ವಯಸ್ಸಾದ್ರೂ ಬಾಕ್ಸಾಫೀಸ್‌ನಲ್ಲಿ ಸ್ಟಾಮಿನಾ ಕಮ್ಮಿ ಆಗ್ಲಿಲ್ಲ: ಜ್ಯೂನಿಯರ್ ಸ್ಟಾರ್‌ಗಳಿಗೆ ಸೀನಿಯರ್ಸ್ ಸವಾಲ್!

ಕೊರೋನಾ ಹಾವಳಿ ನಂತರ ಸಿನಿಮಾಗಳ ಲೆಕ್ಕಾಚಾರವೇ ಬದಲಾಗಿ ಹೋಗಿದೆ. ಅದರಲ್ಲೂ ಓಟಿಟಿ ಕಾನ್ಸೆಪ್ಟ್‌ ಶುರು ಆದಮೇಲೆ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯೋದು ಸಾಹಸವೇ ಸರಿ. ಇನ್ನು ಕೆಲ ಸೀನಿಯರ್ ನಟರ ಸಿನಿಮಾಗಳು ಕೂಡ ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದವು. ಇದನ್ನು ನೋಡಿ ಸೀನಿಯರ್ ನಟರ ಕಥೆ ಮುಗಿದೇ ಹೋಯ್ತು ಎನ್ನುವ ಚರ್ಚೆ ಶುರುವಾಗಿತ್ತು.

ಒಳ್ಳೆ ಸಿನಿಮಾ ಕೊಟ್ಟರೆ ಸೀನಿಯರ್ಸ್, ಜ್ಯೂನಿಯರ್ಸ್ ಅನ್ನೋದೆಲ್ಲಾ ಲೆಕ್ಕಕ್ಕೆ ಬರಲ್ಲ, ಎನ್ನುವುದು ಮತ್ತೆ ಸಾಬೀತಾಗಿದೆ. ಕಮಲ್ ಹಾಸನ್, ಚಿರಂಜೀವಿ, ಬಾಲಕೃಷ್ಣ, ಶಿವಣ್ಣ, ಶಾರುಖ್ ಖಾನ್ ಎಲ್ಲರೂ ಬಾಕ್ಸಾಫೀಸ್‌ನಲ್ಲಿ ತಮ್ಮ ಸ್ಟಾಮಿನಾ ಏನು ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಮೂಲಕ ಯುವಕರನ್ನು ನಾಚಿಸುವಂತೆ ಆಕ್ಷನ್, ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ. ಸೀನಿಯರ್ ನಟರ ಅಭಿಮಾನಿಗಳು ಈಗ ಹೊಸ ನಟರ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಿರಬಹುದು. ಆದರೆ ಒಳ್ಳೆ ಸಿನಿಮಾ ಬಂದ್ರೆ ಮತ್ತೆ ತಮ್ಮ ನೆಚ್ಚಿನ ನಟನನ್ನು ಹೆಗಲಮೇಲೆ ಹೊತ್ತು ಮೆರೆಸುತ್ತಾರೆ.

100 ಕೋಟಿ ಕ್ಲಬ್ ಅನ್ನುವುದೆಲ್ಲಾ ಒಂದ್ಕಾಲದಲ್ಲಿ ಮರೀಚಿಕೆ ಆಗಿತ್ತು. ಸ್ಟಾರ್ ನಟರಿಗೆ ಅದೆಲ್ಲಾ ಅದೆಲ್ಲಾ ಸರ್ವೇ ಸಾಧಾರಣ ಎನ್ನುವಂತಾಗಿದೆ. ಇದೀಗ ಸೀನಿಯರ್ ನಟರ ಸಿನಿಮಾಗಳು ಕೂಡ ಬಹಳ ಸುಲಭವಾಗಿ 100 ಕೋಟಿ ಕ್ಲಬ್‌ನಲ್ಲಿ ಜಾಗ ಮಾಡಿಕೊಳ್ಳುತ್ತಿವೆ.

ಬಾಕ್ಸಾಫೀಸ್‌ನಲ್ಲಿ 'ವಿಕ್ರಂ' ವಿಜಯಯಾತ್ರೆ

ಬಾಕ್ಸಾಫೀಸ್‌ನಲ್ಲಿ 'ವಿಕ್ರಂ' ವಿಜಯಯಾತ್ರೆ

ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಮಲ್ ಹಾಸನ್ 'ವಿಕ್ರಂ' ಆಗಿ ಕಳೆದ ವರ್ಷ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಅಕ್ಷರಶಃ ಫೀನಿಕ್ಸ್ ರೀತಿ ಎದ್ದು ಬಂದರು. ಚಿತ್ರಕ್ಕೆ ಸಹ ನಿರ್ಮಾಪಕರು ಆಗಿದ್ದ ಕಮಲ್ ಈ ಚಿತ್ರದಿಂದ ಬಂದ ಹಣದಲ್ಲಿ ಸಾಲ ತೀರಿಸಿದ್ದರು. ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್‌ ಶೇಕ್ ಮಾಡಿತ್ತು. ವಿಕ್ರಂ ಸಕ್ಸಸ್ ಬೆನ್ನಲ್ಲೇ ನಿಂತೇ ಹೋಗಿದ್ದ 'ಇಂಡಿಯನ್- 2' ಚಿತ್ರಕ್ಕೆ ಜೀವ ಬಂದಿತ್ತು. ಅದ್ಭುತ ನಟನಾದರೂ ಕಮಲ್ ಹಾಸನ್‌ಗೆ ಇತ್ತೀಚಿನ ಯಾವುದೇ ಸಿನಿಮಾ ದೊಡ್ಡ ಸಕ್ಸಸ್ ತಂದುಕೊಟ್ಟಿರಲಿಲ್ಲ. ಆ ಬರವನ್ನು 'ವಿಕ್ರಂ' ತಣಿಸಿತ್ತು.

