ದಕ್ಷಿಣ ಭಾರತ ಚಿತ್ರರಂಗದ ನಂಬರ್ ವನ್ ಡ್ಯಾನ್ಸರ್ ಯಾರು?

ಸಂಗೀತಕ್ಕೆ ಮಾಂತ್ರಿಕ ಶಕ್ತಿಯಿದೆ. ಕೇಳುತ್ತಾ ಕೇಳುತ್ತಾ ಲೋಕವನ್ನೇ ಮರೆತುಬಿಡುತ್ತೇವೆ. ಸಂಗೀತಕ್ಕೆ ಕುಣಿಸುವ, ನಗಿಸುವ, ಅಳಿಸುವ ಶಕ್ತಿ ಕೂಡ ಇದೆ. ಭಾರತೀಯ ಸಿನಿಮಾಗಳ ಜೊತೆ ಜೊತೆಗೆ ಸಂಗೀತ ಬೆರತು ಹೋಗಿದೆ. ಹಾಡುಗಳಿಗೆ ಚಿತ್ರದ ನಾಯಕ-ನಾಯಕಿಯರನ್ನು ಕುಣಿಸುವುದು ದಶಕಗಳಿಂದ ನಡೆದು ಬಂದಿದೆ.

ಮೊದಲೆಲ್ಲಾ ಹಾಡಿಗೆ ತಕ್ಕಂತೆ ಡ್ಯಾನ್ಸ್ ಇರುತ್ತಿತ್ತು. ಇದೀಗ ಡ್ಯಾನ್ಸ್ ಮಾಡುವುದಕ್ಕಂತಲೇ ಸ್ಪೆಷಲ್ ಸಾಂಗ್ಸ್ ಕಂಪೋಸ್ ಮಾಡಲಾಗುತ್ತಿದೆ. ಚಿತ್ರದಿಂದ ಚಿತ್ರಕ್ಕೆ ತಮ್ಮ ಡ್ಯಾನ್ಸ್ ಗುಣಮಟ್ಟವನ್ನು ನಟ, ನಟಿಯರು ಹೆಚ್ಚಿಸಿಕೊಳ್ಳುತ್ತಾ ಬರ್ತಿದ್ದಾರೆ. ಮೈಕಲ್ ಜಾಕ್ಸನ್ ಡ್ಯಾನ್ಸ್‌ ಎನ್ನುವುದಕ್ಕೆ ಹೊಸ ಬಾಷ್ಯ ಬರೆದವರು. ಜಾಕ್ಸನ್ ನೆನಪಿಸುವಂತೆ ಮೈಯಲ್ಲಿ ಮೂಳೆಗಳು ಇದ್ಯೋ ಇಲ್ವೋ ಎಂದು ಅನುಮಾನ ಹುಟ್ಟುವಂತೆ ಕುಣಿಯುವವರು ಇದ್ದಾರೆ.

Top 10 Dancers in South Indian Cinema Who Redefined Movie Dance Culture

ಹೃತಿಕ್ ರೋಷನ್, ಪ್ರಭುದೇವಾ, ಟೈಗರ್‌ ಶ್ರಾಪ್, ಚಿರಂಜೀವಿ, ರಾಘವ ಲಾರೆನ್ಸ್, ಜ್ಯೂ. ಎನ್‌ಟಿಆರ್. ಅಲ್ಲು ಅರ್ಜುನ್, ವಿಜಯ್ ಸೇರಿದಂತೆ ಕೆಲ ಜಬರ್ದಸ್ತ್ ಡ್ಯಾನ್ಸರ್ಸ್ ಭಾರತೀಯ ಚಿತ್ರರಂಗದಲ್ಲಿದ್ದಾರೆ. ಡ್ಯಾನ್ಸ್ ಎಂದರೆ ಬರೀ ಮೈ ಕುಣಿಸುವುದಲ್ಲ, ಗ್ರೇಸ್, ಎನರ್ಜಿ ಬಹಳ ಮುಖ್ಯ. ಚಿತ್ರದಿಂದ ಚಿತ್ರಕ್ಕೆ ನನ್ನ ಡ್ಯಾನ್ಸ್ ಚೆನ್ನಾಗಿರಬೇಕು, ಪ್ರೇಕ್ಷಕರು ಮೆಚ್ಚಬೇಕು ಎಂದು ಹವಣಿಸುವ ಹೀರೊಗಳು ನಮ್ಮ ಮುಂದೆ ಇದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಟಾಪ್ 10 ಡ್ಯಾನ್ಸರ್ಸ್ ಯಾರು? ಬನ್ನಿ ನೋಡೋಣ.

