ಇದು ಸ್ಟಾರ್ ನಟಿಯರ ವಯಸ್ಸಿನ ಲೆಕ್ಕಾಚಾರ: ರಶ್ಮಿಕಾ, ಅನುಷ್ಕಾ ವಯಸ್ಸು ಇಷ್ಟೊಂದಾ?

ಸಿನಿಮಾರಂಗ ಅಂತ ಬಂದಾಗ, ಸಿನಿಮಾ ತಾರೆಯರು ತಮ್ಮ ಲುಕ್ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ. ತೆರೆಯ ಮೇಲೆ ಆದಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಕಲಾವಿದರು ಒಂದಲ್ಲಾ ಒಂದು ಸಾಹಸ ಮಾಡುತ್ತಾರೆ. ಆದರಲ್ಲೂ ನಟಿ ಮಣಿಯರು ಒಂದು ತೂಕ ಹೆಚ್ಚೇ ಇರುತ್ತಾರೆ. ಅವರ ಲುಕ್ ಮತ್ತು ವಯಸ್ಸಿಗೆ ಸಂಬಂಧವೇ ಇರುವುದಿಲ್ಲ.

ಹಲವು ನಟಿಯರನ್ನು ತೆರೆಮೇಲೆ ನೋಡಿದಾಗ, ಅವರು ವಯಸ್ಸು ಎಷ್ಟಿರಬಹುದು ಎನ್ನುವುದನ್ನು ನೀವೂ ಕೂಡ ಊಹಿಸಿರಬಹುದು. ಆದರೆ ಅದು ನಿಜ ಆಗಿರಲು ಸಾಧ್ಯವಿಲ್ಲ. ಯಾಕೆಂದರೆ ಸಿನಿಮಾ ನಟಿಯರು ಅಷ್ಟರ ಮಟ್ಟಿಗೆ ತಮ್ಮ ಗ್ಲಾಮರ್ ಕಾಪಾಡಿಕೊಂಡು ಬಂದಿರುತ್ತಾರೆ.

ಹೀಗೆ ಕೆಲವು ನಟಿಯರ ವಯಸ್ಸು ಎಷ್ಟು ಎನ್ನುವುದನ್ನು ಕೇಳಿದರೆ ಅಚ್ಚರಿ ಆಗುತ್ತದೆ. ಕೆಲವರು ಚಿಕ್ಕ ವಯಸ್ಸಿದ್ದರೂ ದೊಡ್ಡವರ ಹಾಗೆ ಕಾಣಿಸಿದರೆ,‌ ಇನ್ನೂ ಕೆಲವರ ವಯಸ್ಸು ಹೆಚ್ಚಿದ್ದರೂ ಕೂಡ ಕಿರಿಯ ವಯಸ್ಸಿನವರಂತೆ ಕಾಣುತ್ತಾರೆ. ಇಂಥಹ ಕೆಲವು ನಟಿಯರ ವಯಸ್ಸು ಎಷ್ಟು ಎನ್ನುವ ಸಿದ್ದಿ ಇಲ್ಲಿದೆ ಮುಂದೆ ಓದಿ...

ಸಮಂತಾ, ತಮನ್ನಾ ವಯಸ್ಸು ಕೇಳಿದರೆ ಅಚ್ಚರಿ ಆಗುತ್ತೆ!

ಸಮಂತಾ, ತಮನ್ನಾ ವಯಸ್ಸು ಕೇಳಿದರೆ ಅಚ್ಚರಿ ಆಗುತ್ತೆ!

ಸದ್ಯ ಸೌತ್ ಚಿತ್ರರಂಗದಲ್ಲಿ ಬೇಡಿಕೆ ಇರುವ ನಟಿಯರಲ್ಲಿ ತಮನ್ನಾ ಮತ್ತು ಸಮಂತಾ ಕೂಡ ಇದ್ದಾರೆ. ನಟಿ ತಮನ್ನಾ ಅವರನ್ನು ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ತಮನ್ನಾ ಅವರ ಬಣ್ಣಕ್ಕೆ ಮನಸೋತ ಅಭಿಮಾನಿಗಳಿದ್ದಾರೆ. ತಮನ್ನಾ ವಯಸ್ಸು 32‌. ಅಂತೆಯೇ ನಟಿ ಸಮಂತಾ ಸದಾ‌ ಗ್ಲಾಮರ್ ಗೊಂಬೆಯಂತೆ ಮಿಂಚುತ್ತಾ ಇರುತ್ತಾರೆ. ಆದರೆ ಸಮಂತಾ ವಯಸ್ಸು ಮಾತ್ರ 34‌ ಅಂದರೆ ನಂಬಲೇಬೇಕು.‌ ಸಮಂತಾ ಜನಿಸಿದ್ದು 1987. ಆದರೂ ಈ ನಟಿಯರನ್ನು ತೆರೆ ಮೇಲೆ ನೋಡಿದವರು, ಇವರು 30ರ ಗಡಿ ದಾಟಿದ್ದಾರೆ ಅಂದರೆ ನಂಬುವುದು ಕೊಂಚ ಕಷ್ಟವೇ.

