಬಲ್ ಹಾಗೂ ಕಾಮಿಡಿಯಾಗಿ ಮೂಡಿಬಂದಿದ್ದ ಬ್ರಹ್ಮಾಚಾರಿ ಪ್ರೇಕ್ಷಕರನ್ನ ನಿರಾಸೆ ಮಾಡಿಲ್ಲ.

  ಸಮಾಧಾನ ತಂದ ನಟಸಾರ್ವಭೌಮ

  ಸಮಾಧಾನ ತಂದ ನಟಸಾರ್ವಭೌಮ

  ಪುನೀತ್ ರಾಜ್ ಕುಮಾರ್ ಈ ವರ್ಷ ಮಾಡಿದ್ದು ಒಂದೇ ಒಂದು ಸಿನಿಮಾ. ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ವರ್ಷದ ಆರಂಭದಲ್ಲಿ ಬಂದಿತ್ತು. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪುನೀತ್ ಇಮೇಜ್ ಗೆ ಈ ಚಿತ್ರವಿರಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೂ, ಅಪ್ಪು ಅಭಿಮಾನಿಗಳಿಗೆ ಇದು ಸಮಾಧಾನ ನೀಡಿತ್ತು ಎನ್ನುವುದೇ ನಿರಾಳ.

  2019 ಫ್ಲ್ಯಾಶ್ ಬ್ಯಾಕ್: ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ವಿವಾದಗಳಿವು

  ಗಿಮಿಕ್ ಮಾಡದ ಗಣೇಶ್

  ಗಿಮಿಕ್ ಮಾಡದ ಗಣೇಶ್

  ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮೂರು ಈ ಚಿತ್ರಗಳು ಈ ವರ್ಷ ತೆರೆಗೆ ಬಂದಿತ್ತು. ನಾಗಣ್ಣ ನಿರ್ದೇಶನದ 'ಗಿಮಿಕ್' ಸಿನಿಮಾ ಹೀಗೆ ಬಂದು ಹಾಗೆ ಹೋಯ್ತು. ಆಮೇಲೆ ಬಂದ '99' ಅಷ್ಟಾಗಿ ಸದ್ದು ಮಾಡಿಲ್ಲ. 'ಗೀತಾ' ಸ್ವಲ್ಪ ಮಟ್ಟಗೆ ಸೌಂಡು ಮಾಡಿ ಗಮನ ಸೆಳೆಯಿತು. ಆದರೆ ಖುಷಿ ಕೊಡುವಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಈ ವರ್ಷ ಮಳೆ ಹುಡುಗನಿಗೆ ಸಿಕ್ಕಿಲ್ಲ.

  ಗೆಲುವಿನ ನಗೆ ಬೀರಿದ ರಿಷಬ್

  ಗೆಲುವಿನ ನಗೆ ಬೀರಿದ ರಿಷಬ್

  ನಿರ್ದೇಶಕ ರಿಷಬ್ ಶೆಟ್ಟಿ ನಟನೆ ಮೂಲಕ ಮೋಡಿ ಮಾಡಿದ ಚಿತ್ರ ಬೆಲ್ ಬಾಟಂ. ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರದಲ್ಲೇ ರಿಷಬ್ ಸೆಂಚುರಿ ಬಾರಿಸಿದರು. ಒಳ್ಳೆಯ ನಟ ಎಂದು ಸಾಬೀತು ಮಾಡಿದರು. ಬಾಕ್ಸ್ ಆಫೀಸ್ನಲ್ಲೂ ಈ ಚಿತ್ರ ಉತ್ತಮ ಗಳಿಕೆ ಕಂಡಿದೆ ಎಂಬ ಮಾತಿದೆ.

  ಉಪ್ಪಿಯ 'ಐ ಲವ್ ಯೂ'

  ಉಪ್ಪಿಯ 'ಐ ಲವ್ ಯೂ'

  ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ಐ ಲವ್ ಯೂ ಸಿನಿಮಾ 50 ದಿನದ ಸಂಭ್ರಮ ಮಾಡಿ ಬೀಗಿತ್ತು. ಆದರೆ, ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮಿಕ್ಸೆಡ್ ರೆಸ್ಪಾನ್ಸ್ ಬಂದಿತ್ತು. ಈ ಜೋಡಿಯ ಮೇಲೆ ಇದ್ದ ಬೆಟ್ಟದಷ್ಟು ನಿರೀಕ್ಷೆ ಇತ್ತು. ಈ ಸಿನಿಮಾ ಆ ಮಟ್ಟಕ್ಕೆ ಸಕ್ಸಸ್ ಕಂಡಿಲ್ಲ ಎಂಬುದು ಅಭಿಮಾನಿಗಳ ಟಾಕ್.

