2025: ಈ ವರ್ಷ ಸಖತ್ ಸದ್ದು ಮಾಡಿದ ಕನ್ನಡ ಸಾಂಗ್ಸ್; ಇಲ್ಲಿದೆ ಟಾಪ್-10 ಲಿಸ್ಟ್

ನೋಡ್ತಾ ನೋಡ್ತಾ ಒಂದು ವರ್ಷ ಕಳೆದೇ ಹೋಯ್ತು.. ಇನ್ನು 20 ದಿನಗಳಲ್ಲಿ ಹೊಸ ವರ್ಷದ ಸಂಭ್ರಮ ಶುರುವಾಗಲಿದೆ. ಈ ವರ್ಷ ಕನ್ನಡ ಚಿತ್ರರಂಗ ಒಂದಷ್ಟು ಗೆಲುವು ಸಾಕಷ್ಟು ಸೋಲು ಕಂಡಿದೆ. ಅಚ್ಚರಿ ಎನ್ನುವಂತೆ ಕೆಲ ಸಿನಿಮಾಗಳು ಗೆದ್ದಿದ್ದರೆ ಮತ್ತೆ ಕೆಲವು ಕೈಕೊಟ್ಟಿವೆ. ವರ್ಷದ ಕೊನೆಗೆ 'ಡೆವಿಲ್', '45', 'ಮಾರ್ಕ್‌' ಚಿತ್ರಗಳು ತೆರೆಗಪ್ಪಳಿಸುತ್ತಿವೆ.

ಭಾರತೀಯ ಸಿನಿಮಾಗಳಲ್ಲಿ ಹಾಡುಗಳು ಇರಲೇಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಹಾಡುಗಳಿಲ್ಲದೇ ಸಿನಿಮಾ ಮಾಡಿರುವ ಉದಾಹರಣೆಗಳಿವೆ. ಆದರೂ ಇವತ್ತಿಗೂ ಕನ್ನಡ ಸಿನಿಮಾಗಳಲ್ಲಿ ಹಾಡುಗಳಿಗೆ ಬಹಳ ಮಹತ್ವ ಇದೆ. ಈ ವರ್ಷ 230ಕ್ಕೂ ಅಧಿಕ ಕನ್ನಡ ಸಿನಿಮಾಗಳು ಈಗಾಗಲೇ ತೆರೆಗೆ ಬಂದಿವೆ. ಅಂದರೆ 1000ಕ್ಕೂ ಹೆಚ್ಚು ಹಾಡುಗಳು ಸದ್ದು ಮಾಡಿವೆ. ಈ ವರ್ಷದ ಟಾಪ್‌ 10 ಕನ್ನಡ ಸಿನಿಮಾ ಗೀತೆಗಳ ಪಟ್ಟಿ ಇಲ್ಲಿದೆ ನೋಡಿ.

Top 10 Kannada Movie Songs of 2025 From Bangal Bangari to Afro Tapaang

10. ರೋರ್ ಆಫ್ ನರಸಿಂಹ

ಹೊಂಬಾಳೆ ಫಿಲ್ಮ್ಸ್ ವಿತರಣೆ ಮಾಡಿದ್ದ ಮಹಾವತಾರ್ ನರಸಿಂಹ ಆನಿಮೇಟೆಡ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಸ್ಯಾಮ್‌ ಸಿಎಸ್ ಸಂಗೀತದ ಆಲ್ಬಮ್ ಕೂಡ ಎಲ್ಲಾ ಭಾಷೆಗಳಲ್ಲಿ ಹಿಟ್ ಆಗಿತ್ತು. 'ರೋರ್ ಆಫ್ ನರಸಿಂಹ' ಸಾಂಗ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಗೊತ್ತೇಯಿದೆ. ಸ್ಯಾಮ್ ಜೊತೆ ಸೇರಿ ಅನಿರುದ್ಧ ಶಾಸ್ತ್ರಿ ಹಾಡು ಹಾಡಿದ್ದಾರೆ.

