ವ್ಯಾಲೆಂಟೈನ್ಸ್ ಡೇ ದಿನ ನೋಡಲೇಬೇಕಾದ 10 ಕನ್ನಡ ಪ್ರೇಮಕಥೆ ಚಿತ್ರಗಳು

ಪ್ರೇಮಿಗಳ ಪಾಲಿನ ಹಬ್ಬದ ದಿನ ವ್ಯಾಲಂಟೈನ್ಸ್ ಡೇ. ಜಗತ್ತಿನಾದ್ಯಂತ ಈ ದಿನವನ್ನು ಪ್ರೇಮಿಗಳ ದಿನ ಎಂದು ಆಚರಿಸುತ್ತಾ ಬರಲಾಗುತ್ತಿದೆ. ಅನುದಿನ, ಅನುಕ್ಷಣ ನಾವು ನಮ್ಮವರನ್ನು ಪ್ರೀತಿಸಬೇಕು. ಪ್ರೀತಿಯನ್ನು ಕೊಟ್ಟು ಪಡೆಯಬೇಕು. ಪ್ರೇಮಿಗಳಿಗೆ ಎಲ್ಲಾ ದಿನವೂ ಅನುರಾಗದ ಹಬ್ಬ. ಆದರೂ ಈ ದಿನವನ್ನು ಪ್ರತ್ಯೇಕವಾಗಿ ಪ್ರೇಮಿಗಳ ದಿನ ಎಂದು ಆಚರಿಸಲಾಗುತ್ತದೆ.

ಸಿನಿಮಾಗಳಲ್ಲಿ ಪ್ರೀತಿ, ಪ್ರೇಮ ಹಾಸು ಹೊಕ್ಕಾಗಿರುತ್ತದೆ. ಮಾಸ್ ಸಿನಿಮಾಗಳಲ್ಲೂ ಲವ್‌ಟ್ರ್ಯಾಕ್ ತರುವ ಪ್ರಯತ್ನ ನಡೆಯುತ್ತದೆ. ಇನ್ನು ರೊಮ್ಯಾಂಟಿಕ್ ಸಿನಿಮಾಗಳಿಗೇಣು ಬರವಿಲ್ಲ. ಸಿನಿಮಾಗಳೇ ಎಷ್ಟೋ ಜನರಿಗೆ ಪ್ರೀತಿಸುವುದನ್ನು ಕಲಿಸಿದೆ ಎಂದರೆ ತಪ್ಪಾಗಲ್ಲ. ಕನ್ನಡದಲ್ಲಿ ಸಾಕಷ್ಟು ರೊಮ್ಯಾಂಟಿಕ್ ಸಿನಿಮಾಗಳು ಬಂದೋಗಿವೆ. ಅದರಲ್ಲಿ ಕೆಲವನ್ನು ಸಿನಿರಸಿಕರು ಎಂದು ಮರೆಯೋದಿಲ್ಲ.

These Kannada Romantic Movies That You Must Watch on Valentines Day

ಅಣ್ಣಾವ್ರ ಕಾಲದಿಂದಲೂ ಸಾಕಷ್ಟು ಪ್ರೇಮ್‌ ಕಹಾನಿ ಸಿನಿಮಾಗಳು ಬಂದು ಸಿನಿರಸಿಕರನ್ನು ರಂಜಿಸಿವೆ. ಇವತ್ತಿಗೂ ಪ್ರೀತಿ, ಪ್ರೇಮದ ಟಾಪಿಕ್ ಇಲ್ಲದೇ ಸಿನಿಮಾಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟ. ವ್ಯಾಲೆಂಟೈನ್ಸ್ ಸಂಭ್ರಮದಲ್ಲಿ ನೀವು ನೋಡಲೇಬೇಕಾದ 10 ರೊಮ್ಯಾಂಟಿಕ್ ಸಿನಿಮಾಗಳ ಪಟ್ಟಿ ಇಲ್ಲಿದೆ ಓದಿ.

1. ಎರಡು ಕನಸು

ಡಾ. ರಾಜ್‌ಕುಮಾರ್ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿವೆ. ಅದರಲ್ಲೂ 'ಎರಡು ಕನಸು' ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ಬಂದ ಚಿತ್ರ ಸಿನಿರಸಿಕರ ಹಾಟ್ ಫೇವರಿಟ್. ಡಾ. ರಾಜ್‌, ಕಲ್ಪನಾ ಹಾಗೂ ಮಂಜುಳಾ ನಟನೆಯ ಸಿನಿಮಾ ಸತತ 30 ವಾರಗಳ ಕಾಲ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿತ್ತು. ದೊರೆ- ಭಗವಾನ್ ಜೋಡಿ ನಿರ್ದೇಶನದ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ಪ್ಲಸ್ ಆಗಿತ್ತು.

