ಕನ್ನಡದ ಟಾಪ್ 5 ಸ್ಟಾರ್ ನಟರ ಸುಂದರ, ಶ್ರೀಮಂತ ಪತ್ನಿಯರು ಇವರೇ: ಇವರ ಹಿನ್ನೆಲೆಯೇನು ಗೊತ್ತೇ?
ಪ್ಯಾನ್ ಇಂಡಿಯಾ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ ಬಳಿಕ ಕನ್ನಡ ಚಿತ್ರರಂಗದ ಕಡೆ ಜನರು ತಿರುಗಿ ನೋಡುವಂತಾಗಿದೆ. ಭಾರತದಲ್ಲಿರೋ ಪ್ರಮುಖ ಭಾಷೆಯ ಜನರಿಗೆ ಕನ್ನಡದ ಸ್ಟಾರ್ ನಟರೀಗ ತುಂಬಾನೇ ಚಿರಪರಿಚಿತ. ಹೀಗಾಗಿ ಅವರಷ್ಟೇ ಅಲ್ಲ ಅವರ ಕುಟುಂಬದ ಬಗ್ಗೆನೂ ತಿಳಿದುಕೊಳ್ಳುವ ಬಯಕೆ.
ಕನ್ನಡದ ಚಿತ್ರರಂಗದ ಸ್ಟಾರ್ ನಟರು ಯಾರು? ಅವರ ಹಿನ್ನೆಲೆಯೇನು? ಅವರ ಪತ್ನಿಯವರು? ಅವರ ಹಿನ್ನೆಲೆಯೇನು ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ಕನ್ನಡ ಚಿತ್ರರಂಗದ ಕೆಲ ಸ್ಟಾರ್ ನಟರ ಪತ್ನಿಯರು ಅವರಿಗಿಂತ ಶ್ರೀಮಂತರು ಅಂತ ನಿಮಗೆ ಗೊತ್ತಾ? ಹೌದು.. ಶ್ರೀಮಂತರೂ ಹೌದು, ಸುಂದರಿಯೂ ಹೌದು.. ಅಷ್ಟಕ್ಕೂ ಆ ಸ್ಟಾರ್ ನಟನ ಪತ್ನಿಯರು ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಶ್ರೀಮುರಳಿ ಪತ್ನಿ ವಿದ್ಯಾ
ಸ್ಯಾಂಡಲ್‌ವುಡ್‌ನ ರೋರಿಂಗ್ ಸ್ಟಾರ್ ಶ್ರೀ ಮುರಳಿ. 'ಉಗ್ರಂ' ಸಿನಿಮಾ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರೋ ಮುರಳಿ ಹೊಟೇಲ್ ಉದ್ಯಮಿಯ ಪುತ್ರಿಯನ್ನು ಪ್ರೀತಿ ಮದುವೆ ಆಗಿದ್ದರು. ಹೌದು, ಶ್ರೀಮುರಳಿ ಪತ್ನಿ ವಿದ್ಯಾ ಬೆಂಗಳೂರಿನಲ್ಲಿರುವ ಹೈಲ್ಯಾಂಡ್ ಹೊಟೇಲ್ ಮಾಲೀಕರ ಪುತ್ರಿ. ಶ್ರೀಮುರಳಿ ಹಾಗೂ ವಿದ್ಯಾ ಇಬ್ಬರೂ ಬರೊಬ್ಬರಿ 10 ವರ್ಷ ಪ್ರೀತಿಸಿದ್ದರು. ಆ ಬಳಿಕ ಎರಡೂ ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರಿಗೂ ಅತೀವಾ ಹಾಗೂ ಪ್ರಿನ್ಸ್ ಅಗಸ್ತ್ಯ ಅನ್ನೋ ಮಕ್ಕಳಿದ್ದಾರೆ.

ಉಪೇಂದ್ರ - ಪ್ರಿಯಾಂಕಾ ಉಪೇಂದ್ರ
ಉಪೇಂದ್ರ ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಇವರು ನಿರ್ದೇಶಿಸೋ ಸಿನಿಮಾಗಳಿಗೆ ಅಖ್ಯಾಂತ ಫ್ಯಾನ್ಸ್ ಇದ್ದಾರೆ. ಆದರೆ, ಉಪ್ಪಿ ಬಡತನದಲ್ಲೇ ಬದುಕು ಕಟ್ಟಿಕೊಂಡವರು ಅನ್ನೋದು ಹೊಸ ವಿಷಯವೇನಲ್ಲ. ಈ ವಿಷಯವನ್ನು ಅವರು ಈಗಾಗಲೇ ಅದೆಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಆದರೆ, ಪತ್ನಿ ಪ್ರಿಯಾಂಕಾ ಸ್ಥಿತಿವಂತರಾಗಿದ್ದರು. ತಂದೆ ಉತ್ತರ ಪ್ರದೇಶದವರು ಹಾಗೂ ತಾಯಿ ಸಮೈರಾ ತ್ರಿವೇದಿ ಪಶ್ಚಿಮ ಬಂಗಾಳದವರು. ಪ್ರಿಯಾಂಕಾ ಚಿತ್ರರಂಗಕ್ಕೆ ಕಾಲಿಡುವುದಕ್ಕೆ ಮುನ್ನವೇ ಅಮೆರಿಕಾ ಹಾಗೂ ಸಿಂಗಾಪುರದಲ್ಲಿ ನೆಲೆಸಿ ಬಂದಿದ್ದರು. ಅಲ್ಲದೆ ಮಿಸ್ ಕೊಲ್ಕತ್ತಾ ಕೂಡ ಆಗಿದ್ದರು. ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಜಾಹೀರಾತುಗಳಲ್ಲೂ ನಟಿಸಿದ್ದರು. ಪ್ರಿಯಾಂಕಾ ಉಪೇಂದ್ರ ಕೇವಲ ಸುಂದರಿಯಷ್ಟೇ ಅಲ್ಲ ಸ್ಥಿತಿವಂತ ಕುಟುಂಬದಿಂದ ಚಿತ್ರರಂಗಕ್ಕೆ ಬಂದಿದ್ದರು.

