ದರ್ಶನ್ ಇತ್ತೀಚೆಗೆ ಧರಿಸಿದ್ದ ಈ ಟೀ-ಶರ್ಟ್ ಹಾಗೂ ಶರ್ಟ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!
ನಟ ದರ್ಶನ್ ಮತ್ತೆ ನಿಧಾನವಾಗಿ ತಮ್ಮ ಮಾಮೂಲಿ ಜೀವನಕ್ಕೆ ಮರಳುತ್ತಿದ್ದಾರೆ. ಇತ್ತೀಚೆಗೆ ವೀಡಿಯೋ ಮಾಡಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ನಮ್ಮ ಮನೆ ಬಳಿ ಯಾರು ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಬಳಿಕ ರಕ್ಷಿತಾ ಪ್ರೇಮ್ ಸಹೋದರ ರಾಣಾ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿ ಆಗಿದ್ದರು.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ಬಂದ ದರ್ಶನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆನ್ನು ನೋವು ಬಿಟ್ಟು ಬಿಡದೇ ಕಾಡುತ್ತಿದೆ. ಹಾಗಾಗಿ ಹೆಚ್ಚು ಎಲ್ಲೂ ಓಡಾಡುತ್ತಿಲ್ಲ. ಆರ್ ಆರ್ ನಗರದ ಮನೆಯಿಂದ ಮೈಸೂರಿಗೆ ಹೋಗಿ ಬರುತ್ತಾರೆ. ಈ ಬಾರಿ ಸಂಕ್ರಾಂತಿ ಹಬ್ಬವನ್ನು ಫಾರ್ಮ್‌ಹೌಸ್‌ನಲ್ಲೇ ಆಚರಿಸಿದ್ದರು. ಶೀಘ್ರದಲ್ಲೇ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.

ಜೈಲಿನಿಂದ ಹೊರ ಬಂದ ಬಳಿಕ ಸಾರ್ವಜನಿಕವಾಗಿ ದರ್ಶನ್ ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಮೈಸೂರಿಗೆ ತೆರಳಿದ್ದರು. ಅಲ್ಲಿ ಕೂಡ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದ್ದರು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಸಹೋದರ ದಿನಕರ್ ನಿರ್ದೇಶನದ 'ರಾಯಲ್' ಸಿನಿಮಾ ವೀಕ್ಷಿಸಿ ತಂಡಕ್ಕೆ ಶುಭ ಕೋರಿದ್ದರು.
ಮಲ್ಲೇಶ್ವರದಲ್ಲಿರುವ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ದರ್ಶನ್ ಅಂದು 'ರಾಯಲ್' ಸಿನಿಮಾ ನೋಡಿದ್ದರು. ಅಂದು ಕೆಂಪು ಬಣ್ಣದ ಟೀಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅಂದು ದರ್ಶನ್ ತೊಟ್ಟಿದ್ದ ಟೀ-ಶರ್ಟ್ ಹಾಗೂ ವಾಚ್ ಬೆಲೆ ಎಷ್ಟು ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿತ್ತು. ಇತ್ತೀಚೆಗೆ ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿ ಒಂದು ವೀಡಿಯೋ ಹಂಚಿಕೊಂಡಿದ್ದರು. ಅಂದು ಧರಿಸಿದ್ದ ಟೀ ಶರ್ಟ್ ಹಾಗೂ ರಕ್ಷಿತಾ ಸಹೋದರನ ಆರತಕ್ಷತೆ ಕಾರ್ಯಕ್ರಮಕ್ಕೆ ತೊಟ್ಟಿದ್ದ ಶರ್ಟ್ ಬೆಲೆ ಎಷ್ಟು ಎಂದು ಈಗ ಚರ್ಚೆ ಶುರುವಾಗಿದೆ.
ಚಿತ್ರವೊಂದಕ್ಕೆ ದರ್ಶನ್ 10ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ವಿಲಾಸಿ ಜೀವನ ನಡೆಸುತ್ತಾರೆ. ಆಪ್ತರು ಕೂಡ ಬಟ್, ವಾಚ್ ಅಂತೆಲ್ಲಾ ಉಡಗೊರೆ ಕೊಡ್ತಾರೆ. ಇತ್ತೀಚೆಗೆ ದರ್ಶನ್ ಮಾಡಿದ್ದ ವೀಡಿಯೋದಲ್ಲಿ ಬಿಳಿ ಬಣ್ಣದ AAPE ಪ್ರಿಂಟ್ ಟೀಶರ್ಟ್ ಧರಿಸಿದ್ದರು. ಅದರ ಬೆಲೆ ಬರೋಬ್ಬರಿ 9, 500 ರೂಪಾಯಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ರಾಣಾ ಹಾಗೂ ರಕ್ಷಿತಾ ದಂಪತಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಜೊತೆ ದರ್ಶನ್ ಪಾಲ್ಗೊಂಡಿದ್ದರು. Burberry ಶರ್ಟ್ ದರ 38 ಸಾವಿರಕ್ಕೂ ಅಧಿಕ ಎಂದು ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ. ಇದನ್ನು ನವ ವಧು ವರರಿಗೆ ದರ್ಶನ್ ದುಬಾರಿ ಉಡುಗೊರೆ ಕೂಡ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆನ್ನು ನೋವಿನ ಸಮಸ್ಯೆ, ಹುಟ್ಟುಹಬ್ಬ ಆಚರಣೆ ಹಾಗೂ ಮುಂದಿನ ಸಿನಿಮಾಗಳ ಬಗ್ಗೆ ಸ್ವತಃ ದರ್ಶನ್ ಮಾತನಾಡಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸೋದು ಖಚಿತ ಎಂದಿದ್ದಾರೆ. ಆದರೆ ಆ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಿಸಲ್ಲ ಎಂದಿದ್ದಾರೆ. ದೇ ರೀತಿ ಸೂರಪ್ಪ ಬಾಬು ಅವರಿಂದ ಪಡೆದಿದ್ದ ಅಡ್ವಾನ್ಸ್ ಅನ್ನು ಕೂಡ ವಾಪಸ್ ಕೊಟ್ಟಿರುವುದಾಗಿ ದರ್ಶನ್ ಹೇಳಿದ್ದಾರೆ. ಸಿನಿಮಾ ಬಿಟ್ಟು ಎಲ್ಲೂ ಹೋಗಲ್ಲ ಎಂದು ತಿಳಿಸಿದ್ದಾರೆ. ಆದಷ್ಟು ಬೇಗ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











