Mahashivratri 2025 ; ಕನ್ನಡ ಚಿತ್ರರಂಗದಲ್ಲಿ ಶಿವಲೀಲೆ ವೈಭವ, ಜಾಗರಣೆಗೆ ನೋಡಬಹುದಾದ ಚಿತ್ರಗಳಿವು...!

ನಟನ ವಿಶಾರದ.. ನಟ ಶೇಖರ.. ಸಾಹಿತ್ಯ.. ಸಂಗೀತ.. ಗಂಗಾಧರ... ಶಿವ.. ಸರ್ವಂ ಶಿವಮಯಂ... ಈಶನಿಲ್ಲದೇ ಏನಿಲ್ಲ... ಈ ಈಶನೆದುರೂ ಯಾರಿಲ್ಲ.. ಸೃಷ್ಟಿ, ಸ್ಥಿತಿ, ಲಯಕಾರಕ ಈ ನೀಲಕಂಠನ ಮಹಿಮೆಯೇ ಅಂಥಾದ್ದು...

ಈ ಪರಮ ಪಾವನ ಪರಮೇಶ್ವರ, ನಮ್ಮ ಸಿನಿಮಾ ಮಂದಿಯ ಪಾಲಿಗೆ ನಟಶೇಖರನೇ... ಸಿನಿಮಾಗಳಲ್ಲಿ ಕಾಣೋ ಶಿವತಾಂಡವ ನೃತ್ಯದ ಉಗಮಕ್ಕೂ ಕಾರಣಿಕರ್ತ ಈ ಉಮಾಮಹೇಶ್ವರನೇ.. ಶಿವರಾತ್ರಿಯ ಈ ಸುಸಂದರ್ಭದಲ್ಲಿ ನೀವು ನೋಡಲೇಬೇಕಾದ ಕೆಲ ಚಿತ್ರಗಳ ಪಟ್ಟಿ ಇಲ್ಲಿದೆ. ಈ ಚಿತ್ರಗಳನ್ನು ನೋಡುತ್ತಾ ನೀವು ಜಾಗರಣೆ ಮಾಡಬಹುದು. ಹಾಗಿದ್ದರೆ ಆ ಚಿತ್ರಗಳು ಯಾವವು ಎಂದು ತಿಳಿಯಲು ಮುಂದೆ ಓದಿ.

This Maha Shivratri enjoy these movies from the comfort of your home

ಬೇಡರ ಕಣ್ಣಪ್ಪ

ಗುಬ್ಬಿ ಕಂಪನಿಯಲ್ಲಿ ಅತ್ಯಂತ ಜನಪ್ರಿಯವಾದ ನಾಟಕ ಬೇಡರ ಕಣ್ಣಪ್ಪ. ಆ ನಂತರ ಇದೇ ನಾಟಕ ಚಿತ್ರರೂಪದಲ್ಲಿ ಕೂಡ ಬಂತು. ಡಾ.ರಾಜ್ ಕುಮಾರ್ ಅಭಿನಯದ ಈ ಮೊದಲ ಚಿತ್ರಕ್ಕೆ ಇವತ್ತು ಕೂಡ ಅದ್ರದ್ದೇ ಆದ ಡಿಮ್ಯಾಂಡ್ ಇದೆ. ಅದ್ರದ್ದೇ ಆದ ಅಭಿಮಾನಿಗಳು ಕೂಡ ಇದ್ದಾರೆ. ಅದರಲ್ಲಿಯೂ ಶಿವಪ್ಪ ಕಾಯೋ ತಂದೆ ಇವತ್ತು ಅನೇಕರ ನೆಚ್ಚಿನ ಗೀತೆಯಲ್ಲಿ ಒಂದು. ಈ ಚಿತ್ರದಲ್ಲಿ ಅಣ್ಣಾವ್ರ ಅಭಿನಯವನ್ನು ಮರೆಯೋಕೆ ಯಾರಿಂದ ಕೂಡ ಸಾಧ್ಯ ಇಲ್ಲ. ಆ ಶಿವನ ಕೃಪೆಯಿಂದಲೇ ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮೆರೆದರು ಎಂದರೂ ಅತಿಶಯೋಕ್ತಿ ಆಗುವುದಿಲ್ಲ.


ಭೂ ಕೈಲಾಸ

ಡಾ. ರಾಜ್‌ಕುಮಾರ್ ನಟನೆಯ ಮತ್ತೊಂದು ಶಿವಭಕ್ತಿ ಪ್ರದಾನ ಸಿನಿಮಾ 'ಭೂಕೈಲಾಸ'. ಈ ಚಿತ್ರಕ್ಕೆ ಕೆ.ಶಂಕರ್ ನಿರ್ದೇಶನ ಇತ್ತು. ಶಿವನ ಪರಮ ಭಕ್ತನಾದ ರಾವಣನಿಗೆ ಈಶ್ವರ ಕೇಳಿದ ವರಗಳನ್ನು ಕೊಡುತ್ತಾನೆ. ಮುಂದೇನಾಗುತ್ತೆ ಎಂಬ ಕಥಾಹಂದರದ ಈ ಚಿತ್ರದಲ್ಲಿ ಅಣ್ಣಾವ್ರ ಅಭಿನಯವನ್ನು ನೋಡುವುದೇ ಒಂದು ಚೆಂದದ ಅನುಭವ.

