2023 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಸಿನಿಮಾಗಳು

ಈ ವರ್ಷದಲ್ಲಿ ಸಕತ್ ಹಿಟ್ ಕೊಟ್ಟ ನಟ ಯಾರು ಅಂದರೆ ಅದರಲ್ಲಿ ಮೊದಲು ಬರುವ ಹೆಸರು ಶಾರುಖ್ ಖಾನ್. ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳು ಕೂಡ ಅವರು ನಟಿಸಿದ ಜವಾನ್ ಮತ್ತು ಪಠಾಣ್. ಹಾಗಾಗಿ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಸಿನಿಮಾಗಳ ಪೈಕಿ ಇವುಗಳು ಇದ್ದು, ಉಳಿದ ಸಿನಿಮಾಗಳು ಯಾವುವು ಎಂಬುದನ್ನು ಈ ವರದಿಯಲ್ಲಿ ನೋಡೋಣ.

ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಟಾಪ್ 10 ಸಿನಿಮಾಗಳು

1. ಜವಾನ್: ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಅಗ್ರಸ್ಥಾನದಲ್ಲಿರುವುದು ಶಾರುಖ್ ಖಾನ್ ನಟನೆಯ 'ಜವಾನ್'. ರಾಷ್ಟ್ರದಾದ್ಯಂತ ಪ್ರೇಕ್ಷಕರನ್ನು ರಂಜಿಸಿದ ಮಾಸ್ಟರ್‌ಪೀಸ್ ಆಗಿದೆ. ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ನಿರ್ಧರಿಸಿದ ವ್ಯಕ್ತಿಯ ಭಾವನಾತ್ಮಕ ಪಯಣವಿದು. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್ ಸೇತುಪತಿ ಸೇರಿದಂತೆ ಹಲವಾರು ಜನಪ್ರಿಯ ನಟರು ನಟಿಸಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 1152 ಕೋಟಿ ಮತ್ತು ದೇಶೀಯವಾಗಿ 640 ಕೋಟಿ ಗಳಿಸಿತು.

Top 10 Highest-Grossing Indian Films of 2023

2. ಪಠಾಣ್: ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮತ್ತೊಂದು ಶಾರುಖ್ ಖಾನ್ ಚಿತ್ರ 'ಪಠಾನ್'. ಒಬ್ಬ ಭಾರತೀಯ ಯೋಧನ ಸುತ್ತ ಸುತ್ತುವ ಕಥೆ. ಚಿತ್ರದಲ್ಲಿ ಶಾರುಖ್ ಖಾನ್, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಟ ಸಲ್ಮಾನ್ ಖಾನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 1050 ಕೋಟಿ ಮತ್ತು ಭಾರತದಲ್ಲಿ 543 ಕೋಟಿ ಕಲೆಕ್ಷನ್ ಮಾಡಿದೆ.

3. ಗದರ್ 2: ಮೂರನೇ ಸ್ಥಾನವನ್ನು ಪಡೆದುಕೊಕೊಂಡಿರುವುದು ಸನ್ನಿ ಡಿಯೋಲ್ ಅಭಿನಯದ 'ಗದರ್ 2'. ತಾರಾ ಸಿಂಗ್ ಆಗಿ ಸನ್ನಿ ಡಿಯೋಲ್ ಅಬ್ಬರಿಸಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆ, ಪಾಕ್‌ನಲ್ಲಿ ಸಿಕ್ಕಿಕೊಂಡಿರುವ ಮಗನನ್ನು ಕರೆತರುವ ತಂದೆಯಾಗಿ ಸನ್ನಿ ಡಿಯೋಲ್ ಅಭಿನಯಿಸಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 687 ಕೋಟಿ ಮತ್ತು ಭಾರತದಲ್ಲಿ 525 ಕೋಟಿ ಗಳಿಸಿತು.

4. ಲಿಯೋ: ನಟ ತಳಪತಿ ವಿಜಯ್ ಅಭಿನಯದ 'ಲಿಯೋ' ಸಿನಿಮಾ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕಾಶ್ಮೀರದಲ್ಲಿ ಶಾಂತಿಯನ್ನು ಬಯಸುತ್ತಾ ಕುಟುಂಬದೊಂದಿಗೆ ವಾಸಿಸುವ ಪಾರ್ಥಿಬನ್ ಮತ್ತು ಸೌತ್ ಇಂಡಿಯಾದ ಲಿಯೋ ಸುತ್ತ ಸುತ್ತುತ್ತದೆ. ನಟಿ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ ಅಭಿನಯಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 618 ಕೋಟಿ ಮತ್ತು ಭಾರತದಲ್ಲಿ 331 ಕೋಟಿ ಗಳಿಸಿದೆ.

Top 10 Highest-Grossing Indian Films of 2023

5. ಜೈಲರ್: ನಟ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಗಳಿಕೆಯಲ್ಲಿ ಐದನೇ ಸ್ಥಾನದಲ್ಲಿದೆ. ಮಾಜಿ ಜೈಲು ವಾರ್ಡನ್ ಮತ್ತು ಆತನ ಫ್ಯಾಮಿಲಿ ಸುತ್ತಾ ಕಥೆ ಸುತ್ತ ಸುತ್ತುತ್ತದೆ. ಚಿತ್ರದ ಹಾಡುಗಳು ಜನರನ್ನು ಸಕತ್ ಆಕರ್ಷಿಸಿದ್ದು, ಈ ಚಿತ್ರವು ವಿಶ್ವಾದ್ಯಂತ 605 ಕೋಟಿ ಮತ್ತು ಭಾರತದಲ್ಲಿ 343 ಕೋಟಿ ಗಳಿಸಿತು.

