Video viral: 'ಐ ಲವ್ ಯು' ಎಂದ 4 ತಿಂಗಳ ಮಗ; ಹಿರಿಹಿರಿ ಹಿಗ್ಗಿದ 'ತಿಥಿ' ಸಿನಿಮಾ ನಟಿ ಪೂಜಾ

ಸಾಮಾನ್ಯವಾಗಿ ಮಕ್ಕಳು 7 ತಿಂಗಳಿಂದ 8 ತಿಂಗಳ ವೇಳೆಗೆ ಮಾತನಾಡಲು ಆರಂಭಿಸುತ್ತಾರೆ. ತೊದಲು ಮಾತುಗಳನ್ನು ಆಡುತ್ತಾರೆ. ಕೆಲ ಮಕ್ಕಳು ಅದಕ್ಕಿಂತ ಮೊದಲು ಪದಗಳನ್ನು ಉಚ್ಚರಿಸಲು ಆರಂಭಿಸುತ್ತವೆ. ಕೆಲವೊಮ್ಮೆ 4 ವರ್ಷವಾದರೂ ಮಾತನಾಡಲು ಕಷ್ಟಪಡುವ ಮಕ್ಕಳು ಇರ್ತಾರೆ.

ಆಗೊಮ್ಮೆ ಈಗೊಮ್ಮೆ 2 ತಿಂಗಳು, 3 ತಿಂಗಳ ಮಕ್ಕಳು ಕೂಡ ಚಿಕ್ಕ ಚಿಕ್ಕ ಪದಗಳನ್ನು ಉಚ್ಚರಿಸಲು ಪ್ರಯತ್ನಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಅದೇ ರೀತಿ 'ತಿಥಿ' ಸಿನಿಮಾ ಖ್ಯಾತಿಯ ನಟಿ ಪೂಜಾ ಅವರ 4 ತಿಂಗಳ ಮಗ 'ಐ ಲವ್ ಯು' ಎಂದು ಹೇಳಿರುವ ಕ್ಯೂಟ್ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

Thithi fame actress Pooja Kaveri s 4 months Baby Boy says I Love You

ಎರಡು ವರ್ಷಗಳ ಹಿಂದೆ ನಟಿ ಪೂಜಾ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪ್ರೇಮ್ ಎಂಬುವವರ ಕೈ ಹಿಡಿದಿದ್ದರು. 4 ತಿಂಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಪೂಜಾ ಜನ್ಮ ನೀಡಿದ್ದರು. ಇದೀಗ ಮಗ ತಂದೆಯ ಮಾತುಗಳು ಪುನರುಚ್ಛರಿಸಲು ಪ್ರಯತ್ನಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

4 ತಿಂಗಳ ಮಗನನ್ನು ಮಡಿಲಲ್ಲಿ ಮಲಗಿಸಿಕೊಂಡು ಪೂಜಾ ಪತಿ ಪ್ರೇಮ್ 'ಐ ಲವ್ ಯು' ಎಂದು ಒಂದೊಂದೇ ಪದವನ್ನು ಹೇಳಿದ್ದು. ಅದನ್ನು ಮಗು ಪುನರುಚ್ಛರಿಸಿರುವುದನ್ನು ನೋಡಬಹುದು. ಇದನ್ನು ನೋಡಿ ಮನೆ ಮಂದಿ ಸಂಭ್ರಮಿಸಿದ್ದಾರೆ. "ನಮ್ಮ 4 ತಿಂಗಳ ಮಗು ತನ್ನ ತಂದೆಗೆ ತನ್ನ ಮೊದಲ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ" ಎಂದು ಬರೆದು ಪೂಜಾ ವಿಡಿಯೋ ಹಂಚಿಕೊಂಡಿದ್ದಾರೆ. 2 ದಿನಗಳಲ್ಲಿ 1 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ವಿಡಿಯೋ ಗಮನ ಸೆಳೆದಿದೆ.

Thithi fame actress Pooja Kaveri s 4 months Baby Boy says I Love You

ಅಭಿಮಾನಿಗಳು ಪುಟ್ಟ ಕಂದ 'ಐ ಲವ್ ಯು' ಎನ್ನುವುದನ್ನು ಕೇಳಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. 'ಕಲಿಗಾಲ ಇದು', 'ಸೋ ಕ್ಯೂಟ್', 4 ತಿಂಗಳಿಗೆ ಹೀಗಾದ್ರೆ ಮುಂದೆ ಹೇಗೆ? ಎಂದು ಕಾಮೆಂಟ್‌ಗಳ ಸುರಿಮಳೆ ಸುರಿಸುತ್ತಿದ್ದಾರೆ.

ನಟಿ ಪೂಜಾ ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಮ್ಮ ಮನೆಯ ಸಂತಸದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮಗುವಿಗಾಗಿ ಒಂದು ಇನ್‌ಸ್ಟಾ ಪೇಜ್ ಕ್ರಿಯೇಟ್ ಮಾಡಿದ್ದು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ.

9 ವರ್ಷಗಳ ಹಿಂದೆ ಬಂದಿದ್ದ 'ತಿಥಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ಪಡೆದಿತ್ತು. ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳ ಗರಿ ಮುಡಿಗೇರಿಸಿಕೊಂಡಿತ್ತು. ಚಿತ್ರದಲ್ಲಿ ಕುರಿ ಕಾಯುವ ಯುವತಿ ಕಾವೇರಿ ಪಾತ್ರದಲ್ಲಿ ಪೂಜಾ ನಟಿಸಿ ಗಮನ ಸೆಳೆದಿದ್ದರು.

ಪೂಜಾ ನಟನೆಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. ಆ ಬಳಿಕ ಆಕೆ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ 'ತಿಥಿ' ಪೂಜಾ ಅಂತ್ಲೇ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಮದುವೆ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರಾಗಿದ್ದಾರೆ. ಸದ್ಯ ಮಗನ ಲಾಲನೆ ಪಾಲನೆಯಲ್ಲಿ ಪೂಜಾ ಬ್ಯುಸಿಯಾಗಿದ್ದಾರೆ.

ಎಂಸಿಎ ಮುಗಿಸಿದ್ದ ಪೂಜಾ 'ತಿಥಿ' ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಬಳಿಕ 'ದಾರಿ ಯಾವುದಯ್ಯ ವೈಕುಂಠಕೆ', 'ಮೂಕಹಕ್ಕಿ' ಮತ್ತು 'ನೀವು ಕರೆ ಮಾಡಿದ ಚಂದದಾರರು ಬಿಜಿಯಾಗಿದ್ದಾರೆ' ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು. ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೂ ಸೇರಿದ್ದರು. ಆ ಬಳಿಕ ಪ್ರೇಮ್ ಎಂಬುವವರ ಜೊತೆ ಮದುವೆ ನಿಶ್ಚಯವಾಗಿತ್ತು. ಆಕೆಯದ್ದು ಅರೇಂಜ್ಡ್ ಮ್ಯಾರೇಜ್.

More from Filmibeat

English summary
Pooja Kaveri's 4 months Baby Boy first words goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X