ಒಂದ್ಕಾಲದಲ್ಲಿ ಈ ಬಾಲಿವುಡ್ ನಟಿಯ ಆಸ್ತಿ ₹10 ಸಾವಿರ ಕೋಟಿ: ಪತಿಯ ತಪ್ಪಿನಿಂದ ಆಸ್ತಿ ಕರಗಿದ್ದೇಗೆ?

ಬಹುಬೇಡಿಕೆ ನಟ, ನಟಿಯರು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೀತಾರೆ. ಸಿನಿಮಾ, ಜಾಹೀರಾತು, ಅದು ಇದು ಅಂತ ವರ್ಷಕ್ಕೆ ನೂರಾರು ಕೋಟಿ ಆದಾಯ ಗಳಿಸುವ ತಾರೆಯರು ನಮ್ಮ ಮುಂದಿದ್ದಾರೆ. ಅಯ್ಯೋ ಇಷ್ಟು ಕೋಟಿ ಸಂಪಾದನೆ ಮಾಡ್ತಾರಲ್ಲ, ಅದನ್ನೆಲ್ಲಾ ಅವರು ಎಲ್ಲಿ ಇಡ್ತಾರೆ? ಏನು ಮಾಡ್ತಾರೆ? ಅನ್ನೋದು ಕೆಲವರಿಗೆ ಉತ್ತರ ಸಿಗದ ಪ್ರಶ್ನೆ ಆಗಿರುತ್ತದೆ.

ಸಲ್ಮಾನ್ ಖಾನ್, ರಜನಿಕಾಂತ್, ಶಾರುಖ್ ಖಾನ್, ಪ್ರಭಾಸ್, ದಳಪತಿ ವಿಜಯ್, ರಾಕಿಂಗ್ ಸ್ಟಾರ್ ಯಶ್ ಚಿತ್ರವೊಂದಕ್ಕೆ 50ರಿಂದ 100 ಕೋಟಿ ಸಂಭಾವನೆ ಪಡೀತಾರೆ ಎನ್ನುವ ಅಂದಾಜಿದೆ. ಇನ್ನು ಕೆಲ ನಟರು ಉದ್ಯಮಿಗಳ ಮಗಳನ್ನು ಮದುವೆ ಆಗಿ ಮತ್ತಷ್ಟು ಸಿರಿವಂತರಾದರೆ ಕೆಲ ನಟಿಯರು ಉದ್ಯಮಿಗಳನ್ನು ಮದುವೆ ಆಗಿ ಮಹಾರಾಣಿಯರಂತೆ ಮರೆಯುತ್ತಾರೆ. ರಾಣಿ ಮುಖರ್ಜಿ, ಆಸಿನ್, ಜೂಹಿ ಚಾವ್ಲಾ, ಶಿಲ್ಪಾ ಶೆಟ್ಟಿ ಸೇರಿದಂತೆ ಕೆಲ ನಟಿಯರು ಆಗರ್ಭ ಶ್ರೀಮಂತರ ಕೈ ಹಿಡಿದಿದ್ದಾರೆ.

This richest Actress Who Left Bollywood After marry billionaire

30 ವರ್ಷಗಳ ಹಿಂದೆ ಸಿನಿಮಾಗಳಿಂದ ದೂರಾದ ನಟಿಯೊಬ್ಬರು ಇವತ್ತು ರಾಣಿಯಂತೆ ಬಾಳಿ ಬದುಕುತ್ತಿದ್ದಾರೆ. ಒಂದ್ಕಾಲದಲ್ಲಿ ಬಾಲಿವುಡ್ ಕ್ರೇಜಿ ಹೀರೋಯಿನ್ ಆಗಿದ್ದ ಈ ಚೆಲುವೆ ಮದುವೆ ನಂತರ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದರು. ಭಾರತದ ದೇಶದ ಆಗರ್ಭ ಶ್ರೀಮಂತನನ್ನು ಮದುವೆಯಾಗಿ ಆಕೆ ಕೂಡ ಶ್ರೀಮಂತೆ ಆಗಿಬಿಟ್ಟಳು. ಆಕೆ ಮತ್ಯಾರು ಅಲ್ಲ, ರಿಲಯನ್ಸ್ ಗ್ರೂಪ್ ಚೇರ್ಮನ್ ಅನಿಲ್ ಅಂಬಾನಿ ಪತ್ನಿ ಟೀನಾ ಅಂಬಾನಿ.

80ರ ದಶಕದ ಬಹುಬೇಡಿಕೆಯ ನಟಿ

ಟೀನಾ ಅಂಬಾನಿ ಮೂಲ ಹೆಸರು ಟೀನಾ ಮುನಿಮ್. 1978ರಲ್ಲಿ 'ದೇಶ್ ಪರ್‌ದೇಶ್' ಸಿನಿಮಾ ಮೂಲಕ ಟೀನಾ ಬಾಲಿವುಡ್ ಪ್ರವೇಶಿಸಿದರು. ತಮ್ಮ ಅಂದ ಚೆಂದ ಅಭಿನಯದಿಂದ ಬಾಲಿವುಡ್ ಪ್ರೇಕ್ಷಕರ ಮನಗೆದ್ದರು. ರಿಷಿ ಕಪೂರ್, ರಾಜೇಶ್ ಖನ್ನಾ, ಅಮಲ್ ಪಾಲೇಕರ್‌ರಂತಹ ಸ್ಟಾರ್ ನಟರ ಜೊತೆ ನಟಿಸಿ ಮೋಡಿ ಮಾಡಿದರು. ಟೀನಾ ಮುನಿಮ್‌ಗೆ ಆರಂಭದಲ್ಲಿ ಸಕ್ಸಸ್ ಸಿಕ್ಕರೂ ಬಳಿಕ ಒಂದಷ್ಟು ಸಿನಿಮಾಗಳು ಸೋಲುಂಡವು. 'ಜಿಗರ್‌ವಾಲ' ಚಿತ್ರದಲ್ಲಿ ಕೊನೆಯದಾಗಿ ಆಕೆ ಅನಿಲ್ ಕಪೂರ್ ಜೊತೆ ನಟಿಸಿದ್ದರು.

