2020: ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ನಟ-ನಟಿಯರು

2020 ವಿಶ್ವದೆಲ್ಲೆಡೆ ನಟ ನಟಿಯರಿಗೆ ಅಷ್ಟೇನೂ ಲಾಭದಾಯಕವಾಗಿರಲಿಲ್ಲ. ಸಿನಿಮಾಗಳು, ಶೋಗಳು, ಜಾಹೀರಾತುಗಳು ಎಲ್ಲಕ್ಕೂ ಕಡಿವಾಣ ಬಿದ್ದಿತ್ತು. ಆದರೂ ಕೆಲವು ನಟ-ನಟಿಯರ ಗಳಿಕೆಯ ವೇಗಕ್ಕೆ ಬ್ರೇಕ್ ಬಿದ್ದಿಲ್ಲ.

ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ 100 ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ತೆರಿಗೆ ಇನ್ನಿತರೆ ಖರ್ಚುಗಳ ಮುನ್ನಾ ಲೆಕ್ಕಾ ಹಾಕಿ ಸೆಲೆಬ್ರಿಟಿಗಳು ಈ ವರ್ಷ ಗಳಿಸಿದ ಮೊತ್ತದ ಆಧಾರದ ಮೇಲೆ ಟಾಪ್ 100 ಮಂದಿಯನ್ನು ಗುರುತಿಸಿ ನೀಡಿದೆ ಫೋರ್ಬ್ಸ್‌.

ಪಟ್ಟಿಯಲ್ಲಿ ನಟ-ನಟಿಯರ ಜೊತೆಗೆ ಆಟಗಾರರು, ಬರಹಗಾರರು ಇತರೆ ಕ್ಷೇತ್ರದವರೂ ಇದ್ದಾರೆ. ಆದರೆ ಇಲ್ಲಿ ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಟಾಪ್ 10 ನಟ-ನಟಿಯರ ಪಟ್ಟಿಯನ್ನಷ್ಟೆ ನೀಡಲಾಗಿದೆ.

ಮೊದಲ ಸ್ಥಾನ ಮಹಿಳೆಗೆ

ಮೊದಲ ಸ್ಥಾನ ಮಹಿಳೆಗೆ

ಮಾಡೆಲ್, ಟಿವಿ ಸ್ಟಾರ್, ಉದ್ಯಮಿಯೂ ಆಗಿರುವ ಕೈಲಿ ಜೆನ್ನರ್ ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಸೆಲೆಬ್ರಿಟಿ. ಈಕೆ ಈ ವರ್ಷ ಬರೋಬ್ಬರಿ 4337 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದ್ದಾರೆ. ಈಕೆಯ ಆದಾಯದ ಬಹುಪಾಲು ಹಣ ಸೌಂದರ್ಯವರ್ಧಕ ಉದ್ಯಮದಿಂದ (ಕೈಲಿ ಕಾಸ್ಮೆಟಿಕ್ಸ್‌) ಬಂದಿದೆಯಂತೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ವ್ಯವಹಾರ ನಡೆದಿದೆ ಎಂದಿದ್ದಾರೆ ಕಂಪೆನಿಯ ಮುಖ್ಯಸ್ಥರು.

ಕಾನ್ಯೆ ವೆಸ್ಟ್‌ಗೆ ಎರಡನೇ ಸ್ಥಾನ

ಕಾನ್ಯೆ ವೆಸ್ಟ್‌ಗೆ ಎರಡನೇ ಸ್ಥಾನ

ರ್ಯಾಪರ್, ಸಂಗೀತ ನಿರ್ದೇಶಕ, ಫ್ಯಾಷನ್ ಡಿಸೈನರ್, ಕೆಲ ಸಿನಿಮಾಗಳಲ್ಲಿಯೂ ನಟಿಸಿರುವ ಕಿಮ್ ಕರ್ದಾಶಿಯನ್ ನ ಪತಿ ಕಾನ್ಯೆ ವೆಸ್ಟ್‌ಗೆ ಎರಡನೇ ಸ್ಥಾನ. ಕಾನ್ಯೆ ವೆಸ್ಟ್‌ ಈ ವರ್ಷ 1200 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದ್ದಾರೆ. ಅಡಿಡಾಸ್ ಜೊತೆಗೆ ಈ ವರ್ಷ ಮಾಡಿಕೊಂಡ ಹೊಸ ಒಪ್ಪಂದ ಈತನಿಗೆ ದೊಡ್ಡ ಮೊತ್ತದ ಹಣ ಗಳಿಸಿಕೊಟ್ಟಿದೆ.