2. ಬಂಧನ

ವಿಷ್ಣುವರ್ಧನ್- ಸುಹಾಸಿನಿ ನಟನೆಯ 'ಬಂಧನ' ಮತ್ತೊಂದು ಕನ್ನಡದ ಎವರ್‌ಗ್ರೀನ್ ರೊಮ್ಯಾಂಟಿಕ್ ಸಿನಿಮಾ. 'ಬಂಧನ' ಎನ್ನುವ ಕಾದಂಬರಿ ಆಧರಿಸಿ ರಾಜೇಂದ್ರ ಸಿಂಗ್ ಬಾಬು ಚಿತ್ರವನ್ನು ತೆರೆಗೆ ತಂದಿದ್ದರು. ಡಾ. ಹರೀಶ್ ಪಾತ್ರದಲ್ಲಿ ಒನ್‌ಸೈಡ್ ಲವರ್ ಆಗಿ, ಕೊನೆಗೆ ಭಗ್ನಪ್ರೇಮಿಯಾಗಿ ವಿಷ್ಣು ನಟನೆ ಮೋಡಿ ಮಾಡುತ್ತದೆ.

These Kannada Romantic Movies That You Must Watch on Valentines Day

3. ಅಮೃತವರ್ಷಿಣಿ

ದಿನೇಶ್ ಬಾಬು ನಿರ್ದೇಶನದ 'ಅಮೃತವರ್ಷಿಣಿ' ಕನ್ನಡದ ಮತ್ತೊಂದು ಕ್ಲಾಸಿಕ್ ಸಿನಿಮಾ. ಶರತ್ ಬಾಬು, ಸುಹಾಸಿನಿ ಹಾಗೂ ರಮೇಶ್ ಅರವಿಂದ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ದೇವಾ ಸಂಗೀತ ಚಿತ್ರದ ಹೈಲೆಟ್ ಆಗಿತ್ತು. ಇವತ್ತಿಗೂ ಈ ಸಿನಿಮಾ ಹಾಡುಗಳನ್ನು ಜನ ಮರೆತ್ತಿಲ್ಲ.

4. ನಮ್ಮೂರ ಮಂದಾರೆ ಹೂವೆ

ಶಿವರಾಜ್‌ಕುಮಾರ್, ಪ್ರೇಮಾ ಹಾಗೂ ರಮೇಶ್ ಅರವಿಂದ್ ನಟನೆಯ ಟ್ರಯಾಂಗಲ್ ಲವ್‌ಸ್ಟೋರಿ ಸಿನಿಮಾ 'ನಮ್ಮೂರ ಮಂದಾರೆ ಹೂವೆ'. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಈ ಚಿತ್ರಕ್ಕೆ ಇಳಯರಾಜಾ ಸಂಗೀತವಿತ್ತು. ಯಾನ, ಯಲ್ಲಾಪುರ, ಯಾಕಂಬಿ, ಶಿರಸಿಯ ಸುಂದರ ತಾಣಗಳಲ್ಲಿ ಸಿನಿಮಾ ಸರೆ ಹಿಡಿಯಲಾಗಿತ್ತು.

5. ಮುಂಗಾರು ಮಳೆ

ಯೋಗರಾಜ್‌ ಭಟ್ ನಿರ್ದೇಶನದಲ್ಲಿ ಗಣೇಶ್, ಪೂಜಾ ಗಾಂಧಿ ನಟನೆಯ 'ಮುಂಗಾರು ಮಳೆ' ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿತ್ರ. ಅದಾಗಲೇ ಮದುವೆ ನಿಶ್ಚಯವಾದ ಹುಡುಗಿ ಜೊತೆ ನಾಯಕ ಪ್ರೀತಿಯಲ್ಲಿ ಬೀಳುವ ಕಥೆ ಚಿತ್ರದಲ್ಲಿತ್ತು. ಕೊನೆಗೆ ನಾಯಕಿ ಕೂಡ ಆತನನ್ನು ಒಪ್ಪಿಕೊಂಡರೂ ಸಮಯ, ಸಂದರ್ಭ ಪ್ರೇಮಿಗಳನ್ನು ದೂರ ಮಾಡಿಬಿಡುತ್ತದೆ. ಮನೋಮೂರ್ತಿ ಸಂಗೀತದ ಆಲ್ಬಮ್ ಹಿಟ್ ಆಗಿತ್ತು.