9. Afro ತಪಾಂಗ್

ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದ ಪ್ರಮೋಷನ್ ಸಾಂಗ್ 'Afro ತಪಾಂಗ್'. ಉಗಾಂಡದ ಘೆಟ್ಟೋ ಕಿಡ್ಸ್ ಜೊತೆ ಶಿವಣ್ಣ, ಉಪ್ಪಿ. ರಾಜ್‌ ಬಿ ಶೆಟ್ಟಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಡಿಸೆಂಬರ್ 25ಕ್ಕೆ ಸಿನಿಮಾ ತೆರೆಗೆ ಬರಲಿದೆ. ಅರ್ಜುನ್ ಜನ್ಯಾ ಸ್ವತಃ ಟ್ಯೂನ್ ಹಾಕಿದ್ದು ಎಂ ಸಿ ಬಿಜ್ಜು ಮತ್ತು ನಿಶಾನ್ ರೈ ಸಾಹಿತ್ಯ ಬರೆದು ಹಾಡಿದ್ದಾರೆ.

Top 10 Kannada Movie Songs of 2025 From Bangal Bangari to Afro Tapaang
8. ಸೈಕೋ ಸೈತಾನ್

ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನೂಪ್ ಭಂಡಾರಿ ಬರೆದಿರುವ 'ಸೈಕೋ ಸೈತಾನ್' ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಕಿಚ್ಚ ಅಭಿಮಾನಿಗಳಿಗೆ ಸಾಂಗ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ.

7. ಇದ್ರೆ ನೆಮ್ದಿಯಾಗ್‌ ಇರ್ಬೇಕ್

ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಚಿತ್ರದ ಆಲ್ಬಮ್‌ ಕೂಡ ಹಿಟ್ ಲಿಸ್ಟ್ ಸೇರಿದೆ. 'ಇದ್ರೆ ನೆಮ್ದಿಯಾಗ್‌ ಇರ್ಬೇಕ್' ಸಾಂಗ್ ದರ್ಶನ್ ಅಭಿಮಾನಿಗಳ ಮನಗೆದ್ದಿದೆ. ಚಿತ್ರದ ರೊಮ್ಯಾಂಟಿಕ್ ಸಾಂಗ್ ಕೂಡ ಗಮನ ಸೆಳೆದಿರೋದು ವಿಶೇಷ. ದೀಪಕ್ ಬ್ಲೂ ಹಾಡಿರುವ ಹಾಡಿಗೆ ಅನಿರುದ್ಧ ಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ.

6. DANKS ANTHEM

ರಾಜ್‌. ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಈ ವರ್ಷದ ಅಚ್ಚರಿಯ ಗೆಲುವು ಎನ್ನಬಹುದು. ನಾಲ್ಕೈದು ಕೋಟಿ ಬಜೆಟ್ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಸುಮೇದ್ .ಕೆ ಸಂಗೀತ ಚಿತ್ರದಲ್ಲಿ ಅನುರಾಗ್ ಕುಲಕರ್ಣಿ ಹಾಡಿದ್ದ 'DANKS ANTHEM' ಸಖತ್ ಸದ್ದು ಮಾಡಿತ್ತು. ಪಾರ್ಟಿಗಳಲ್ಲಿ ಈ ಸಾಂಗ್ ಹಾಕಿ ಜನ ಕುಣಿಯುತ್ತಲೇ ಇದ್ದಾರೆ.

5. ಶಿವನೆ ನಿನ್ ಆಟ

ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ಈ ವರ್ಷ ತೆರೆಗೆ ಬರ್ತಿಲ್ಲ. ಆದರೆ ಚಿತ್ರದ 2 ಹಾಡುಗಳು ಈಗಾಗಲೇ ಹಿಟ್ ಆಗಿದೆ. ಅರ್ಜುನ್ ಜನ್ಯಾ ಸಂಗೀತದಲ್ಲಿ 'ಶಿವನೆ ನಿನ್ ಆಟ' ಸಾಂಗ್ ಪದೇ ಪದೆ ಗುನುಗುವಂತೆ ಮಾಡಿದೆ. ಮಂಜುನಾಥ್ ಬಿಎಸ್ ಸಾಹಿತ್ಯ ಬರೆದಿರುಬ ಹಾಡನ್ನು ಪ್ರೇಮ್ ಹಾಗೂ ಕೈಲಾಶ್ ಖೇರ್ ಹಾಡಿರೋದು ವಿಶೇಷ.

