ತನಗಿಂತ 4 ವರ್ಷ ದೊಡ್ಡ ನಟಿಯನ್ನು ಇಷ್ಟಪಟ್ಟಿದ್ದ ತಾರಕ್? ಆ ರಾದ್ದಾಂತಕ್ಕೆ ಇಂಡಸ್ಟ್ರಿ ಬಿಟ್ಟ ನಟಿ ಯಾರು?

ಟಾಲಿವುಡ್ ನಟ ಜ್ಯೂ. ಎನ್‌ಟಿಆರ್‌ ಈಗ ಬಾಲಿವುಡ್‌ಗೂ ಎಂಟ್ರಿ ಕೊಡ್ತಿದ್ದಾರೆ. ತಮ್ಮ ಅದ್ಭುತ ಅಭಿನಯದಿಂದ ತೆಲುಗು ಪ್ರೇಕ್ಷಕರ ಮನಗೆದ್ದ ಯಂಗ್ ಟೈಗರ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅಂದಹಾಗೆ 'RRR' ಸಿನಿಮಾ ನಟನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.‌ ಆದರೆ ದಶಕಗಳ ಹಿಂದೆ ತಾರಕ್ ಜೊತೆ ಬಾಲಿವುಡ್ ನಟಿ ಹೆಸರು ತಳುಕು ಹಾಕಿಕೊಂಡಿತ್ತು.

2011ರಲ್ಲಿ ಜ್ಯೂ. ಎನ್‌ಟಿಆರ್ ಖ್ಯಾತ ಉದ್ಯಮಿಯ ಮಗಳು ಲಕ್ಷ್ಮಿ ಪ್ರಣತಿ ಕೈಹಿಡಿದರು. ಆದರೆ 23-23 ವಯಸ್ಸಿನಲ್ಲಿ ನನಗೆ ಆ ನಟಿ ಅಂದರೆ ಇಷ್ಟ ಇತ್ತು. ಆದರೆ ನಂತರ ಇಷ್ಟ ಎಲ್ಲಾ ಬದಲಾಯಿತು. ಆಮೇಲೆ ಗೊತ್ತಾಯಿತು. ಇಷ್ಟ ಬೇರೆ, ಜೀವನ ಬೇರೆ ಅಂತ ಸ್ವತಃ ತಾರಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದ್ದಕ್ಕಿದಂತೆ ಆ ವಿಡಿಯೋ ಈಗ ವೈರಲ್ ಆಗ್ತಿದೆ. ಸದ್ಯ ಯಂಗ್‌ ಟೈಗರ್ ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದಲ್ಲಿ ನಟಿಸ್ತಿದ್ದಾರೆ.

Throwback: When Jr NTR opened up about his alleged affair with Sameera reddy

ಹೃತಿಕ್ ರೋಷನ್ ಜೊತೆ 'ವಾರ್‌- 2' ಚಿತ್ರದಲ್ಲಿ ನಟಿಸೋಕೆ ತಾರಕ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನ ಪ್ರಶಾಂತ್ ನೀಲ್ ಮುಂದಿನ ಚಿತ್ರದಲ್ಲಿ ತಾರಕ್ ನಟಿಸಬೇಕಿದೆ. 'RRR' ಸಿನಿಮಾ ಬಳಿಕ ಒಂದು ವರ್ಷ ಗ್ಯಾಪ್ ತೆಗೆದುಕೊಂಡು 'ದೇವರ' ಸಿನಿಮಾ ಆರಂಭಿಸಿದ್ದಾರೆ. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ತಾರಕ್- ಸಮೀರಾ ಲವ್ವಿ ಡವ್ವಿ

2006ರಲ್ಲಿ ಜ್ಯೂ. ಎನ್‌ಟಿಆರ್ 'ಅಶೋಕ್' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಸುರೇಂದರ್ ರೆಡ್ಡಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಸಮೀರಾ ರೆಡ್ಡಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ವದಂತಿ ಹರಡಿತ್ತು. ಈ ವಿಚಾರ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡಿತ್ತು.

