Netflix Steamy Movies: ವಯಸ್ಕರರಿಗೆ ಮಾತ್ರ.. ನೆಟ್‌ಫ್ಲಿಕ್ಸ್‌ನಲ್ಲಿರುವ ಟಾಪ್‌ 10 ಸೆಕ್ಸಿ ಸಿನಿಮಾಗಳಿವು

ವಿದೇಶಗಳಲ್ಲಿ ಅಷ್ಟೇ ಅಲ್ಲದೇ ಭಾರತದಲ್ಲಿಯೂ ನೆಟ್‌ಫ್ಲಿಕ್ಸ್‌ ಬಳಕೆದಾರರ ಸಂಖ್ಯೆ ವ್ಯಾಪಕವಾಗಿ ಬೆಳೆಯುತ್ತಿದೆ. ತನ್ನದೇ ನವೀನ ಮಾದರಿಯ ಕಂಟೇಂಟ್‌ಗಳನ್ನು ನೀಡುತ್ತಿರುವ ನೆಟ್‌ಫ್ಲಿಕ್ಸ್‌ ಎಲ್ಲ ವರ್ಗ ಹಾಗೂ ವಯಸ್ಸಿನವರಲ್ಲಿ ಜನಪ್ರಿಯವಾಗಿದೆ. ಹಲವಾರು ಬಾಷೆಯ ಸಿನಿಮಾಗಳು, ವೆಬ್‌ಸಿರೀಸ್‌ಗಳು, ಡಾಕ್ಯೂಸಿರೀಸ್‌ಗಳನ್ನು ನೆಟ್‌ಫ್ಲಿಕ್ಸ್‌ ಒಳಗೊಂಡಿದೆ.

ಕ್ರೈಮ್‌, ಫಿನಾನ್ಸ್‌, ಹೆಲ್ತ್‌, ಸ್ಪೋರ್ಟ್ಸ್‌, ರಿಯಲ್‌ ಇವೆಂಟ್ಸ್‌ ಸೇರಿದಂತೆ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದ ಕಂಟೇಂಟ್‌ಗಳು ನೆಟ್‌ಫ್ಲಿಕ್ಸ್‌ ಫ್ಲಾಟ್‌ಪಾರ್ಟ್‌ನಲ್ಲಿ ದೊರಕುತ್ತವೆ. ಇದೇ ರೀತಿ ವಯಸ್ಕರರಿಗೆಂದೇ ನೆಟ್‌ಫ್ಲಿಕ್ಸ್‌ ಹಲವು ಸಿನಿಮಾಗಳು ಹಾಗೂ ವೆಬ್‌ಸಿರೀಸ್‌ಗಳನ್ನು ಬಿಡುಗಡೆ ಮಾಡಿದೆ. ನೆಟ್‌ಫ್ಲಿಕ್ಸ್‌ನಲ್ಲಿರುವ ಟಾಪ್‌ 10 ಸೆಕ್ಸಿ ಫಿಲ್ಮ್‌ಗಳ ಪಟ್ಟಿ, ಮಾಹಿತಿ, ವಿವರಗಳನ್ನು ತಿಳಿಯಿರಿ.

Top 10 Sexiest Movies on Netflix- Which are they?

1- ಫೇರ್‌ಪ್ಲೇ- Fair Play (2023)

ನ್ಯೂಯಾರ್ಕ್‌ನಲ್ಲಿ ನಡೆಯುವ ಈ ಕತೆಯು ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಯ ಕುರಿತಾಗಿದೆ. ಫೋಬ್ ಡೈನೆವರ್ ಮತ್ತು ಅಲ್ಡೆನ್ ಎಹ್ರೆನ್‌ರಿಚ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಯುವ ಜೋಡಿ ನಡುವಿನ ಹಸಿಬಿಸಿ ದೃಶ್ಯಗಳಿಗೆ ಹೆಸರುವಾಸಿಯಾಗಿದೆ.

2- ಕಾಲ್‌ ಮಿ ಬೈ ಯುವರ್‌ ನೇಮ್‌- Call Me By Your Name (2017)

ಕಾಲ್ ಮಿ ಬೈ ಯುವರ್ ನೇಮ್ ಚಿತ್ರವನ್ನು ಲುಕಾ ಗ್ವಾಡಾಗ್ನಿನೊ ನಿರ್ದೇಶಿಸಿದ್ದಾರೆ. ಈ ಚಿತ್ರು 2017 ರಲ್ಲಿ ಬಿಡುಗಡೆಯಾಗಿದೆ. ಇದು ರೋಮ್ಯಾಂಟಿಕ್‌ ಸಿನಿಮಾವಾಗಿದ್ದು, ಚಿತ್ರಕಥೆಯನ್ನು ಜೇಮ್ಸ್ ಐವರಿ ಬರೆದಿದ್ದಾರೆ. ಆಂಡ್ರೆ ಅಸಿಮನ್ ಅವರ ಕಾದಂಬರಿಯನ್ನು ಆಧರಿಸಿದೆ. ಇದು 17 ವರ್ಷದ ಎಲಿಯೊ ಪರ್ಲ್ಮನ್ ಮತ್ತು 24 ವರ್ಷದ ಆರ್ಮಿ ಹ್ಯಾಮರ್ ನಡುವಿನ ಪ್ರಣಯ ಸಂಬಂಧವನ್ನು ಹೊತ್ತು ತಂದಿದೆ.

