2021ರಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾಗಳಿವು: ನಂ1 ಪಟ್ಟ ಯಾರಿಗೆ?

2021 ಮುಗಿಯುತ್ತಾ ಬಂತು. ಈ ಡಿಸೆಂಬರ್‌ ಕಳೆದರೆ 2022 ಆರಂಭ ಆಗಿ ಬಿಡುತ್ತದೆ. ಈ ವರ್ಷ ಸಿನಿಮಾ ಮಂದಿಗೆ ಅತಿ ಮುಖ್ಯವಾದ ವರ್ಷ. ಕೊರೊನಾ ಬಳಿಕಾ ಬಣ್ಣದ ಲೋಕದಲ್ಲಿ ಬೆಳಕು ಚೆಲ್ಲಿದ ವರ್ಷ ಇದು. ಈ ವರ್ಷ ಲಾಕ್‌ಡೌನ್‌ ಬಂಧನದಿಂದ ಹೊರ ಬಂದು ಒಂದಷ್ಟು ಸಿನಿಮಾಗಳು ಸಿನಿಪ್ರಿಯರ ಮನ ಗೆದ್ದಿವೆ.

ಕೊರೊನಾ, ಲಾಕ್‌ ಡೌನ್‌, 50% ಮಾತ್ರ ಸೀಟು ಭರ್ತಿ ಹೀಗೆ ಹಲವು ಗೊಂದಲಗಳ ನಡುವೆಯೂ ತೆರೆಗೆ ಬಂದ ಹಲವು ಸಿನಿಮಾಗಳು ದಾಖಲೆ ಬರೆದಿವೆ. ಸಿನಿಮಾ ಪ್ರೇಕ್ಷಕರನ್ನು ಮತ್ತೆ ಚಿತ್ರ ಮಂದಿರಕ್ಕೆ ಕರೆತರುವಲ್ಲಿ ಯಶಸ್ವಿ ಆಗಿವೆ. ಸಾಲು ಸಾಲು ಸಿನಿಮಾಗಳು ರಿಲೀಸ್‌ ಆದರೂ ಪ್ರೇಕ್ಷಕರು ಓಟ್‌ ಹಾಕಿದ್ದು ಮಾತ್ರ ಕೆಲವು ಚಿತ್ರಗಳಿಗೆ.

2021 ಚಿತ್ರರಂಗದ ಮಂದಿಗೆ ಸವಾಲಾಗಿತ್ತು. ಆದರೂ ಕೆಲವು ಸಿನಿಮಾಗಳು ರಿಲೀಸ್‌ ಆಗಿ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡಿವೆ. ಟಾಪ್‌ 5ರಲ್ಲಿ ಇರುವ ಭಾರತೀಯ ಸಿನಿಮಾಗಳು ಒಟ್ಟಾರೆ ವಿಶ್ವದಾದ್ಯಂತ ಗಳಿಸಿದ್ದು ಎಷ್ಟು? ಯಾವ ಸಿನಿಮಾ ಮೊದಲ ಸ್ಥಾನದಲ್ಲಿದೆ. ಎನ್ನುವ ದಾಖಲೆ ಬರೆದ ಸಿನಿಮಾಗಳ ಪಟ್ಟಿ ಇಲ್ಲಿದೆ ಮುಂದೆ ಓದಿ...

ಮೊದಲ ಸ್ಥಾನದಲ್ಲಿ ಬಾಲಿವುಡ್‌ನ 'ಸೂರ್ಯವಂಶಿ'!

ಮೊದಲ ಸ್ಥಾನದಲ್ಲಿ ಬಾಲಿವುಡ್‌ನ 'ಸೂರ್ಯವಂಶಿ'!