Throwback: When Jr NTR opened up about his alleged affair with Sameera reddy

ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟೇ

ಚಿತ್ರರಂಗದಲ್ಲಿ ಬಹಳ ಆತ್ಮೀಯವಾಗಿರುವ ನಟ- ನಟಿಯರ ಬಗ್ಗೆ ಗಾಸಿಪ್‌ ಹುಟ್ಟಿಕೊಳ್ಳುತ್ತದೆ. ಅವತ್ತಿನ ಕಾಲಕ್ಕೆ ತಾರಕ್- ಸಮೀರಾ ಡೇಟ್ ಮಾಡ್ತಿದ್ದಾರೆ ಎನ್ನುವ ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮುಂಬೈ ಬೆಡಗಿ "ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಆಗಿದ್ದೆವು. ಆತನಿಂದ ನಾನು ಸಾಕಷ್ಟು ವಿಚಾರ ಕಲಿತೆ. ಆದರೆ ಈ ರೀತಿ ಗಾಸಿಪ್ ಹಬ್ಬಿದಾಗ ಪೋಷಕರು ಬೇಸರಗೊಂಡಿದ್ದರಂತೆ. ನಮ್ಮ ತಂದೆ ಒಪ್ಪಲೇಯಿಲ್ಲ. ಅದೇ ಸಮಯದಲ್ಲಿ ನಾನು ತಮಿಳು ಚಿತ್ರರಂಗದತ್ತ ಮುಖಮಾಡಿದೆ.

ತೆಲುಗು ಚಿತ್ರರಂಗ ಬಿಟ್ಟ ಸಮೀರಾ

ಗಾಸಿಪ್ ಹೆಚ್ಚಾದ ಹಿನ್ನೆಲೆಯಲ್ಲಿ ಸಮೀರಾ ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುವುದನ್ನೇ ನಿಲ್ಲಿಸಿದರಂತೆ. ಜೊತೆಗೆ ತಾರಕ್‌ನಿಂದ ಅಂತರ ಕಾಯ್ದುಕೊಂಡರಂತೆ. 2014ರಲ್ಲಿ ಅಕ್ಷಾಯ್ ವರ್ದೆ ಎಂಬುವವರ ಕೈ ಹಿಡಿದರು. ಆದರೆ ಆ ಸಮಯದಲ್ಲಿ ನಿಜಕ್ಕೂ ಆ ಗಾಸಿಪ್‌ಗಳಿಂದ ತೆಲುಗು ಚಿತ್ರರಂಗದಿಂದಲೇ ದೂರ ಇರುವಂತೆ ಆಯಿತು ಎಂದು ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಜ್ಯೂ. ಎನ್‌ಟಿಆರ್ ಹೇಳಿದ್ದೇನು?

ತೆಲುಗು ಸಂದರ್ಶನವೊಂದರಲ್ಲಿ ನಟ ಜ್ಯೂ. ಎನ್‌ಟಿಆರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಹೆಸರು ಹೇಳದೇ ಆಕೆಯನ್ನು ಇಷ್ಟಪಟ್ಟಿದ್ದು ನಿಜವೇ ಎಂದಿದ್ದರು. ಆ ವಯಸ್ಸಿನಲ್ಲಿ ಯಾರನ್ನು ನೋಡಿ ಮೊದಲಿಗೆ ಆಕರ್ಷಿತರಾಗಿದ್ದಿರಿ ಎನ್ನುವ ಪ್ರಶ್ನೆಗೆ "ಅಯ್ಯೋ ಆಗ ಬಹಳ ಪ್ರಚಾರ ಆಯ್ತಲ್ಲ. ಹಂಗೆ ಒಮ್ಮೆ ಯಾವಾಗಾದರೂ ಇಷ್ಟ ಆಗುತ್ತಲ್ಲ. ನಂತರ ಇದಲ್ಲ, ಅನ್ನಿಸುತ್ತದೆ. ಆಗ ನನ್ನ ವಯಸ್ಸು 23 ವರ್ಷ. ಅದೆಲ್ಲಾ ಜೀವನದಲ್ಲಿ ನಡೆಯುವಂತದ್ದು. ಅದರ ಬಗ್ಗೆ ನನಗೇನು ಸಮಸ್ಯೆ ಇಲ್ಲ" ಎಂದಿದ್ದರು.

More from Filmibeat

English summary
Throwback: When Jr NTR opened up about his alleged affair with Sameera reddy. They both acted in Surender Reddy's 2006 Telugu romantic action film Ashok. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X