This richest Actress Who Left Bollywood After marry billionaire

ಟೀನಾ ಸದ್ಯದ ಆಸ್ತಿಮೌಲ್ಯ ಎಷ್ಟು?

1991, ಫೆಬ್ರವರಿ 2ರಂದು ಟೀನಾ, ಅನಿಲ್ ಅಂಬಾನಿ ಕೈ ಹಿಡಿದಿದ್ದರು. ಇಬ್ಬರದ್ದು ಲವ್ ಮ್ಯಾರೇಜ್. ಅಂದಹಾಗೆ 15 ವರ್ಷಗಳ ಹಿಂದೆ ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಅನಿಲ್ ಅಂಬಾನಿ 6ನೇ ಸ್ಥಾನದಲ್ಲಿದ್ದರು. ಆ ಸಮಯದಲ್ಲಿ ಟೀನಾ ಆಸ್ತಿ ಮೌಲ್ಯ ಬರೋಬ್ಬರಿ 10 ಸಾವಿರ ಕೋಟಿ ರೂ.ಗೆ ತಲುಪಿತ್ತು ಎನ್ನಲಾಗುತ್ತದೆ. ಆದರೆ ಪದೇ ಪದೇ ವ್ಯಾಪಾರ ವ್ಯವಹಾರದಲ್ಲಿ ಏಳುಬೀಳು ಕಂಡ ಅನಿಲ್ ಅಂಬಾನಿ ಆದಾಯ ನಿಧಾನವಾಗಿ ಕಡಿಮೆ ಆಗಿತ್ತು. ವರದಿಗಳ ಪ್ರಕಾರ ಸದ್ಯ ರಿಲಯನ್ಸ್ ಸಾಮ್ರಾಜ್ಯದ ಭಾಗವಾಗಿರುವ ಟೀನಾ ಆಸ್ತಿ ಮೌಲ್ಯ ಅಂದಾಜು 2331 ಕೋಟಿ ರೂ. ಎನ್ನುವ ಅಂದಾಜಿದೆ.

ಟೀನಾಗಾಗಿ ರಿಷಿ- ಸಂಜು ಕಿರಿಕ್!

80ರ ದಶಕದಲ್ಲಿ ಟೀನಾ ಮುನಿಮ್ ಕ್ರೇಜ್ ಭಾರೀ ಜೋರಾಗಿತ್ತು. ಆಕೆಗಾಗಿ ನಟರಿಬ್ಬರು ಕಿತ್ತಾಡಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. ಟೀನಾ ಕೆಲ ನಟರ ಜೊತೆಗೆ ಲವ್ವಿ ಡವ್ವಿ ನಡೆಸಿದ್ದರು ಎನ್ನಲಾಗುತ್ತದೆ. ಆ ಪಟ್ಟಿಯಲ್ಲಿ ರಿಷಿ ಕಪೂರ್ ಹೆಸರು ಕೂಡ ಇದೆ. ಆದರೆ ಅದು ನಿಜವಲ್ಲ ಎಂದು ಸ್ವತಃ ರಿಷಿ ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ. ಈ ವದಂತಿ ನಿಜ ಎಂದುಕೊಂಡು ಸಂಜಯ್ ದತ್ ನನ್ನನ್ನು ಹೊಡೆಯಲು ಬಂದಿದ್ದ ಎಂದು ರಿಷಿ ಹೇಳಿಕೊಂಡಿದ್ದಾರೆ.

ಶ್ರೀಮಂತ ನಟಿಯರ ಪಟ್ಟಿ

ಬಾಲಿವುಡ್‌ನಲ್ಲಿ ನೂರಾರು ಕೋಟಿ ಆಸ್ತಿ ಮೌಲ್ಯ ಹೊಂದಿರುವ ಸಾಕಷ್ಟು ನಟಿಯರು ಇದ್ದಾರೆ. ಸದ್ಯ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯರ ಪಟ್ಟಿ ತೆಗದುಕೊಂಡರೆ ಐಶ್ವರ್ಯಾ ರೈ ಬಚ್ಚನ್ ಸುಮಾರು 850 ಕೋಟಿ ರೂ. ಆಸ್ತಿಯ ಒಡತಿ ಎನ್ನವ ಅಂದಾಜಿದೆ. 2ನೇ ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾ 600 ಕೋಟಿ ರೂ, 3ನೇ ಸ್ಥಾನದಲ್ಲಿರುವ ಕರೀನಾ ಕಪೂರ್ 500 ಕೋಟಿ ರೂ. ಆಸ್ತಿಮೌಲ್ಯ ಹೊಂದಿದ್ದಾರೆ ಎನ್ನಲಾಗುತ್ತದೆ. ಇನ್ನುಳಿದಂತೆ 4ನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ, 5ನೇ ಸ್ಥಾನದಲ್ಲಿ ಅನುಷ್ಕಾ ಶರ್ಮಾ ಇದ್ದಾರೆ. 210 ಕೋಟಿ ರೂ. ಆಸ್ತಿಮೌಲ್ಯ ಹೊಂದಿರುವ ನಯನತಾರಾ ದಕ್ಷಿಣ ಭಾರತದ ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ.

More from Filmibeat

English summary
This richest Actress Who quit films to marry billionaire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X