ಟಾಪ್‌ 5ರಲ್ಲಿ ಮೊದಲ ಸ್ಥಾನದಲ್ಲಿದೆ ಬಾಲಿವುಡ್‌ ಚಿತ್ರ 'ಸೂರ್ಯವಂಶಿ'. 2021ರ ನವೆಂಬರ್‌ 5ಕ್ಕೆ ರಿಲೀಸ್‌ ಆದ 'ಸೂರ್ಯವಂಶಿ' ಸಿನಿಮಾ ಮಾಸ್‌ ಆಡಿಯನ್ಸ್‌ಗೆ ಬಲು ಇಷ್ಟ ಆಗಿತ್ತು. ನಟ ಅಕ್ಷಯ್‌ ಕುಮಾರ್‌ ಅವರು 'ಸೂರ್ಯವಂಶಿ' ಚಿತ್ರದ ಮೂಲಕ ಮಾಸ್‌ ಎಂಟ್ರಿ ಕೊಟ್ಟು ಸಿನಿ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನಿಮಾ, ಈ ವರ್ಷ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸಿನಿಮಾ. ಹಾಗಾಗಿ ವಿಶ್ವದಾದ್ಯಂತ ಒಟ್ಟಾರೆ ಹೆಚ್ಚಿನ ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಸಾಲಿನಲ್ಲಿ ಮೊದಲಿದೆ 'ಸೂರ್ಯವಂಶಿ'. 'ಸೂರ್ಯವಂಶಿ'ಯ ಒಟ್ಟಾರೆ ಗಳಿಕೆ 292.52 ಕೋಟಿ ರೂ. ಆಗಿದೆ.

ರಜಿನಿಕಾಂತ್‌ ಚಿತ್ರಕ್ಕೆ 2ನೇ ಸ್ಥಾನ!

ರಜಿನಿಕಾಂತ್‌ ಚಿತ್ರಕ್ಕೆ 2ನೇ ಸ್ಥಾನ!

ಇನ್ನು ಸೂಪರ್‌ ಸ್ಟಾರ್‌ ರಜಿನಿಕಾಂತ್ ಅಭಿನಯದ ತಮಿಳಿನ 'ಅಣ್ಣಾತೆ' ಸಿನಿಮಾ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಬಹುನಿರೀಕ್ಷೆಯೊಂದಿಗೆ ರಿಲೀಸ್ ಆದ 'ಅಣ್ಣಾತೆ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ರಜಿನಿಕಾಂತ್‌ ಅಪ್ಪಟ್ಟ ಅಭಿಮಾನಿಗಳಿಗೆ ಈ ಚಿತ್ರದ ಇಷ್ಟವಾಗಿದೆ. ಹಾಗಾಗಿ ಸಿನಿಮಾ ಬಾಕ್ಸಾಫೀಸ್‌ ದಾಖಲೆ ಮಾಡುವಲ್ಲಿ ಯಶಸ್ವಿ ಆಗಿದೆ. 'ಅಣ್ಣಾತೆ' ಚಿತ್ರದ ಒಟ್ಟಾರೆ ಗಳಿಕೆ 239.21 ಕೋಟಿ ರೂ. ಆಗಿದೆ.

200 ಕೋಟಿ ದಾಟಿ ದಾಖಲೆ ಮಾಡಿದ 'ಮಾಸ್ಟರ್'!

200 ಕೋಟಿ ದಾಟಿ ದಾಖಲೆ ಮಾಡಿದ 'ಮಾಸ್ಟರ್'!

ಲಾಕ್‌ಡೌನ್‌ ಬಳಿಕಾ 50% ಆಕ್ಯೂಪೆನ್ಸಿ ಇದ್ದಾಗಲೇ ತೆರೆಗೆ ಬಂದ ಸಿನಿಮಾ ತಮಿಳಿನ 'ಮಾಸ್ಟರ್'. ನಟ ವಿಜಯ್‌ ಅಭಿನಯದ 'ಮಾಸ್ಟರ್‌' ಸಿನಿಮಾ ಪ್ರೇಕ್ಷಕರಿಗೆ ರಸದೌತಣ ಬಡಿಸಿದ್ದಲ್ಲದೆ, ಬಾಕ್ಸಾಫೀಸ್‌ನಲ್ಲೂ ದಾಖಲೆ ಮಾಡಿದೆ. ಲೋಕೇಶ್ ಕನಗರಾಜನ್ ನಿರ್ದೇಶನದ ಈ ಚಿತ್ರದಲ್ಲಿ ನಟ ವಿಜಯ್‌ ಮಾಸ್ಟರ್‌ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದ ಒಟ್ಟಾರೆ ಬಾಕ್ಸಾಫೀಸ್‌ ಕಲೆಕ್ಷನ್ 230 ಕೋಟಿ ರೂ. ಗಳಿಕೆಯಲ್ಲಿ 200 ಕೋಟಿ ದಾಟಿ ದಾಖಲೆ ಗಳಿಕೆ ಮಾಡಿದೆ ಮಾಸ್ಟರ್ ಸಿನಿಮಾ. ಹಾಗಾಗಿ ಟಾಪ್‌ 5 ಸಿನಿಮಾಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.