'ವೇದ' ಆಗಿ ಶಿವಣ್ಣ ಆರ್ಭಟ

'ವೇದ' ಆಗಿ ಶಿವಣ್ಣ ಆರ್ಭಟ

ಇತ್ತ ಸ್ಯಾಂಡಲ್‌ವುಡ್‌ನಲ್ಲಿ ಶಿವರಾಜ್‌ಕುಮಾರ್ 'ವೇದ' ಆಗಿ ಗೆದ್ದಿದ್ದಾರೆ. ಡಿಸೆಂಬರ್ 23ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ 50 ದಿನದ ಹೊಸ್ತಿಲಲ್ಲಿದೆ. ಎ. ಹರ್ಷ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಗಾನವಿ ಲಕ್ಷ್ಮಣ್, ಅದಿತಿ ಅರುಣ್ ಸಾಗರ್, ಉಮಾಶ್ರೀ ಸೇರಿದಂತೆ ದೊಡ್ಡ ಕಲಾವಿದರ ಬಳಗ ಇದೆ. ಕಣ್ಣಲ್ಲೇ ಕೊಲ್ಲುವ ಶಿವಣ್ಣನ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೀ ಸ್ಟುಡಿಯೋಸ್ ಜೊತೆ ಸೇರಿ ಗೀತಾ ಶಿವರಾಜ್‌ಕುಮಾರ್ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ.

ಸಂಕ್ರಾಂತಿಗೆ ಚಿರು- ಬಾಲಯ್ಯ ಫೈಟ್

ಸಂಕ್ರಾಂತಿಗೆ ಚಿರು- ಬಾಲಯ್ಯ ಫೈಟ್

ಇನ್ನು ಸಂಕ್ರಾಂತಿ ಸಂಭ್ರಮದಲ್ಲೇ ಟಾಲಿವುಡ್ ಸೀರಿಯರ್ ಕಲಾವಿದರಿಬ್ಬರು ಬಾಕ್ಸಾಫೀಸ್‌ ಕಾಳಗಕ್ಕೆ ಇಳಿದಿದ್ದರು. ವೀರಸಿಂಹ ರೆಡ್ಡಿಯಾಗಿ ಬಾಲಕೃಷ್ಣ ಅಬ್ಬರಿಸಿದ್ದರೆ, ವಾಲ್ತೇರು ವೀರಯ್ಯ ಆಗಿ ಚಿರಂಜೀವಿ ದರ್ಬಾರ್ ನಡೆಸಿದ್ದರು. ಎರಡೂ ಸಿನಿಮಾಗಳು 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿವೆ. ಈ ಎರಡೂ ಸಿನಿಮಾಗಳನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಎರಡೂ ಸಿನಿಮಾಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಸುಗ್ಗಿ ಸಂಭ್ರಮದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದರಿಂದ ಚಿರು- ಬಾಲಯ್ಯ ಇಬ್ಬರೂ ಗೆಲುವಿನ ದಡ ಸೇರಿದರು.

ಬಾಕ್ಸಾಫೀಸ್‌ನಲ್ಲಿ 'ಪಠಾಣ್' ಸುನಾಮಿ

ಬಾಕ್ಸಾಫೀಸ್‌ನಲ್ಲಿ 'ಪಠಾಣ್' ಸುನಾಮಿ

ಸದ್ಯ ಬಾಕ್ಸಾಫೀಸ್‌ನಲ್ಲಿ ಮತ್ತೊಬ್ಬ ಸೀನಿಯರ್ ಆಕ್ಟರ್ ಶಾರುಖ್ ಖಾನ್ ಅಬ್ಬರ ಶುರುವಾಗಿದೆ. 4 ವರ್ಷಗಳ ನಂತರ 'ಪಠಾಣ್' ಆಗಿ ಬಂದಿರುವ ಕಿಂಗ್ ಖಾನ್ ಹಳೇ ಬಾಕ್ಸಾಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ. ಸಿನಿಮಾ ಈಗಾಗಲೇ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಶಾರುಖ್ ಖಾನ್ ಕಥೆ ಮುಗಿದೇ ಹೋಯ್ತು ಎಂದವರು, ಬಾಯ್ಕಾಟ್ 'ಪಠಾಣ್' ಎಂದವರು ಈಗ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸಿನಿಮಾ ಮುಂದಿನ ದಿನಗಳಲ್ಲಿ ಮತ್ತಷ್ಟು ಬಾಕ್ಸಾಫೀಸ್ ದಾಖಳೆಗಳನ್ನು ಅಳಿಸುವ ಸುಳಿವು ಸಿಗುತ್ತಿದೆ.

More from Filmibeat

English summary
These senior Stars are still setting the standards for youngsters. Kamal Hassan, Shivarajkumar, Chiranjeevi, Balakrishna, Shah Rukh Khan Showcases their Box-Office Stamina Once Again. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X