ಸತತ ಪರಿಶ್ರಮ, ತಾಲೀಮು ಇಲ್ಲದೇ ಅದ್ಭುತ ಡ್ಯಾನ್ಸರ್ ಆಗುವುದಕ್ಕೆ ಸಾಧ್ಯವಿಲ್ಲ. ಚಿಕ್ಕಂದಿನಿಂದ ಡ್ಯಾನ್ಸ್ ರೂಢಿಸಿಕೊಂಡವರು ಚೆನ್ನಾಗಿ ಕುಣಿದು ರಂಜಿಸುತ್ತಾ ಬರ್ತಿದ್ದಾರೆ. ಹಾಡಿನಿಂದ ಹಾಡಿಗೆ ಡ್ಯಾನ್ಸ್ ಬದಲಾಗುತ್ತಿರುತ್ತದೆ. ಟ್ಯೂನ್‌ಗೆ ತಕ್ಕಂತೆ ಡ್ಯಾನ್ಸ್ ಮಾಡಬೇಕಾಗುತ್ತದೆ. ಕೆಲವರು ಸಿಕ್ಕಾಪಟ್ಟೆ ರಿಸ್ಕ್ ತೆಗೆದುಕೊಂಡು ಕಷ್ಟದ ಸ್ಟೆಪ್ಸ್ ಹಾಕುತ್ತಾರೆ. ಹಾಗಾಗಿ ಬೆಸ್ಟ್ ಡ್ಯಾನ್ಸರ್ ಯಾರು ಎಂದು ಗುರ್ತಿಸುವುದು ಕಷ್ಟದ ಕೆಲಸ. ಆದರೂ ನಮ್ಮ ಮುಂದೆ ಇರುವ ಸೌತ್ ಸಿನಿದುನಿಯಾದ ಟಾಪ್ 10 ಡ್ಯಾನ್ಸರ್‌ಗಳ ಲಿಸ್ಟ್ ಮುಂದೆ ಇದೆ ಓದಿ.

ಅಲ್ಲು ಅರ್ಜುನ್

ತೆಲುಗು ನಟ ಅಲ್ಲು ಅರ್ಜುನ್ ಅದ್ಭುತ ಡ್ಯಾನ್ಸರ್. ಸಿಕ್ಕಾಪಟ್ಟೆ ರಿಸ್ಕಿ ಡ್ಯಾನ್ಸ್ ಮೂವ್ಸ್ ಮೂಲಕ ಬನ್ನಿ ಪದೇ ಪದೆ ಪ್ರೇಕ್ಷಕರನ್ನು ರಂಜಿಸುತ್ತಾರೆ. ಚಿಕ್ಕಂದಿನಿಂದಲೂ ಮಾವ ಚಿರಂಜೀವಿ ಡ್ಯಾನ್ಸ್ ನೋಡುತ್ತಾ ಬೆಳೆದ ಅಲ್ಲು ಅರ್ಜುನ್ ಅವರಂತೆ ಡ್ಯಾನ್ಸ್ ಅನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಒಂದಾದರೂ ಡ್ಯಾನ್ಸಿಂಗ್ ನಂಬರ್ ಇರುವಂತೆ ನೋಡಿಕೊಳ್ಳುತ್ತಾರೆ.

Top 10 Dancers in South Indian Cinema Who Redefined Movie Dance Culture

'ಪುಷ್ಪ'-2 ಚಿತ್ರದಲ್ಲಿ ಕೂಡ ಸ್ಟೈಲಿಶ್ ಸ್ಟಾರ್ ಡ್ಯಾನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. 'ಟಾಪ್ ಲೇಚಿ ಪೋದಿ'(ಇದ್ದರಮ್ಮಾಯಿಲತೋ), 'ಮೈ ಲವ್ ಈಸ್ ಗಾನ್'(ಆರ್ಯ-2), 'ಬಾಕ್ಸ್ ಬದ್ದಲೈಪೊಯೆ'(ಡಿಜೆ) ಹೀಗೆ ಒಂದಷ್ಟು ಹಾಡುಗಳಿಗೆ ಐಕಾನ್ ಸ್ಟಾರ್ ಹಾಕಿರುವ ಡ್ಯಾನ್ಸ್ ಅನ್ನು ಅಭಿಮಾನಿಗಳು ಮರೆಯೋಕೆ ಸಾಧ್ಯವಿಲ್ಲ.