ರಶ್ಮಿಕಾ, ಸಾಯಿ ಪಲ್ಲವಿಗೆ 1 ವರ್ಷ ‌ವ್ಯತ್ಯಾಸ!

ರಶ್ಮಿಕಾ, ಸಾಯಿ ಪಲ್ಲವಿಗೆ 1 ವರ್ಷ ‌ವ್ಯತ್ಯಾಸ!

ನಟಿ ರಶ್ಮಿಕಾ ಮಂದಣ್ಣ ಸದ್ಯ ಒಂದೊಂದೇ ಸಿನಿಮಾರಂಗದಲ್ಲಿ ಗುರುತಿಸಿಕೊಂಡು ನೇಮು, ಫೇಮು ಪಡೆಯುತ್ತಿದ್ದಾರೆ. ರಶ್ಮಿಕಾ ಕಿರಿಯ ವಯಸ್ಸಿನಲ್ಲೇ ಸಿನಿಮಾ ಜರ್ನಿ ಶುರು ಮಾಡಿದ್ದಾರೆ. ಪ್ರಸ್ತುತ ರಶ್ಮಿಕಾಗೆ 25 ವರ್ಷ ವಯಸ್ಸು. ರಶ್ಮಿಕಾ ಸಮಕಾಲಿನ ಮತ್ತೊಬ್ಬ ಹೆಸರಾಂತ ನಟಿ ಅಂದರೆ ಅದು ಸಾಯಿ ಪಲ್ಲವಿ. ನಟಿ ಸಾಯಿ ಪಲ್ಲವಿಗೆ ಮತ್ತು ರಶ್ಮಿಕಾ ಮಂದಣ್ಣಗೆ ಒಂದು ವರ್ಷ ಮಾತ್ರ ವಯಸ್ಸಿನ ಅಂತರ. ನಟಿ ಸಾಯಿ ಪಲ್ಲವಿಗೆ 26 ವರ್ಷ ವಯಸ್ಸು.

ಒಂದೇ ತಕ್ಕಡಿಯಲ್ಲಿ ಕಾಜಲ್, ಶೃತಿ ಹಾಸನ್!

ಒಂದೇ ತಕ್ಕಡಿಯಲ್ಲಿ ಕಾಜಲ್, ಶೃತಿ ಹಾಸನ್!

ನಟಿ ಶೃತಿ ಹಾಸನ್ ಕೂಡ ಬಣ್ಣದ ಲೋಕದಲ್ಲಿ ಗ್ಲಾಮರಸ್ ಗೊಂಬೆ ಆಗಿ ಮಿಂಚಿದಾಕೆ. ಕೊಂಚ ಗ್ಯಾಪ್ ಬಳಿಕ ವಾಪಸ್ ಆದ ಶೃತಿ ಹಾಸನ್ ಮತ್ತಷ್ಟು ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ರು. ಆದರೆ ಶೃತಿ ನಲವತ್ತರ ಆಸು ಪಾಸಿನಲ್ಲಿ ಇದ್ದಾರೆ. ಶೃತಿ ಹಾಸನ್ ವಯಸ್ಸು 36. ಇದೇ ಸಾಲಿನಲ್ಲಿ ಇರುವ ಮತ್ತೊಬ್ಬ ಸೌತ್ ನಟಿ ಎಂದರೆ ಕಾಜಲ್ ಆಗರ್ವಾಲ್. ಕಾಜಲ್ ಅಗರ್ವಾಲ್ ಅವರಿಗೂ ಕೂಡ ಈಗ 36 ವರ್ಷ ವಯಸ್ಸು‌.

40ರ ಗಡಿ ಮುಟ್ಟಿದ ನಟಿ ಅನುಷ್ಕಾ ಶೆಟ್ಟಿ!

40ರ ಗಡಿ ಮುಟ್ಟಿದ ನಟಿ ಅನುಷ್ಕಾ ಶೆಟ್ಟಿ!

ನಟಿ ಅನುಷ್ಕಾ ಶೆಟ್ಟಿ ಸಾಕಷ್ಟು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯವಾಗಿ ಇದ್ದಾರೆ. ತೆಲುಗು ಚಿತ್ರರಂಗವನ್ನು ಆಳಿದ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು ಎಂದರೆ ತಪ್ಪಾಗಲಾರದು. ಈಗಲೂ‌ ಗ್ಲ್ಯಾಮರಸ್ ಆಗಿ ಕಾಣಿಸಿಕೊಳ್ಳುವ ಅನುಷ್ಕಾ ಶೆಟ್ಟಿ ವಯಸ್ಸು 40 ವರ್ಷ. ಈ ನಟಿಯರಲ್ಲಿ ಸಮಂತಾ, ಕಾಜಲ್ ಮಾತ್ರವೇ ಮದುವೆ ಆಗಿದ್ದಾರೆ. ಹಾಗಾಗಿ ತಮನ್ನಾ ಮತ್ತು ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸದಾ ಸುದ್ದಿಯಲ್ಲಿ ಇರುತ್ತದೆ.

More from Filmibeat

English summary
These South Star Actress Age Is More Than What You Guess, Know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X