ಮೂರನೇ ಸ್ಥಾನದಲ್ಲಿ ಟೈಲರ್ ಪೆರ್ರಿ

ಮೂರನೇ ಸ್ಥಾನದಲ್ಲಿ ಟೈಲರ್ ಪೆರ್ರಿ

ಅತಿ ಹೆಚ್ಚು ಹಣಗಳಿಸಿದವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ಅಮೆರಿಕದ ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ಟೈಲರ್ ಪೆರ್ರಿ. 'ಮಾಡಿಯಾ' ಎಂಬ ಪಾತ್ರ ಸೃಷ್ಟಿಸಿ ತಾನೇ ನಟಿಸುವ ಟೈಲರ್ ಪೆರ್ರಿ ಅದೇ ಪಾತ್ರಕ್ಕಾಗಿ ಬಹಳ ಖ್ಯಾತರಾಗಿದ್ದಾರೆ. ಅವರ ಮಾಡಿಯಾ ಪಾತ್ರವು ಹಲವು ಸಿನಿಮಾಗಳು, ಟಿವಿ ಶೋಗಳಲ್ಲಿ ಬಳಕೆ ಆಗಿವೆ. ಈ ವರ್ಷ ಈತ 713 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದ್ದಾರೆ.

ಡ್ವೇನ್ ಜೋನ್ಸ್‌

ಡ್ವೇನ್ ಜೋನ್ಸ್‌

ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಡ್ವೇನ್ ಜೋನ್ಸ್‌ ಗೆ ಈ ವರ್ಷ ಅತಿ ಹೆಚ್ಚು ಗಳಿಸಿದ ನಟ-ನಟಿಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ. ಈ ವರ್ಷವೂ ಡ್ವೇನ್ ಜೋನಸ್ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ವರ್ಷ ಡ್ವೇನ್ ಗಳಿಸಿರುವುದು ಬರೋಬ್ಬರಿ 640 ಕೋಟಿ ರೂಪಾಯಿಗೂ ಹೆಚ್ಚು.

ಎಲೆನ್ ಡಿಜೆನರಸ್‌

ಎಲೆನ್ ಡಿಜೆನರಸ್‌

ವಿಶ್ವ ವಿಖ್ಯಾತ ಟಿವಿ ಶೋ ನಿರೂಪಕಿ, ನಟಿ ಎಲೆನ್ ಡಿಜೆನರಸ್‌ ಈ ವರ್ಷ 617 ಕೋಟಿಗೂ ಹೆಚ್ಚು ಹಣ ಗಳಿಸಿದ್ದಾರೆ. 'ಎಲೆನ್ ಶೋ' ಹೆಸರಿನ ಇವರ ಶೋ ವಿಶ್ವ ವಿಖ್ಯಾತವಾಗಿದೆ. ಇತರೆ ಕೆಲವು ಟಿವಿ ಶೋ ಗಳನ್ನು ಸಹ ನಿರೂಪಿಸಿರುವ ಎಲೆನ್, ಆಸ್ಕರ್ ಶೋ ಅನ್ನು ಎರಡು ಬಾರಿ ನಿರೂಪಣೆ ಮಾಡಿದ್ದಾರೆ.

ಅರಿಯಾನಾ ಗ್ರಾಂಡೆ

ಅರಿಯಾನಾ ಗ್ರಾಂಡೆ

ಗಾಯಕಿ ಹಾಗೂ ನಟಿ ಆಗಿರುವ ಅರಿಯಾನಾ ಗ್ರಾಂಡೆ ಈ ವರ್ಷ 530 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದ್ದಾರೆ. ಅರಿಯಾನಾ ಗ್ರಾಂಡೆಯ 'ಸ್ವೀಟ್ನರ್' ಹೆಸರಿನ ಶೋ ಒಂದರಿಂದಲೇ ಕೋಟ್ಯಂತರ ಹಣ ಗಳಿಸಿದ್ದಾರೆ ಅರಿಯಾನಾ ಗ್ರಾಂಡೆ.