ಜ್ಯೂ. ಎನ್‌ಟಿಆರ್

ಡ್ಯಾನ್ಸ್ ಅಂದ್ರೆ ತಾರಕ್, ತಾರಕ್ ಅಂದ್ರೆ ಡ್ಯಾನ್ಸ್. ದಶಕದ ಹಿಂದೆಯೇ ಜ್ಯೂ. ಎನ್‌ಟಿಆರ್ ತಮ್ಮ ಗ್ರೇಸ್‌ಫುಲ್ ಡ್ಯಾನ್ಸ್‌ನಿಂದ ಗಮನ ಸೆಳೆದಿದ್ದರು. ಚಿತ್ರರಂಗಕ್ಕೆ ಬಂದ ಕೆಲ ವರ್ಷಗಳ ಬಳಿಕ ತಾರಕ್ ದೇಹದ ತೂಕ ಬಹಳ ಹೆಚ್ಚಾಗಿತ್ತು. ಆದರೂ ತಾರಕ್ ಡ್ಯಾನ್ಸ್ ಮಾತ್ರ ಕಮ್ಮಿ ಆಗಲೇಯಿಲ್ಲ. ದಢೂತಿ ದೇಹವನ್ನು ಕೂಡ ಬಿಂದಾಸ್ ಆಗಿ ಕುಣಿಸಿ ಅವರು ಅಭಿಮಾನಿಗಳನ್ನು ರಂಜಿಸುತ್ತಿದ್ದರು.

ಬಳಿಕ ತೂಕ ಇಳಿಸಿಕೊಂಡು ಮತ್ತಷ್ಟು ಅದ್ಭುತ ಡ್ಯಾನ್ಸ್ ಮೂಲಕ ಮೋಡಿ ಮಾಡುತ್ತಾ ಬರುತ್ತಿದ್ದಾರೆ. 'ನೈರೆ ನೈರೆ'(ಆಂಧ್ರವಾಲ), 'ಆಪಲ್ ಬ್ಯೂಟಿ' (ಜನತಾ ಗ್ಯಾರೇಜ್), 'ನುವ್ವು ವಿಷಲ್‌ಯೇಸ್ತೆ ಆಂಧ್ರ ಸೋಡಾಬುಡ್ಡಿ'(ಸಿಂಹಾದ್ರಿ), ರಾಕಾಸಿ ರಾಕಾಸಿ(ರಭಸ) ಹೀಗೆ ಒಂದಷ್ಟು ಹಾಡುಗಳಲ್ಲಿ ಯಂಗ್ ಟೈಗರ್ ಡ್ಯಾನ್ಸ್ ನೋಡಿ ಅಭಿಮಾನಿಗಳು ಕಳೆದೋಗಿದ್ದಾರೆ.

ರಾಮ್‌ಚರಣ್

ಅಲ್ಲು ಅರ್ಜುನ್ ಹಾಗೂ ಜ್ಯೂ. ಎನ್‌ಟಿಆರ್‌ಗೆ ಟಫ್ ಕಾಂಪಿಟೇಷನ್ ಕೊಡುವ ಮತ್ತೊಬ್ಬ ತೆಲುಗು ಡ್ಯಾನ್ಸ್ ಅಂದ್ರೆ ಅದು ರಾಮ್‌ಚರಣ್. ತಂದೆ ಚಿರಂಜೀವಿ ಎಂತಹ ಡ್ಯಾನ್ಸರ್ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹಾಗಾಗಿ ಮೊದಲಿನಿಂದಲೂ ಚರಣ್ ಡ್ಯಾನ್ಸ್ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಇದ್ದೇ ಇರುತ್ತದೆ. ಚಿರು ಬಳಿಕ ತಾರಕ್, ಬನ್ನಿ ಚೆನ್ನಾಗಿ ಡ್ಯಾನ್ಸ್ ಮಾಡಿದ ಮೇಲೆ ಸಹಜವಾಗಿಯೇ ಚರಣ್ ಕೂಡ ಭರ್ಜರಿ ಡ್ಯಾನ್ಸ್ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದರು. ಅದನ್ನು ಅವರು ನಿಭಾಯಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾಗಳ ಹುಚ್ಚಿಗೆ ಬಿದ್ದು ಮೊದಲಿನಂತೆ ಡ್ಯಾನ್ಸ್, ಫೈಟ್ಸ್ ಇರುವ ಸಿನಿಮಾಗಳಲ್ಲಿ ಸೌತ್ ಸ್ಟಾರ್ಸ್ ನಟಿಸುತ್ತಿಲ್ಲ. ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುವುದರ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ ವೀರಾಭಿಮಾನಿಗಳಿಗೆ ಮಾತ್ರ ತಮ್ಮ ನೆಚ್ಚಿನ ನಟರನ್ನು ಹಳೇ ರೀತಿಯಲ್ಲೇ ನೋಡಲು ಇಷ್ಟ.