  ಏಳು-ಬೀಳು ಕಂಡ ನಟರು

  ಏಳು-ಬೀಳು ಕಂಡ ನಟರು

  ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಸಿನಿಮಾ ಅಮರ್ ಇದೇ ವರ್ಷ ಬಿಡುಗಡೆಯಾಗಿತ್ತು. ಆದರೆ, ಅಂಬಿ ಪುತ್ರನಿಗೆ ಚೊಚ್ಚಲ ಚಿತ್ರದಲ್ಲಿ ಅಷ್ಟು ದೊಡ್ಡ ಸಕ್ಸಸ್ ಸಿಗಲಿಲ್ಲ. ಶ್ರೀಮುರಳಿಯ 'ಭರಾಟೆ' ಸೈಲೆಂಟ್ ಆಯಿತು. ನವನಟ ಧನ್ವೀರ್ ನಟನೆಯ 'ಬಜಾರ್' ಪರವಾಗಿಲ್ಲ ಎನಿಸಿಕೊಳ್ತು. ನಿಖಿಲ್ 'ಸೀತಾರಾಮ ಕಲ್ಯಾಣ' ವಿಜೃಂಭಿಸಲಿಲ್ಲ. ಚಿರು ಸರ್ಜಾರ 'ಸಿಂಗ' ಅಬ್ಬರಿಸಲಿಲ್ಲ. ಕೋಮಲ್ ಕೆಂಪೇಗೌಡ 2 ನಿಲ್ಲಲಿಲ್ಲ. ಶರಣ್ 'ಅಧ್ಯಕ್ಷ ಇನ್ ಅಮೇರಿಕಾ' ಕ್ಲಿಕ್ ಆಗಿಲ್ಲ. ಹೀಗೆ ಬಂದು ಹಾಗೆ ಹೋದ ರವಿಚಂದ್ರನ್ ಅವರ ಆ ದೃಶ್ಯ, ಪಡ್ಡೆಹುಲಿ, ದಶರಥ ಚಿತ್ರಗಳು.

  ಅವನೇ ಶ್ರೀಮನ್ನಾರಾಯಣ ಏನಾಗುತ್ತೋ?

  ಅವನೇ ಶ್ರೀಮನ್ನಾರಾಯಣ ಏನಾಗುತ್ತೋ?

  ಕಿರಿಕ್ ಪಾರ್ಟಿ ಸಿನಿಮಾ ಬಳಿಕ ತೆರೆಮೇಲೆ ಬರುತ್ತಿರುವ ರಕ್ಷಿತ್ ಶೆಟ್ಟಿ ಕಳೆದ ಮೂರು ವರ್ಷದಿಂದ ಯಾವ ಚಿತ್ರವೂ ಮಾಡಿಲ್ಲ. ಈಗ ಡಿಸೆಂಬರ್ 20ಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ತೆರೆಗೆ ಬರ್ತಿದ್ದಾರೆ. ಸದ್ಯದವರೆಗೂ ಶ್ರೀಮನ್ನಾರಾಯಣನ ಮೇಲೆ ಕುತೂಹಲ ಹೆಚ್ಚಿದೆ. ಸಿನಿಮಾ ಬಿಡುಗಡೆ ಬಳಿಕ ಫಲಿತಾಂಶ ಏನಾಗುತ್ತೆ ಎಂಬುದು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಈ ವರ್ಷ ಕನ್ನಡದ ಸಕ್ಸಸ್ ಫುಲ್ ನಟ ಯಾರು ಎಂದು ಕಾಮೆಂಟ್ ಮಾಡಿ ತಿಳಿಸಿ.

  English summary
  Darshan, Shiva Rajkumar, Sudeep, Puneeth Rajkumar, Ganesh, jaggesh Who is the successful kannada actor in 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X