ರ್ಯಾನ್ ರೆನಾಲ್ಡ್ಸ್

ರ್ಯಾನ್ ರೆನಾಲ್ಡ್ಸ್

ಡೆಡ್‌ಪೂಲ್, ಎಕ್ಸ್‌ ಮೆನ್, ಶಾ ಆಂಡ್ ಹಾಬ್ಸ್‌ ಇನ್ನೂ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರ್ಯಾನ್ ರೆನಾಲ್ಡಸ್ ಈ ವರ್ಷ 521 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದ್ದಾರೆ. ನೆಟ್‌ಫ್ಲಿಕ್ಸ್‌ ನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರ್ಯಾನ್ ರೆನಾಲ್ಡ್ಸ್.

ಟೇಲರ್ ಸ್ವಿಫ್ಟ್‌

ಟೇಲರ್ ಸ್ವಿಫ್ಟ್‌

ಖ್ಯಾತ ಗಾಯಕಿ, ನಟಿ ಟೇಲರ್ ಸ್ವಿಫ್ಟ್‌ ಈ ವರ್ಷ 463 ಕೋಟಿ ರೂಪಾಯಿ ಹಣ ಗಳಿಸಿದ್ದಾರೆ. ಟೈಲರ್ ಸ್ವಿಫ್ಟ್ ಬಿಡುಗಡೆ ಮಾಡಿದ್ದ 'ಲವ್ವರ್' ಆಲ್ಬಂ ಕಳೆದ ವರ್ಷ ಸಖತ್ ಹಿಟ್ ಆಗಿತ್ತು. ಅದರಿಂದಲೇ ಸಾಕಷ್ಟು ಆದಾಯವನ್ನು ಅವರು ಈ ವರ್ಷ ಗಳಿಸಿಕೊಂಡಿದ್ದಾರೆ.

ಮಾರ್ಕ್ ವಾಲ್‌ಬರ್ಗ್

ಮಾರ್ಕ್ ವಾಲ್‌ಬರ್ಗ್

ಟೆಡ್, ಮ್ಯಾಕ್ಸ್ ಪೈನೆ, ಟೆಡ್ 2, ದಿ ಫೈಟರ್, ಲೋನ್ ಸರ್ವೈವರ್, ದಿ ತ್ರೀ ಕಿಂಗ್ಸ್ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮಾರ್ಕ್ ವಾಲ್‌ಬರ್ಗ್‌ ಈ ವರ್ಷ 426 ಕೋಟಿ ಹಣ ಗಳಿಸಿದ್ದಾರೆ. ಈ ವರ್ಷ ಎರಡು ಸಿನಿಮಾಗಳನ್ನು ನೆಟ್‌ಫ್ಲಿಕ್ಸ್‌ ಜೊತೆಗೆ ಸಹಿ ಮಾಡಿದ್ದಾರೆ ಮಾರ್ಕ್.

ವಿನ್ ಡೀಸಲ್

ವಿನ್ ಡೀಸಲ್

XXX ಹಾಗೂ ಫಾಸ್ಟ್ ಆಂಡ್ ಫ್ಯೂರಿಯಸ್ ಸಿನಿಮಾ ಸರಣಿಗಳ ಖಾಯಂ ನಟ ವಿನ್ ಡೀಸೆಲ್ ಈ ವರ್ಷ 397 ಕೋಟಿ ರೂಪಾಯಿ ಹಣ ಗಳಿಸಿದ್ದಾರೆ. ಅವರು ಫಾಸ್ಟ್ ಆಂಡ್ ಫ್ಯೂರಿಯಸ್ 9 ನೇ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಜೊತೆಗೆ ಅವತಾರ್ 2 ಹಾಗೂ ಅವತಾರ್ 3 ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ.

More from Filmibeat

English summary
Forbes released highest earned celebrities in the year 2020. Here is the top 10 actors who earned most money this year.
Read more about: best of 2020 money actor ಹಣ ನಟ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X