ಸತ್ಯ ಹರಿಶ್ಚಂದ್ರ

ನಾಟ್ಯ ಮಯೂರ, ನಟರಾಜನ ಸುತ್ತ ಸತ್ಯ ಹರಿಶ್ಚಂದ್ರನ ಕಥೆಯನ್ನು ಹೆಣೆಯಲಾಗಿತ್ತು. ಡಾ.ರಾಜ್ ಕುಮಾರ್ ಜೊತೆ ಈ ಚಿತ್ರದಲ್ಲಿ ಪಂಡರಿಬಾಯಿ, ಉದಯ್‌ಕುಮಾರ್, ನರಸಿಂಹ ರಾಜು, ಎಂ. ಪಿ ಶಂಕರ್‌ರಂತಹ ಘಟಾನುಘಟಿ ಕಲಾವಿದರು ಇದ್ದರು. ಈ ಚಿತ್ರದಲ್ಲಿ ಕೂಡ ಅಣ್ಣಾವ್ರದ್ದು ಮನೋಜ್ಞ ಅಭಿನಯ

ಭಕ್ತ ಸಿರಿಯಾಳ

ಭಕ್ತ ಸಿರಿಯಾಳ ಕನ್ನಡ ಚಿತ್ರರಂಗದ ಮತ್ತೊಂದು ಕ್ಲಾಸಿಕ್ ಚಿತ್ರ. ಹುಣಸೂರು ಕೃಷ್ಣಮೂರ್ತಿ ಅವರ ಈ ಚಿತ್ರದಲ್ಲಿ ಸಿರಿಯಾಳನನ್ನು ಪರೀಕ್ಷೆಗೆ ಒಡ್ಡುವ ರುದ್ರಶಿವ ಕೊನೆಗೆ ಹೇಗೆ ಸಿರಿಯಾಳನ ಭಕ್ತಿ ಮೆಚ್ಚಿ ಒಲಿಯುತ್ತಾನೆ ಎನ್ನುವ ಕಥೆಯನ್ನು ಹೇಳಲಾಗಿತ್ತು.

ಕೇವಲ ಇಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ ಚಿತ್ರಗಳಿಗೆ ಅದ್ರದ್ದೇ ಆದ ಮಹತ್ವ ಇದೆ. ಅದರಲ್ಲಿಯೂ ಶಿವ ಕನ್ನಡ ಚಿತ್ರರಂಗದ ಮನೆ ದೇವರು ಅಂದರೆ ಅತಿ ಶಯೋಕ್ತಿಯಲ್ಲ. ಪುರಾಣದ ಹಲವಾರು ಕಥೆಗಳಲ್ಲಿ ಶಿವ, ಕೈಲಾಸದ ಪ್ರಸ್ತಾಪವಾಗುವದರಿಂದ ಹಿಡಿದು ಅನೇಕ ಸಿನಿಮಾಗಳು ಬಂದಿವೆ.ಇನ್ನು ಕೆಲವು ಉದಾಹರಣೆ ನೀಡಬೇಕು ಅಂದರೆ ಭಕ್ತ ಮಾರ್ಕಂಡೇಯ, ಭಕ್ತ ಮಲ್ಲಿಕಾರ್ಜುನ, ಗಿರಿಜಾ ಕಲ್ಯಾಣ, ಗಂಗೆ ಗೌರಿ, ಪಾರ್ವತಿ ಕಲ್ಯಾಣ, ಶಿವಕೊಟ್ಟ ಸೌಭಾಗ್ಯ, ಶ್ರೀ ಧರ್ಮಸ್ಥಳ ಮಹಾತ್ಮೆ, ಶಿವ ಮೆಚ್ಚಿದ ಕಣ್ಣಪ್ಪ, ಶಿವ ಕೊಟ್ಟ ಸೌಭಾಗ್ಯ, ಸ್ವರ್ಣಗೌರಿ, ಬಾಲ ಶಿವ ಹೀಗೆ ಲಿಸ್ಟ್ ಬೆಳೆಯುತ್ತಲೇ ಹೋಗುತ್ತದೆ. ಇದಲ್ಲದೇ ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ಕಿರುತೆರೆಯ ಪೌರಾಣಿಕ ಸರಣಿಗಳಲ್ಲಿ ಶಿವನ ಪಾತ್ರಗಳನ್ನು ನೀವು ನೋಡಬಹುದು. ಶಿವನ ಚಿತ್ರಗಳನ್ನು ನೋಡುತ್ತಾ, ಹಾಡುಗಳನ್ನು ಕೇಳುತ್ತಾ ಜಾಗರಣೆಯನ್ನು ಮಾಡಬಹುದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X