Top 10 Sexiest Movies on Netflix- Which are they?

3- 365 ಡೇಸ್‌- 365 Days (2020)

365 ಡೇಸ್ ಕಾಮಪ್ರಚೋದಕ ಥ್ರಿಲ್ಲರ್ ಚಿತ್ರವಾಗಿದ್ದು, ಇದನ್ನು ಬಾರ್ಬರಾ ಬಿಯಾಲೋವ್ಸ್ ಮತ್ತು ಟೊಮಾಸ್ ಮಾಂಡೆಸ್ ನಿರ್ದೇಶಿಸಿದ್ದಾರೆ. ಬ್ಲಾಂಕಾ ಲಿಪಿನ್ಸ್ಕಾ ಅವರ ಟ್ರೈಲಾಜಿಯ ಮೊದಲ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಕಥಾವಸ್ತುವು ಯುವತಿ ಮರಿಯಾ ಸಿಕ್ಲುಕಾ ಹಾಗೂ ಸಿಸಿಲಿಯನ್ ಡಾನ್‌ ಮಿಚೆಲ್ ನಡುವಿನ ದೈಹಿಕ ಸಂಬಂಧದ ಕುರಿತಾಗಿದೆ.

4- ಬರ್ನಿಂಗ್‌ ಬೆಟ್ರಾಯಲ್‌- Burning Betrayal (2023)

ಬಾಬಿ ಎಂಬ ಮಹಿಳೆಯು ತನ್ನ ದೀರ್ಘಾಕಾಲ ಸಂಗಾತಿಯಿಂದ ಮೋಸ ಹೋಗುತ್ತಾಳೆ. ಇದೇ ಒತ್ತಡದಲ್ಲಿ ಆಕೆ ನ್ಯಾಯಾಧೀಶ ಮಾರ್ಕೊನನ್ನು ಪ್ರೀತಿಸುತ್ತಾಳೆ. ಇವರಿಬ್ಬರ ನಡುವಿನ ದೈಹಿಕ ಸಾಂಗತ್ಯವನ್ನು ಈ ಚಿತ್ರವು ತೆರೆದಿಟ್ಟಿದೆ. ಈ ಚಿತ್ರವನ್ನು ಡಿಯಾಗೋ ಫ್ರೀಟಾಸ್ ನಿರ್ದೇಶಿಸಿದ್ದಾರೆ. ಜಿಯೋವಾನ್ನಾ ಲ್ಯಾನ್ಸೆಲೊಟ್ಟಿ, ಲಿಯಾಂಡ್ರೊ ಲಿಮಾಕಾಮಿಲ್ಲಾ, ಡಿ ಲ್ಯೂಕಾಸ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

Top 10 Sexiest Movies on Netflix- Which are they?

5- ಹ್ಯಾಪಿ ಎಂಡಿಂಗ್‌- Happy Ending (2023)

ಒಂದು ವರ್ಷದಿಂದ ಸಂಬಂಧದಲ್ಲಿರುವ ಮತ್ತು ತನ್ನ ಲೈಂಗಿಕ ಜೀವನವನ್ನು ಮಸಾಲೆಯುಕ್ತಗೊಳಿಸಲು ಬಯಸುತ್ತಿರುವ ಲೂನಾ, ತನ್ನ ಸಂಗಾತಿ ಮಿಂಕ್‌ಗೆ ತ್ರಿಕೋನವನ್ನು ಪ್ರಸ್ತಾಪಿಸುತ್ತಾಳೆ. ಆಕೆಯ ಆತ್ಮೀಯ ಸ್ನೇಹಿತರಿಂದ ಬರುವ ಈ ಕಲ್ಪನೆಯು ಅವರ ಸಂಬಂಧವನ್ನು ತಲೆಕೆಳಗಾಗಿಸಲು ಪ್ರಾರಂಭಿಸುತ್ತದೆ.

6- ಪಿಲ್ಫ್‌- MILF (2018)

ಫ್ರಾನ್ಸ್‌ನ ದಕ್ಷಿಣ ಭಾಗದ ಕರಾವಳಿಯಲ್ಲಿ ರಜಾದಿನಗಳನ್ನು ಕಳೆಯಲು ತೆರಳುವ ಮೂವರು ಮಹಿಳೆಯರು ಹರೆಯದ ಹುಡುಗರೊಂದಿಗೆ ಪ್ರೇಮಸಂಬಂಧದಲ್ಲಿ ಬೀಳುವ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಈ ಸಿನಿಮಾವನ್ನು ಆಕ್ಸೆಲ್ ಲಾಫಾಂಟ್ ನಿರ್ದೇಶಿಸಿದ್ದಾರೆ.

