ಆಮೀರ್ ಖಾನ್ ರಿಜೆಕ್ಟ್ ಮಾಡಿದ 'ಈ' ಸಿನಿಮಾಗಳು ಸೂಪರ್ ಆಗಿವೆ

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅದ್ಭುತ ಅಭಿನಯ ಮತ್ತು ಸೂಪರ್ ಹಿಟ್ ಸಿನಿಮಾಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿವೆ. ಆಮೀರ್ ಖಾನ್ ಅಭಿನಯದ ಪ್ರತಿಯೊಂದು ಸಿನಿಮಾ ಕೂಡ ವಿಭಿನ್ನ ಮತ್ತು ಹೊಸತನದಿಂದ ಕೂಡಿರುತ್ತವೆ. ಒಂದೊಂದು ಸಿನಿಮಾಗೂ ಆಮೀರ್ ಡೆಡಿಕೇಶನ್ ಮತ್ತು ಶ್ರಮ ಸಾಕಷ್ಟು ಕಲಾವಿದರಿಗೆ ಮಾದರಿ. ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಆಮೀರ್ ಕೊನೆಯದಾಗಿ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

Recommended Video

ನಿಖಿಲ್ ಮದುವೆಯಾಗೋ ಹುಡುಗಿ ತುಂಬಾ ಸಿಂಪಲ್ ಅಂತೆ | Nikhil Kumarswamy | Marriage | Filmibeat Kannda

ಥಗ್ಸ್ ಆಫ್ ಹಿಂದೂಸ್ತಾನ್ ಅಭಿಮಾನಿಗಳ ನಿರೀಕ್ಷೆಯ ಮಟ್ಟ ಮುಟ್ಟುವಲ್ಲಿ ವಿಫಲವಾಗಿತ್ತು. ಬಾಕ್ಸ್ ಆಫೀಸ್ ನಲ್ಲಿಯೂ ಈ ಸಿನಿಮಾ ಸದ್ದು ಮಾಡಿಲ್ಲ. ಒಂದು ಸಿನಿಮಾ ಸೋತರೇನಂತೆ ಮತ್ತೊಂದು ಅದ್ಭುತ ಸಿನಿಮಾ ಮೂಲಕ ಆಮೀರ್ ಬರ್ತಾರೆ ಎನ್ನುವುದು ಅಭಿಮಾನಿಗಳಿಗೆ ಗೊತ್ತು. ಅದರಂತೆ ಆಮೀರ್ ಖಾನ್ ಈಗ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಮೂಲಕ ಮತ್ತೆ ಬರ್ತಿದ್ದಾರೆ. ಅಂದ್ಹಾಗೆ ಬಾಲಿವುಡ್ ನಲ್ಲಿ ಬಂದ ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಮೊದಲ ಆಯ್ಕೆ ಆಮೀರ್ ಖಾನ್ ಆಗಿರುತ್ತಾರೆ. ಆದರೆ ಸಾಕಷ್ಟು ಸಿನಿಮಾಗಳನ್ನು ಮಿಸ್ಟರ್ ಫರ್ಫೆಕ್ಷನಿಸ್ಟ್ ರಿಜೆಕ್ಟ್ ಮಾಡಿದ್ದಾರೆ ಆಮೀರ್ ರಿಜೆಕ್ಟ್ ಮಾಡಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ.

'ಡರ್' ಸಿನಿಮಾ

'ಡರ್' ಸಿನಿಮಾ

1993ರಲ್ಲಿ ರಿಲೀಸ್ ಆದ 'ಡರ್' ಸಿನಿಮಾ ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು. ಯಶ್ ಚೋಪ್ರ ಬ್ಯಾನರ್ ನಲ್ಲಿ ಬಂದ ಒನ್ ಆಫ್ ದಿ ಬೆಸ್ಟ್ ಸಿನಿಮಾ. ಯಶ್ ಚೋಪ್ರ ಆಕ್ಷನ್ ಕಟ್ ಹೇಳಿರುವ ಸಿನಿಮಾ. ಶಾರುಖ್ ಖಾನ್, ಸನ್ನಿ ಡಿಯೋಲ್, ಜೂಹಿ ಜಾವ್ಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಸಿನಿಮಾ. ರೋಮ್ಯಾಂಟಿಕ್ ಥ್ರಿಲ್ಲರ್ ಡರ್ ಶಾರುಖ್ ವೃತ್ತಿ ಜೀವನದ ಬಹುಮುಖ್ಯ ಸಿನಿಮಾ. ಈ ಸಿನಿಮಾದಿಂದ ಸಾಕಷ್ಟು ಪ್ರಶಸ್ತಿಗಳು ಶಾರುಖ್ ಪಾಲಾಗಿವೆ. ಆದರೆ ಈ ಸಿನಿಮಾಗೆ ಮೊದಲು ಆಫರ್ ಮಾಡಿದ್ದು ಆಮೀರ್ ಖಾನ್ ಗೆ. ಆಮೀರ್ ರಿಜೆಕ್ಟ್ ಮಾಡಿದ ನಂತರ ಶಾರುಖ್ ಈ ಸಿನಿಮಾ ಮಾಡಿ ಹಿಟ್ ಆದರು.