ಪ್ರಭುದೇವ

ತೆರೆಮೇಲೆ ಕುಣಿಯುವ ಹೀರೋಗಳನ್ನೇ ಕುಣಿಸುವ ಡ್ಯಾನ್ಸ್ ಮಾಸ್ಟರ್ ಪ್ರಭುದೇವ. ಇನ್ನು ಸಿನಿಮಾಗಳಲ್ಲಿ ಕೂಡ ಅವರು ನಟಿಸುತ್ತಾ ಬರ್ತಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಅಂತ್ಲೇ ಅವರು ಗುರ್ತಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ಕಮಾಲ್ ಮಾಡುತ್ತಲೇ ಇರುತ್ತಾರೆ. ಪ್ರಭುದೇವಾ ಮೈ ಕುಣಿಸೋದು ನೋಡಿದರೆ ಅವರ ಮೈಯಲ್ಲಿ ಮೂಳೆಗಳು ಇಲ್ವಾ? ಎಂದು ಅನುಮಾನ ಮೂಡುತ್ತದೆ.

ವಿಜಯ್

ತಮಿಳು ನಟ ವಿಜಯ್ ಕೂಡ ಒಳ್ಳೆ ಡ್ಯಾನ್ಸರ್. ಕಾಲಿವುಡ್‌ನಲ್ಲೇ ಅತಿಹೆಚ್ಚು ಕ್ರೇಜ್ ಹೊಂದಿರುವ ದಳಪತಿ ಇದೀಗ ರಾಜಕೀಯದತ್ತ ಮುಖ ಮಾಡಿದ್ದಾರೆ. ಇನ್ನು ಡ್ಯಾನ್ಸ್ ವಿಚಾರದಲ್ಲಿ ತಮಿಳು ಚಿತ್ರರಂಗದಲ್ಲಿ ವಿಜಯ್ ನಂಬರ್ ವನ್ ಸ್ಥಾನದಲ್ಲಿ ನಿಲ್ಲುತ್ತಾರೆ. 'ಜಿಂಗುಣಮಣಿ' (ಜಿಲ್ಲಾ), 'ಅಲ್ಲು ಅಲ್ಲು' (ಭಗವತಿ), 'ಥಮ್ ತಕ' (ತಿರುಮಲೈ), 'ಅಪ್ಪಡಿ ಪೋಡು' (ಗಿಲ್ಲಿ) ವಿಜಯ್ ಹೆಜ್ಜೆ ಹಾಕಿರುವ ಕೆಲ ಹಿಟ್ ಸಾಂಗ್ಸ್.

ರಾಘವ ಲಾರೆನ್ಸ್

ಪ್ರಭುದೇವ ರೀತಿಯಲ್ಲಿ ಅದ್ಭುತವಾಗಿ ಕುಣಿಯುವ ಕುಣಿಸುವ ಮತ್ತೊಬ್ಬ ಡ್ಯಾನ್ಸ್ ಮಾಸ್ಟರ್ ಅಂದ್ರೆ ಅದು ರಾಘವ ಲಾರೆನ್ಸ್. ತಮಿಳು ಸಿನಿಮಾಗಳಲ್ಲಿ ಅವರು ಹೀರೊ ಆಗಿ ಕೂಡ ನಟಿಸಿದ್ದಾರೆ. ಚಿರಂಜೀವಿ, ರಜನಿಕಾಂತ್ ರೀತಿಯ ಸೂಪರ್ ಸ್ಟಾರ್‌ಗಳನ್ನು ಕುಣಿಸಿರುವ ಹೆಗ್ಗಳಿಕೆ ಅವರದ್ದು. ಇನ್ನು ತಮ್ಮ ಸಿನಿಮಾಗಳಲ್ಲಿ ಕೂಡ ಜಬರ್ಸದಸ್ತ್ ಆಗಿ ಕುಣಿದು ರಾಘವ ಮೋಡಿ ಮಾಡಿದ್ದಾರೆ.