ಗಣೇಶ್ - ಶಿಲ್ಪ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಚಿತ್ರರಂಗಕ್ಕೆ ಬಂದು ಹೊಸ ಬದುಕನ್ನು ಕಟ್ಟಿಕೊಂಡವರು. ಚಿಕ್ಕದೊಂದು ಅವಕಾಶಕ್ಕಾಗಿ ಪರದಾಡುತ್ತಿದ್ದ ಕಾಲವಿತ್ತು. ಒಮ್ಮೆ ಹೀರೊ ಆಗಿ ಗೆದ್ದ ಮೇಲೆ ಅವರು ಶ್ರೀ ಮಂತಿಕೆಯನ್ನು ಕಂಡಿದ್ದಾರೆ. ಆದರೆ, ಪತ್ನಿ ಶಿಲ್ಪಾ ಉದ್ಯಮಿಯ ಮಗಳು. ಶಿಲ್ಪ ತಂದೆ ಉದ್ಯಮದ ಸಲುವಾಗಿ ಹೆಚ್ಚು ಕಾಲ ದುಬೈನಲ್ಲಿ ನೆಲೆಸಿದ್ದರು. ಹೀಗಾಗಿ ಶಿಲ್ಪ ಗಣೇಶ್ ಕೂಡ ಮದುವೆ ಮುನ್ನ ಸ್ಥಿತಿವಂತೆಯಾಗಿದ್ದರು.

ಯಶ್ - ರಾಧಿಕಾ ಪಂಡಿತ್
ರಾಕಿಂಗ್ ಸ್ಟಾರ್ ಯಶ್ ಇಂದು ಕೋಟಿ ಕೋಟಿ ಹಣವನ್ನು ಸಂಭಾವನೆಯಾಗಿ ಪಡೆಯುತ್ತಿರಬಹುದು. ಆದರೆ, ಯಶ್ ಕೂಡ ಮಧ್ಯಮ ಕುಟುಂಬದಿಂದ ಬಂದವರಾಗಿದ್ದರು. ತಂದೆ ಬಸ್ ಕಂಡಕ್ಟರ್ ಆಗಿದ್ದರು. ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವ ಆಲೋಚನೆ ಮಾಡುವುದೂ ಕೂಡ ಸಾಹಸ ಎನಿಸುವ ಕಾಲ. ಆದರೆ, ರಾಧಿಕಾ ಪಂಡಿತ್ ಕುಟುಂಬ ಆರ್ಥಿಕವಾಗಿ ಸದೃಡವಾಗಿತ್ತು. ರಾಧಿಕಾ ತಂದೆ ಉನ್ನತ ಹುದ್ದೆಯಲ್ಲಿ ಇದ್ದರು. ಹೀಗಾಗಿ ರಾಧಿಕಾ ಮೌಂಟ್ ಕಾರ್ಮೆಲ್ ಅಂತ ಜನಪ್ರಿಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

ಅಭಿಷೇಕ್ ಅಂಬರೀಶ್ - ಅವಿವಾ ಬಿದ್ದಪ್ಪ
ಇನ್ನು ರೆಬೆಲ್‌ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಪತ್ನಿ ಕೂಡ ಅವಿವಾ ಕೂಡ ಶ್ರೀಮಂತ ಮನೆತನದಿಂದ ಬಂದವರು. ಅವರ ತಂದೆ ಪ್ರಸಾದ್ ಬಿದ್ದಪ್ಪ ಜನಪ್ರಿಯ ಫ್ಯಾಷನ್ ಡಿಸೈನರ್. ಹೀಗಾಗಿ ಮಾಡಲಿಂಗ್ ಮಾಡಿದ್ದರು. ಜೊತೆ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ. ನೋಡಲು ಸುಂದರಿಯೂ ಆಗಿರುವ ಅವಿವಾ ಅಂಬಿ ಕುಟುಂಬಕ್ಕೆ ತಕ್ಕ ಸೊಸೆಯಾಗಿದ್ದಾರೆ.


Click it and Unblock the Notifications