Top 10 Sexiest Movies on Netflix- Which are they?

7- ಡಾರ್ಕ್‌ ಡಿಸೈರ್‌- Dark Desire (2020)

ವಿವಾಹಿತ ಮಹಿಳೆಯೊಬ್ಬಳು ಯುವಕನೊಂದಿಗೆ ಸಂಬಂಧವನ್ನು ಇರಿಸಿಕೊಳ್ಳುವ ಕತೆಯನ್ನು ಈ ವೆಬ್‌ಸಿರೀಸ್‌ ಹೊಂದಿದೆ. ಮನುಷ್ಯರ ಆಳದ ಕಾಮನೆಗಳನ್ನು ಹೊತ್ತು ತರುವ ಈ ಸಿರೀಸ್‌ ಹಲವು ದುರಂತಗಳನ್ನು ಕಟ್ಟಿಕೊಟ್ಟಿದೆ. ಸ್ಪ್ಯಾನಿಷ್‌ ಭಾಷೆಯಲ್ಲಿರುವ ವೆಬ್‌ ಸಿರೀಸ್‌ ಅನ್ನು ಜಿಯೋವಾನಿ ರೊಟೊಂಡೋ ನಿರ್ದೇಶಿಸಿದ್ದಾರೆ.

8- ನೋ ಲಿಮಿಟ್‌- No Limit (2022)

ಪ್ರತಿಭಾವಂತ ಯುವತಿಯೊಬ್ಬಳು ಫ್ರೀಡೈವಿಂಗ್ ಬೋಧಕನೊಂದಿಗೆ ಆಳವಾದ ಪ್ರೇಮದಲ್ಲಿ ಮುಳುಗುವು ಕತೆಯನ್ನು ಚಿತ್ರ ಹೊತ್ತುತಂದಿದೆ. ಈ ಪ್ರೇಮವು ಮುಂದೆ ವಿನಾಶಕಾರಿ ಹಂತವನ್ನು ತಲುಪಿ ದುರಂತವನ್ನು ಕಟ್ಟಿಕೊಟ್ಟಿದೆ. ಕ್ಯಾಮಿಲ್ಲೆ ರೋವ್, ಸೋಫಿಯಾನೆ ಜೆರ್ಮಾನಿ ಹಾಗೂ ಸೀಸರ್ ಡೊಂಬೊಯ್ ಈ ಚಿತ್ರದ ಪ್ರಮುಖ ಪಾತ್ರದಾರಿಗಳಾಗಿದ್ದಾರೆ.

9- ಆಫ್ಟರ್‌ ವಿ ಕೊಲೈಡೆಡ್‌- After We Collided (2020)

ಆಫ್ಟರ್‌ ವಿ ಕೊಲೈಡೆಡ್‌ ಎಂಬ ಚಿತ್ರವು 2014 ರ ಪ್ರಣಯ ಕಾದಂಬರಿಯನ್ನು ಆಧರಿಸಿ ತಯಾರಾಗಿದೆ. ಇದು ಇಬ್ಬರು ಯುವ ವಯಸ್ಕರ ಪ್ರೇಮ ಜೀವನವನ್ನು ಕಟ್ಟಿಕೊಟ್ಟಿದೆ. ರೋಜರ್‌ ಕುಂಬ್ಲೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೋಸೆಫೀನ್ ಲ್ಯಾಂಗ್‌ಫೋರ್ಡ್, ಹೀರೋ ಫಿಯೆನ್ನೆಸ್, ಟಿಫಿನ್ ಡೈಲನ್ ಸ್ಪ್ರೌಸ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

10- ಡಕ್‌ ಬಟರ್- Duck Butter (2018)

ಸಂಬಂಧಗಳಲ್ಲಿ ಅನುಭವಕ್ಕೆ ಬರುವ ಅಪ್ರಾಮಾಣಿಕತೆಯ ಬಗ್ಗೆ ಅತೃಪ್ತರಾದ ಇಬ್ಬರು ಮಹಿಳೆಯರ ಕತೆಯನ್ನು ಈ ಚಿತ್ರ ಹೊಂದಿದೆ. ಈ ಇಬ್ಬರು ಮಹಿಳೆಯರ ನಡುವಿನ ಅನ್ಯೋನ್ಯತೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರವನ್ನು ಮಿಗುಯೆಲ್ ಆರ್ಟೆಟಾ ನಿರ್ದೇಶನ ಮಾಡಿದ್ದಾರೆ. ಆಲಿಯಾ ಶೌಕತ್, ಡ್ರೂ ಲ್ಯಾಂಗರ್, ಮಾರ್ಕ್ ಮರೋನ್ ಈ ಚಿತ್ರದಲ್ಲಿ ನಟಿಸಿದ್ದಾರೆ. y

More from Filmibeat

English summary
Know Top 10 Sexy Films List, Info, Details on Netflix,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X