'ಸಾಜನ್' ಸಿನಿಮಾ

'ಸಾಜನ್' ಸಿನಿಮಾ

1991ರಲ್ಲಿ ರಿಲೀಸ್ ಆದ ಸಾಜನ್ ಸಿನಿಮಾದ ಸ್ಕ್ರಿಪ್ಟ್ ಕೂಡ ಮೊದಲು ಆಮೀರ್ ಬಳಿ ಹೋಗಿತ್ತಂತೆ. ಆದರೆ ಆಮೀರ್ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ. ಬಾಲಿವುಡ್ ನ ಇಬ್ಬರು ಸ್ಟಾರ್ ನಟರಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಮಿಂಚಿರುವ ಸಿನಿಮಾ. ಈ ಸಿನಿಮಾದ ಸಂಜಯ್ ದತ್ ಪಾತ್ರಕ್ಕೆ ಆಮೀರ್ ಅವರನ್ನು ಕೇಳಿದಾಗ ಪಾತ್ರ ಇಷ್ಟವಾಗದ ಕಾರಣ ತಿರಸ್ಕರಿಸಿದ್ದಾರೆ. ಆ ನಂತರ ಸಂಜಯ್ ದತ್ ಈ ಪಾತ್ರ ಮಾಡಿದ್ದಾರೆ. ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಸಾಜನ್ ಕೂಡ ಒಂದು.

'ನಾಯಕ್: ದಿ ರಿಯಲ್ ಹೀರೋ'

'ನಾಯಕ್: ದಿ ರಿಯಲ್ ಹೀರೋ'

ಎಸ್.ಶಂಕರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಅನಿಲ್ ಕಪೂರ್ ಮತ್ತು ಅಮ್ರಿಶ್ ಪುರಿ ಪ್ರಮುಕ ಪಾತ್ರದಲ್ಲಿ ಮಿಂಚಿದ್ದಾರೆ. ನಾಯಕ್ ಅನಿಲ್ ಕಪೂರ್ ಸಿನಿ ಜೀವನದ ಒನ್ ಆಫ್ ದಿ ಬೆಸ್ಟ್ ಸಿನಿಮಾ. ಬಾಕ್ಸ್ ಆಫೀಸ್ ನಲ್ಲಿಯೂ ಕೋಟಿ ಕೋಟಿ ಲೂಟಿ ಮಾಡಿದ್ದ ನಾಯಕ್ ಕಥೆ ಮೊದಲು ಆಮೀರ್ ಖಾನ್ ಬಳಿ ಹೋಗಿತ್ತಂತೆ. ಅನಿಲ್ ಕಪೂರ್ ಅಭಿನಯಿಸಿದ್ದ ಶಿವಾಜಿ ರಾವ್ ಪಾತ್ರ ಮಾಡುವಂತೆ ಆಮೀರ್ ಖಾನ್ ಕೇಳಿಕೊಂಡಿದ್ದರಂತೆ. ಆದರೆ ಆಮೀರ್ ಖಾನ್ ಈ ಪಾತ್ರ ಮಾಡಲು ತಿರಸ್ಕರಿಸಿದ್ದಾರೆ.

'ಭಜರಂಗಿ ಭಾಯಿಜಾನ್'

'ಭಜರಂಗಿ ಭಾಯಿಜಾನ್'

2015ರಲ್ಲಿ ರಿಲೀಸ್ ಆದ ಬ್ಲಾಕ್ ಬಸ್ಟರ್ ಸಿನಿಮಾ. ಸಲ್ಮಾನ್ ಖಾನ್ ಅಭಿನಯದ ಈ ಸಿನಿಮಾ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. 2015ರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕೂಡ ಇದಾಗಿದೆ. ಈ ಸಿನಿಮಾ ಕೂಡ ಮೊದಲು ಆಮೀರ್ ಖಾನ್ ಬಳಿ ಹೋಗಿತ್ತು. ಆದರ ಆಮೀರ್ ಖಾನ್ ಈ ಸಿನಿಮಾದಲ್ಲಿ ಒಂದಿಷ್ಟು ಬದಲಾವಣೆ ಮಾಡಲು ಸೂಚಿಸಿದ್ದರಂತೆ. ಆದರೆ ಬದಲಾವಣಿಗೆ ಒಪ್ಪದ ನಿರ್ದೇಶಕರಿಗೆ ಆಮೀರ್, ಸಲ್ಮಾನ್ ಹೆಸರನ್ನು ಹೇಳಿದ್ದರಂತೆ. ನಂತರ ಸಲ್ಮಾನ್ ಈ ಸಿನಿಮಾವನ್ನು ಮಾಡಿದ್ದಾರೆ. ಸಿನಿಮಾ ಯಾವ ರೀತಿ ಹಿಟ್ ಆಯಿತು ಎಂದು ಗೊತ್ತಿದೆ.

More from Filmibeat

English summary
Darr,Nayak, Saajan and other super hit movies were rejected by Aamir Khan. ಬಾಲಿವುಡ್ ನ ಈ ಸೂಪರ್ ಹಿಟ್ ಸಿನಿಮಾಗಳನ್ನು ಆಮೀರ್ ಖಾನ್ ರಿಜೆಕ್ಟ್ ಮಾಡಿದ್ದಾರೆ.
Read more about: aamir khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X