6. ಟೈಗರ್ 3: ಯಶ್ ರಾಜ್ ಫಿಲ್ಮ್ಸ್‌ನ ಟೈಗರ್ ಫ್ರಾಂಚೈಸಿಯಲ್ಲಿ ಬಂದ 'ಟೈಗರ್ 3' ಆರನೇ ಸ್ಥಾನದಲ್ಲಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 450 ಕೋಟಿ ಮತ್ತು ಭಾರತದಲ್ಲಿ 275 ಕೋಟಿ ಕಲೆಕ್ಷನ್ ಮಾಡಿದೆ.

7. ಆದಿಪುರುಷ್: ವೀಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಟೀಕೆಗೆ ಮತ್ತು ಟ್ರೋಲ್‌ಗೆ ಒಳಗಾದ 'ಆದಿಪುರುಷ್' ಸಿನಿಮಾ ಗಲ್ಲ ಆಪೆಟ್ಟಿಗೆ ಗಳಿಕೆಯಲ್ಲಿ ಏಳನೇ ಸ್ಥಾನವನ್ನು ಗಳಿಸಿದೆ. ಈ ಚಿತ್ರದಲ್ಲಿ ಪ್ರಭಾಸ್ ರಾಘವನಾಗಿ, ಕೃತಿ ಸನನ್ ಜಾನಕಿಯಾಗಿ ನಟಿಸಿದ್ದಾರೆ. ಚಿತ್ರವು ವಿಶ್ವಾದ್ಯಂತ 395 ಕೋಟಿ ಮತ್ತು ರಾಷ್ಟ್ರದಾದ್ಯಂತ 286 ಕೋಟಿ ಸಂಗ್ರಹಿಸಿದೆ.

8. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (RRKPK) ಎರಡು ವಿಭಿನ್ನ ಸಂಪ್ರದಾಯದ ಕುಟುಂಬಗಳ ಕಥೆ. ಪಂಜಾಬಿ ಹುಡುಗ ರಾಕಿ ಮತ್ತು ಬಂಗಾಳಿ ಪತ್ರಕರ್ತೆ ರಾಣಿ ಪ್ರೀತಿಯಲ್ಲಿ ಬಿದ್ದು, ತಮ್ಮ ಕುಟುಂಬಗಳಿಂದ ವಿರೋಧವನ್ನು ಎದುರಿಸುವುದು, ಮದುವೆಯಾಗುವ ಮೊದಲು ಮೂರು ತಿಂಗಳ ಕಾಲ ಪರಸ್ಪರರ ಕುಟುಂಬದೊಂದಿಗೆ ಇರುವುದು ಸಿನಿಮಾದಲ್ಲಿದೆ. ಈ ಚಿತ್ರವು ವಿಶ್ವಾದ್ಯಂತ 357 ಕೋಟಿ ಮತ್ತು ಭಾರತದಲ್ಲಿ 153 ಕೋಟಿ ಸಂಗ್ರಹಿಸಿದೆ.

9. ಪೊನ್ನಿಯಿನ್ ಸೆಲ್ವನ್: ಭಾಗ 2: ಅನೇಕ ಸೂಪರ್‌ಸ್ಟಾರ್‌ಗಳನ್ನು ಹೊಂದಿರುವ ಮಲ್ಟಿ ಸ್ಟಾರರ್ ಪೊನ್ನಿಯಿನ್ ಸೆಲ್ವನ್ ಚಲನಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿದೆ. ಅರುಲ್ಮೋಳಿ ವರ್ಮನ್ ದಕ್ಷಿಣ ಭಾರತದಲ್ಲಿ ಪ್ರಾಚೀನ ಚೋಳ ಸಾಮ್ರಾಜ್ಯದ ಕಥೆಯಾಗಿದೆ. ಎರಡು ಭಾಗಗಳಲ್ಲಿ ಬಂದ ಈ ಸಿನಿಮಾದ ಎರಡನೇ ಭಾಗ ವಿಶ್ವಾದ್ಯಂತ 344 ಕೋಟಿ ಮತ್ತು ಭಾರತದಲ್ಲಿ 215 ಕೋಟಿ ಗಳಿಸಿತು.

10. ವಾರಿಸು: ನಟ ದಳಪತಿ ವಿಜಯ್ ಅಭಿನಯದ ಮತ್ತೊಂದು ಸಿನಿಮಾ ವಾರಿಸು. 2023 ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಲ್ಲಿ ಹತ್ತನೆ ಸ್ಥಾನ ಪಡೆದಿದೆ. ಈ ಚಿತ್ರವು ವಿಶ್ವಾದ್ಯಂತ 303 ಕೋಟಿ ಮತ್ತು ಭಾರತದಲ್ಲಿ 214 ಕೋಟಿ ಗಳಿಸಿತು.

More from Filmibeat

English summary
Highest grossing Indian films of 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X