ತೆಲುಗಿನ ವಕೀಲ್‌ಸಾಬ್ ಚಿತ್ರಕ್ಕೆ 4ನೇ ಸ್ಥಾನ!

ತೆಲುಗಿನ ವಕೀಲ್‌ಸಾಬ್ ಚಿತ್ರಕ್ಕೆ 4ನೇ ಸ್ಥಾನ!

ಇನ್ನು ಈ ಟಾಪ್‌ ಐದು ಸಿನಿಮಾಗಳ ಪೈಕಿ ಪವನ್ ಕಲ್ಯಾಣ್ ಸಿನಿಮಾ 4ನೇ ಸ್ಥಾನದಲ್ಲಿ ಇದೆ. ಪವನ್‌ ಕಲ್ಯಾಣ್ ಅಭಿನಯದ 'ವಕೀಲ್‌ ಸಾಬ್' ಸಿನಿಮಾ 2021ರ ಏಪ್ರಿಲ್‌ನಲ್ಲಿ ತೆರೆಗೆ ಬಂತು. ಇದು ಬಾಲಿವುಡ್‌ನ ಪಿಂಕ್‌ ಚಿತ್ರದ ರಿಮೇಕ್. ಆದರೂ ಕೂಡ ತೆಲುಗಿನಲ್ಲಿ ಈ ಸಿನಿಮಾ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಹಾಗಾಗಿ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಗಳಿಕೆ ಮಾಡಿ ದಾಖಲೆ ಪಟ್ಟಿ ಸೇರಿದೆ. ವಕೀಲ್ ಸಾಬ್‌ ಚಿತ್ರದ ಒಟ್ಟಾರೆ ಗಳಿಕೆ 137.65 ಕೋಟಿ ರೂ.

5 ಸ್ಥಾನದಲ್ಲಿ ತೆಲುಗಿನ 'ಅಖಂಡ'!

5 ಸ್ಥಾನದಲ್ಲಿ ತೆಲುಗಿನ 'ಅಖಂಡ'!

ನಟ ನಂದಮೂರಿ ಬಾಲಕೃಷ್ಣ ಅಭಿನಯದ 'ಅಖಂಡ' ಸಿನಿಮಾ ರಿಲೀಸ್‌ ಆದ ಕಡಿಮೆ ಸಮಯದಲ್ಲೇ ದಾಖಲೆ ಮಾಡಿದೆ. ಈ ಚಿತ್ರ ರಿಲೀಸ್ ಆದ ಮೊದಲ ದಿನವೇ ದಾಖಲೆ ಮಾಡಿತ್ತು. ಇನ್ನು ಹತ್ತು ದಿನಕ್ಕೆ 'ಅಖಂಡ' 100 ಕೋಟಿ ರೂ. ಕಲೆ ಹಾಕಿ ದಾಖಲೆ ಮಾಡಿದೆ. ಆದರೆ ಅಖಂಡ ಸಿನಿಮಾದ ದಾಖಲೆ ಇಲ್ಲಿಗೆ ನಿಂತಿಲ್ಲ.ಇನ್ನೂ ಕೂಡ ಮುಂದುವರೆದಿದೆ. ಹಾಗಾಗಿ ಅಖಂಡ ಸಿನಿಮಾ ಈ ವರ್ಷ ಮುಗಿಯುವುದರಲ್ಲಿ ಮತ್ತಷ್ಟು ಗಳಿಸಿದರೆ ಈ ಮೇಲಿನ ಸಿನಿಮಾಗಳ ಪಟ್ಟಿಯಲ್ಲಿ ಬೇರೆ ಸ್ಥಾನ ಪಡೆಯಬಹುದಾಗಿದೆ.


ಈ ಮೇಲೆ ಇರುವ ಗಳಿಕೆ ಲೆಕ್ಕಾಚಾರ ಆಯಾ ಸಿನಿಮಾಗಳು ಅಧಿಕೃತವಾಗಿ ಹೊರಡಿಸಿವೆ. ಈ ಸಾಲಿನಲ್ಲಿ ಕನ್ನಡ ಮತ್ತು ಮಲಯಾಳಂ ಸಿನಿಮಾಗಳು ಇಲ್ಲ. ಬಾಲಿವುಡ್, ತಮಿಳು, ತೆಲುಗು ಸಿನಿಮಾಗಳು ಸ್ಥಾನ ಗಿಟ್ಟಿಸಿಕಂಡಿವೆ.

More from Filmibeat

English summary
Top 5 Grossers Of Indian Film 2021 At World Wide Box office, Wich Movie Is In first Place,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X