ಚಿರಂಜೀವಿ

ಭಾರತೀಯ ಚಿತ್ರರಂಗ ಡ್ಯಾನ್ಸ್ ವ್ಯಾಕರಣವನ್ಉ ಬದಲಿಸಿದವರು ತೆಲುಗು ನಟ ಚಿರಂಜೀವಿ. ಬರೀ ನಾಯಕಿಯರ ಕೈ ಹಿಡಿದು ಸಿಂಪಲ್ ಸ್ಟೆಪ್ಸ್ ಹಾಕುವುದೇ ಡ್ಯಾನ್ಸ್ ಅಲ್ಲ. ನೋಡುಗರ ಹುಬ್ಬೇರಿಸಬೇಕು ಆ ರೀತಿ ಡ್ಯಾನ್ಸ್ ಮಾಡಬೇಕು ಎಂದು ತೋರಿಸಿಕೊಟ್ಟವರು ಮೆಗಾಸ್ಟಾರ್. ದಶಕಗಳ ಹಿಂದೆಯೇ ಬ್ರೇಕ್‌ ಡ್ಯಾನ್ಸ್ ಅನ್ನು ದಕ್ಷಿಣದ ಚಿತ್ರಗಳಿಗೆ ಚಿರು ಪರಿಚಯಿಸಿದ್ದರು. ಯೂನಿಕ್ ಸ್ಟೆಪ್ಸ್ ಮೂಲಕ ಕಮಾಲ್ ಮಾಡಿ ಗೆದ್ದಿದ್ದರು. ವಯಸ್ಸು 60 ದಾಟಿದರೂ ಚಿರು ಡ್ಯಾನ್ಸ್ ಗ್ರೇಸ್ ಕಮ್ಮಿ ಆಗಿಲ್ಲ.

ಪುನೀತ್ ರಾಜ್‌ಕುಮಾರ್

ಕನ್ನಡ ಚಿತ್ರರಂಗದ ಬೆಸ್ಟ್ ಡ್ಯಾನ್ಸರ್ ಪುನೀತ್ ರಾಜ್‌ಕುಮಾರ್. 'ಅಪ್ಪು ಡ್ಯಾನ್ಸ್ ಡ್ಯಾನ್ಸ್' (ರಾಜಕುಮಾರ) 'ಓಪನ್‌ ದ ಬಾಟಲ್'(ನಟಸಾರ್ವಭೌಮ), 'ಹೇ ಪಾರು'(ರಾಜ್ ದಿ ಶೋ ಮ್ಯಾನ್) 'ಫೀಲ್ ದ ಪವರ್' (ಯುವರತ್ನ) ರೀತಿಯ ಹಾಡುಗಳಲ್ಲಿ ಅಪ್ಪು ಡ್ಯಾನ್ಸ್ ನೋಡೋದೆ ಚೆಂದ. ಚಿಕ್ಕಂದಿನಿಂದಲೂ ಪುನೀತ್ ಡ್ಯಾನ್ಸ್ ಮಾಡಿ ರಂಜಿಸುತ್ತಿದ್ದರು. 'ಅಪ್ಪು' ಹಾಗೂ 'ವೀರ ಕನ್ನಡಿಗ' ಚಿತ್ರದಲ್ಲಿ ಅದ್ಭುತ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದರು. ಕನ್ನಡದಲ್ಲಿ ಶಿವಣ್ಣ, ಯಶ್, ಗಣೇಶ್ ಕೂಡ ಉತ್ತಮ ಡ್ಯಾನ್ಸರ್‌ಗಳು ಎನಿಸಿಕೊಂಡಿದ್ದಾರೆ.

ಧನುಷ್

ತಮಿಳು ನಟ ಧನುಷ್ ಕೂಡ ಒಳ್ಳೆ ಡ್ಯಾನ್ಸರ್ ಎಂದು ಹೆಸರು ಮಾಡಿದ್ದಾರೆ. ತಮ್ಮ ಸಣಕಲು ದೇಹವನ್ನು ಬಾಗಿಸಿ ಬಳುಕಿಸಿ ಬಿಂದಾಸ್ ಆಗಿ ಕುಣಿದು ರಂಗೇರಿಸುತ್ತಾರೆ.

ರಾಮ್ ಪೋತಿನೇನಿ

ತೆಲುಗು ನಟ ರಾಮ್ ಪೋತಿನೇನಿ ಕೂಡ ಒಳ್ಳೆ ಡ್ಯಾನ್ಸರ್ ಎನಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಳಲ್ಲಿ ರಿಸ್ಕಿ ಡ್ಯಾನ್ಸ್ ಮೂವ್ಸ್ ಮೂಲಕ ಕಮಾಲ್ ಮಾಡಿದ್ದಾರೆ.

More from Filmibeat

English summary
Discover the top 10 dancers in South Indian cinema, from Allu Arjun to Puneeth Rajkumar, who have mesmerized audiences with their grace, energy, and unforgettable dance moves.
Read more about: allu arjun puneeth rajkumar ntr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X