ಚಿತ್ರೀಕರಣಕ್ಕೆ ಬರದೇ ಅಮಿತಾಬ್ ಬಚ್ಚನ್‌ಗೆ 3 ಗಂಟೆ ಕಾಯಿಸಿದ್ದ ಈ ಯುವನಟ, ಆಮೇಲೆ ಬಿಗ್ ಬಿ ಮಾಡಿದ್ದೇನು ?

ತಮ್ಮ 81ನೇ ವಯಸ್ಸಿನಲ್ಲಿಯೂ ಸಾಲು ಸಾಲು ಸಿನಿಮಾಗಳ ಜೊತೆಯಲ್ಲಿ ಹಲವಾರು ಜಾಹೀರಾತು ಮತ್ತು ಕಿರುತೆರೆಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿಯಾಗಿರುವವರು ಅಮಿತಾಬ್ ಬಚ್ಚನ್.

ಇಂಥಾ ದಣಿವರಿಯದ ಮಹಾನಾಯಕ ಈ ಇಳಿ ವಯಸ್ಸಿನಲ್ಲಿಯೂ ಕೂಡ ತಮ್ಮ ಪ್ರತಿ ಚಿತ್ರಕ್ಕೆ ಮೊದಲಿನಂತೆ ಶ್ರಮ ಪಡುತ್ತಾರೆ. ಬೆವರು ಸುರಿಸುತ್ತಾರೆ. ತಾನು ಹಿರಿಯ ಆರಾಮಾಗಿ ಚಿತ್ರೀಕರಣಕ್ಕೆ ಹೋದರಾಯ್ತು ಎಂದು ಯಾವತ್ತು ಅಂದುಕೊಂಡವರಲ್ಲ ಅಮಿತಾಬ್ ಬಚ್ಚನ್. ಬದಲಿಗೆ ಇವತ್ತು ಕೂಡ ನಿರ್ದೇಶಕರು ಹೇಳಿದ ಸಮಯಕ್ಕೆ ಸರಿಯಾಗಿ ಬಿಗ್ ಬಿ ಚಿತ್ರೀಕರಣದ ಸ್ಥಳದಲ್ಲಿ ಹಾಜರಾಗುತ್ತಾರೆ.

This actor made Amitabh Bachchan wait for three hours on set and Big B got his revenge by

ಆದರೆ, ಅಮಿತಾಬ್ ಬಚ್ಚನ್‌ಗೆ ಇರುವ ಈ ಶ್ರದ್ದೆ ಕೆಲಸದ ಮೇಲಿರುವ ಭಕ್ತಿ ಈ ನವಯುಗದ ನಾಯಕರಲ್ಲಾಗಲಿ ಅಥವಾ ಹಿಂದಿನ ಸ್ಟಾರ್‌ಗಳಲ್ಲಾಗಲಿ ಕಾಣಿಸುವುದಿಲ್ಲ. ಇದಕ್ಕೆ ಒಂದು ಉದಾಹರಣೆಯನ್ನು ನಿರ್ದೇಶಕ ಅಪೂರ್ವ ಲಾಖಿಯಾ ನೀಡಿದ್ದಾರೆ. ಅರ್ಜುನ್ ರಾಂಪಾಲ್ ಹೇಗೆ ಅಮಿತಾಬ್ ಬಚ್ಚನ್ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದ್ದರು ಎನ್ನುವುದನ್ನು ಹೇಳಿದ್ದಾರೆ.

ಫ್ರೈಡೇ ಟಾಕೀಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಪೂರ್ವ ಲಾಖಿಯಾ ನನ್ನ ಏಕ್ ಅಜ್‌ನಬಿ ಚಿತ್ರದ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆಯುತ್ತಿದ್ದ ದಿನಗಳವು.ಅದೊಂದು ದಿನ ಮುಂಜಾನೆ 05-30ಕ್ಕೆ ಚಿತ್ರೀಕರಣ ಇದ್ದರೂ ಕೂಡ ಅಮಿತಾಬ್ ಬಚ್ಚನ್ ನಾನು ಮತ್ತು ನನ್ನ ತಂಡದ ಸದಸ್ಯರು ಕ್ಲಬ್‌ಗೆ ತೆರಳಿದ್ದೇವು. ಅಲ್ಲಿಯೇ ರಾತ್ರಿ 2-30 3ರವರೆಗೆ ಇದ್ದೇವು, ಆದರೂ ಕೂಡ ನಮ್ಮೆಲ್ಲರಿಗೆ ಆಶ್ಚರ್ಯವಾಗುವಂತೆ ಅಮಿತಾಬ್ ಬಚ್ಚನ್ ಅವರು ಸರಿಯಾದ ಸಮಯಕ್ಕೆ ಅಂದರೆ ಬೆಳಗ್ಗೆ 05-30ಕ್ಕೆ ಚಿತ್ರೀಕರಣಕ್ಕೆ ಹಾಜರಾದರು ಎಂದು ನೆನಪಿಸಿಕೊಂಡಿದ್ದಾರೆ.