6. ಅಮೃತಧಾರೆ

ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೃತಧಾರೆ' ಮತ್ತೊಂದು ಮ್ಯೂಸಿಕಲ್ ಲವ್ ಸ್ಟೋರಿ. ಧ್ಯಾನ್ ಹಾಗೂ ರಮ್ಯಾ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಜಿಪುಣ ಗಂಡ ಸಾವಿನ ತುದಿಗೆ ತಲುಪಿದ ಮಡದಿಯ ಆಸೆಗಳನ್ನೆಲ್ಲಾ ಈಡೇರಿಸಲು ಪ್ರಯತ್ನಿಸುವ ಕಥೆ ಚಿತ್ರದಲ್ಲಿದೆ.

7. ಪ್ರೇಮಲೋಕ

ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ ನಟಿಸಿ ಸೂಪರ್ ಹಿಟ್ ಸಿನಿಮಾ 'ಪ್ರೇಮಲೋಕ'. ಹಾಲಿವುಡ್ ಸಿನಿಮಾದಿಂದ ಪ್ರೇರಣೆಗೊಂಡು ರವಿಚಂದ್ರನ್ ಸಿನಿಮಾ ಕಟ್ಟಿಕೊಟ್ಟಿದ್ದರು. ಕ್ಯಾಂಪಸ್ ಲವ್‌ಸ್ಟೋರಿ ಹಂಸಲೇಖ ಸಂಗೀತ ಪ್ಲಸ್ ಆಗಿತ್ತು. 11 ಹಾಡುಗಳು ಚಿತ್ರದಲ್ಲಿತ್ತು.

8. ದಿಯಾ

ಇತ್ತೀಚಿನ ವರ್ಷಗಳಲ್ಲಿ ಬಹಳ ಕಾಡಿದ ರೊಮ್ಯಾಂಟಿಕ್ ಸಿನಿಮಾ ಅಂದ್ರೆ ಅದು 'ದಿಯಾ'. ಕೆ. ಎಸ್ ಅಶೋಕ್ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿ ಅಂಬರ್, ಖುಷಿ, ದೀಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಚಿತ್ರದ ದೊಡ್ಡ ಶಕ್ತಿ.

9. ಬೆಳದಿಂಗಳ ಬಾಲೆ

ಯಂಡಮೂರಿ ವೀರೇಂದ್ರನಾಥ್ ಅವರ 'ವೆನ್ನೆಲ್ಲೋ ಅಡಪಿಲ್ಲ' ಎಂಬ ತೆಲುಗು ಕಾದಂಬರಿಯನ್ನು ಆಧರಿಸಿದ ಚಿತ್ರ 'ಬೆಳದಿಂಗಳ ಬಾಲೆ'. ಅನಂತ್ ನಾಗ್ ಚೆಸ್ ಆಟಗಾರ ರೇವಂತ್ ಆಗಿ ಕಾಣಿಸಿಕೊಂಡಿದ್ದರು. ಆತನ ಕಲ್ಪನೆಯ ಹುಡುಗಿ ರಮ್ಯಾ ಆಗಿ ಸುಮನ್ ನಗರ್‌ಕರ್ ಕಾಣಿಸಿಕೊಂಡಿದ್ದರು.

10. ಮಿ & ಮಿ ರಾಮಾಚಾರಿ

ಮೇಲ್ನೋಟಕ್ಕೆ 'ಮಿ & ಮಿ ರಾಮಾಚಾರಿ' ಆಕ್ಷನ್ ಸಿನಿಮಾ ಅನಿಸಿದರೂ ಸೊಗಸಾದ ಪ್ರೇಮಕಥೆ ಚಿತ್ರದಲ್ಲಿತ್ತು. ಯಶ್- ರಾಧಿಕಾ ಪಂಡಿತ್ ನಿಜಜೀವನದ ಪ್ರೇಮಕಥೆಯನ್ನು ಸಂತೋಷ್ ಆನಂದ್ ರಾಮ್ ಸಿನಿಮಾ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು.

More from Filmibeat

English summary
10 Best Romance Movies of All Time in sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X