4. ಮುಂಗಾರು ಮಳೆಯಲ್ಲಿ

'ಅಂದೊಂದಿತ್ತು ಕಾಲ' ಸಿನಿಮಾ ಕೂಡ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಆದರೆ ಚಿತ್ರದ 'ಮುಂಗಾರು ಮಳೆಯಲ್ಲಿ' ಸಖತ್ ವೈರಲ್ ಆಗಿದ್ದು ಗೊತ್ತೇಯಿದೆ. ಧನಂಜನ್ ರಂಜನ್ ಸಾಹಿತ್ಯದ ಹಾಡಿಗೆ ರಾಘವೇಂದ್ರ ವಿ. ಟ್ಯೂನ್ ಹಾಕಿದ್ದರು. ಸಿದ್ಧ್ ಶ್ರೀರಾಮ್ ಗಾಯನದಲ್ಲಿ ಸಾಂಗ್ ಕೇಳುಗರನ್ನು ಮೈಮರೆಯುವಂತೆ ಮಾಡಿದ್ದು ಸುಳ್ಳಲ್ಲ.

3. ಬ್ರಹ್ಮ ಕಲಶ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ-1' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಅಜನೀಶ್ ಲೋಕನಾಥ್ ಸಂಗೀತದ ಆಲ್ಬಮ್‌ ಕೂಡ ಹಿಟ್ ಆಗಿತ್ತು. 'ಬ್ರಹ್ಮಕಲಶ' ಸಾಂಗ್ ಎಲ್ಲಾ ಭಾಷೆಗಳಲ್ಲಿ ಹಿಟ್ ಆಗಿ ದಾಖಲೆ ಬರೆದಿತ್ತು. ಹಾಗಾಗಿ ಕನ್ನಡ ವರ್ಷನ್ ಹೆಚ್ಚು ವೀವ್ಸ್ ಸಾಧಿಸಿಲ್ಲ. ಆದರೂ ಈ ವರ್ಷದ ಟಾಪ್-3 ಸಾಂಗ್ ಇದು ಎನ್ನಬಹುದು.

2. ನಾನೇ ನೀನಂತೆ

ಶಶಾಂಕ್ ನಿರ್ದೇಶನದ 'ಬ್ರ್ಯಾಟ್' ಸಿನಿಮಾ ಇತ್ತೀಚೆಗೆ ತೆರೆಕಂಡು ಹಿಟ್ ಲಿಸ್ಟ್ ಸೇರಿದೆ. ಅರ್ಜುನ್ ಜನ್ಯಾ ಸಂಗೀತದಲ್ಲಿ 'ನಾನೇ ನೀನಂತೆ' ಸಾಂಗ್ ಸಿನಿರಸಿಕರ ಮನಗೆದ್ದಿದ್ದು ಗೊತ್ತೇಯಿದೆ. ಸಿದ್ಧ್ ಶ್ರೀರಾಮ್, ಲಹರಿ ಮಹೇಶ್ ಈ ಹಾಡಿಗೆ ದನಿಯಾಗಿದ್ದರು. ಈ ವರ್ಷದ ಟಾಪ್-2 ಸಾಂಗ್ ಇದು ಎಂದು ಯಾವುದೇ ಮುಲಾಜಿಲ್ಲದೇ ಹೇಳಬಹುದು.

1. ಬ್ಯಾಂಗಲ್ ಬಂಗಾರಿ

ಅಬಾಲವೃದ್ಧರಾಗಿ ಈ ವರ್ಷ ಎಲ್ಲರನ್ನು ಕುಣಿಸಿದ ಸಾಂಗ್ 'ಬ್ಯಾಂಗಲ್ ಬಂಗಾರಿ'. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ರೂಪದಲ್ಲಿ ಸಾಂಗ್ ವೈರಲ್ ಆಗಿತ್ತು. ಸಿನಿಮಾ ದೊಡ್ಡದಾಗಿ ಗೆಲ್ಲದೇ ಇದ್ದರೂ ಚರಣ್ ರಾಜ್ ಸಂಗೀತದಲ್ಲಿ ಎಲ್ಲಾ ಹಾಡುಗಳು ಹಿಟ್ ಆಗಿತ್ತು. ನಾಗಾರ್ಜುನ ಶರ್ಮಾ ಸಾಹಿತ್ಯದ ಹಾಡನ್ನು ತಮಿಳು ಗಾಯಕ ಆಂಟೋನಿ ದಾಸನ್ ಹಾಡಿ ಹಿಟ್ ಮಾಡಿದ್ದರು. ಈ ವರ್ಷದ ನಂಬರ್ 1 ಸಾಂಗ್ ಇದೇ.

More from Filmibeat

Read more about: music kannada year ender 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X