ಮುಂದುವರೆದು ಅವತ್ತು ಅಮಿತಾಬ್ ಅವರು ಮಧ್ಯಾಹ್ನ ನನಗೆ ಎರಡೂವರೆ ಗಂಟೆಗಳ ಕಾಲ ವಿಶ್ರಾಂತಿ ಬೇಕೆಂದು ಮನವಿಯನ್ನು ಮಾಡಿಕೊಂಡರು. ಈ ಹಿನ್ನೆಲೆ ಚಿತ್ರೀಕರಣಕ್ಕೆ ನಾವೆಲ್ಲ ಸಿದ್ಧವಾಗಿದ್ದೆವು. ಆದರೆ ದುರಾದೃಷ್ಟಕ್ಕೆ ಅವತ್ತು ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದ ಅರ್ಜುನ್ ರಾಂಪಾಲ್ ಸರಿಯಾದ ಸಮಯಕ್ಕೆ ಬರಲೇ ಇಲ್ಲ ಎಂದಿರುವ ಅಪೂರ್ವ ಲಾಖಿಯಾ, ಅರ್ಜುನ್ ರಾಂಪಾಲ್‌ಗೋಸ್ಕರ ಅಮಿತಾಬ್ ಬಚ್ಚನ್ ಅವತ್ತು ಮೂರು ಗಂಟೆ ಕಾಯುತ್ತಾ ಕುಳಿತಿದ್ದರು ಎಂದು ಹೇಳಿದ್ದಾರೆ.

ಅದ್ಯಾಗೂ ಅರ್ಜುನ್ ರಾಂಪಾಲ್ ಮೂರು ಗಂಟೆ ತಡವಾಗಿ ಬಂದರು ಕೂಡ ನಾವು ಮಧ್ಯಾಹ್ನದ ವೇಳೆ ಅಂದುಕೊಂಡತೆ ಚಿತ್ರೀಕರಣವನ್ನು ಮಾಡಿದ್ದೇವು, ಅಮಿತಾಬ್ ಬಚ್ಚನ್ ಅವರಿಗೆ ವಿಶ್ರಾಂತಿ ಪಡೆಯಲು ಹೊಟೇಲ್‌ಗೆ ಕಳಿಸಿದ್ದೇವು ಎಂದಿರುವ ಅಪೂರ್ವ ಲಾಖಿಯಾ ಆದರೆ ಅರ್ಜುನ್ ರಾಂಪಾಲ್ ಅವರ ಕೆಲ ಕ್ಲೋಸ್ ಅಪ್ ಶಾಟ್‌ಗಳನ್ನು ನಾವು ಚಿತ್ರೀಕರಿಸಲಿಲ್ಲ ಹೀಗಾಗಿ ಅಮಿತಾಬ್ ಬಚ್ಚನ್ ಅವರನ್ನು ಕರೆತರುವಂತೆ ಹೊಟೇಲ್‌ಗೆ ಕಳಿಸಿದೆವು, ಆದರೆ ಅರ್ಜುನ್ ರಾಂಪಾಲ್ ನಡುವಳಿಕೆಯಿಂದ ಅಮಿತಾಬ್ ಬಚ್ಚನ್ ಕೋಪ ಮಾಡಿಕೊಂಡಿದ್ದರು, ಹೀಗಾಗಿ ಎಷ್ಟೇ ಬೇಡಿಕೊಂಡರು ಕೂಡ ಅಮಿತಾಬ್ ಬಚ್ಚನ್ ಅವತ್ತು ಮೂರು ಗಂಟೆಗಳ ಕಾಲ ತಮ್ಮ ರೂಮ್‌ನಿಂದ ಹೊರಗಡೆ ಬರಲೇ ಇಲ್ಲ ಎಂದು ಹೇಳಿದ್ದಾರೆ. ಅಮಿತಾಬ್ ಬರದೇ ಇರುವುದನ್ನು ಕಂಡು ಹೆದರಿ ಹೋದ ಅರ್ಜುನ್ ರಾಂಪಾಲ್ ಇನ್ನೆಂದು ಚಿತ್ರೀಕರಣಕ್ಕೆ ತಡವಾಗಿ ಬರಲ್ಲ ಎಂದು ಹೇಳಿದರು ಎಂದು ಅಪೂರ್ವ ಲಾಖಿಯಾ ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ. ಒಂದೇ ಒಂದು ಮಾತು ಮಾತನಾಡದೇ ಈ ಮೂಲಕ ಅರ್ಜುನ್ ರಾಂಪಾಲ್ ವಿರುದ್ದ ತಮ್ಮ ಸೇಡನ್ನು ಅಮಿತಾಬ್ ಬಚ್ಚನ್ ತೀರಿಸಿಕೊಂಡರು ಎಂದು ಕೂಡ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X